ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಮಿಕ್ರಾನ್ ಆಘಾತ: ಯುಕೆಯಲ್ಲಿ ಹೊಸ ದಾಖಲೆ ಬರೆದ ಕೊರೊನಾವೈರಸ್!

|
Google Oneindia Kannada News

ಲಂಡನ್, ಡಿಸೆಂಬರ್ 14: ಯುನೈಟೆಡ್ ಕಿಂಗ್ ಡಮ್ ನಲ್ಲಿ ಹೊಸ ರೂಪಾಂತರಿ ಓಮಿಕ್ರಾನ್ ಆತಂಕದ ನಡುವೆ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಸಾಂಕ್ರಾಮಿಕ ಪಿಡುಗು ಆರಂಭವಾದ ನಂತರದಲ್ಲಿ ಇದೇ ಮೊದಲ ಬಾರಿಗೆ ದೇಶದಲ್ಲಿ ಅತಿಹೆಚ್ಚು ಕೊವಿಡ್-19 ಪ್ರಕರಣಗಳು ವರದಿಯಾಗಿವೆ.

ಕಳೆದ 24 ಗಂಟೆಗಳಲ್ಲಿ ಯುಕೆಯಲ್ಲಿ 70,000ಕ್ಕೂ ಹೆಚ್ಚು ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವರದಿಯಾಗಿದೆ ಎಂದು ಬ್ರಿಟಿಷ್ ಆರೋಗ್ಯ ಇಲಾಖೆ ಮುಖ್ಯಸ್ಥರು ತಿಳಿಸಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆಯಾಗುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ವಿಶ್ವದ ಮೊದಲ ಓಮಿಕ್ರಾನ್‌ ಸಾವು ಪ್ರಕರಣ ಯುಕೆಯಲ್ಲಿ ದಾಖಲುವಿಶ್ವದ ಮೊದಲ ಓಮಿಕ್ರಾನ್‌ ಸಾವು ಪ್ರಕರಣ ಯುಕೆಯಲ್ಲಿ ದಾಖಲು

ಯುನೈಟೆಡ್ ಕಿಂಗ್ ಡಮ್ ನಲ್ಲಿ ಒಂದೇ ದಿನ 78,610 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಕಳೆದ ಬಾರಿ ಜನವರಿಯಲ್ಲಿ ಒಂದೇ ದಿನ 10,000 ಹೊಸ ಪ್ರಕರಣಗಳು ವರದಿಯಾಗಿದ್ದೇ, ಅತಿಹೆಚ್ಚಿನ ಸಂಖ್ಯೆಯಾಗಿ ದಾಖಲಾಗಿತ್ತು. ಈಗ ಅದು 70 ಸಾವಿರದ ಗಡಿಯನ್ನೂ ದಾಟಿದೆ. ಆ ಮೂಲಕ ಓಮಿಕ್ರಾನ್ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಯುಕೆಯಲ್ಲಿ 11 ದಶಲಕ್ಷ ಜನರಿಗೆ ಕೊವಿಡ್-19

ಯುಕೆಯಲ್ಲಿ 11 ದಶಲಕ್ಷ ಜನರಿಗೆ ಕೊವಿಡ್-19

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಶುರುವಾದಾಗಿನಿಂದ ಈವರೆಗೂ ಸೋಂಕಿತ ಪ್ರಕರಣಗಳು ವರದಿಯಾಗುತ್ತಲೇ ಬಂದಿವೆ. ದೇಶದ 67 ದಶಲಕ್ಷ ಜನಸಂಖ್ಯೆಯ ಪೈಕಿ ಇಲ್ಲಿವರೆಗೆ 11 ದಶಲಕ್ಷ ಜನರಿಗೆ ಸೋಂಕು ತಗುಲಿರುವುದು ವರದಿಯಾಗಿದೆ. ಇದರ ಮಧ್ಯೆ ಅತಿಹೆಚ್ಚು ಹಾಗೂ ವೇಗವಾಗಿ ಹರಡಬಲ್ಲ ಹೊಸ ರೂಪಾಂತರಿ ಓಮಿಕ್ರಾನ್ ಮಹಾಮಾರಿ ಆಗಿದೆ ಎಂದು ಯುಕೆ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಎಚ್ಚರಿಕೆ ನೀಡಿದ್ದಾರೆ.

ಕೊರೊನಾವೈರಸ್ ಏರಿಕೆ ಹಿನ್ನೆಲೆ ಬೋರಿಸ್ ಜಾನ್ಸನ್ ವಿರುದ್ಧ ಮತ

ಕೊರೊನಾವೈರಸ್ ಏರಿಕೆ ಹಿನ್ನೆಲೆ ಬೋರಿಸ್ ಜಾನ್ಸನ್ ವಿರುದ್ಧ ಮತ

ಯುಕೆಯಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರ ಹಿನ್ನೆಲೆ ಮಂಗಳವಾರ 100ಕ್ಕೂ ಹೆಚ್ಚು ಶಾಸಕರು ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ವಿರುದ್ಧ ಮತ ಚಲಾಯಿಸಿದ್ದಾರೆ. ಇದರ ಮಧ್ಯೆ ಯುಕೆ ಆರೋಗ್ಯ ಭದ್ರತಾ ಪಡೆಯ ಮುಖ್ಯಸ್ಥರಾದ ಜೆನ್ನಿ ಹ್ಯಾರಿಸ್ ಓಮಿಕ್ರಾನ್ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಸಾಂಕ್ರಾಮಿಕ ಪಿಡುಗು ಆರಂಭವಾದ ನಂತರದಲ್ಲಿ ಪತ್ತೆಯಾಗಿರುವ ಎಲ್ಲ ತಳಿಗಳಿಗೆ ಹೋಲಿಸಿದರೆ, ಓಮಿಕ್ರಾನ್ ಹೆಚ್ಚು ಹರಡುವ ಮತ್ತು ಅಪಾಯಕಾರಿ ತಳಿ ಎಂದು ಎಚ್ಚರಿಸಿದ್ದಾರೆ.

ಅಪಾಯದ ಮುನ್ಸೂಚನೆ ನೀಡಿದ ಆರೋಗ್ಯ ಅಧಿಕಾರಿ

ಅಪಾಯದ ಮುನ್ಸೂಚನೆ ನೀಡಿದ ಆರೋಗ್ಯ ಅಧಿಕಾರಿ

"ಅಲ್ಲದೇ ಮುಂಬರುವ ಕೆಲವು ದಿನಗಳಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡು ಬರುತ್ತದೆ. ಈ ಹಿಂದಿನ ಅಲೆಗಳಿಗೆ ಹೋಲಿಸಿದರೆ, ಓಮಿಕ್ರಾನ್ ತಳಿಯು ಹೆಚ್ಚು ಪರಿಣಾಮಕಾರಿಯಾಗಿ ಹರಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹೀಗಾಗಿ ಹೊಸ ಸೋಂಕಿತ ಪ್ರಕರಣಗಳು ಸಹ ಹೆಚ್ಚಾಗುತ್ತವೆ ಎಂದು ಸಂಸದೀಯ ಸಮಿತಿಗೆ ಅವರು ಮಾಹಿತಿ ನೀಡಿದ್ದಾರೆ. ಹೊಸ ರೂಪಾಂತರ ತಳಿಯ ಪ್ರಕರಣಗಳ ಇಮ್ಮಡಿ ಅವಧಿಯೂ ತೀರಾ ಕಡಿಮೆಯಾಗಿರುತ್ತದೆ. ಕೆಲವೇ ದಿನಗಳಲ್ಲಿ ಸೋಂಕಿತರ ಪ್ರಕರಣಗಳು ಎರಡು ಪಟ್ಟು ಹೆಚ್ಚಾಗಲಿದೆ. ಕೊವಿಡ್-19 ಪ್ರಕರಣಗಳ ಏರಿಕೆ ಪ್ರಮಾಣವನ್ನು ಲಂಡನ್ ಮತ್ತು ಮ್ಯಾಂಜಿಸ್ಟರ್ ನಲ್ಲಿ ದಾಖಲು ಮಾಡಿಕೊಳ್ಳಲಾಗುತ್ತಿದೆ.

ಬ್ರಿಟಿಷ್ ರಾಷ್ಟ್ರದಲ್ಲಿ ಓಮಿಕ್ರಾನ್ ಭೀತಿ

ಬ್ರಿಟಿಷ್ ರಾಷ್ಟ್ರದಲ್ಲಿ ಓಮಿಕ್ರಾನ್ ಭೀತಿ

ಯುನೈಟೆಡ್ ಕಿಂಗ್ ಡಮ್ ನಲ್ಲಿ ಈವರೆಗೂ 10,000ಕ್ಕೂ ಹೆಚ್ಚು ಮಂದಿಗೆ ಕೊವಿಡ್-19 ಹೊಸ ರೂಪಾಂತರಿ ಓಮಿಕ್ರಾನ್ ಅಂಟಿಕೊಂಡಿದ್ದು, ಈ ಪೈಕಿ ಕೇವಲ 10 ರೋಗಿಗಳು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು, ಓಮಿಕ್ರಾನ್ ಸೋಂಕು ತಗುಲಿದವರ ಪೈಕಿ ಈವರೆಗೂ ಒಂದೇ ಒಂದು ಸಾವಿನ ಪ್ರಕರಣ ವರದಿಯಾಗಿದೆ.

ದೇಶದಲ್ಲಿ ಒಂದೇ ದಿನ 78,610 ಮಂದಿಗೆ ಕೊವಿಡ್-19 ಸೋಂಕು ತಗುಲಿದ್ದು, 165 ಜನರು ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ. ಇದೇ ಅವಧಿಯಲ್ಲಿ 43,395 ಸೋಂಕಿತರು ಗುಣಮುಖರಾಗಿದ್ದಾರೆ. ಇದುವರೆಗೂ ಒಟ್ಟು 11,010,286 ಕೊರೊನಾವೈರಸ್ ಪ್ರಕರಣಗಳು ವರದಿಯಾಗಿದ್ದು, 146,791 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೊವಿಡ್-19 ಸೋಂಕು ತಗುಲಿದವರಲ್ಲಿ 9,617,941 ಜನರು ಗುಣಮುಖರಾಗಿದ್ದರೆ, 1,245,554 ಸಕ್ರಿಯ ಪ್ರಕರಣಗಳಿವೆ.

Recommended Video

ರುದ್ರಾಕ್ಷಿ ಮಾಲೆ ಧರಿಸಿ ಕಾಲಭೈರವನನ್ನು ಪ್ರಾರ್ಥಿಸಿದ ಮೋದಿ:ಮೋದಿ ನೋಡಲು ಜನಸಾಗರ | Oneindia Kannada

English summary
Covid-19 Cases in UK: British Nation Reported Highest Ever Daily Covid Cases Amid Omicron Spread.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X