ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ 50 ಲಕ್ಷದ ಗಡಿ ದಾಟಿದ ಮೇಲೆ WHO ಸಂದೇಶವೇನು?

|
Google Oneindia Kannada News

ನವದೆಹಲಿ, ಮೇ.21: ಚೀನಾದಲ್ಲಿ ಮೊದಲು ಕಾಣಿಸಿಕೊಂಡ ನೊವೆಲ್ ಕೊರೊನಾ ವೈರಸ್ ಸೋಂಕು ವಿಶ್ವವನ್ನೇ ನಲುಗಿಸಿದೆ. ಜಾಗತಿಕ ಮಟ್ಟದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆಯು 50 ಲಕ್ಷದ ಗಡಿ ದಾಟಿದೆ.

ಬಡ ರಾಷ್ಟ್ರಗಳಲ್ಲಿ ದಿನೇ ದಿನೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಆತಂಕ ವ್ಯಕ್ತಪಡಿಸಿದೆ. ಕಳೆದ 24 ಗಂಟೆಗಳಲ್ಲೇ ವಿಶ್ವದಲ್ಲಿ 1,06,000 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ಕೊರೊನಾ ವೈರಸ್ ಭೀತಿ: ಭಾರತಕ್ಕೆ ಭೇಷ್ ಎಂದಿದ್ದೇಕೆ WHO?ಕೊರೊನಾ ವೈರಸ್ ಭೀತಿ: ಭಾರತಕ್ಕೆ ಭೇಷ್ ಎಂದಿದ್ದೇಕೆ WHO?

ಜಾಗತಿಕ ಮಟ್ಟದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 50,85,504ಕ್ಕೆ ಏರಿಕೆಯಾಗಿದ್ದು, ಇದುವರೆಗೂ ಮಹಾಮಾರಿಗೆ 3,29,731 ಮಂದಿ ಪ್ರಾಣ ಬಿಟ್ಟಿದ್ದಾರೆ. 20,21,666 ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

ಜಗತ್ತಿನಲ್ಲಿರುವ ಬಡ ರಾಷ್ಟ್ರಗಳ ಬಗ್ಗೆ ವಿಶ್ವಸಂಸ್ಥೆಯ ಕಾಳಜಿ

ಜಗತ್ತಿನಲ್ಲಿರುವ ಬಡ ರಾಷ್ಟ್ರಗಳ ಬಗ್ಗೆ ವಿಶ್ವಸಂಸ್ಥೆಯ ಕಾಳಜಿ

ವಿಶ್ವವನ್ನು ಕಾಡುತ್ತಿರುವ ಸಾಂಕ್ರಾಮಿಕ ಪಿಡುಗಿನ ನಡುವೆಯೇ ಜೀವನ ಸಾಗಿಸುವಂತಾ ಅನಿವಾರ್ಯತೆ ಎದುರಾಗಿದೆ. ಕಡಿಮೆ ಮತ್ತು ಮಧ್ಯಮ ಆದಾಯಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಏರಿಕೆಯಾಗುತ್ತಿರುವ ಸೋಂಕಿತರ ಸಂಖ್ಯೆ ಬಗ್ಗೆ ಕಾಳಜಿ ತೋರಲಾಗುತ್ತದೆ ಎಂದು ವಿಶ್ವಸಂಸ್ಥೆಯ ಡೈರೆಕ್ಟರ್ ಜನರಲ್ ಟೆಂಡ್ರೋಸ್ ಅಧನಮ್ ಗೆಬ್ರಿಯಸಸ್ ತಿಳಿಸಿದ್ದಾರೆ.

ಅಮೆರಿಕಾ ಅಧ್ಯಕ್ಷರ ಆರೋಪಕ್ಕೆ ಗೆಬ್ರಿಯಸಸ್ ನಿರುತ್ತರ

ಅಮೆರಿಕಾ ಅಧ್ಯಕ್ಷರ ಆರೋಪಕ್ಕೆ ಗೆಬ್ರಿಯಸಸ್ ನಿರುತ್ತರ

ಕೊರೊನಾ ವೈರಸ್ ನಿರ್ಹವಣೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ವಿಫಲವಾಗಿದೆ. ಚೀನಾದ ಪರವಾಗಿ ಕೆಲಸ ಮಾಡಿದ ವಿಶ್ವ ಆರೋಗ್ಯ ಸಂಸ್ಥೆಗೆ ನೀಡಿದ್ದ ಆರ್ಥಿಕ ನೆರವನ್ನು ಹಿಂಪಡೆಯುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿ ಕಾರಿದ್ದರು. ಡೊನಾಲ್ಡ್ ಟ್ರಂಪ್ ಪತ್ರದ ಬಗ್ಗೆ ಪ್ರತಿಕ್ರಿಯೆ ನೀಡಲು ವಿಶ್ವಸಂಸ್ಥೆಯ ಡೈರೆಕ್ಟರ್ ಜನರಲ್ ಟೆಂಡ್ರೋಸ್ ಅಧನಮ್ ಗೆಬ್ರಿಯಸಸ್ ನಿರಾಕರಿಸಿದ್ದಾರೆ.

ಹೊಣೆಗಾರಿಕೆ ಪಾಠದ ಮೂಲಕ ಟ್ರಂಪ್ ಗೆ ತಿರುಗೇಟು

ಹೊಣೆಗಾರಿಕೆ ಪಾಠದ ಮೂಲಕ ಟ್ರಂಪ್ ಗೆ ತಿರುಗೇಟು

ಕೊರೊನಾ ವೈರಸ್ ನಿಂದ ಜಗತ್ತು ತತ್ತರಿಸುತ್ತಿರುವ ಇಂಥ ಸಂದರ್ಭದಲ್ಲಿ ಯಾರೋ ಒಬ್ಬರ ಆರೋಪಕ್ಕಿಂತ ಹೊಣೆಗಾರಿಕೆ ಮೇಲೆ ಹೆಚ್ಚಿನ ನಿಗಾ ವಹಿಸಬೇಕಾಗಿದೆ. ಸಮಗ್ರವಾಗಿ ಚಿಂತನೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಗೆಬ್ರಿಯಸಸ್ ತಿಳಿಸಿದ್ದಾರೆ.

ಮಲೇರಿಯಾ ಮಾತ್ರೆ ಸೇವಿಸದಂತೆ ಎಚ್ಚರಿಕೆಯ ಸಂದೇಶ

ಮಲೇರಿಯಾ ಮಾತ್ರೆ ಸೇವಿಸದಂತೆ ಎಚ್ಚರಿಕೆಯ ಸಂದೇಶ

ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಒಟ್ಟಾಗಿ ಹೋರಾಟ ನಡೆಸಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಡಾ.ರಿಯಾನ್ ಟ್ರಂಪ್ ತಿಳಿಸಿದ್ದಾರೆ. ಜಾಗತಿಕ ಆರೋಗ್ಯ ಸಂಸ್ಥೆಯ ನಿರ್ವಹಣೆಗೆ 2.3 ಬಿಲಿಯನ್ ಡಾಲರ್ ಹಣವು ದೊಡ್ಡ ಮೊತ್ತ ಎನಿಸುವುದಿಲ್ಲ. ವೈದ್ಯಕೀಯ ಸಂಶೋಧನೆಗಳು ಸಂಪೂರ್ಣವಾಗುವವರೆಗೂ ಜನರು ಕೊರೊನಾ ವೈರಸ್ ಸೋಂಕಿತರಿಗೆ ಮಲೇರಿಯಾ ಮಾತ್ರಗಳನ್ನು ನೀಡುವುದನ್ನು ತಡೆಯಬೇಕು ಎಂದು ತಿಳಿಸಿದ್ದಾರೆ.

English summary
Covid-19 Cases Cross 50 Lakh In World, Don't Use Malaria Tablets To Coronavirus: WHO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X