ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್ 17 2019 : ಕೊರೊನಾವೈರಸ್ ಮೊದಲ ಪ್ರಕರಣಕ್ಕೆ ಒಂದು ವರ್ಷ

|
Google Oneindia Kannada News

ನವದೆಹಲಿ, ನವೆಂಬರ್ 17: ಕಳೆದ ವರ್ಷ ಇದೇ ದಿನ ಕೊರೊನಾವೈರಸ್ ಮೊದಲ ಪ್ರಕರಣ ಚೀನಾದ ವುಹಾನ್ ನಗರದಲ್ಲಿ ಪತ್ತೆಯಾಗಿತ್ತು.

ಹ್ಯೂಬೆ ಪ್ರಾಂತ್ಯದ 55 ವರ್ಷದ ವ್ಯಕ್ತಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಕಳೆದ ವರ್ಷ ಇದೇ ದಿನ ಮೊದಲ ಪ್ರಕರಣ ಪತ್ತೆಯಾಗಿತ್ತು ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಕೊವಿಡ್ ಲಸಿಕೆ ಅಭಿವೃದ್ಧಿ ಕುರಿತು ಮಾಡೆರ್ನಾ ಜತೆ ಭಾರತ ಮಾತುಕತೆಕೊವಿಡ್ ಲಸಿಕೆ ಅಭಿವೃದ್ಧಿ ಕುರಿತು ಮಾಡೆರ್ನಾ ಜತೆ ಭಾರತ ಮಾತುಕತೆ

ಚೀನಾ ಅಧಿಕಾರಿಗಳ ಮಾಹಿತಿ ಪ್ರಕಾರ ಇದೀಗ ಚೀನಾದಲ್ಲಿ 266 ಪ್ರಕರಣಗಳಿದ್ದವು. ಡಿಸೆಂಬರ್‌ನಲ್ಲಿ ನಾವು ಇಂತಹ ಒಂದು ಹೊಸ ರೋಗದೊಂದಿಗೆ ಹೋರಾಡುತ್ತಿದ್ದೇವೆ ಎಂದು ಅಲ್ಲಿನ ವೈದ್ಯರಿಗೆ ತಿಳಿದುಬಂದಿತ್ತು. ಆ ಸಂದರ್ಭದಲ್ಲಿ ವೈರಸ್ ಮಾಉಕಟ್ಟೆಯಿಂದ ಹರಡಿತ್ತು ಎನ್ನಲಾಗಿತ್ತು. ಆದರೆ ಅಲ್ಲಿದ್ದ ಸೋಂಕಿತರಿಗೆ ಮಾರುಕಟ್ಟೆ ಜತೆಗೆ ಸಂಬಂಧವೇ ಇರಲಿಲ್ಲ ಎಂಬುದು ಕೂಡ ಗೊತ್ತಾಗಿತ್ತು.

Covid-19 Birthday: November 17, 2019 First Case Of Coronavirus Was Reported

ಡಿಸೆಂಬರ್ 15ರೊಳಗೆ ನಿತ್ಯ ಒಂದರಿಂದ ಐದರವರೆಗೆ ಪ್ರಕರಣಗಳು ಪತ್ತೆಯಾಗುತ್ತಿದ್ದವು.ಅಲ್ಲಿಂದ 150ಕ್ಕೂ ಹೆಚ್ಚು ದೇಶಗಳಿಗೆ ಕೊರೊನಾ ಸೋಂಕು ಹರಡಿತ್ತು. ಅಮೆರಿಕದಲ್ಲಿ ಇದುವರೆಗೂ ಕೊರೊನಾ ಸೋಂಕಿತ ಪ್ರಕರಣಗಳು ಕಿಂಚಿತ್ತೂ ಕಡಿಮೆಯಾಗಿಲ್ಲ.

ಎಲ್ಲಾ ದೇಶಗಳು ಕೊರೊನಾ ಲಸಿಕೆಯ ತಯಾರಿಕೆ, ಪ್ರಯೋಗದಲ್ಲಿ ತೊಡಗಿವೆ.ಅಮೆರಿಕದ ಬಯೋಟೆಕ್ ಫರ್ಮ್ ಮಾಟೆರ್ನಾ ಅಭಿವೃದ್ಧಿಪಡಿಸಿರುವ ಕೊವಿಡ್ ಲಸಿಕೆ ಶೇ.94ರಷ್ಟು ಸುರಕ್ಷಿತ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಾಡೆರ್ನಾವು 30 ಸಾವಿರ ಮಂದಿ ಮೇಲೆ ಕೊರೊನಾ ಲಸಿಕೆ ಪ್ರಯೋಗವನ್ನು ಮಾಡಿದೆ. ಕಳೆದ ವಾರವಷ್ಟೇ ಅಮೆರಿಕದ ಫಾರ್ಮಾಸುಟಿಕಲ್ ಕಂಪನಿ ಪಿಫೈಜರ್ ಹಾಗೂ ಅದರ ಜರ್ಮಲ್ ಪಾಲುದಾರ ಬಯೋಎನ್‌ಟೆಕ್ ತಮ್ಮ ಲಸಿಕೆ ಶೇ.90ರಷ್ಟು ಸುರಕ್ಷಿತ ಎಂದು ಹೇಳಿಕೊಂಡಿದ್ದವು.

ಕೊರೊನಾ ಲಸಿಕೆಯ ಮೂರನೇ ಪ್ರಯೋಗದಲ್ಲಿ ಗಂಭೀರ ಸ್ಥಿತಿಯಲ್ಲಿರುವವರನ್ನು ಕೂಡ ಕೊರೊನಾ ಲಸಿಕೆ ಗುಣಪಡಿಸಿದೆ. ಈಗ ಪಿಫೈಜರ್ ನಂತರ ಎರಡನೇ ಕೊರೊನಾ ಲಸಿಕೆ ಮೇಲೆ ನಂಬಿಕೆ ಬಂದಿದೆ.ಅಮೆರಿಕದ ಜನತೆಯು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು.ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು.

ತುರ್ತು ಸಂದರ್ಭದಲ್ಲಿ ಮಾಡೆರ್ನಾ ಲಸಿಕೆ ಬಳಕೆ ಮಾಡುವಂತೆ ಸರ್ಕಾರದ ಬಳಿ ಒಪ್ಪಿಗೆ ಕೇಳಲಿದ್ದಾರೆ. ಈ ವರ್ಷಾಂತ್ಯದೊಳಗೆ 20 ಮಿಲಿಯನ್ ಕೊರೊನಾ ಲಸಿಕೆ ಉತ್ಪಾದನೆ ಮಾಡುವುದಾಗಿ ತಿಳಿಸಿದೆ.

English summary
It has been a year since the first case of coronavirus was reported in Wuhan. It was a 55-year-old individual from the Hubei province in China, who first contracted the virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X