ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್‌ನಲ್ಲಿ ಕೊರೊನಾ 3ನೇ ಅಲೆ: ಭಾರತಕ್ಕೆ ಹೆಚ್ಚಿದ ಆತಂಕ

|
Google Oneindia Kannada News

ನವದೆಹಲಿ, ಜೂನ್ 2: ಕೊರೊನಾ ವೈರಸ್ ಮಹಾಮಾರಿಗೆ ಭಾರತ ಸೇರಿದಂತೆ ಅನೇಕ ದೇಶಗಳು ತತ್ತರಿಸಿ ಹೋಗಿದ್ದು, ಕಳೆದ ಒಂದೂವರೆ ವರ್ಷದಿಂದ ಜನರ ಜೀವನ ನಿರ್ವಹಣೆ ಅಧೋಗತಿಗೆ ತಲುಪಿದೆ.

ಇದೇ ಸಂದರ್ಭದಲ್ಲಿ ಕೊರೊನಾ ವೈರಸ್ ಮೊದಲನೇ, ಎರಡನೇ ಅಲೆಯಿಂದ ತತ್ತರಿಸಿದ್ದ ಬ್ರಿಟನ್​ನಲ್ಲಿ ಇದೀಗ ಕೋವಿಡ್​ 3ನೇ ಅಲೆಯು ಆರಂಭಿಕ ಹಂತದಲ್ಲಿದ್ದು, ಜನರಿಗೆ ಆತಂಕ ಶುರುವಾಗಿದೆ.

ಕೊರೊನಾ ಎರಡನೇ ಅಲೆ ಕಡಿಮೆಯಾಗುತ್ತಿದೆ ಎನ್ನುವಾಗಲೇ ಮತ್ತೆ ಕೊರೊನಾ ಸೋಂಕಿನ ಮೂರನೇ ಅಲೆ ಆರಂಭವಾಗಿದೆ. ಕಳೆದ ಒಂದೂವರೆ ವರ್ಷದಿಂದ ಜಾರಿಗೊಳಿಸಲಾಗಿದ್ದ ಲಾಕ್​ಡೌನ್​ ನಿರ್ಬಂಧಗಳನ್ನು ಜೂನ್ 21ರಂದು ತೆಗೆದುಹಾಕಲು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ನಿರ್ಧರಿಸಿದ ಬೆನ್ನಲ್ಲೇ ಕೊರೊನಾ 3ನೇ ಅಲೆಯ ಆತಂಕ ಶುರುವಾಗಿದೆ.

Covid-19 3rd Wave In Britain: Increased Anxiety For India

ಈ ಕುರಿತು ಭಾರತೀಯ ಮೂಲದ ಖ್ಯಾತ ವಿಜ್ಞಾನಿ ಪ್ರೊ.ರವಿ ಗುಪ್ತಾ ಅವರು ಬ್ರಿಟನ್​ನಲ್ಲಿ ಕೋವಿಡ್​ ಮೂರನೇ ಅಲೆಯು ಆರಂಭಿಕ ಹಂತದಲ್ಲಿದೆ ಎಂಬ ಸುಳಿವನ್ನು ಪ್ರಧಾನಿ ಬೋರಿಸ್ ಜಾನ್ಸನ್‌ಗೆ ನೀಡಿದ್ದಾರೆ.

ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿರುವ ರವಿ ಗುಪ್ತಾ ಅವರು ಯುಕೆ ಸರ್ಕಾರದ ವೈರಸ್ ಥ್ರೆಟ್​ ಅಡ್ವೈಸರಿ ಗ್ರೂಫ್​ನ ಸದಸ್ಯರಾಗಿದ್ದು, ದೇಶದಲ್ಲಿ ಕೋವಿಡ್​ ಹೊಸ ಪ್ರಕರಣಗಳು ಕಡಿಮೆಯಾಗಿದೆಯಾದರೂ ವೈರಸ್​​ನ B.1.617 ರೂಪಾಂತರವು ಉಲ್ಬಣಿಸುತ್ತಿದೆ ಎಂದು ಬಿಬಿಸಿ ವರದಿ ಮಾಡಿರುವುದಾಗಿ ತಿಳಿಸಿದ್ದಾರೆ.

ಬ್ರಿಟನ್‌​ನಲ್ಲಿ ಈವರೆಗೆ 44,87,339 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಇವರಲ್ಲಿ 1,27,782 ಮಂದಿ ಸಾವನ್ನಪ್ಪಿದ್ದಾರೆ. 42,89,486 ಮಂದಿ ಕೊರೊನಾ ವೈರಸ್​ನಿಂದ ಚೇತರಿಸಿಕೊಂಡಿದ್ದಾರೆ.

ಭಾರತದಲ್ಲಿ ಹೆಚ್ಚಿದ ಆತಂಕ

ಕೋವಿಡ್ ಪರಿಸ್ಥಿತಿ ಭಾರತದಲ್ಲಿ ಅತೀ ಹೆಚ್ಚು ಅನಾನುಕೂಲ ಸೃಷ್ಟಿಸಿದ್ದು, ಕೊರೊನಾ ಮೊದಲನೇ ಅಲೆಯ ಆರ್ಭಟದ ನಂತರ ಕೊರೊನಾ ಎರಡನೇ ಅಲೆಯ ಅಬ್ಬರಕ್ಕೆ ತತ್ತರಿಸಿದೆ ಹೋಗಿದೆ.

ಕೊರೊನಾ ಎರಡನೆ ಅಲೆಗೆ ಸಿಲುಕಿ ನಲುಗುತ್ತಿರುವ ಭಾರತಕ್ಕೆ ಈಗಾಗಲೇ ತಜ್ಞರು ಮೂರನೇ ಅಲೆಯೂ ಬರಲಿದೆ ಹಾಗೂ ಅದು ಮತ್ತಷ್ಟು ಗಂಭೀರವಾಗಿರಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ. ಇದೀಗ ಬ್ರಿಟನ್​ನಲ್ಲಿ 3ನೇ ಅಲೆ ಆರಂಭವು ಭಾರತಕ್ಕೆ ಎಚ್ಚರಿಕೆಯ ಘಂಟೆಯಾಗಿದೆ.

English summary
Coronavirus 3rd wave of anxiety has begun after Britain's Prime Minister Boris Johnson decided to remove the lockdown restrictions on June 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X