ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವ್ಯಾಕ್ಸಿನ್ ಲಸಿಕೆ ಪಡೆದುಕೊಂಡವರಿಗೂ ಈ ರಾಷ್ಟ್ರಗಳಲ್ಲಿ ಪ್ರವೇಶವಿಲ್ಲ!

|
Google Oneindia Kannada News

ನವದೆಹಲಿ, ನವೆಂಬರ್ 3: ಭಾರತ್ ಬಯೋಟೆಕ್ ಸಂಸ್ಥೆಯು ಉತ್ಪಾದಿಸುವ ಕೊವ್ಯಾಕ್ಸಿನ್ ಲಸಿಕೆಯನ್ನು ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸು ಅನ್ವಯ ವಿಶ್ವ ಆರೋಗ್ಯ ಸಂಸ್ಥೆಯು ತುರ್ತು ಬಳಕೆಗೆ ಬುಧವಾರ ಅನುಮೋದನೆ ನೀಡಿದೆ. ಇದು ಭಾರತೀಯರ ಅಂತಾರಾಷ್ಟ್ರೀಯ ಪ್ರಯಾಣದ ಹಕ್ಕುಗಳ ಮೇಲೂ ಪರಿಣಾಮ ಬೀರಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಅನುಮೋದನೆ ನೀಡುವುದಕ್ಕೂ ಮೊದಲೇ ಭಾರತದಲ್ಲಿ ಉತ್ಪಾದಿಸುವ ಕೊವ್ಯಾಕ್ಸಿನ್ ಲಸಿಕೆಯನ್ನು ಹಲವು ರಾಷ್ಟ್ರಗಳು ಅನುಮೋದಿಸಿದ್ದವು. ಇರಾನ್, ಮಾರಿಷಸ್, ಮೆಕ್ಸಿಕೋ, ನೇಪಾಳ, ಓಮನ್ ಮತ್ತು ಗ್ರೀಸ್ ರಾಷ್ಟ್ರಗಳು ಕೊವ್ಯಾಕ್ಸಿನ್ ಲಸಿಕೆ ಪಡೆದ ಭಾರತೀಯರು ತಮ್ಮ ಭೌಗೋಳಿಕ ಪ್ರದೇಶವನ್ನು ಪ್ರವೇಶಿಸುವದಕ್ಕೆ ಅನುಮತಿಯನ್ನು ನೀಡಿದ್ದವು.

ಕೊವಿಶೀಲ್ಡ್ ಲಸಿಕೆ ಪಡೆದಿದ್ದೀರಾ ನಮ್ಮ ದೇಶಕ್ಕೆ ಬನ್ನಿ: 9 ದೇಶಗಳಿಂದ ಪ್ರಯಾಣಕ್ಕೆ ಅನುಮತಿ! ಕೊವಿಶೀಲ್ಡ್ ಲಸಿಕೆ ಪಡೆದಿದ್ದೀರಾ ನಮ್ಮ ದೇಶಕ್ಕೆ ಬನ್ನಿ: 9 ದೇಶಗಳಿಂದ ಪ್ರಯಾಣಕ್ಕೆ ಅನುಮತಿ!

ಆದರೆ ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುವ ಕೊವ್ಯಾಕ್ಸಿನ್ ಲಸಿಕೆಯನ್ನು ಪಡೆದುಕೊಂಡವರು ಇತರೆ ಎಲ್ಲ ರಾಷ್ಟ್ರಗಳಿಗೆ ಪ್ರವೇಶಿಸುವುದಕ್ಕೆ ಯಾವುದೇ ರೀತಿ ಅನುಮತಿ ಇರಲಿಲ್ಲ. ಅಂತಾರಾಷ್ಟ್ರೀಯ ಒಪ್ಪಂದಗಳ ಅಡಿಯಲ್ಲಿ ಕೆಲವು ರಾಷ್ಟ್ರಗಳಿಗೆ ಪ್ರಯಾಣಿಸುವುದಕ್ಕೆ ನಿರ್ಬಂಧವನ್ನು ಮುಂದುವರಿಸಲಾಗಿದೆ. ಏರ್-ಬಬಲ್ ಒಪ್ಪಂದ ಮಾಡಿಕೊಂಡಿರುವ ರಾಷ್ಟ್ರಗಳು ಭಾರತೀಯರ ಪ್ರಯಾಣಕ್ಕೆ ಅನುಮತಿ ನೀಡಿವೆ. ಇನ್ನು ಕೆಲವು ರಾಷ್ಟ್ರಗಳು ಕೊವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ನೀಡಿದ್ದರೂ, ನೇರವಾಗಿ ಆ ರಾಷ್ಟ್ರಗಳಿಗೆ ಪ್ರಯಾಣಿಸುವುದಕ್ಕೆ ಹಲವು ಅಡೆತಡೆಗಳಿರುವುದು ಗೊತ್ತಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ.

ನವೆಂಬರ್ 30ರವರೆಗೂ ಪ್ರಯಾಣಿಕರಿಗೆ ನಿರ್ಬಂಧ

ನವೆಂಬರ್ 30ರವರೆಗೂ ಪ್ರಯಾಣಿಕರಿಗೆ ನಿರ್ಬಂಧ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ವಿದೇಶಿ ಪ್ರಯಾಣಿಕರ ಮೇಲೆ ನಿರ್ಬಂಧ ವಿಧಿಸುವ ಉದ್ದೇಶದಿಂದ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ನವೆಂಬರ್ 30ರವರೆಗೂ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಭಾರತೀಯ ವಿಮಾನಯಾನ ಪ್ರಾಧಿಕಾರ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ನಿರ್ಬಂಧವನ್ನು ಮುಂದುವರಿಸಿದೆ. ಕಳೆದ ಮಾರ್ಚ್ ತಿಂಗಳಿನಿಂದಲೂ ನಿರ್ಬಂಧವನ್ನು ಮುಂದುವರಿಸಿಕೊಂಡು ಬರಲಾಗಿದೆ.

ಭಾರತದಿಂದ 28 ರಾಷ್ಟ್ರಗಳೊಂದಿಗೆ ಏರ್ ಬಬಲ್ ಒಪ್ಪಂದ

ಭಾರತದಿಂದ 28 ರಾಷ್ಟ್ರಗಳೊಂದಿಗೆ ಏರ್ ಬಬಲ್ ಒಪ್ಪಂದ

ಭಾರತವು ಒಟ್ಟು 28 ರಾಷ್ಟ್ರಗಳೊಂದಿಗೆ ಏರ್-ಬಬಲ್ ಒಪ್ಪಂದ ಮಾಡಿಕೊಂಡಿದೆ. ಯುಎಸ್, ಯುಕೆ, ಯುಎಇ, ಕೀನ್ಯಾ, ಭೂತಾನ್ ಮತ್ತು ಫ್ರಾನ್ಸ್ ರಾಷ್ಟ್ರಗಳು ಈ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದು, ಕೆಲವು ನಿರ್ದಿಷ್ಟ ನಿರ್ಬಂಧಗಳೊಂದಿಗೆ ಈ ರಾಷ್ಟ್ರಗಳ ನಡುವೆ ಅಂತಾರಾಷ್ಟ್ರೀಯ ವಿಮಾನಗಳು ಪ್ರಯಾಣಿಸಲಿವೆ. ಅದೇ ಏರ್-ಬಬಲ್ ಒಪ್ಪಂದದ ಪ್ರಕಾರ, ಕೊವ್ಯಾಕ್ಸಿನ್ ಲಸಿಕೆಯ ಪಡೆದ ಭಾರತೀಯರು ಓಮನ್, ನೇಪಾಳ ಮತ್ತು ಶ್ರೀಲಂಕಾಗೆ ಪ್ರಯಾಣಿಸಬಹುದು.

ಕೊವ್ಯಾಕ್ಸಿನ್ ಲಸಿಕೆಯಷ್ಟೇ ಸಾಕಾಗುವುದಿಲ್ಲ ಈ ರಾಷ್ಟ್ರಗಳಿಗೆ

ಕೊವ್ಯಾಕ್ಸಿನ್ ಲಸಿಕೆಯಷ್ಟೇ ಸಾಕಾಗುವುದಿಲ್ಲ ಈ ರಾಷ್ಟ್ರಗಳಿಗೆ

ವಿಶ್ವ ಆರೋಗ್ಯ ಸಂಸ್ಥೆಯೇ ಅನುಮೋದನೆ ನೀಡಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ಪಡೆದುಕೊಂಡ ಮಾತ್ರಕ್ಕೆ ಎಲ್ಲ ರಾಷ್ಟ್ರಗಳಲ್ಲಿ ಭಾರತೀಯರ ಪ್ರವೇಶಕ್ಕೆ ಅನುಮತಿ ಇರುವುದಿಲ್ಲ. ಕೊವ್ಯಾಕ್ಸಿನ್ ಲಸಿಕೆ ಪಡೆದುಕೊಂಡವರಿಗೂ ಕೆಲವು ರಾಷ್ಟ್ರಗಳಲ್ಲಿ ನಿರ್ಬಂಧಗಳನ್ನು ಮುಂದುವರಿಸಲಾಗಿದೆ. ಗ್ರೀಸ್, ಆಸ್ಟ್ರೇಲಿಯಾ, ಫಿಲಿಫೈನ್ಸ್, ಮೆಕ್ಸಿಕೋ ಮತ್ತು ಮಾರಿಷಸ್ ರಾಷ್ಟ್ರಗಳಲ್ಲಿ ಲಸಿಕೆ ಪ್ರಮಾಣಪತ್ರದ ಜೊತೆಗೆ ಯಾವ ಯಾವ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಬೇಕು ಎಂಬುದನ್ನು ಮುಂದೆ ಪಟ್ಟಿ ಮಾಡಲಾಗಿದೆ.

* ಗ್ರೀಸ್: ಭಾರತೀಯರು ಗ್ರೀಸ್ ರಾಷ್ಟ್ರಕ್ಕೆ ಪ್ರಯಾಣಿಸಬೇಕಾಗಿದ್ದಲ್ಲಿ ಕೊವಿಡ್-19 ಲಸಿಕೆ ಪಡೆದಿರುವ ಪ್ರಮಾಣಪತ್ರ, 72 ಗಂಟೆಗಳಿಗೂ ಮೊದಲು ಪಡೆದ RT-PCR ನಗೆಟಿವ್ ವರದಿ ಅಥವಾ 48 ಗಂಟೆಗಳ ಹಿಂದೆ ಪಡೆದ ಆಂಟಿಜೆನಿಕ್ ಪರೀಕ್ಷೆ ವರದಿ ಕಡ್ಡಾಯವಾಗಿರುತ್ತದೆ. ಕೊರೊನಾವೈರಸ್ ಲಕ್ಷಣಗಳನ್ನು ಹೊಂದಿರದ ಪ್ರಯಾಣಿಕರು ಕ್ವಾರೆಂಟೈನ್ ಆಗುವ ಅಗತ್ಯವಿಲ್ಲ. ಭಾರತ ಮತ್ತು ಗ್ರೀಸ್ ನಡುವೆ ನೇರವಾದ ವಿಮಾನಗಳ ಸಂಚಾರವಿಲ್ಲ, ಭಾರತೀಯರು ಗ್ರೀಸ್ ರಾಷ್ಟ್ರಕ್ಕೆ ತೆರಳಬೇಕಿದ್ದಲ್ಲಿ ಇತರೆ ಯುರೋಪಿಯನ್ ರಾಷ್ಟ್ರಗಳ ಮೂಲಕ ಗ್ರೀಸ್ ತಲುಪಬಹುದು. ಆದರೆ ಪ್ರಸ್ತುತ ಯಾವುದೇ ಯುರೋಪಿಯನ್ ರಾಷ್ಟ್ರಗಳು ಕೊವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ನೀಡಿಲ್ಲ.

* ಆಸ್ಟ್ರೇಲಿಯಾ: ಭಾರತ್ ಬಯೋಟೆಕ್ ಸಂಸ್ಥೆಯು ಉತ್ಪಾದಿಸುವ ಕೊವ್ಯಾಕ್ಸಿನ್ ಲಸಿಕೆಯನ್ನು ಆಸ್ಟ್ರೇಲಿಯಾ ಇತ್ತೀಚಿಗಷ್ಟೇ ಅನುಮೋದಿಸಿದೆ. ಕೊವ್ಯಾಕ್ಸಿನ್ ಮತ್ತು ಚೀನಾದ BBIBP-CorV ಲಸಿಕೆಗೆ ಆಸ್ಟ್ರೇಲಿಯಾ ಸರ್ಕಾರ ಅನುಮೋದನೆ ನೀಡಿದೆ. ಆದರೆ ಆಸ್ಟ್ರೇಲಿಯಾವು ಭಾರತೀಯರ ನೇರ ಪ್ರಯಾಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಏರ್-ಬಬಲ್ ಒಪ್ಪಂದವನ್ನು ಮಾಡಿಕೊಂಡಿಲ್ಲ. ಪ್ರಸ್ತುತ ಆಸ್ಟ್ರೇಲಿಯಾಗೆ ತೆರಳುವುದಕ್ಕೆ ಭಾರತೀಯರು ದುಬೈ, ಅಬುದುಬೈ ಮತ್ತು ಟೋಕಿಯಾ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಬೇಕು. ಆದರೆ ಈ ರಾಷ್ಟ್ರಗಳು ಇದುವರೆಗೂ ಕೊವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ನೀಡಿಲ್ಲ.

* ಫಿಲಿಫೈನ್ಸ್: ಕೊವ್ಯಾಕ್ಸಿನ್ ಲಸಿಕೆ ಪಡೆದ ಭಾರತೀಯರು ಫಿಲಿಫೈನ್ಸ್ ರಾಷ್ಟ್ರಕ್ಕೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಆದರೆ ಭಾರತೀಯರು ನೇರವಾಗಿ ಫಿಲಿಫೈನ್ಸ್ ಗೆ ತಲುಪುವುದಕ್ಕೆ ಸಾಧ್ಯವಿಲ್ಲ, ಅದರ ಹೊರತಾಗಿ ಬದಲಿ ಮಾರ್ಗವಾಗಿ ಪ್ರಯಾಣಿಸುವುದಕ್ಕೆ ಅವಕಾಶವಿದೆ.

* ಮೆಕ್ಸಿಕೋ: ಮೆಕ್ಸಿಕೋ ಆರೋಗ್ಯ ಪ್ರಾಧಿಕಾರವು ಭಾರತದ ಕೊವ್ಯಾಕ್ಸಿನ್ ಲಸಿಕೆಯನ್ನು ಅನುಮೋದಿಸಿದೆ. ಆದರೆ ಈ ರಾಷ್ಟ್ರವು ಭಾರತದ ಏರ್-ಬಬಲ್ ಒಪ್ಪಂದದ 28 ದೇಶಗಳಲ್ಲಿ ಇಲ್ಲ.

* ಮಾರಿಷಸ್: ಭಾರತ್ ಬಯೋಟೆಕ್ ಸಂಸ್ಥೆಯು ಉತ್ಪಾದಿಸುವ ಕೊವ್ಯಾಕ್ಸಿನ್ ಲಸಿಕೆ ಪಡೆದ ಭಾರತೀಯರು ಮಾರಿಷಸ್ ರಾಷ್ಟ್ರಕ್ಕೆ ಪ್ರಯಾಣಿಸಲು ಆ ರಾಷ್ಟ್ರದಲ್ಲಿ ಅನುಮತಿ ನೀಡಲಾಗಿದೆ. ಆದರೆ ಭಾರತದಿಂದ ಮಾರಿಷಸ್ ಗೆ ಯಾವುದೇ ನೇರ ವಿಮಾನಗಳಿಲ್ಲ.

ಭಾರತ್ ಬಯೋಟೆಕ್ ಸಂಸ್ಥೆಯ ಲಸಿಕೆಗೆ WHO ಅನುಮೋದನೆ

ಭಾರತ್ ಬಯೋಟೆಕ್ ಸಂಸ್ಥೆಯ ಲಸಿಕೆಗೆ WHO ಅನುಮೋದನೆ

ನವೆಂಬರ್ 3ರ ಬುಧವಾರ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವುದಕ್ಕೆ ಸಂಬಂಧಿಸಿದಂತೆ ಅಂತಿಮ ಮೌಲ್ಯಮಾಪನ ಪ್ರಕ್ರಿಯೆ ನಡೆಸಿತು. ಈ ಸಭೆಯಲ್ಲಿ ಕೊವ್ಯಾಕ್ಸಿನ್ ಲಸಿಕೆಯನ್ನು ತುರ್ತು ಬಳಕೆಗೆ ಅನುಮೋದಿಸುವ ಪಟ್ಟಿಗೆ ಸೇರಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಗೆ ಶಿಫಾರಸ್ಸು ಕಳುಹಿಸಲಾಯಿತು. ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸಿನ ಮೇರೆಗೆ ಕೊವ್ಯಾಕ್ಸಿನ್ ಲಸಿಕೆಗೆ WHO ಅನುಮೋದನೆ ನೀಡಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಈವರೆಗೆ ಹಲವು ಕಂಪನಿಗಳು ಉತ್ಪಾದಿಸುವ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಭಾರತದ ಮಟ್ಟಿಗೆ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಲಸಿಕೆ ಹಾಗೂ ಬುಧವಾರ ಅನುಮೋದನೆ ಪಡೆದ ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯು ತುರ್ತು ಬಳಕೆ ಅನುಮೋದನೆ ಪಟ್ಟಿಗೆ ಸೇರ್ಪಡೆಯಾಗಿವೆ. ಇದರ ಹೊರತಾಗಿ ಫೈಜರ್, ಬಯೋನಟೆಕ್, ಜಾನ್ಸನ್ ಆಂಡ್ ಜಾನ್ಸನ್, ಮಾಡರ್ನಾ ಮತ್ತು ಸಿನೋಫಾರ್ಮಾ ಕಂಪನಿಗಳು ಉತ್ಪಾದಿಸುವ ಲಸಿಕೆಯನ್ನು ತುರ್ತು ಬಳಕೆ ಪಟ್ಟಿಗೆ ಸೇರಿಸಲು ವಿಶ್ವ ಆರೋಗ್ಯ ಸಂಸ್ಥೆಯು ಅನುಮೋದನೆ ನೀಡಿದೆ.

English summary
Covaxin Vaccine Approved in This Countries, But Travel For Indians still Remains Restricted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X