ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಕಾ: ಮಹಿಂದಾ ಸೇರಿ 16 ಸಹಚರರಿಗೆ ದೇಶ ತೊರೆಯದಂತೆ ನಿರ್ಬಂಧ

|
Google Oneindia Kannada News

ಕೊಲಂಬೊ ಮೇ 12: ಅತಿದೊಡ್ಡ ರಾಜಕೀಯ-ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆಗೆ ದೇಶ ತೊರೆಯದಂತೆ ನ್ಯಾಯಾಲಯ ನಿರ್ಬಂಧ ವಿಧಿಸಿದೆ. ಇದರೊಂದಿಗೆ ಆತನ ಇತರ 16 ಸಹಚರರನ್ನು ಶ್ರೀಲಂಕಾದಿಂದ ಹೊರಗೆ ಹೋಗದಂತೆ ನ್ಯಾಯಾಲಯ ನಿಷೇಧಿಸಿದೆ. ಮಹಿಂದ ರಾಜಪಕ್ಸೆ ಅವರ ಪುತ್ರ ಹಾಗೂ ಮಾಜಿ ಸಚಿವ ನಮಲ್ ರಾಜಪಕ್ಸೆ ಕೂಡ ಈ ಪಟ್ಟಿಯಲ್ಲಿ ಸೇರಿದ್ದಾರೆ.

ಶ್ರೀಲಂಕಾದಲ್ಲಿ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯ ನಡೆಯುತ್ತಿರುವ ಉದ್ವಿಗ್ನತೆಯ ನಡುವೆ ಈ ವಾರವೇ ಹೊಸ ಪ್ರಧಾನಮಂತ್ರಿ ಮತ್ತು ಸಂಪುಟವನ್ನು ನೇಮಿಸಲಾಗುವುದು ಎಂದು ಅಧ್ಯಕ್ಷ ಗೋತಬಯ ರಾಜಪಕ್ಸೆ ಹೇಳಿದ್ದಾರೆ. ಶ್ರೀಲಂಕಾದ ಮಾಜಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರು ಮುಂದಿನ ಪ್ರಧಾನ ಮಂತ್ರಿಯಾಗಬಹುದು ಎಂದು ಮಾಧ್ಯಮ ವರದಿಗಳು ಗುರುವಾರ ಹೇಳಿವೆ. ಇದರ ನಡುವೆ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆಗೆ ದೇಶ ತೊರೆಯದಂತೆ ನ್ಯಾಯಾಲಯ ನಿರ್ಬಂಧ ವಿಧಿಸಿದೆ.

ಶ್ರೀಲಂಕಾಗೆ ಇದೇ ವಾರ ನೂತನ ಪ್ರಧಾನಿ, ಸಂಪುಟ ಆಯ್ಕೆ ಎಂದ ಗೋತಬಯ ರಾಜಪಕ್ಸೆ ಶ್ರೀಲಂಕಾಗೆ ಇದೇ ವಾರ ನೂತನ ಪ್ರಧಾನಿ, ಸಂಪುಟ ಆಯ್ಕೆ ಎಂದ ಗೋತಬಯ ರಾಜಪಕ್ಸೆ

ಪಟ್ಟಿಯಲ್ಲಿ 17 ಜನ

ಪಟ್ಟಿಯಲ್ಲಿ 17 ಜನ

ಶ್ರೀಲಂಕಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಮತ್ತು ಅವರ ಪುತ್ರ, ಸಂಸದರಾದ ಜಾನ್ಸನ್ ಫರ್ನಾಂಡೋ, ಪವಿತ್ರಾ ವನ್ನೀರಚಿ, ಸಂಜೀವ ಇದಿರಿಮನೆ, ಕಾಂಚನಾ ಜಯರತ್ನೆ, ರೋಹಿತಾ ಅಬೆಗುಣವರ್ದನ, ಸಿಬಿ ರತ್ನಾಯಕೆ, ಸಂಪತ್ ಅಟುಕೋರಲ, ರೇಣುಕಾ ಪೆರೇರಾ, ಸನತ್ ನಿಶಾಂತ್, ಹಿರಿಯ ಡಿಐಜಿ ದೇಶಬಂಧು ತೆನ್ನೆಕೋನ್ ಸೇರಿದಂತೆ ಇತರರು ಈ ಪಟ್ಟಿಯಲ್ಲಿ 17 ಜನ ಸೇರಿದ್ದಾರೆ.

ಅಕ್ರಮ ಸೈಟ್‌ಗಳಲ್ಲಿ ಭಾಗಿ ಶಂಕೆ

ಅಕ್ರಮ ಸೈಟ್‌ಗಳಲ್ಲಿ ಭಾಗಿ ಶಂಕೆ

ಇದಕ್ಕೂ ಮುನ್ನ ಅಟಾರ್ನಿ ಜನರಲ್ ಅವರು ಈ 17 ಮಂದಿಯನ್ನು ದೇಶ ತೊರೆಯದಂತೆ ನಿಷೇಧಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಗೊಟಗೋಗಾಮ ಮತ್ತು ಮಿನಗೋಗಮ್ ಸೈಟ್‌ಗಳ ತನಿಖೆಗೆ ಸಂಬಂಧಿಸಿದಂತೆ ಅವರ ಉಪಸ್ಥಿತಿ ಅಗತ್ಯ ಎಂದು ಅಟಾರ್ನಿ ಜನರಲ್ ವಾದಿಸಿದರು. ಶಂಕೆ ವ್ಯಕ್ತಪಡಿಸಿದ ಅವರು, ಸೈಟ್‌ಗಳ ದಾಳಿಯ ಸರಮಾಲೆಗಳು ಈ ವ್ಯಕ್ತಿಗಳಿಗೆ ಸಂಬಂಧಿಸಿವೆ ಎಂದು ಹೇಳಿದ್ದರು. ಈ ದಾಳಿಯಲ್ಲಿ ಅವರ ಪಿತೂರಿಯ ವಾಸನೆಯಿದೆ ಎಂದು ಹೇಳಿದ್ದಾರೆ.

ಮಹಿಂದಾ ರಾಜಪಕ್ಸೆ ರಾಜೀನಾಮೆ

ಮಹಿಂದಾ ರಾಜಪಕ್ಸೆ ರಾಜೀನಾಮೆ

ಸೋಮವಾರ ಶಾಂತಿಯುತ ಸರ್ಕಾರ ವಿರೋಧಿ ಪ್ರತಿಭಟನಾಕಾರರ ಮೇಲೆ ಮಹಿಂದಾ ರಾಜಪಕ್ಸೆ ಬೆಂಬಲಿಗರು ದಾಳಿ ಮಾಡಿದ ನಂತರ ದೇಶಾದ್ಯಂತ ಹಿಂಸಾಚಾರ ಭುಗಿಲೆದ್ದಿತು. ದೇಶದ ಆರ್ಥಿಕ ಬಿಕ್ಕಟ್ಟು, ಆಹಾರದ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ರಾಜಪಕ್ಸೆ ಕುಟುಂಬದ ನೇತೃತ್ವದ ಸರ್ಕಾರವು ರಾಜೀನಾಮೆ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಹೀಗಾಗಿ ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಿದರು.

ಟ್ರಿಂಕೋಮಲಿಯಲ್ಲಿ ತಂಗಿದ ರಾಜಪಕ್ಸೆ

ಟ್ರಿಂಕೋಮಲಿಯಲ್ಲಿ ತಂಗಿದ ರಾಜಪಕ್ಸೆ

ಮಹಿಂದಾ ರಾಜಪಕ್ಸೆ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕವೂ ಸಾರ್ವಜನಿಕರ ಆಕ್ರೋಶ ಶಮನವಾಗದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಪ್ರಧಾನಿ ನಿವಾಸ ಟೆಂಪಲ್ ಟ್ರೀಗೆ ನುಗ್ಗಿ ಬೆಂಕಿ ಹಚ್ಚಿದ್ದಾರೆ. ಇದಾದ ನಂತರ ವಿಶೇಷ ಹೆಲಿಕಾಪ್ಟರ್‌ನಲ್ಲಿ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಮತ್ತು ಅವರ ಕುಟುಂಬವನ್ನು ಶ್ರೀಲಂಕಾದ ಈಶಾನ್ಯ ಭಾಗದಲ್ಲಿರುವ ಟ್ರಿಂಕೋಮಲಿಯಲ್ಲಿರುವ ನೌಕಾನೆಲೆಗೆ ಕರೆತರಲಾಗಿದೆ. ಅಂದಿನಿಂದ ಅಲ್ಲಿಯೇ ಆಶ್ರಯ ಪಡೆದಿದ್ದಾರೆ. ಈ ನೆಲೆಯನ್ನೂ ಸಾರ್ವಜನಿಕರು ಸುತ್ತುವರಿದಿರುವ ಸುದ್ದಿಯಿದೆ.

English summary
Court in Sri Lanka, which is facing the biggest political-economic crisis, has banned former Prime Minister Mahinda Rajapaksa from leaving the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X