ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಎಂದರೆ ಬಂಧನ; ಡೆಡ್ಲಿ ವೈರಸ್ ಬಗ್ಗೆ ಮಾತಾಡಂಗಿಲ್ಲ!

|
Google Oneindia Kannada News

ಅಷ್ಕಬಾತ್, ಮಾರ್ಚ್.31: ಜಾಗತಿಕ ಮಟ್ಟದಲ್ಲಿ ಕೊರೊನಾ ವೈರಸ್ ಬಗ್ಗೆಯೇ ಜನರು ಚರ್ಚಿಸುವಂತಾ ವಾತಾವರಣ ವಿಶ್ವದಾದ್ಯಂತ ನಿರ್ಮಾಣವಾಗಿದೆ. ಆದರೆ ಟರ್ಕಮೆನಿಸ್ತಾನ್ ದೇಶದಲ್ಲಿ ಕೊರೊನಾ ವೈರಸ್ ಎಂಬ ಪದವನ್ನೇ ಬಳಸುವಂತಿಲ್ಲ.

ಸ್ವತಃ ಆ ದೇಶದ ಸರ್ಕಾರವೇ ಇಂಥದೊಂದು ಖಡಕ್ ಆದೇಶವನ್ನು ಹೊರಡಿಸಿದೆ. ಜನರಲ್ಲಿ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್ ಬಗ್ಗೆ ಜನರು ಮಾತನಾಡುವಂತಿಲ್ಲ. ಕೊರೊನಾ ವೈರಸ್ ಎಂಬ ಪದವನ್ನೇ ಬಳಸುವಂತಿಲ್ಲ.

ಕೊರೊನಾ ಸೋಂಕಿತನಿಗೆ ಚಿಕಿತ್ಸೆ ನೀಡಿದ ವೈದ್ಯ ಬಿಚ್ಚಿಟ್ಟ ಆಘಾತಕಾರಿ ವಿಷ್ಯ!ಕೊರೊನಾ ಸೋಂಕಿತನಿಗೆ ಚಿಕಿತ್ಸೆ ನೀಡಿದ ವೈದ್ಯ ಬಿಚ್ಚಿಟ್ಟ ಆಘಾತಕಾರಿ ವಿಷ್ಯ!

ವಿಶ್ವದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಸಾಂಕ್ರಾಮಿಕ ಪಿಡುಗಿನ ಬಗ್ಗೆ ಟರ್ಕಮೆನಿಸ್ತಾನ್ ಪ್ರಜೆಗಳು ಮಾತ್ರ ಸೊಲ್ಲು ಎತ್ತುವ ಹಾಗಿಲ್ಲ. ಕೊರೊನಾ ವೈರಸ್ ಕುರಿತು ಮಾಹಿತಿಯನ್ನು ಜನರಿಂದ ಮುಚ್ಚಿಟ್ಟು ಪ್ರಜೆಗಳಿಗೆ ಸರ್ಕಾರವೇ ಅಪಾಯಕ್ಕೆ ದೂಡುತ್ತಿದೆ ಎಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ ವರದಿ ಮಾಡಿದೆ.

ಕೊರೊನಾ ವೈರಸ್ ಪದವಿಲ್ಲದೇ ಆರೋಗ್ಯ ಜಾಗೃತಿ

ಕೊರೊನಾ ವೈರಸ್ ಪದವಿಲ್ಲದೇ ಆರೋಗ್ಯ ಜಾಗೃತಿ

ಟರ್ಕಮೆನಿಸ್ತಾನ್ ನಲ್ಲಿ ಸಾಂಕ್ರಾಮಿಕ ಪಿಡುಗಿನ ಕುರಿತು ಜಾಗೃತಿ ಮೂಡಿಸುವ ಮಾಧ್ಯಮಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲಾಗಿದೆ. ಆಸ್ಪತ್ರೆ, ಶಾಲೆ ಮತ್ತು ಸರ್ಕಾರಿ ಕಚೇರಿಗಳಲ್ಲಿ ಹಂಚಿಕೆಯಾದ ಆರೋಗ್ಯ ಜಾಗೃತಿ ಕರಪತ್ರಗಳಲ್ಲೂ ಕೊರೊನಾ ವೈರಸ್ ಎಂಬ ಪದವನ್ನು ತೆಗೆದುಹಾಕಲಾಗಿದೆ ಎಂದು ಟರ್ಕಮೆನಿಸ್ತಾನ್ ಕ್ರಾನಿಕಲ್ ವರದಿಯಲ್ಲಿ ತಿಳಿಸಿದೆ.

ಕೊರೊನಾ ವೈರಸ್ ಎಂದಿದ್ದಕ್ಕೆ ಪ್ರಜೆಗಳು ಅರೆಸ್ಟ್!

ಕೊರೊನಾ ವೈರಸ್ ಎಂದಿದ್ದಕ್ಕೆ ಪ್ರಜೆಗಳು ಅರೆಸ್ಟ್!

ಸಾಂಕ್ರಾಮಿಕ ಪಿಡುಗು ಕೊರೊನಾ ವೈರಸ್ ಬಗ್ಗೆ ಸಾರ್ವಜನಿಕ ಪ್ರದೇಶಗಳಲ್ಲಿ ಜನರು ಮಾಸ್ಕ್ ಧರಿಸಿಯೂ ಕೂಡಾ ಮಾತನಾಡುವಂತಿಲ್ಲ. ಬಸ್ ನಿಲ್ದಾಣ ಮತ್ತು ರಸ್ತೆಗಳಲ್ಲಿ ಡೆಡ್ಲಿ ವೈರಸ್ ಬಗ್ಗೆ ಮಾತನಾಡಿದರೆ ಮಫ್ತಿಯಲ್ಲಿ ಇರುವ ಪೊಲೀಸರು ಅಂಥ ವ್ಯಕ್ತಿಗಳನ್ನು ಬಂಧಿಸುತ್ತಿದ್ದಾರೆ ಎಂದು ರೇಡಿಯೋ ಅಜತ್ಲಿ ವರದಿ ಮಾಡಿದೆ.

ಕೊರೊನಾ ವೈರಸ್ ಪದ ಬಳಸಿದರೆ ಮರ್ಯಾದೆ ಹೋಗುತ್ತಾ?

ಕೊರೊನಾ ವೈರಸ್ ಪದ ಬಳಸಿದರೆ ಮರ್ಯಾದೆ ಹೋಗುತ್ತಾ?

ಜಾಗತಿಕ ಮಟ್ಟದಲ್ಲಿ ಮರ್ಯಾದೆ ಉಳಿಸಿಕೊಳ್ಳುವ ಉದ್ದೇಶದಿಂದ ಟರ್ಕಮೆನಿಸ್ತಾನ್ ಸರ್ಕಾರವು ಈ ರೀತಿಯ ನಿಲುವನ್ನು ತಾಳಿದೆ ಎಂದು ಹೇಳಲಾಗುತ್ತಿದೆ. ಆದರೆ ಇಂಥ ನಿರ್ಧಾರದಿಂದ ದೇಶದ ಪ್ರಜೆಗಳಿಗೆ ಅಪಾಯ ಎದುರಾಗುತ್ತದೆ. ಟರ್ಕಮೆನಿಸ್ತಾನ್ ಅಧ್ಯಕ್ಷ ಗುರ್ಬಾಂಗುಲಿ ಬರ್ಡಿಮುಖಮ್ಮದೋವ್, ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದ್ದಾರೆ. ಜಾಗತಿಕ ಸಮುದಾಯ ಇದರ ಬಗ್ಗೆ ಗಮನ ಹರಿಸಬೇಕು ಎಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ ತಿಳಿಸಿದೆ.

ಟರ್ಕಮೆನಿಸ್ತಾನ್ ಕೊರೊನಾ ವೈರಸ್ ಸೋಂಕಿತರೇ ಇಲ್ಲ!

ಟರ್ಕಮೆನಿಸ್ತಾನ್ ಕೊರೊನಾ ವೈರಸ್ ಸೋಂಕಿತರೇ ಇಲ್ಲ!

ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳಲ್ಲೇ ಕೊರೊನಾ ವೈರಸ್ ನಿಂದ ಸಾವಿರ ಸಾವಿರ ಜನರು ಸಾವಿನ ಮನೆ ಸೇರುತ್ತಿದ್ದಾರೆ. ಸೋಂಕಿತರ ಸಂಖ್ಯೆ ಲಕ್ಷದ ಗಡಿ ದಾಟಿದ್ದರೂ ಟರ್ಕಮೆನಿಸ್ತಾನ್ ನಲ್ಲಿ ಮಾತ್ರ ಒಂದೇ ಒಂದು ಸೋಂಕಿತ ಪ್ರಕರಣಗಳು ಪತ್ತೆಯಾಗಿಲ್ಲ. ಏಕೆಂದರೆ ಸಾಂಕ್ರಾಮಿಕ ಪಿಡುಗಿನ ಬಗ್ಗೆ ದೇಶದ ಪ್ರಜೆಗಳಿಗೆ ಯಾವುದೇ ಮಾಹಿತಿಯನ್ನೂ ನೀಡುತ್ತಿಲ್ಲ ಎಂದು ಹೇಳಲಾಗುತ್ತಿದೆ.

English summary
Coronavirus Word Is Completely Banned In Turkmenistan. If Citizens Discuss About Pandemic Those Risk To Arrest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X