ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಯೆಟ್ನಾಂ ಪವಾಡ: ಎಲ್ಲ 16 ಕೊರೊನಾ ಸೋಂಕಿತರು ಗುಣಮುಖ

|
Google Oneindia Kannada News

ಹೋ ಚಿ ಮಿನ್ಹ್, ಫೆಬ್ರವರಿ 29: ಕೊರೊನಾ ವೈರಸ್‌ಗೆ ಸೂಕ್ತವಾದ ಔಷಧ ಕಂಡುಹಿಡಿಯಲೆಂದು ವಿಜ್ಞಾನಿಗಳು ಹಗಲು ರಾತ್ರಿ ನಿದ್ದೆಗೆಟ್ಟು ಕೆಲಸ ಮಾಡುತ್ತಿದ್ದಾರೆ. ವೈರಸ್‌ನ ಸ್ವರೂಪವನ್ನು ಅಧ್ಯಯನ ಮಾಡಿ ಅದಕ್ಕೆ ನಿಖರವಾದ ಲಸಿಕೆ ಕಂಡುಹಿಡಿಯಲು ಒಂದೂವರೆ ವರ್ಷವೇ ಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಅದರ ನಡುವೆ ಪ್ರತಿ ದೇಶಗಳೂ ತಮ್ಮ ಬಳಿ ಲಭ್ಯವಿರುವ ವೈದ್ಯಕೀಯ ತಂತ್ರಜ್ಞಾನ ಹಾಗೂ ಔಷಧ ಪದ್ಧತಿಗಳನ್ನು ಬಳಸಿಕೊಂಡು ಚಿಕಿತ್ಸೆ ನೀಡುತ್ತಿವೆ. ಅದರ ನಡುವೆ ವಿಯೆಟ್ನಾಂ ದೇಶ ಚಮತ್ಕಾರ ತೋರಿಸಿದೆ.

ಮಾರಕ ಕೊರೊನಾ ವೈರಸ್‌ನಿಂದ ಬಳಲುತ್ತಿದ್ದ ಎಲ್ಲ 16 ರೋಗಿಗಳನ್ನೂ ವಿಯೆಟ್ನಾಂ ಆಸ್ಪತ್ರೆಯಿಂದ ಮನೆಗೆ ಕಳುಹಿಸಿದೆ. ಅವರೆಲ್ಲರೂ ಕಾಯಿಲೆಯಿಂದ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಅಲ್ಲಿನ ಸರ್ಕಾರ ಹೇಳಿದೆ. ಇದರಲ್ಲಿ 73 ವರ್ಷದ ವೃದ್ಧರೂ ಸೇರಿದ್ದಾರೆ.

ಕೊರೊನಾ ವೈರಸ್‌ನಿಂದ ಭಾರತಕ್ಕೆ ಭಾರಿ ಅಪಾಯದ ಎಚ್ಚರಿಕೆಕೊರೊನಾ ವೈರಸ್‌ನಿಂದ ಭಾರತಕ್ಕೆ ಭಾರಿ ಅಪಾಯದ ಎಚ್ಚರಿಕೆ

ಕೊರೊನಾ ವೈರಸ್ ತಗುಲಿದ ವೃದ್ಧೆಯೊಬ್ಬಳಿಗೆ 48 ಗಂಟೆಗಳಲ್ಲಿಯೇ ಚಿಕಿತ್ಸೆ ನೀಡಿ ಗುಣಪಡಿಸಿದ್ದಾಗಿ ಈ ಹಿಂದೆ ಥಾಯ್ಲೆಂಡ್ ಹೇಳಿಕೊಂಡಿತ್ತು. ಆದರೆ ಅದರ ನಂತರ ಕೊರೊನಾದಿಂದ ರೋಗಿಗಳು ಗುಣಮುಖರಾದ ಯಾವುದೇ ಮಾಹಿತಿ ಬಂದಿಲ್ಲ. ಥಾಯ್ಲೆಂಡ್‌ನಲ್ಲಿ ಶನಿವಾರದ ವೇಳೆಗೆ ಕೊರೊನಾ ಸೋಂಕಿತರ ಸಂಖ್ಯೆ 42ಕ್ಕೆ ಏರಿದೆ.

ಹೊಸ ಪ್ರಕರಣ ಕಂಡುಬಂದಿಲ್ಲ

ಹೊಸ ಪ್ರಕರಣ ಕಂಡುಬಂದಿಲ್ಲ

ಶುಕ್ರವಾರದವರೆಗೆ ಕಳೆದ 15 ದಿನಗಳಿಂದ ದೇಶದಲ್ಲಿ ಯಾವುದೇ ಹೊಸ ಕೊರೊನಾ ವೈರಸ್ ಪ್ರಕರಣ ಕಂಡುಬಂದಿಲ್ಲ ಎಂದು ವಿಯೆಟ್ನಾಂ ಹೇಳಿಕೊಂಡಿದೆ. ವಿಯೆಟ್ನಾಂನಲ್ಲಿ ಕೊನೆಯ ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿದ್ದು ಫೆ. 13ರಂದು. ಹನೋಯಿ ಪ್ರಾಂತ್ಯದ ಉತ್ತರ ಭಾಗದ ಗ್ರಾಮವೊಂದನ್ನು 20 ದಿನಗಳ ಕಾಲ ನಿಗಾದಲ್ಲಿ ಇರಿಸಲಾಗಿತ್ತು.

ಕೊರೊನಾ ವೈರಸ್: ಚೀನಾ, ಜಪಾನ್‌ನಿಂದ ಭಾರತೀಯರು ವಾಪಸ್ಕೊರೊನಾ ವೈರಸ್: ಚೀನಾ, ಜಪಾನ್‌ನಿಂದ ಭಾರತೀಯರು ವಾಪಸ್

ಯುದ್ಧದ ಮೊದಲ ಸುತ್ತಿನಲ್ಲಿ ಜಯ

ಯುದ್ಧದ ಮೊದಲ ಸುತ್ತಿನಲ್ಲಿ ಜಯ

'ಕೋವಿಡ್-19 ವಿರುದ್ಧದ ಹೋರಾಟವನ್ನು ಯುದ್ಧ ಎಂದು ಭಾವಿಸಿದರೆ ನಾವು ಮೊದಲ ಸುತ್ತಿನಲ್ಲಿ ಜಯಿಸಿದ್ದೇವೆ. ಆದರೆ ಸಂಪೂರ್ಣ ಯುದ್ಧವನ್ನಲ್ಲ. ಏಕೆಂದರೆ ಪರಿಸ್ಥಿತಿ ಹೇಗಿರಲಿದೆ ಎನ್ನುವುದು ಅನಿಶ್ಚಿತವಾಗಿದೆ' ಎಂದು ತನ್ನ ದೇಶದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದ್ದ ಎಲ್ಲ 16 ಜನರೂ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ ಎಂಬುದಾಗಿ ವಿಯೆಟ್ನಾಂ ಉಪ ಪ್ರಧಾನಿ ವು ಡುಕ್ ಡಾಮ್ ತಿಳಿಸಿದ್ದಾರೆ.

ದಕ್ಷಿಣ ಕೊರಿಯಾದಲ್ಲಿ ತೀವ್ರ ಆತಂಕ

ದಕ್ಷಿಣ ಕೊರಿಯಾದಲ್ಲಿ ತೀವ್ರ ಆತಂಕ

ಚೀನಾ ಬಳಿಕ ದಕ್ಷಿಣ ಕೊರಿಯಾದಲ್ಲಿ ಕೊರೊನಾ ಮಹಾಮಾರಿ ಜನರನ್ನು ಭೀತಿಗೆ ದೂಡಿದೆ. ಸಾಧ್ಯವಾದಷ್ಟು ಮನೆಯಲ್ಲಿಯೇ ಉಳಿದುಕೊಳ್ಳಿ ಎಂದು ದಕ್ಷಿಣ ಕೊರಿಯಾ ಸರ್ಕಾರ ತನ್ನ ಪ್ರಜೆಗಳಿಗೆ ಮನವಿ ಮಾಡುತ್ತಿದೆ. ದೇಶದಲ್ಲಿ ಶುಕ್ರವಾರ 594 ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 2,931ಕ್ಕೆ ಏರಿದೆ. ಇದುವರೆಗೂ ಅಲ್ಲಿ 17 ಮಂದಿ ಕೊರೊನಾಕ್ಕೆ ಬಲಿಯಾಗಿದ್ದಾರೆ. ಚೀನಾದಲ್ಲಿ ಕೊರೊನಾಕ್ಕೆ ಜೀವ ಕಳೆದುಕೊಂಡವರ ಸಂಖ್ಯೆ 2,835ಕ್ಕೆ ತಲುಪಿದೆ.

10,000 ಹಜ್ ಯಾತ್ರಾರ್ಥಿಗಳ ಪ್ರವಾಸಕ್ಕೆ ಅಡ್ಡಿಯಾದ ಕೊರೊನಾ ವೈರಸ್10,000 ಹಜ್ ಯಾತ್ರಾರ್ಥಿಗಳ ಪ್ರವಾಸಕ್ಕೆ ಅಡ್ಡಿಯಾದ ಕೊರೊನಾ ವೈರಸ್

ಜಗತ್ತಿನಾದ್ಯಂತ 83,650ಕ್ಕೂ ಹೆಚ್ಚು ಪ್ರಕರಣ

ಜಗತ್ತಿನಾದ್ಯಂತ 83,650ಕ್ಕೂ ಹೆಚ್ಚು ಪ್ರಕರಣ

50ಕ್ಕೂ ಹೆಚ್ಚು ದೇಶಗಳಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಜಗತ್ತಿನಾದ್ಯಂತ 83,650ಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಅದರಲ್ಲಿ ಚೀನಾ ಒಂದರಲ್ಲಿಯೇ 78,961 ಜನರಿಗೆ ಕೊರೊನಾ ಸೋಂಕು ತಗುಲಿದೆ. ಬೆಲಾರಸ್, ಲಿಥುಯೇನಿಯಾ, ನೆದರ್‌ಲ್ಯಾಂಡ್ಸ್, ನ್ಯೂಜಿಲ್ಯಾಂಡ್ ಮತ್ತು ನೈಜಿರಿಯಾಗಳು ತಮ್ಮ ಮೊದಲ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿವೆ. ಕೊರೊನಾದಿಂದ ಬ್ರಿಟನ್‌ನ ಮೊದಲ ವ್ಯಕ್ತಿ ಬಲಿಯಾಗಿದ್ದು ವರದಿಯಾಗಿದೆ. ಜಪಾನ್‌ನ ಡೈಮಂಡ್ ಪ್ರಿನ್ಸೆಸ್ ಕ್ರೂಸ್ ಹಡಗಿನಲ್ಲಿ ಅವರು ಪ್ರಯಾಣಿಕರಾಗಿದ್ದರು.

English summary
Vietnam announced all its 16 coronavirus patients has been cured. Total Covid-19 cases around the world crossed 83,650.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X