ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಚೀನಾದ ಕೆಟ್ಟ ಉಡುಗೊರೆ; ಟ್ರಂಪ್

|
Google Oneindia Kannada News

ನ್ಯೂಯಾರ್ಕ್, ಮೇ 28 : ಕೊರೊನಾ ವೈರಸ್ ವಿಚಾರದಲ್ಲಿ ಅಮೆರಿಕ ಮತ್ತೆ ಚೀನಾದ ಮೇಲೆ ಗೂಬೆ ಕೂರಿಸಿದೆ. "ಕೊರೊನಾ ವೈರಸ್ ಚೀನಾದ ಅತಿ ಕೆಟ್ಟ ಉಡುಗೊರೆ" ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಅಮೆರಿಕದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ. ಇದುವರೆಗೂ 16 ಲಕ್ಷ ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿನ ನಿಯಂತ್ರಣಕ್ಕೆ ದೇಶ ಹರಸಾಹಸ ಪಡುತ್ತಿದೆ.

WHOಗೆ ಚೀನಾದಷ್ಟೇ ಅನುದಾನ ಬಿಡುಗಡೆ ಮಾಡುತ್ತೇವೆ ಎಂದ ಅಮೆರಿಕ WHOಗೆ ಚೀನಾದಷ್ಟೇ ಅನುದಾನ ಬಿಡುಗಡೆ ಮಾಡುತ್ತೇವೆ ಎಂದ ಅಮೆರಿಕ

ಇಂತಹ ಸಂದರ್ಭದಲ್ಲಿಯೇ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದು ಚೀನಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಕೊರೊನಾ ಸೋಂಕಿನ ವಿಚಾರದಲ್ಲಿ ನಾವು ಅತಿ ಕೆಟ್ಟ ಹಂತಕ್ಕೆ ತಲುಪಿದ್ದೇವೆ. ಸಾವಿನ ಸಂಖ್ಯೆ 1 ಲಕ್ಷ ದಾಟಿದೆ" ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಚೀನಾದ ಮೇಲೆ ಟ್ರಂಪ್ ಆರೋಪ: ಅಮೆರಿಕ ವಿಜ್ಞಾನಿಗಳಿಂದಲೇ ತಿರಸ್ಕಾರ ಚೀನಾದ ಮೇಲೆ ಟ್ರಂಪ್ ಆರೋಪ: ಅಮೆರಿಕ ವಿಜ್ಞಾನಿಗಳಿಂದಲೇ ತಿರಸ್ಕಾರ

Trump

ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳಿಗೆ ಸಂತಾಪ ಸೂಚಿಸಿರುವ ಡೊನಾಲ್ಡ್ ಟ್ರಂಪ್, "ದೇವರು ನಿಮ್ಮ ಜೊತೆ ಇದ್ದಾನೆ" ಎಂದು ಮೃತಪಟ್ಟ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಮುಚ್ಚುವ ಬೆದರಿಕೆ ಹಾಕಿದ ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣ ಮುಚ್ಚುವ ಬೆದರಿಕೆ ಹಾಕಿದ ಡೊನಾಲ್ಡ್ ಟ್ರಂಪ್

ಕೊರೊನಾ ಸೋಂಕಿನ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ಮೊದಲಿನಿಂದಲೂ ಚೀನಾದ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಟ್ರಂಪ್ ಸಹ ಕೊರೊನಾ ನಿಯಂತ್ರಣ ಮಾಡುವಲ್ಲಿ ವಿಫಲರಾಗಿದ್ದಾರೆ ಎಂಬ ಟೀಕೆಗಳು ಕೇಳಿ ಬರುತ್ತಿವೆ.

English summary
In a tweet America president Donald Trump said that Coronavirus a very bad gift from China. America witnessed for 1 lakh deaths from the pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X