ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ 2.9 ಮಿಲಿಯನ್ ಡಾಲರ್ ನೆರವು ಘೋಷಿಸಿದ ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 28: ಕೊರೊನಾ ವೈರಸ್‌ ತಡೆಗೆ ಅಮೆರಿಕ 174 ಮಿಲಿಯನ್ ಡಾಲರ್ ಹಣವನ್ನು ಘೋಷಣೆ ಮಾಡಿದೆ. ವಿಶ್ವದ 64 ರಾಷ್ಟ್ರಗಳಿಗೆ ಈ ಹಣವನ್ನು ಅಮೆರಿಕ ನೀಡುವುದಾಗಿ ತಿಳಿಸಿದೆ.

ಈ ಹಿಂದೆ ಫೆಬ್ರವರಿ ತಿಂಗಳಿನಲ್ಲಿ ಅಮೆರಿಕಾ 100 ಮಿಲಿಯನ್ ಡಾಲರ್ ಹಣವನ್ನು ನೀಡಿತ್ತು. ಈಗ ಹೊಸದಾಗಿ ಬಿಡುಗಡೆ ಮಾಡುವ ಹಣವೂ ಸೇರಿ 174 ಮಿಲಿಯನ್ ಡಾಲರ್ ಆಗಿದೆ. ಕೊರೊನಾ ವೈರಸ್‌ನಿಂದ ಹೆಚ್ಚು ತೊಂದರೆ ಅನುಭವಿಸುತ್ತಿರುವ ರಾಷ್ಟ್ರಗಳಗೆ ಈ ನೆರವು ನೀಡಲಾಗುತ್ತಿದೆ..

ಕೊರೊನಾ ಕೊಲ್ಲಲು ಪಾಯ್ಸನ್ ಸೇವಿಸಿ ಪ್ರಾಣ ಬಿಟ್ಟ ನೂರಾರು ಮಂದಿ!ಕೊರೊನಾ ಕೊಲ್ಲಲು ಪಾಯ್ಸನ್ ಸೇವಿಸಿ ಪ್ರಾಣ ಬಿಟ್ಟ ನೂರಾರು ಮಂದಿ!

ಅಮೆರಿಕಾ ಘೋಷಿಸಿದ ಹಣದಲ್ಲಿ ಭಾರತಕ್ಕೆ 2.9 ಮಿಲಿಯನ್ ಡಾಲರ್ ಸಿಗುತ್ತಿದೆ. ಇದನ್ನು ಪ್ರಯೋಗಾಲಯ ವ್ಯವಸ್ಥೆಗಳಿಗೆ, ತಾಂತ್ರಿಕ ತಜ್ಞರಿಗೆ, ಚಿಕಿತ್ಸೆಗೆ ಬಳಸುವಂತೆ ತಿಳಿಸಿದೆ. ಈಗ ಬಿಡುಗಡೆ ಮಾಡಿರುವ ಹಣದಿಂದ ಹೆಚ್ಚಿನ ಆರೋಗ್ಯ ನೆರವು ಸಿಗುತ್ತದೆ ಎಂದು ಸ್ಟೇಟ್ ಡಿಪಾರ್ಟ್್ಮೆಂಟ್ ಹೇಳಿದೆ.

Coronavirus United States Announced $2.9 Million To India

''ಹೊಸ ನೆರವು ಜಾಗತಿಕ ಆರೋಗ್ಯ ನಾಯಕತ್ವದ ದಾಖಲೆಯನ್ನು ನಿರ್ಮಿಸುತ್ತದೆ. ದಶಕಗಳಿಂದ, ಯುನೈಟೆಡ್ ಸ್ಟೇಟ್ಸ್ ಸಾರ್ವಜನಿಕ ಆರೋಗ್ಯದಲ್ಲಿ ದ್ವಿಪಕ್ಷೀಯ ನೆರವು ನೀಡುವ ವಿಶ್ವದ ಅತಿದೊಡ್ಡ ಪೂರೈಕೆದಾರ ರಾಷ್ಟ್ರವಾಗಿದೆ. ಯುಎಸ್ ಜೀವಗಳನ್ನು ಉಳಿಸಿದೆ, ರೋಗಕ್ಕೆ ಹೆಚ್ಚು ಗುರಿಯಾಗುವ ಜನರನ್ನು ರಕ್ಷಿಸಿದೆ, ಆರೋಗ್ಯ ಸಂಸ್ಥೆಗಳನ್ನು ನಿರ್ಮಿಸಿದೆ ಮತ್ತು ಸಮುದಾಯಗಳು ಮತ್ತು ರಾಷ್ಟ್ರಗಳ ಸ್ಥಿರತೆಯನ್ನು ಉತ್ತೇಜಿಸಿದೆ.'' ಎಂದು USAID ಉಪ ಆಡಳಿತಾಧಿಕಾರಿ ಬೊನೀ ಗ್ಲಿಕ್ ತಿಳಿಸಿದ್ದಾರೆ.

ಈವರೆಗೆ ಭಾರತದಲ್ಲಿ 800ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದೆ. ಅಮೆರಿಕದಲ್ಲಿ ಒಂದು ಲಕ್ಷ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ.

English summary
Coronavirus: The United States of America announced $174 million financial help to 64 countries including $2.9 million to India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X