ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ತೊಲಗಿ ಮತ್ತೆ ಎಲ್ಲವೂ ಸಹಜ ಸ್ಥಿತಿಗೆ ಬರುವುದು ಯಾವಾಗ ಗೊತ್ತಾ.?

|
Google Oneindia Kannada News

ವಿಶ್ವದಾದ್ಯಂತ ಕೊರೊನಾ ವೈರಸ್ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಲ್ಲಿಯವರೆಗೂ 24,81,528 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ. 1,70,439 ಡೆಡ್ಲಿ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. 57,165 ಜನರ ಆರೋಗ್ಯ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ.

Recommended Video

ಬೆಂಗಳೂರಿನಲ್ಲಿ ರಸ್ತೆಗೇನಾದ್ರು ಇಳಿದ್ರೆ ಯಮ‌ ಮಾತ್ರ ನಿಮ್ಮನ್ನ ಬಿಡೋದಿಲ್ಲ | Oneindia kannada

ಭಾರತದಲ್ಲೂ ಕೊರೊನಾ ಅಟ್ಟಹಾಸ ಮುಂದುವರೆದಿದೆ. 18,539 ಜನರಲ್ಲಿ ಕೋವಿಡ್-19 ಪಾಸಿಟಿವ್ ಕಂಡುಬಂದಿದೆ. 592 ಜನ ಮಂದಿ ಮೃತಪಟ್ಟಿದ್ದಾರೆ.

ಕೊರೊನಾ ವೈರಸ್ ಜನ್ಮ ರಹಸ್ಯ: ಸ್ಫೋಟಕ ಮಾಹಿತಿ ಬಯಲು.!ಕೊರೊನಾ ವೈರಸ್ ಜನ್ಮ ರಹಸ್ಯ: ಸ್ಫೋಟಕ ಮಾಹಿತಿ ಬಯಲು.!

ಪರಿಸ್ಥಿತಿ ಹೀಗಿರುವಾಗಲೇ, ಎಲ್ಲರ ತಲೆಯಲ್ಲೂ ಕೊರೆಯುತ್ತಿರುವ ಪ್ರಶ್ನೆ ಒಂದೇ...

ಅದೇ... ಈ ಮಹಾಮಾರಿ ಕೊರೊನಾ ಯಾವಾಗ ತೊಲಗುತ್ತೆ.? ಮತ್ತೆ ನೆಮ್ಮದಿಯ ಜೀವನ ಯಾವಾಗಿನಿಂದ ಶುರುವಾಗುತ್ತೆ.? ಈ ಪ್ರಶ್ನೆಗೆ ವಿಶ್ವ ಸಂಸ್ಥೆಯ ಆಂಟೋನಿಯೋ ಗುಟೆರಸ್ ಉತ್ತರ ನೀಡಿದ್ದಾರೆ.

ಆಂಟೋನಿಯೋ ಗುಟೆರಸ್ ಹೇಳಿರುವುದೇನು.?

ಆಂಟೋನಿಯೋ ಗುಟೆರಸ್ ಹೇಳಿರುವುದೇನು.?

''ಪರಿಣಾಮಕಾರಿ ಕೋವಿಡ್-19 ಲಸಿಕೆಯೊಂದೇ ಇಡೀ ವಿಶ್ವವನ್ನು ಮತ್ತೆ ಸಹಜ ಸ್ಥಿತಿಗೆ ತರುವ ಅಸ್ತ್ರ'' ಎಂದು ವಿಶ್ವ ಸಂಸ್ಥೆಯ ಸೆಕ್ರೆಟರಿ-ಜೆನರಲ್ ಆಂಟೋನಿಯೋ ಗುಟೆರಸ್ ಹೇಳಿದ್ದಾರೆ.

ಈ ವರ್ಷದ ಅಂತ್ಯದ ವೇಳೆಗೆ ಲಸಿಕೆ.?

ಈ ವರ್ಷದ ಅಂತ್ಯದ ವೇಳೆಗೆ ಲಸಿಕೆ.?

''2020 ರ ಅಂತ್ಯದ ವೇಳೆಗೆ ಕೋವಿಡ್-19 ಲಸಿಕೆ ಬರಬೇಕು. ಆ ಮಟ್ಟದ ವೇಗ ಕಂಡುಕೊಳ್ಳಬೇಕು'' ಎಂದು ಆಂಟೋನಿಯೋ ಗುಟೆರಸ್ ತಿಳಿಸಿದ್ದಾರೆ. ಕೋವಿಡ್-19 ವಿರುದ್ಧದ ಹೋರಾಟಕ್ಕೆ ಮಾರ್ಚ್ 25 ರಂದು ಎರಡು ಬಿಲಿಯನ್ ದೇಣಿಗೆ ನೀಡುವಂತೆ ಆಂಟೋನಿಯೋ ಗುಟೆರಸ್ ಕೇಳಿಕೊಂಡಿದ್ದರು. ಈವರೆಗೆ 20% ಹಣ ಶೇಖರಣೆ ಆಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

#LifeAfterCorona: ಭವಿಷ್ಯ ಇನ್ನೂ ಭಯಾನಕವಾಗಿರಲಿದೆ: ನೋಮ್ ಚಾಮ್ಸ್ಕಿ#LifeAfterCorona: ಭವಿಷ್ಯ ಇನ್ನೂ ಭಯಾನಕವಾಗಿರಲಿದೆ: ನೋಮ್ ಚಾಮ್ಸ್ಕಿ

ವಿಶ್ವ ಸಂಸ್ಥೆ ಸಮರ್ಥ

ವಿಶ್ವ ಸಂಸ್ಥೆ ಸಮರ್ಥ

ವಿಶ್ವ ಆರೋಗ್ಯ ಸಂಸ್ಥೆ (WHO) ಯ ಸಹಾಯದೊಂದಿಗೆ ವಿಶ್ವ ಸಂಸ್ಥೆಯು 47 ಆಫ್ರಿಕನ್ ದೇಶಗಳಲ್ಲಿ ಕೋವಿಡ್-19 ಪರೀಕ್ಷೆಗಳನ್ನು ನಡೆಸಲು ಸಮರ್ಥವಾಗಿದೆ ಎಂದಿದ್ದಾರೆ ಆಂಟೋನಿಯೋ ಗುಟೆರಸ್.

ಹತ್ತು ಪಟ್ಟು ಹೆಚ್ಚು ಅಪಾಯಕಾರಿ

ಹತ್ತು ಪಟ್ಟು ಹೆಚ್ಚು ಅಪಾಯಕಾರಿ

''ಸ್ವೈನ್ ಫ್ಲೂ ಗಿಂತಲೂ ಹತ್ತು ಪಟ್ಟು ಕೋವಿಡ್-19 ಡೆಡ್ಲಿ ಆಗಿದ್ದು, ಅದನ್ನು ತಡೆಗಟ್ಟಲು ಲಸಿಕೆಯಿಂದ ಮಾತ್ರ ಸಾಧ್ಯ'' ಎಂದು ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಟೆಡ್ರೋಸ್ ತಿಳಿಸಿದ್ದರು.

ವಿಜ್ಞಾನಿಯ ಶಾಕಿಂಗ್ ಹೇಳಿಕೆ: ಅಯ್ಯೋ ವಿಧಿಯೇ.. ಬದುಕು ಮೊದಲಿನಂತಾಗುವುದಿಲ್ಲವೇ?ವಿಜ್ಞಾನಿಯ ಶಾಕಿಂಗ್ ಹೇಳಿಕೆ: ಅಯ್ಯೋ ವಿಧಿಯೇ.. ಬದುಕು ಮೊದಲಿನಂತಾಗುವುದಿಲ್ಲವೇ?

English summary
Coronavirus: UN Chief claims only Covid-19 vaccine will allow return to normalcy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X