ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್: ಯಾವ ದೇಶದಲ್ಲಿ ಎಷ್ಟು ಪ್ರಕರಣ, ಎಷ್ಟು ಸಾವು?

|
Google Oneindia Kannada News

ಜಾಗತಿಕ ಪಿಡುಗು ಎನಿಸಿಕೊಳ್ಳುತ್ತಿರುವ ಕೊರೊನಾ ವೈರಸ್ ಗೆ ಜಗತ್ತಿನ ಹಲವು ದೇಶಗಳು ತತ್ತರಗೊಂಡಿದೆ. ಚೀನಾದಲ್ಲಿ ಪತ್ತೆಯಾದ ಈ ವೈರಸ್ ಗೆ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಚೀನಾವೊಂದರಲ್ಲಿ ಸುಮಾರು 2945ಕ್ಕೂ ಅಧಿಕ ಸಾವಿನ ಪ್ರಕರಣಗಳು ದಾಖಲಾಗಿದೆ.

ಚೀನಾ ಹೊರತಾಗಿಯೂ ಕೊರೊನಾ ವೈರಸ್ ಹರಡುತ್ತಿದ್ದು, ಇತರೆ ದೇಶಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಡಿಸೆಂಬರ್ ತಿಂಗಳಿನಿಂದ ಈ ಸೋಂಕು ಕಾಣಿಸಿಕೊಂಡಿದ್ದು, ಇದುವರೆಗೂ 77ಕ್ಕೂ ಅಧಿಕ ರಾಷ್ಟ್ರದಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ.

ಜಗತ್ತಿನಲ್ಲಿ ಕೊರೊನಾ ವೈರಸ್ ಗೆ ಪ್ರಾಣ ಕಳೆದುಕೊಂಡಿರುವವರ ಸಂಖ್ಯೆ ಎಷ್ಟು? ಯಾವ ದೇಶದಲ್ಲಿ ಹೆಚ್ಚು ಯಾವ ದೇಶದಲ್ಲಿ ಕಡಿಮೆ ಪ್ರಕರಣಗಳು, ಕೊರೊನಾದಿಂದ ನಲುಗಿಹೋಗಿರುವ ಟಾಪ್ ಹತ್ತು ದೇಶಗಳು ಯಾವುದು ಎಂಬ ಸಂಪೂರ್ಣ ವಿವರ ಇಲ್ಲಿದೆ. ಮುಂದೆ ಓದಿ....

ಮಾಸ್ಕ್ ಧರಿಸಿದರೆ ಕೊರೊನಾ ವೈರಸ್ ಬರುವುದಿಲ್ಲವೇ?ಮಾಸ್ಕ್ ಧರಿಸಿದರೆ ಕೊರೊನಾ ವೈರಸ್ ಬರುವುದಿಲ್ಲವೇ?

92 ಸಾವಿರ ಪ್ರಕರಣಗಳು

92 ಸಾವಿರ ಪ್ರಕರಣಗಳು

ಸುಮಾರು 77 ದೇಶಗಳಲ್ಲಿ ಇದುವರೆಗೂ 92,182 ಕ್ಕೂ ಹೆಚ್ಚು ಕೊರನಾ ವೈರಸ್ ಪ್ರಕರಣಗಳು ದಾಖಲಾಗಿದೆ. ಈ ಸಂಖ್ಯೆ ಇನ್ನು ಮುಂದುವರೆದಿದೆ. ಚೀನಾವೊಂದರಲ್ಲಿ 80,152 ಪ್ರಕರಣಗಳು ದಾಖಲಾಗಿದೆ. ಚೀನಾ ಬಿಟ್ಟರೆ ದಕ್ಷಿಣ ಕೊರಿಯಾದಲ್ಲಿ 5186 ಪ್ರಕರಣ ಬೆಳಕಿಗೆ ಬಂದಿದೆ. ಇರಾನ್‌ನಲ್ಲಿ 2336, ಇಟಲಿಯಲ್ಲಿ 2036 ಹಾಗೂ ಜಪಾನ್ (ಡೈಮಂಡ್ ಪ್ರಿನ್ಸಸ್) 989 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದೆ.

3131 ಸಾವು

3131 ಸಾವು

92,182 ಪ್ರಕರಣಗಳಲ್ಲಿ ಇದುವರೆಗೂ 3131 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಚೀನಾ ದೇಶವೊಂದರಲ್ಲಿ 2945 ಜನರು ಸಾವನ್ನಪ್ಪಿದ್ದಾರೆ. ದಕ್ಷಿಣ ಕೊರಿಯಾದಲ್ಲಿ 28 ಜನರು, ಇಆರನ್ ನಲ್ಲಿ 77 ಜನರು, ಇಟಲಿಯಲ್ಲಿ 52 ಜನರು, ಜಪಾನ್ ನಲ್ಲಿ 13 ಜನರು ಕೊರೊನಾಗೆ ಬಲಿಯಾಗಿದ್ದಾರೆ.

ಆಗ್ರಾದಲ್ಲಿ 6 ಮಂದಿಗೆ ಕೊರೊನಾ: ಭಯದಲ್ಲಿ ದೇಶದ ಜನತೆಆಗ್ರಾದಲ್ಲಿ 6 ಮಂದಿಗೆ ಕೊರೊನಾ: ಭಯದಲ್ಲಿ ದೇಶದ ಜನತೆ

ಬೇರೆ ಎಲ್ಲೆಲ್ಲಿ ಸಾವು ಆಗಿದೆ

ಬೇರೆ ಎಲ್ಲೆಲ್ಲಿ ಸಾವು ಆಗಿದೆ

ಚೀನಾ, ದಕ್ಷಿಣ ಕೊರಿಯಾ, ಇರಾನ್, ಇಟಲಿ, ಜಪಾನ್ ದೇಶಗಳಲ್ಲಿ ಹೆಚ್ಚು ಸಾವು ಸಂಭವಿಸಿದೆ. ಈ ಐದು ದೇಶಗಳನ್ನು ಹೊರತು ಪಡಿಸಿದರೆ, ಪ್ರಾನ್ಸ್ ನಲ್ಲಿ 3, ಯುಎಸ್‌ನಲ್ಲಿ 6, ಹಾಂಕ್ ಕಾಂಗ್ ನಲ್ಲಿ 2, ಥೈಲ್ಯಾಂಡ್‌ನಲ್ಲಿ 1, ಥೈವಾನ್ನಲ್ಲಿ 1, ಆಸ್ಟ್ರೇಲಿಯಾದಲ್ಲಿ 1, ಸ್ಯಾನ್ ಮರಿಯೋದಲ್ಲಿ 1, ಪಿಲಿಪ್ಪೀನ್ಸ್ 1 ಸಾವಾಗಿದೆ. ಉಳಿದಂತೆ ಬೇರೆ ಯಾವ ದೇಶದಲ್ಲಿ ಕೊರೊನಾಗೆ ಬಲಿಯಾಗಿರುವ ಮಾಹಿತಿ ಇಲ್ಲ.

ಭಾರತದಲ್ಲಿ ಎಷ್ಟು ಪ್ರಕರಣ

ಭಾರತದಲ್ಲಿ ಎಷ್ಟು ಪ್ರಕರಣ

ಕೊರೊನಾ ವೈರಸ್ ಸೋಂಕು ಭಾರತದಲ್ಲೂ ಪತ್ತೆಯಾಗಿದೆ. ಇದುವರೆಗೂ ಭಾರತದಲ್ಲಿ ಒಟ್ಟು 6 ಜನರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆಯಂತೆ. ಅದರಲ್ಲಿ ಮೂರು ಜನರಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಹೇಳಲಾಗಿದೆ.

English summary
India, germany and iran have reported new cases of the coronavirus. What is the total cases in reported at worldwide?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X