ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಗ್ಯ ಸಚಿವರಿಗೇ ಕೊರೊನಾ ವೈರಸ್ ಸೋಂಕು

|
Google Oneindia Kannada News

ಟೆಹರಾನ್, ಫೆಬ್ರವರಿ 26: ಮಾರಕ ಕೊರೊನಾ ವೈರಸ್ ಚೀನಾದಾಚೆಗೂ ತನ್ನ ಹಾವಳಿ ಹೆಚ್ಚಿಸಿದೆ. ದಕ್ಷಿಣ ಕೊರಿಯಾ, ಇರಾನ್, ಜಪಾನ್‌ಗಳಲ್ಲಿ ಕೊರೊನಾ ಭೀತಿ ಹೆಚ್ಚಾಗಿದೆ. ಚೀನಾದಲ್ಲಿ ಮಂಗಳವಾರ 406 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಮತ್ತೆ 52 ಮಂದಿ ಬಲಿಯಾಗಿದ್ದಾರೆ. ಇದರಿಂದ ಸಾವಿನ ಸಂಖ್ಯೆ 2,718ಕ್ಕೆ ಏರಿದ್ದರೆ, 78,064 ಮಂದಿಗೆ ಸೋಂಕು ಪೀಡಿತರಾಗಿದ್ದಾರೆ.

ಇರಾನ್‌ನಲ್ಲಿ 95 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಮಂಗಳವಾರದ ವೇಳೆಗೆ ಕೊರೊನಾದಿಂದ ಬಲಿಯಾದವರ ಸಂಖ್ಯೆ 16ಕ್ಕೆ ಏರಿದೆ. ಕೊರೊನಾ ವೈರಸ್‌ನ ಮೂಲ ಕೇಂದ್ರವಾದ ಚೀನಾದ ಆಚೆಗೆ ಅತಿ ಹೆಚ್ಚು ಸಾವುಗಳು ಇರಾನ್‌ನಲ್ಲಿಯೇ ವರದಿಯಾಗಿವೆ.

ಕೊರೊನಾ ವೈರಸ್: ಯಾವ ದೇಶದಲ್ಲಿ ಎಷ್ಟು ಪ್ರಕರಣ? ಸಂಪೂರ್ಣ ವಿವರಕೊರೊನಾ ವೈರಸ್: ಯಾವ ದೇಶದಲ್ಲಿ ಎಷ್ಟು ಪ್ರಕರಣ? ಸಂಪೂರ್ಣ ವಿವರ

ಈ ನಡುವೆ ಇರಾನ್‌ನ ಉಪ ಆರೋಗ್ಯ ಸಚಿವರಲ್ಲಿಯೇ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ. ಅಲ್ಲಿನ ಸಂಸದರೊಬ್ಬರಿಗೂ ಸೋಂಕು ತಗುಲಿದೆ.

ಉಪ ಆರೋಗ್ಯ ಸಚಿವ ಇರಾಜ್ ಹರಿರ್ಚಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಅಸ್ವಸ್ಥರಾಗಿದ್ದರು. ಬಳಿಕ ಅಂತರ್ಜಾಲದಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ತಮಗೆ ಕೊರೊನಾ ವೈರಸ್ ಸೋಂಕು ತಗುಲಿರುವುದನ್ನು ತಿಳಿಸಿದ್ದಾರೆ.

ಬದುಕುವ ಭರವಸೆ ಇಲ್ಲ

ಬದುಕುವ ಭರವಸೆ ಇಲ್ಲ

ಟೆಹರಾನ್‌ನ ಸಂಸದ ಮೊಹಮದ್ ಸದೆಘ್ವಿ ಕೂಡ ತಮ್ಮಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ ಎಂದು ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ. 'ನನ್ನ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಈ ಜಗತ್ತಿನಲ್ಲಿ ಮತ್ತೆ ಬದುಕನ್ನು ಮುಂದುವರಿಸುವ ಹೆಚ್ಚಿನ ಭರವಸೆಯನ್ನೇನೂ ನಾನು ಹೊಂದಿಲ್ಲ' ಎಂದು ಸದೆಘ್ವಿ ಅವರು ಸಾಯುವ ಭೀತಿಯನ್ನು ಹಂಚಿಕೊಂಡಿದ್ದಾರೆ.

ಅಮೆರಿಕ ಸೈನಿಕನಿಗೆ ಕೊರೊನಾ

ಅಮೆರಿಕ ಸೈನಿಕನಿಗೆ ಕೊರೊನಾ

ದಕ್ಷಿಣ ಕೊರಿಯಾದಲ್ಲಿ ಕೊರೊನಾ ಭೀತಿ ಹೆಚ್ಚಾಗಿದ್ದು, ಅಲ್ಲಿ ನಿಯೋಜನೆಗೊಂಡಿರುವ ಅಮೆರಿಕದ ಸೇನಾ ಪಡೆಯ ಯೋಧನೊಬ್ಬನಲ್ಲಿ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ದಕ್ಷಿಣ ಕೊರಿಯಾದಲ್ಲಿ 1,100ಕ್ಕೂ ಹೆಚ್ಚು ಜನರಿಗೆ ಸೋಂಕು ವ್ಯಾಪಿಸಿದ್ದು, 12 ಸಾವುಗಳು ವರದಿಯಾಗಿವೆ.

ಆಸ್ಟ್ರಿಯಾವನ್ನು ಆವರಿಸಿದ ಕೊರೊನಾ: ಮೊದಲೆರೆಡು ಪ್ರಕರಣಗಳು ಪತ್ತೆಆಸ್ಟ್ರಿಯಾವನ್ನು ಆವರಿಸಿದ ಕೊರೊನಾ: ಮೊದಲೆರೆಡು ಪ್ರಕರಣಗಳು ಪತ್ತೆ

ಅಮೆರಿಕದಲ್ಲಿ ವೈರಸ್ ಹರಡುವ ಭೀತಿ

ಅಮೆರಿಕದಲ್ಲಿ ವೈರಸ್ ಹರಡುವ ಭೀತಿ

ಅಮೆರಿಕದಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡಲಿದೆ ಎಂದು ಕಾಯಿಲೆ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ಎಚ್ಚರಿಕೆ ನೀಡಿದೆ. ಕೊರೊನಾ ವೈರಸ್ ನಮ್ಮಲ್ಲಿ ಹರಡುತ್ತದೆಯೇ ಎನ್ನುವುದು ಪ್ರಶ್ನೆಯೇ ಅಲ್ಲ, ಆದರೆ ಇದು ತಾವಾಗ ವ್ಯಾಪಿಸುತ್ತದೆ ಮತ್ತು ದೇಶದ ಎಷ್ಟು ಮಂದಿ ತೀವ್ರ ಕಾಯಿಲೆಗೆ ಒಳಗಾಗುತ್ತಾರೆ ಎನ್ನುವುದೇ ಪ್ರಶ್ನೆಯಾಗಿದೆ. ನಮ್ಮ ನಿಯಂತ್ರಣ ಕ್ರಮಗಳು ಹೆಚ್ಚಾಗಿ ಯಶಸ್ವಿಯಾಗಿರುವುದರಿಂದ ಅಮೆರಿಕದಲ್ಲಿ ಕೆಲವೇ ಪ್ರಕರಣಗಳು ಕಂಡುಬಂದಿವೆ. ಆದರೆ ಇನ್ನಷ್ಟು ದೇಶಗಳಲ್ಲಿ ಇದು ಸಾಮುದಾಯಿಕವಾಗಿ ಹರಡುತ್ತಿರುವುದರಿಂದ ನಮ್ಮ ಗಡಿಯಲ್ಲಿ ಇದನ್ನು ತಡೆಯುವುದು ಕಠಿಣವಾಗಲಿದೆ ಎಂದು ಅದು ಹೇಳಿದೆ.

ವೈರಸ್‌ಅನ್ನು ನಾವು ಆಹ್ವಾನಿಸಿದ್ದಲ್ಲ

ವೈರಸ್‌ಅನ್ನು ನಾವು ಆಹ್ವಾನಿಸಿದ್ದಲ್ಲ

ಇರಾನ್‌ನಲ್ಲಿ ರಾಷ್ಟ್ರವ್ಯಾಪಿ ವಿವಿಧ ಕಾರ್ಯಕ್ರಮಗಳು ಮತ್ತು ಫುಟ್‌ಬಾಲ್ ಪಂದ್ಯಾವಳಿಗಳನ್ನು ರದ್ದುಗೊಳಿಸಲು ಆದೇಶಿಸಲಾಗಿದ್ದು, ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳನ್ನು ಅನೇಕ ಕಡೆ ಮುಚ್ಚಲಾಗಿದೆ. ಕೆಲವು ಪ್ರಾಂತ್ಯಗಳಲ್ಲಿ ಜನರು ಮನೆಯಿಂದ ಹೊರಬರಬಾರದು ಎಂದು ಸೂಚಿಸಲಾಗಿದೆ.

ವಿಮಾನಕ್ಕೆ ನೀಡದ ಅನುಮತಿ: ಚೀನಾಕ್ಕೆ ಕಠಿಣ ಕ್ರಮದ ಪ್ರತಿಕ್ರಿಯೆ ಕೊಟ್ಟ ಭಾರತವಿಮಾನಕ್ಕೆ ನೀಡದ ಅನುಮತಿ: ಚೀನಾಕ್ಕೆ ಕಠಿಣ ಕ್ರಮದ ಪ್ರತಿಕ್ರಿಯೆ ಕೊಟ್ಟ ಭಾರತ

'ಇದನ್ನು ನಾವೇ ಆಹ್ವಾನಿಸಿ ಕರೆದಿರುವುದಲ್ಲ. ಇದು ನಾವು ಇಷ್ಟಪಡದೆ ಭೇಟಿ ನೀಡಿದೆ. ದೇವರ ಇಚ್ಛೆಯಂತೆ ನಾವು ಈ ವೈರಸ್ ದಾಳಿಯಿಂದ ಹೊರಬರುತ್ತೇವೆ' ಎಂದು ಇರಾನ್ ಅಧ್ಯಕ್ಷ ಹಸನ್ ರೌಹಾನಿ ತಮ್ಮ ಟೆಲಿವಿಷನ್ ಭಾಷಣದಲ್ಲಿ ಹೇಳಿದ್ದಾರೆ.

English summary
Iran's deputy health minister tests positive in Coronavirus. The death toll in Iran has rised to 16 on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X