ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಜಿಪ್ಟ್ ಹಡಗಿನಲ್ಲೂ ಕೊರೊನಾ ವೈರಸ್ ಹಾವಳಿ; 18 ಭಾರತೀಯರು ಗಲಿಬಿಲಿ!

|
Google Oneindia Kannada News

ಕೈರೋ, ಮಾರ್ಚ್.09: ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ ಹಾವಳಿಗೆ ಈಜಿಪ್ಟ್ ರಾಷ್ಟ್ರ ಕೂಡಾ ನಲುಗಿದೆ. ವಿದೇಶಿಗರು ಮತ್ತು ಈಜಿಪ್ಟಿಯನ್ನರು ಸೇರಿದಂತೆ ಒಟ್ಟು 55 ಜನರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿರುವ ಬಗ್ಗೆ ಆರೋಗ್ಯ ಇಲಾಖೆಯು ಸ್ಪಷ್ಟನೆ ನೀಡಿದೆ.

ಈಜಿಪ್ಟ್ ನ ನೈಲ್ ನದಿಯಲ್ಲಿನ ಸಂಚರಿಸುತ್ತಿದ್ದ ಹಡಗಿನಲ್ಲಿ ಇರುವ 33 ಪ್ರಯಾಣಿಕರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. 150 ಪ್ರಯಾಣಿಕರಿದ್ದ ಹಡಗಿನಲ್ಲಿ 33 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾದ ಹಿನ್ನೆಲೆ ಈಜಿಪ್ಟ್ ನ ಲುಕ್ಸೋರ್ ನಗರದ ಬಳಿ ಹಡಗನ್ನು ಲಂಗರು ಹಾಕಲಾಗಿದೆ. ಈ ಪೈಕಿ 18 ಮಂದಿ ಭಾರತೀಯರೂ ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರಲ್ಲಿ ಕೊರೊನಾ ಸೋಂಕು ಶಂಕೆ: ಭಯದಿಂದ ರಜೆ ಘೋಷಿಸಿದ ಶಾಲೆ!ಬೆಂಗಳೂರಲ್ಲಿ ಕೊರೊನಾ ಸೋಂಕು ಶಂಕೆ: ಭಯದಿಂದ ರಜೆ ಘೋಷಿಸಿದ ಶಾಲೆ!

ಕಳೆದ ಫೆಬ್ರವರಿ.27ರಂದು ತಮಿಳುನಾಡಿನ ಸೇಲಂನಿಂದ ಹೊರಟಿದ್ದ 18 ಮಂದಿ ಭಾರತೀಯರು ಮಾರ್ಚ್.07ರಂದು ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಕೊರೊನಾ ವೈರಸ್ ಇರುವ ಬಗ್ಗೆ ತಿಳಿದು ಬಂದಿದೆ.

ಹಡಗಿನಲ್ಲಿ ಮೊದಲ ಎರಡು ದಿನ ಆತಂಕದ ಛಾಯೆ

ಹಡಗಿನಲ್ಲಿ ಮೊದಲ ಎರಡು ದಿನ ಆತಂಕದ ಛಾಯೆ

ಈಜಿಪ್ಟ್ ಹಡಗಿನಲ್ಲಿರುವ ಪ್ರಯಾಣಿಕರನ್ನು ದಿಗ್ಬಂಧನದಲ್ಲಿ ಇರಿಸಲಾಯಿತು. ಆರಂಭದ ಎರಡು ದಿನಗಳಲ್ಲಿ ಪ್ರಯಾಣಿಕರೆಲಲ್ಲ ಆತಂಕಕ್ಕೆ ಒಳಗಾಗಿದ್ದರು. ಮುಂದೇನು ಮಾಡಬೇಕು ಎಂಬುದು ಯಾರಿಗೂ ಅರ್ಥವಾಗದಂತಾ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಡಗಿನಲ್ಲಿ ಇರುವ ಪ್ರಯಾಣಿಕರಿಗೆ ಆಹಾರವನ್ನು ಕೂಡಾ ನೀಡಲಾಗುತ್ತಿರಲಿಲ್ಲ. ಏಕೆಂದರೆ, ಹಡಗಿನಲ್ಲಿದ್ದ ಅಡುಗೆ ವಿಭಾಗವನ್ನೂ ಕೂಡಾ ಶುದ್ಧಗೊಳಿಸಲಾಗಿದ್ದು, ಅಲ್ಲಿ ಯಾವುದೇ ಆಹಾರವೂ ಸಿಗುತ್ತಿರಲಿಲ್ಲ ಎಂದು ಹಡಗಿನಲ್ಲಿ ಇರುವ ಪ್ರಯಾಣಿಕರೊಬ್ಬರು ತಮ್ಮ ನೋವು ತೋಡಿಕೊಂಡಿದ್ದಾರೆ.

ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳ ಸಂಪರ್ಕ

ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳ ಸಂಪರ್ಕ

ಈಜಿಪ್ಟ್ ಹಡಗಿನಲ್ಲಿ ಸಿಲುಕಿರುವವರು ತಮಿಳುನಾಡು ಮೂಲದ 18 ಮಂದಿ ಪ್ರಯಾಣಿಕರ ಸಂಬಂಧಿಕರು ಆತಂಕಕ್ಕೆ ಒಳಗಾಗಿದ್ದಾರೆ. ಸುರಕ್ಷಿತವಾಗಿ ಅವರನ್ನು ದೇಶಕ್ಕೆ ವಾಪಸ್ ಕರೆ ತರುವಂತೆ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳ ಮೊರೆ ಹೋಗಿದ್ದಾರೆ.

"ಪ್ರಯಾಣಿಕರ ಪಾಲಿಗೆ ಹಡಗು ಜೈಲಿನಂತೆ ಆಗಿತ್ತು"

ಈಜಿಪ್ಟ್ ಹಡಗಿನಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ದಿಗ್ಬಂಧನ ಹಾಕುತ್ತಿದ್ದಂತೆ ಹಡಗು ನಮ್ಮ ಪಾಲಿಗೆ ಜೈಲು ಆದಂತೆ ಆಗಿತ್ತು ಎಂದು ಪ್ರಯಾಣಿಕರಾದ ವನಿತಾ ರಂಗ್ ರಾಜ್ ತಿಳಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಎರಡು ದಿನ ನಾವು ಆತಂಕದಲ್ಲೇ ದಿನ ಕಳೆದೆವು. ನಮ್ಮ ಪತಿಯನ್ನು ಹಡಗಿನ ಒಂದು ರೂಮ್ ನಲ್ಲಿ ಇರಿಸಲಾಗಿದೆ. ನಾವೆಲ್ಲ ಹಡಗಿನಿಂದ ಹೊರ ಹೋಗಬೇಕಿದೆ. ಆದರೆ, ಅದು ಅಷ್ಟೊಂದು ಸುರಕ್ಷಿತವಲ್ಲ ಎಂಬುದರ ಅರಿವು ತಮಗಿದೆ ಎಂದು ಅವರು ತಿಳಿಸಿದ್ದಾರೆ.

ಈಜಿಪ್ಟ್ ನಲ್ಲಿ ಒಂದೇ ದಿನ ಏಳು ಹೊಸ ಸೋಂಕಿತ ಪ್ರಕರಣ

ಈಜಿಪ್ಟ್ ನಲ್ಲಿ ಒಂದೇ ದಿನ ಏಳು ಹೊಸ ಸೋಂಕಿತ ಪ್ರಕರಣ

ಭಾನುವಾರ ಒಂದೇ ದಿನ ಈಜಿಪ್ಟ್ ನಲ್ಲಿ ಹೊಸದಾಗಿ ಏಳು ಕೊರೊನಾ ವೈರಸ್ ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಸಚಿವಾಲಯವು ಸ್ಪಷ್ಟಪಡಿಸಿದೆ. ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ 2 ಲಕ್ಷ 50 ಸಾವಿರ ಕೊರೊನಾ ವೈರಸ್ ಡಿಟೆಕ್ಟ್ ಗಳನ್ನು ಅಳವಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

English summary
Coronavirus Effect: 18 Indians Quarantined On Cruise Ship In Egypt. Now More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X