ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಬರುತ್ತದೆಂದು 40 ವರ್ಷದ ಹಿಂದೆಯೇ ಬರೆದಿದ್ದ ಲೇಖಕ!

|
Google Oneindia Kannada News

ಬೀಜಿಂಗ್, ಫೆಬ್ರವರಿ 17: ಕೊರೊನಾ ವೈರಸ್ ನಿಂದಾಗಿ ಸುಮಾರು 2000 ಮಂದಿ ಈಗಾಗಲೇ ಜೀವ ಕಳೆದುಕೊಂಡಿದ್ದಾರೆ. ಚೀನಾ ದೇಶದ ವುಹಾನ್ ನಗರದಲ್ಲಿ ಪ್ರಥಮವಾಗಿ ಕಾಣಿಸಿಕೊಂಡ ಈ ಪ್ರಾಣಘಾತುಕ ವೈರಸ್ ನಿಧಾನವಾಗಿ ಕದಂಬಬಾಹುಗಳನ್ನು ವಿಶ್ವಕ್ಕೆ ಚಾಚುತ್ತಿದೆ.

ವೈರಸ್ ಬಗ್ಗೆ ಸೂಕ್ತ ಮಾಹಿತಿ ಇಲ್ಲದೇ ಇರುವುದೇ ವೈರಸ್ ಅನ್ನು ಕೊಲ್ಲಲು ಸಾಧ್ಯವಾಗದೇ ಇರುವುದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಚೀನಾ ಸರ್ಕಾರ ಸಹ ವೈರಸ್ ಬಗ್ಗೆ ಆರಂಭಿಕವಾಗಿ ಮಾಹಿತಿ ಹೊರಗೆಡವಿರಲಿಲ್ಲ ಎಂಬುದು ಸಹ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಹೀಗೊಂದು ವೈರಸ್ ಬರುತ್ತದೆ ಎಂದು 40 ವರ್ಷದ ಹಿಂದೆಯೇ ಲೇಖಕರೊಬ್ಬರು ಭವಿಷ್ಯ ನುಡಿದಿದ್ದರು. ಹಾಗೂ ಅದನ್ನು ತಮ್ಮ ಪುಸ್ತಕದಲ್ಲಿ ನಮೂದಿಸಿದ್ದರು.

ಕೊರೊನಾ ವೈರಸ್ ನಿಂದ 406 ಮಂದಿ ಭಾರತೀಯರು ಬಚಾವ್ಕೊರೊನಾ ವೈರಸ್ ನಿಂದ 406 ಮಂದಿ ಭಾರತೀಯರು ಬಚಾವ್

ಹೌದು, 1981 ರಲ್ಲಿ ಬಿಡುಗಡೆ ಆದ 'ದಿ ಐಸ್ ಆಫ್ ಡಾರ್ಕ್‌ನೆಸ್' ಎಂಬ ಪುಸ್ತಕದಲ್ಲಿ ಕೊರೊನಾ ವೈರಸ್ ಬಗ್ಗೆ ಉಲ್ಲೇಖವಿದೆ. ವುಹಾನ್‌ನಲ್ಲಿ ಮೊದಲಿಗೆ ಕಂಡು ಬಂದ ಈ ವೈರಸ್ ಅನ್ನು 'ದಿ ಐಸ್ ಆಫ್ ಡಾರ್ಕ್‌ನೆಸ್' ಪುಸ್ತಕದಲ್ಲಿ 'ವುಹಾನ್ 400' ಎಂಬ ಹೆಸರಿನಲ್ಲಿ ಕರೆಯಲಾಗಿದೆ.

'ದಿ ಐಸ್ ಆಫ್ ಡಾರ್ಕ್‌ನೆಸ್‌' ಕಾದಂಬರಿ

'ದಿ ಐಸ್ ಆಫ್ ಡಾರ್ಕ್‌ನೆಸ್‌' ಕಾದಂಬರಿ

ಡಿಯಾನ್ ಕೂನ್ಟ್ಜ್ ಎಂಬ ಲೇಖಕರು 'ದಿ ಐಸ್ ಆಫ್ ಡಾರ್ಕ್‌ನೆಸ್' ಪುಸ್ತಕವನ್ನು ಬರೆದಿದ್ದು, ಕತೆಯಲ್ಲಿ 'ವುಹಾನ್ 400' ಎಂಬ ವೈರಸ್ ಅನ್ನು ಶಸ್ತ್ರವಾಗಿ ಲ್ಯಾಬ್ ನಲ್ಲಿ ತಯಾರಿಸಲಾಗುತ್ತದೆ.

ವೈರಸ್ ಬಗ್ಗೆ ಬರೆದಿರುವ ಸಾಲುಗಳ ಚಿತ್ರ

ವೈರಸ್ ಬಗ್ಗೆ ಬರೆದಿರುವ ಸಾಲುಗಳ ಚಿತ್ರ

ಪುಸ್ತಕದಲ್ಲಿ ಅವರು ಬರೆದಿರುವ ಸಾಲುಗಳನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪುಸ್ತಕದಲ್ಲಿ ವೈರಸ್ ಬಗ್ಗೆ ವಿವರಗಳು ಇರುವ ಪೇಜ್‌ಗಳ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಪ್ರಯೋಗಾಲಯದಲ್ಲಿ ತಯಾರಾಯಿತಾ ವೈರಸ್?

ಪ್ರಯೋಗಾಲಯದಲ್ಲಿ ತಯಾರಾಯಿತಾ ವೈರಸ್?

ಕೊರೊನಾ ವೈರಸ್ ಅನ್ನು ಪ್ರಯೋಗಾಲಯದಲ್ಲಿ ತಯಾರಿಸಲಾಗಿದೆ ಎಂಬ ಗಾಳಿ ಸುದ್ದಿಗಳು ಈಗಾಗಲೇ ಹರಿದಾಡುತ್ತಿವೆ. ಇದಕ್ಕೆ ಪೂರಕವೆಂಬಂತೆ ಈಗ ಈ ಕಾದಂಬರಿ ಸಹ ದೊರೆತಿದೆ. ಆದರೆ ವದಂತಿಗಳನ್ನು ಚೀನಾ ಕಮ್ಯುನಿಸ್ಟ್ ಸರ್ಕಾರ ತಳ್ಳಿ ಹಾಕಿದೆ.

ಅಧಿಕೃತ ಲೆಕ್ಕದಂತೆ 1765 ಸಾವು

ಅಧಿಕೃತ ಲೆಕ್ಕದಂತೆ 1765 ಸಾವು

ಕೊರೊನಾವೈರಸ್ ನಿಂದ ಈವರೆಗೆ 1765 ಮಂದಿ ಅಸುನೀಗಿದ್ದಾರೆಂದು ಅಧಿಕೃತ ಲೆಕ್ಕಾಚಾರಗಳು ಹೇಳುತ್ತಿವೆ. ಆದರೆ ಮೃತರ ಸಂಖ್ಯೆ ಇನ್ನೂ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ವೈರಸ್ ಮೊದಲಿಗೆ ಕಾಣಿಸಿಕೊಂಡ ವುಹಾನ್ ನಗರಕ್ಕೆ ದಿಗ್ಬಂಧನ ವಿಧಿಸಲಾಗಿದೆ.

English summary
A novelist written about coronavirus in his book 'the eyes of darkness'. He mentioned about 'Wuhan 400' and the virus created in a lab as a weapon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X