ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ನಿಂದ ಗುಣಮುಖರಾಗುವುದು ಹೇಗೆ? ಇಲ್ಲಿದೆ ಉದಾಹರಣೆ

|
Google Oneindia Kannada News

ಬೀಜಿಂಗ್, ಫೆಬ್ರವರಿ.17: ಚೀನಾದಲ್ಲಿ ಮರಣ ಶಾಸನ ಬರೆಯುತ್ತಿರುವ ಮಾರಕ ಕೊರೊನಾ ವೈರಸ್ ಎಲ್ಲೆಲ್ಲೂ ಭೀತಿ ಹುಟ್ಟಿಸುತ್ತಿದೆ. ಡ್ರ್ಯಾಗನ್ ರಾಷ್ಟ್ರದಲ್ಲಿ ಮೊದಲಿಗೆ ಕಾಣಿಸಿಕೊಂಡ ಸೋಂಕು ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಇದುವರೆಗೂ 1,770ಕ್ಕೂ ಅಧಿಕ ಮಂದಿ ಕೊರೊನಾ ವೈರಸ್ ಗೆ ತುತ್ತಾಗಿ ಪ್ರಾಣ ಬಿಟ್ಟಿದ್ದಾರೆ.

ಚೀನಾ ಸೇರಿದಂತೆ 28 ರಾಷ್ಟ್ರಗಳಲ್ಲಿ ಕೊರಾನಾ ವೈರಸ್ ಹರಡುತ್ತಿದ್ದು, 72 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಸೋಂಕಿಗೆ ಮದ್ದು ಕಂಡು ಹಿಡಿಯಲು ಕನಿಷ್ಠ 18 ತಿಂಗಳು ಬೇಕಾಗುತ್ತದೆ ಎಂದು ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯೇ ತಿಳಿಸಿತ್ತು. ಇದರ ಮಧ್ಯೆ ಸೋಂಕಿತನೊಬ್ಬ ಕೊರೊನಾ ವೈರಸ್ ನಿಂದ ಬಚಾವ್ ಆಗಿದ್ದು, ಮಾರಕ ಸೋಂಕಿನಿಂದ ಹೇಗೆ ಗುಣಮುಖನಾದ ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ.

Coronavirus: ಚೀನಾದಲ್ಲಿ ಚಿಕಿತ್ಸೆ ನೀಡಿದ 1700 ವೈದ್ಯರಿಗೇ ಸೋಂಕುCoronavirus: ಚೀನಾದಲ್ಲಿ ಚಿಕಿತ್ಸೆ ನೀಡಿದ 1700 ವೈದ್ಯರಿಗೇ ಸೋಂಕು

ದಕ್ಷಿಣ ಆಫ್ರಿಕಾ ಖಂಡದ ಕೇಂದ್ರದಲ್ಲಿರುವ ಕೆಮರಾನ್ ದೇಶದ ಪ್ರಜೆಯಾಗಿರುವ 21 ವರ್ಷದ ಕೆಮ್ ಪವೆಲ್ ದರ್ಲ್ ನಲ್ಲಿ ಕೊರೊನಾ ವೈರಸ್ ಪತ್ತೆಯಾಗಿತ್ತು. ಕಳೆದ 14 ದಿನಗಳ ಕಾಲ ದಿಗ್ಬಂಧನದಲ್ಲಿಟ್ಟು ಚಿಕಿತ್ಸೆ ನೀಡಿದ ಬಳಿಕ ಚೀನಾದಲ್ಲೇ ವಾಸವಿದ್ದ ಈ ಯುವಕನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಅದು ಹೇಗೆ ಎಂಬ ಕುತೂಹಲಕ್ಕೆ ಉತ್ತರ ಇಲ್ಲಿದೆ ನೋಡಿ.

ಕೆಮ್ ಪವೆಲ್ ದರ್ಲ್ ನಲ್ಲಿ ಕೊರೊನಾ ವೈರಸ್ ಪತ್ತೆ

ಕೆಮ್ ಪವೆಲ್ ದರ್ಲ್ ನಲ್ಲಿ ಕೊರೊನಾ ವೈರಸ್ ಪತ್ತೆ

ಚೀನಾದ ಜಿಂಗ್ ಜೋ ನಗರದಲ್ಲಿ ವಾಸವಿದ್ದ ಕೆಮ್ ಪವೆಲ್ ದರ್ಲ್ ನಲ್ಲಿ ಕಳೆದ ಕೆಲ ದಿನಗಳ ಹಿಂದೆ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಜ್ವರದ ಜೊತೆ ಕಫ ಹಾಗೂ ಉಸಿರಾಟ ತೊಂದರೆ ಲಕ್ಷಣಗಳು ಗೋಚರಿಸಿದವು. ವೈದ್ಯಕೀಯ ತಪಾಸಣೆ ವೇಳೆ ಅದು ಕೊರೊನಾ ವೈರಸ್ ಎಂದು ಪತ್ತೆಯಾಯಿತು. ಅಲ್ಲಿಂದ 14 ದಿನಗಳ ಕಾಲ ದಿಗ್ಬಂಧನದಲ್ಲಿ ಇರಿಸಿ ಯುವಕನಿಗೆ ಚಿಕಿತ್ಸೆ ನೀಡಲಾಯಿತು.

ಸಾವು ನಿಶ್ಚಿತ ಎಂದುಕೊಂಡಿದ್ದ ಕೆಮರಾನ್ ಪ್ರಜೆಗೆ ಆಶ್ಚರ್ಯ

ಸಾವು ನಿಶ್ಚಿತ ಎಂದುಕೊಂಡಿದ್ದ ಕೆಮರಾನ್ ಪ್ರಜೆಗೆ ಆಶ್ಚರ್ಯ

ದೇಶದಲ್ಲಿ ಕೊರೊನಾ ವೈರಸ್ ನಿಂದ ನಿತ್ಯ ನೂರಾರು ಜನರು ಪ್ರಾಣ ಬಿಡುತ್ತಿದ್ದರು. ಇಂಥ ಸಂದರ್ಭದಲ್ಲೂ ತಾನೂ ಕೂಡಾ ಈ ಸೋಂಕಿನಿಂದ ಬಳಲುತ್ತಿದ್ದು, ಪ್ರಾಣ ಬಿಡುವುದು ನಿಶ್ಚಿತ ಎಂದು ಸ್ವತಃ ಕೆಮ್ ಪವೆಲ್ ದರ್ಲ್ ಅಂದುಕೊಂಡಿದ್ದರಂತೆ. ಆದರೆ, 13 ದಿನಗಳ ಕಾಲ ಸ್ಥಳೀಯ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಇರಿಸಿ ವೈದ್ಯರು ನೀಡಿದ ಚಿಕಿತ್ಸೆ ಯುವಕನಿಗೆ ಮರುಹುಟ್ಟನ್ನು ನೀಡಿದೆ.

ಒಬ್ಬರಲ್ಲ, ಇಬ್ಬರಲ್ಲ, 6 ಮಂದಿ ಭಾರತೀಯರಿಗೆ ಕೊರೊನಾ ವೈರಸ್ಒಬ್ಬರಲ್ಲ, ಇಬ್ಬರಲ್ಲ, 6 ಮಂದಿ ಭಾರತೀಯರಿಗೆ ಕೊರೊನಾ ವೈರಸ್

ಹೆಚ್ಐವಿ ಪೀಡಿತರಿಗೆ ನೀಡುವ ಔಷಧಗಳಿಂದ ಚಿಕಿತ್ಸೆ

ಹೆಚ್ಐವಿ ಪೀಡಿತರಿಗೆ ನೀಡುವ ಔಷಧಗಳಿಂದ ಚಿಕಿತ್ಸೆ

ಚೀನಾದ ಸ್ಥಳೀಯ ಆಸ್ಪತ್ರೆಗೆ ದಾಖಲಾದ ಕೆಮ್ ಪವೆಲ್ ದರ್ಲ್ ಗೆ ವೈದ್ಯರು ವಿಶೇಷ ಚಿಕಿತ್ಸೆ ನೀಡಿದರು. ಹೆಚ್ಐವಿ ಸೋಂಕಿತರಿಗೆ ನೀಡುವ ರೋಗನಿರೋಧಕ ಮತ್ತು ಔಷಧಿಗಳನ್ನು ಬಳಸಿಕೊಂಡೇ ಯುವಕನಿಗೆ ಚಿಕಿತ್ಸೆ ನೀಡಲಾಯಿತು. ಎರಡು ವಾರಗಳಲ್ಲೇ ಯುವಕನ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇತಿಹಾಸ ಬರೆದ ಚೀನಾ ಸ್ಥಳೀಯ ಆಸ್ಪತ್ರೆ ವೈದ್ಯರು

ಇತಿಹಾಸ ಬರೆದ ಚೀನಾ ಸ್ಥಳೀಯ ಆಸ್ಪತ್ರೆ ವೈದ್ಯರು

ಕಳೆದ ಎರಡು ತಿಂಗಳಿನಿಂದ ಚೀನಾದಲ್ಲಿ ಕೊರೊನಾ ವೈರಸ್ ಗೆ ಜನರು ಪ್ರಾಣ ಬಿಡುತ್ತಲೇ ಇದ್ದಾರೆ. ಇದರ ಮಧ್ಯೆ ಮೊದಲ ಬಾರಿಗೆ ರೋಗಿಯೊಬ್ಬರಿಗೆ ನೀಡಿದ ಚಿಕಿತ್ಸೆ ಫಲಿಸಿದೆ. ಸಿಟಿ ಸ್ಕ್ಯಾನ್ ವೇಳೆ ಕೆಮ್ ಪವೆಲ್ ದರ್ಲ್ ನಲ್ಲಿ ಸೋಂಕು ಇಲ್ಲ ಎಂದು ತಿಳಿದು ಬಂದಿದೆ. ಕೆಮ್ ಪವೆಲ್ ದರ್ಲ್ ಚೀನಾದಲ್ಲೇ ಸೋಂಕಿನಿಂದ ಮುಕ್ತನಾದ ಮೊದಲಿಗ ಎಂದೆನಿಸಿದ್ದಾರೆ.

ಕೊರೊನಾ ವೈರಸ್ ಸೋಂಕಿತನಲ್ಲಿ ಪ್ರಜ್ವಲಿಸಿದ ದೇಶಪ್ರೇಮ

ಕೊರೊನಾ ವೈರಸ್ ಸೋಂಕಿತನಲ್ಲಿ ಪ್ರಜ್ವಲಿಸಿದ ದೇಶಪ್ರೇಮ

ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ ನಿಂದ ಬಚಾವ್ ಆದರೆ ಸಾಕು ಎಂದು ಸೋಂಕಿತರೆಲ್ಲ ಪ್ರಾರ್ಥಿಸುತ್ತಿದ್ದಾರೆ. ತಮ್ಮ ದೇಶಕ್ಕೆ ವಾಪಸ್ ಕರೆಸಿಕೊಳ್ಳುವಂತೆ ಮೊರೆ ಇಡುತ್ತಿದ್ದಾರೆ. ಇಂಥವರ ಮಧ್ಯೆ ಆಫ್ರಿಕಾದ ಪ್ರಜೆಯೊಬ್ಬ ದೇಶಪ್ರೇಮ ತೋರಿದ್ದಾನೆ. ಅದೇನೇ ಆಗಲಿ, ಆನಾರೋಗ್ಯದಿಂದ ಮೃತಪಟ್ಟರೂ ಸರಿಯೇ, ಈ ಸೋಂಕನ್ನು ನಾನು ಆಫ್ರಿಕಾಗೆ ತೆಗೆದುಕೊಂಡು ಹೋಗಲು ಬಯಸುವುದಿಲ್ಲ ಎಂದು ಹೇಳಿದ್ದಾನೆ.

ಆಫ್ರಿಕಾಗೆ ವಿದ್ಯಾಭ್ಯಾಸ ಮುಗಿಸದೇ ಹೋಗಲ್ಲ ಎಂದ ಯುವಕ

ಆಫ್ರಿಕಾಗೆ ವಿದ್ಯಾಭ್ಯಾಸ ಮುಗಿಸದೇ ಹೋಗಲ್ಲ ಎಂದ ಯುವಕ

ಕೊರೊನಾ ವೈರಸ್ ಗೆ ಹೆದರಿಕೊಂಡು ಸ್ವದೇಶಕ್ಕೆ ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ. ಚೀನಾದಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿಕೊಂಡೇ ಸ್ವದೇಶಕ್ಕೆ ತೆರಳುತ್ತೇನೆ. ಸೋಂಕು ತಗಲಿದರೆ, ಇಲ್ಲಿನ ಸರ್ಕಾರವೇ ಅದಕ್ಕೆ ಚಿಕಿತ್ಸೆ ನೀಡುತ್ತದೆ. ಇದನ್ನು ನನ್ನ ದೇಶದಲ್ಲಿ ಹರಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಕೆಮ್ ಪವೆಲ್ ದರ್ಲ್ ತಿಳಿಸಿದ್ದಾನೆ.

ಚೀನಾ ತೊರೆದಿಲ್ಲ ಇಂದಿಗೂ ನೂರಾರು ಆಫ್ರಿಕನ್ ಪ್ರಜೆಗಳು

ಚೀನಾ ತೊರೆದಿಲ್ಲ ಇಂದಿಗೂ ನೂರಾರು ಆಫ್ರಿಕನ್ ಪ್ರಜೆಗಳು

ಚೀನಾದ ವುಹಾನ್ ನಗರದಿಂದ ಭಾರತ, ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳು ತಮ್ಮ ಪ್ರಜೆಗಳನ್ನು ಸ್ವದೇಶಕ್ಕೆ ವಾಪಸ್ ಕರೆಸಿಕೊಂಡಿವೆ. ಆದರೆ, ಆಫ್ರಿಕಾದ ಪ್ರಜೆಗಳು ಮಾತ್ರ ಇಂದಿಗೂ ಚೀನಾದ ಹುಬೈ, ಮತ್ತು ವುಹಾನ್ ನಗರಗಳಲ್ಲಿ ಧೈರ್ಯವಾಗಿ ವಾಸಿಸುತ್ತಿದ್ದು, ಗೃಹಬಂಧನದಲ್ಲಿ ಎಲ್ಲರನ್ನೂ ಇರಿಸಲಾಗಿದೆ. ದಿಗ್ಬಂಧನದಲ್ಲಿರಿಸಿ ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ.

English summary
Coronavirus: Patients How To Cure From Covid-19, Here A Example. The First African Student Get Negative Result After 13 Days Treatment In China Local Hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X