ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1160 ಮಂದಿಗೆ ಕೊರೊನಾ ಹಬ್ಬಿಸಿದ ದಕ್ಷಿಣ ಕೊರಿಯಾ ಮಹಿಳೆ

|
Google Oneindia Kannada News

ಸೋಲ್, ಮಾರ್ಚ್ 17: ದಕ್ಷಿಣ ಕೊರೊಯಾ ಮಹಿಳೆಯೊಬ್ಬರು 1160 ಮಂದಿಗೆ ಕೊರೊನಾ ಹಬ್ಬಿಸಿದ್ದಾರೆ.

Recommended Video

No need to panic about Corona says this MBBS student | Oneindia kannada

61ರ ಕೊರಿಯಾ ಮಹಿಳೆಯಿಂದ ಅನಾಹುತ ಸಂಭವಿಸಿದ್ದು, ಸೋಂಕು 8 ಸಾವಿರಕ್ಕೇರಿದೆ.ದಕ್ಷಿಣ ಕೊರಿಯಾದಲ್ಲಿ ಇದುವರೆಗೆ 8 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ವೈರಸ್ ತಗುಲಿದೆ. 75 ಮಂದಿಯನ್ನು ಇದುವರೆಗೆ ಬಲಿ ಪಡೆದಿದೆ.

ಕರ್ನಾಟಕದಲ್ಲಿ 8ಕ್ಕೆ ಏರಿದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಕರ್ನಾಟಕದಲ್ಲಿ 8ಕ್ಕೆ ಏರಿದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ

ದೇಶದಲ್ಲಿ ಕೇವಲ 30 ಮಂದಿಗೆ ತಗುಲಿದ್ದ ಸೋಂಕು ನಂತರದ ಒಂದೇ ತಿಂಗಳು ಅವಧಿಯಲ್ಲಿ 8 ಸಾವಿರದ ಗಡಿಯನ್ನು ದಾಟಿದೆ.ಫೆಬ್ರವರಿ 17ರಂದು ಮಹಿಳೆ ಪರೀಕ್ಷೆಗೆ ಒಳಗಾದಾಗ ಆಕೆಯಲ್ಲಿ ಕೊರೊನಾ ವೈರಸ್ ಇರುವುದು ಪತ್ತೆಯಾಗಿತ್ತು.

ಆದರೆ ಯಾರಿಂದ ಆಕೆಗೆ ಕೊರೊನಾ ಅಂಟಿತ್ತು ಎಂಬುದು ತಿಳಿದುಬಂದಿಲ್ಲ, ಆದರೆ ಈಕೆಯಿಂದ ಸಾವಿರಾರು ಮಂದಿಗೆ ಕೊರೊನಾ ಹಬ್ಬಿದೆ.

ಕೊರೊನಾ ಅಂದಾಜು ಮೀರಿ ವ್ಯಾಪಿಸಲು ಮಹಿಳೆಯ ಕಾರಣ

ಕೊರೊನಾ ಅಂದಾಜು ಮೀರಿ ವ್ಯಾಪಿಸಲು ಮಹಿಳೆಯ ಕಾರಣ

ದೇಶದಲ್ಲಿ ಕೊರೊನಾ ಅಂದಾಜು ಮೀರಿ ವ್ಯಾಪಿಸಲು ಕಾರಣವಾಗಿದ್ದೇ ಪೇಷಂಟ್ 31 ಎಂದು ನಾಮಾಂಕಿತವಾಗಿರುವ ಮಹಿಳಾ ಕೊರೊನಾ ವೈರಸ್ ರೋಗಿ. ಅಂದರೆ ಈಕೆ ದೇಶದ 31ನೇ ಕೊರೊನಾ ಪೀಡಿತೆ.

ಒಬ್ಬಳೇ ಮಹಿಳೆಯಿಂದ 1160 ಮಂದಿಗೆ ಕೊರೊನಾ

ಒಬ್ಬಳೇ ಮಹಿಳೆಯಿಂದ 1160 ಮಂದಿಗೆ ಕೊರೊನಾ

ಈ ಒಬ್ಬಳೇ ಮಹಿಳೆಯಿಂದ 1160 ಜನರಿಗೆ ಕೊರೊನಾ ಅಂಟಿದೆ. ಈ ಜನರಿಂದ ಮತ್ತಷ್ಟು ಸಾವಿರ ಜನರಿಗೆ ಕೊರೊನಾ ವ್ಯಾಪಿಸಿದೆ ಎಂದು ಸರ್ಕಾರದ ಮೂಲಗಳು ಉಲ್ಲೇಖಿಸಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಕೊರೊನಾ ಎಫೆಕ್ಟ್: ಔಷಧಿ ನಿಲ್ಲಿಸಿದ ನರಸೀಪುರದ ನಾರಾಯಣಮೂರ್ತಿಕೊರೊನಾ ಎಫೆಕ್ಟ್: ಔಷಧಿ ನಿಲ್ಲಿಸಿದ ನರಸೀಪುರದ ನಾರಾಯಣಮೂರ್ತಿ

1160 ಮಂದಿಗೆ ಕೊರೊನಾ ಹರಡಿದ್ಹೇಗೆ?

1160 ಮಂದಿಗೆ ಕೊರೊನಾ ಹರಡಿದ್ಹೇಗೆ?

61ರ ಮಹಿಳೆಗೆ ಅಪಘಾತವಾಗಿತ್ತು, ಆಸ್ಪತ್ರೆಗೆ ದಾಖಲಾಗಿದ್ದಳು, ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದಳು, ಸಾವಿರಾರು ಜನರ ಜೊತೆ ಭಾಗಿಯಾದಳು. ಬಳಿಕ ಆಸ್ಪತ್ರೆಗೆ ಬಂದಳು. ಆಕೆಯಲ್ಲಿ ಕೊರೊನಾ ದೃಢ ಪಟ್ಟಿತ್ತು. ಕೊರಿಯಾದ್ಯಂತ ಸೋಂಕು ಹೆಚ್ಚಳಗೊಂಡಿದೆ.

ಯಾವ ವಿದೇಶಿಯರನ್ನೂ ಭೇಟಿಯಾಗಿಲ್ಲ ಎಂದಿದ್ದಳು

ಯಾವ ವಿದೇಶಿಯರನ್ನೂ ಭೇಟಿಯಾಗಿಲ್ಲ ಎಂದಿದ್ದಳು

ಫೆ.15ರಂದು ನಿಮಗೆ ಕೊರೊನಾ ವೈರಸ್ ಇರಬಹುದು. ಪರೀಕ್ಷಿಸೋಣ ಎಂದು ವೈದ್ಯರು ಆಕೆಗೆ ಹೇಳಿದಾಗ ನಾನೇಕೆ ಕೊರೊನಾ ಪರೀಕ್ಷೆಗೆ ಒಳಪಡಲಿ, ನಾನು ಯಾವ ವಿದೇಶಿಯರನ್ನೂ ಭೇಟಿ ಮಾಡಿಲ್ಲ. ವಿದೇಶಕ್ಕೂ ಹೋಗಿಲ್ಲ, ನನಗೆ ಕೊರೊನಾ ಬಂದಿಲ್ಲ ಎಂದು ವೈದ್ಯರ ಜೊತೆ ಜಗಳವಾಡಿದ್ದಳು. ಈ ನಡುವೆ ಕೊರಿಯಾದ ಶಿಂಚೆಯೋನ್‌ಜಿ ಚರ್ಚ್ ನಲ್ಲಿ ಸಾವಿರಾರು ಜನರು ಭಾಗಿಯಾಗಿದ್ದ ಸಭೆಯಲ್ಲಿ ಈಕೆಯೂ ಕೂಡ ಭಾಗಿಯಾಗಿದ್ದಳು. ಈಕೆಗೆ ಮೊದಲೇ ಕೊರೊನಾ ಬಂದಿದ್ದ ಕಾರಣ ಅಲ್ಲಿದ್ದ ಎಲ್ಲರಿಗೂ ಕೊರೊನಾ ಹರಡುವಂತೆ ಮಾಡಿದ್ದಳು.

English summary
A shadowy church in South Korea has become the focus of the coronavirus outbreak in the country. At the heart of it is a 60-year-old coronavirus patient who may have come in contact with nearly 1160 people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X