ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ ಸೋಂಕಿನ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

|
Google Oneindia Kannada News

ನ್ಯೂಯಾರ್ಕ್, ಜುಲೈ.28: ನೊವೆಲ್ ಕೊರೊನಾವೈರಸ್ ಸೋಂಕು ಉತ್ತರ ಗೋಳಾರ್ಧದಲ್ಲಿ ಬೇಸಿಗೆ ಸಂದರ್ಭದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಮತ್ತೊಮ್ಮೆ ಎಚ್ಚರಿಕೆ ನೀಡಿದೆ.

Recommended Video

India and Nepal border dispute explained | Oneindia Kannada

ಜನರು ಇಂದಿಗೂ ಕೊರೊನಾವೈರಸ್ ಸೋಂಕು ಯಾವ ಕಾಲದಲ್ಲಿ ಹರಡುತ್ತದೆ ಎನ್ನುವ ಬಗ್ಗೆಯೇ ಆಲೋಚಿಸುತ್ತಿದ್ದಾರೆ. ಆದರೆ ಕೊವಿಡ್-19 ಮಹಾಮಾರಿಯು ಬೇಸಿಗೆಯಲ್ಲಿ ಮಾತ್ರ ಹರಡುವಂತಾ ಸಾಂಕ್ರಾಮಿಕ ರೋಗವಲ್ಲ. ಇದೊಂದು ಹೊಸ ಬಗೆಯ ವೈರಸ್ ಆಗಲಿದ್ದು ವಿಭಿನ್ನವಾಗಿ ವರ್ತಿಸಲಿದೆ ಎಂದು ಮಾರ್ಗರೇಟ್ ಹ್ಯಾರಿಸ್ ತಿಳಿಸಿದ್ದಾರೆ.

ಸೊಳ್ಳೆಯಿಂದ ಕೊರೊನಾವೈರಸ್ ಹರಡುತ್ತಾ? ಉತ್ತರ ಇಲ್ಲಿದೆಸೊಳ್ಳೆಯಿಂದ ಕೊರೊನಾವೈರಸ್ ಹರಡುತ್ತಾ? ಉತ್ತರ ಇಲ್ಲಿದೆ

ಸಾಮಾನ್ಯವಾದ ಸೋಂಕಿಗಿಂತಲೂ ಹೊಸ ಕೊರೊನಾವೈರಸ್ ಸೋಂಕು ಭಿನ್ನವಾಗಿರಲಿದೆ ಎಂದು ಮಾರ್ಗರೇಟ್ ಹ್ಯಾರಿಸ್ ಎಚ್ಚರಿಕೆ ನೀಡಿದ್ದಾರೆ. ಕೊರೊನಾವೈರಸ್ ಸೋಂಕಿನ ಹರಡುವಿಕೆಯು ದೊಡ್ಡ ಪ್ರಮಾಣದ ಅಲೆಯನ್ನೇ ಸೃಷ್ಟಿಸಲಿದೆ. ಇದನ್ನು ಕಟ್ಟಿ ಹಾಕುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರೆ ಭಾರೀ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

Coronavirus Pandemic Is One Big Wave, Not Seasonal: WHO


ಒಂದು ಋತುವಿನಲ್ಲಿ ಹರಡುವ ಸೋಂಕು ಅಲ್ಲ:

ಕೊರೊನಾವೈರಸ್ ಸೋಂಕು ಕೇವಲ ಒಂದು ನಿಗದಿತ ಋತುವಿನಲ್ಲಿ ಕಾಣಿಸಿಕೊಳ್ಳವ ಸಾಮಾನ್ಯ ಸೋಂಕು ಅಥವಾ ರೋಗದಂತೆ ಅಲ್ಲವೇ ಅಲ್ಲ. ಎಲ್ಲ ಕಾಲದಲ್ಲಿಯೂ ಕೊರೊನಾವೈರಸ್ ಸೋಂಕು ಹರಡುವಿಕೆಗೆ ಯಾವುದೇ ಅಡ್ಡಿ ಆತಂಕಗಳು ಇರುವುದಿಲ್ಲ. ಒಂದು ಕಾಲದಲ್ಲಿ ಮಾತ್ರ ಹರಡುವಂತಾ ರೋಗಗಳಂತೆ ಜನರು ಕೊರೊನಾವೈರಸ್ ಬಗ್ಗೆ ಭಾವಿಸಬಾರದು. ಈ ನಿಟ್ಟಿನಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮುಖಕ್ಕೆ ಮಾಸ್ಕ್, ಸಾಮಾಜಿಕ ಅಂತರ ಹಾಗೂ ಕೈಗಳನ್ನು ಶುದ್ಧವಾಗಿ ತೊಳೆದುಕೊಳ್ಳುವುದರ ಬಗ್ಗೆ ಜಾಗೃತಿ ವಹಿಸಬೇಕು ಎಂದು ತಿಳಿಸಿದೆ.

English summary
Coronavirus Pandemic Is One Big Wave, Not Seasonal: WHO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X