ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೊವಿಡ್ 19 ಸಾಂಕ್ರಾಮಿಕ ರೋಗವು ಮಾನವ ಹಕ್ಕುಗಳ ಬಿಕ್ಕಟ್ಟಾಗಿ ಪರಿವರ್ತನೆ'

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 25: ಕೊವಿಡ್ 19 ಸಾಂಕ್ರಾಮಿಕ ರೋಗವು ಒಂದು ಮಾನವ ಬಿಕ್ಕಟ್ಟು, ಇದು ಕ್ರಮೇಣವಾಗಿ ಮಾನವ ಹಕ್ಕುಗಳ ಬಿಕ್ಕಟ್ಟಾಗಿ ಪರಿವರ್ತನೆಗೊಳ್ಳುತ್ತಿದೆ ಎಂದು ಯುಎನ್ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಅಭಿಪ್ರಾಯಪಟ್ಟಿದ್ದಾರೆ.

ಕೊವಿಡ್ 19 ನಿಭಾಯಿಸುವ ಮಧ್ಯದಲ್ಲಿ ತಾರತಮ್ಯ ಹಾಗೂ ರಚನಾತ್ಮಕ ಅಸಮಾನತೆಗಳಿರುವುದು ಕಂಡು ಬಂದಿದೆ ಎಂದು ವಿಡಿಯೋ ಸಂದೇಶದ ಮೂಲಕ ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗವು ಕೆಲವು ಸಮುದಾಯಗಳ ಮೇಲೆ ಅಸಮರ್ಪಕ ಪರಿಣಾಮವನ್ನು ಉಂಟು ಮಾಡುತ್ತಿದೆ. ಅಂತವರನ್ನು ಮತ್ತಷ್ಟು ಕೀಳಾಗಿ ನೋಡಲಾಗುತ್ತಿದೆ. ಒಂದು ದುರ್ಬಲ ಗುಂಪನ್ನು ಗುರಿಯಾಗಿಸಿಕೊಂಡು ಷಡ್ಯಂತ್ರ ನಡೆಸಲಾಗುತ್ತಿದೆ. ಅವರಿಗೆ ಭದ್ರತೆ ಒದಗಿಸಬೇಕು ಎಂದು ಹೇಳಿದೆ.

Coronavirus Pandemic Fast Becoming A Human Rights Crisis

ಸರ್ಕಾರಗಳು ಪಾರರ್ಶಕವಾಗಿ ಸ್ಪಂದಿಸಬೇಕು, ಜವಾಬ್ದಾರಿಯುತವಾಗಿ ವರ್ತಿಸಬೇಕು. ಪತ್ರಿಕಾ ಸ್ವಾತಂತ್ರ್ಯ, ನಾಗರಿಕ ಸಮಾಜ ಸಂಸ್ಥೆಗಳು,, ಖಾಸಗಿ ವಲಯಗಳಲ್ಲಿ ಪಾತಿನಿದ್ಯ ದೊರೆಯಬೇಕು.

ಕೊವಿಡ್ 19 ಉದ್ಯೋಗಗಳು, ಜೀವನೋಪಾಯದ ಹಾಗೂ ಮೂಲ ಸೇವೆಗಳ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತಿದೆ. ಅಂತಹುದನ್ನು ಕಡಿಮೆ ಮಾಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.

ಯಾವುದೇ ತುರ್ತು ಸೇವೆಗಳಲ್ಲಿ ತಾರತಮ್ಯ ಇರಕೂಡದು, ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣಬೇಕು. ಸರ್ಕಾರಗಳು ಕೊರೊನಾವನ್ನು ತಡೆಗಟ್ಟಲು ಮನೆಯಲ್ಲಿಯೇ ಇರುವಂತೆ ಸೂಚಿಸಿದ್ದಾರೆ.

ಆದರೆ ಕೆಲವರು ಕೆಟ್ಟ ಪ್ರಚಾರಗಳನ್ನು ಮಾಡುವುದರ ಮೂಲಕ ತಪ್ಪು ಹೆಜ್ಜೆಯಿಡುತ್ತಿದ್ದಾರೆ. ಕೆಲವರು ಬಿಕ್ಕಟ್ಟಿನ ಲಾಭ ಪಡೆಯುತ್ತಿದ್ದಾರೆ ಎಂದು ದೂರಿದರು.

ಥೈಲೆಂಡ್‌ನಲ್ಲಿ ಕೊರೊನಾ ವೈರಸ್ ವಿರುದ್ಧ ತಪ್ಪು ಸಂದೇಶ ರವಾನಿಸುತ್ತಿದ್ದ 12ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ.

English summary
The UN Secretary-General Antonio Guterres warned on Thursday that the coronavirus pandemic was becoming "a human rights crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X