ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್19ಗೆ ಲಸಿಕೆ: ಯುರೋಪ್ ವಿಜ್ಞಾನಿಗಳ ತಂಡದಲ್ಲಿ ಕನ್ನಡಿಗ

|
Google Oneindia Kannada News

ಬೆಂಗಳೂರು, ಮಾರ್ಚ್ 16: ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಕೊರೊನಾವೈರಸ್ ಯುರೋಪಿನಲ್ಲಿ ಹಲವರ ನಿದ್ದೆಗೆಡೆಸಿದೆ. ಸಾಂಕ್ರಾಮಿಕ ಪಿಡುಗು ಕೊರೊನಾವೈರಸ್ ನಿಯಂತ್ರಣಕ್ಕಾಗಿ ಹಲವು ದೇಶಗಳು ಕೈಜೋಡಿಸಿವೆ. ವಿಜ್ಞಾನಿಗಳು ಚುಚ್ಚುಮದ್ದು ಕಂಡು ಹಿಡಿಯುವಲ್ಲಿ ನಿರತರಾಗಿದ್ದಾರೆ. ಕೊವಿಡ್ 19 ಚಿಕಿತ್ಸೆಗೆ ಸರಿಯಾದ ಚುಚ್ಚುಮದ್ದು ಅಭಿವೃದ್ಧಿಪಡಿಸಲು ತಕ್ಷಣಕ್ಕೆ ಸಾಧ್ಯವಿಲ್ಲ, ಕನಿಷ್ಠ ಒಂದೂವರೆ ವರ್ಷ ಬೇಕಾಗಬಹುದು ಎಂದು ಪುಣೆಯ ಹಿರಿಯ ಆರೋಗ್ಯಾಧಿಕಾರಿಗಳು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೋವಿಡ್ 19ಗೆ ವ್ಯಾಕ್ಸಿನ್ ಕಂಡು ಹಿಡಿಯಲು ಯೂರೋಪ್ ರಾಷ್ಟ್ರಗಳು ಒಗ್ಗೂಡಿ 10 ತಂಡಗಳನ್ನುರಚಿಸಿವೆ. ಈ ಒಂದು ತಂಡದಲ್ಲಿ ಕನ್ನಡಿಗ ಯುವ ವಿಜ್ಞಾನಿಯೊಬ್ಬರು ಸ್ಥಾನ ಪಡೆದುಕೊಂಡಿದ್ದಾರೆ. ವಿಜ್ಞಾನಿ ಡಾ. ಮಹದೇಶ ಪ್ರಸಾದ್ ಅವರು ಕೊರೊನಾ ವೈರಸ್ ಗೆ ಔಷಧಿ ಕಂಡು ಹಿಡಿಯುತ್ತಿರುವ ಬೆಲ್ಜಿಯಂ ದೇಶದ ತಂಡದಲ್ಲಿದ್ದಾರೆ.

ಕೊರೊನಾ ವೈರಸ್ 'ಸಾಂಕ್ರಾಮಿಕ ಪಿಡುಗು' ಎಂದು ಘೋಷಿಸಲು ಕಾರಣವೇನು?ಕೊರೊನಾ ವೈರಸ್ 'ಸಾಂಕ್ರಾಮಿಕ ಪಿಡುಗು' ಎಂದು ಘೋಷಿಸಲು ಕಾರಣವೇನು?

ಯುರೋಪ್ ದೇಶಗಳ ಪೈಕಿ ಇಟಲಿ ಅತ್ಯಂತ ಕಠಿಣ ದಿನಗಳನ್ನು ಎದುರಿಸುತ್ತಿದ್ದು, ಇಡೀ ದೇಶವೇ ಸ್ತಬ್ದಗೊಂಡಿದೆ. ಈ ಸಮಯಕ್ಕೆ 368 ಹೊಸ ಸಂತ್ರಸ್ತರ ಜೊತೆಗೆ 2853 ಹೊಸ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಚೀನಾ ನಂತರ ಇಟಲಿಯಲ್ಲೇ ಅಧಿಕ ಕೇಸುಗಳು ದಾಖಲಾಗಿದ್ದು, ಮಾರ್ಚ್ 16ರ ಎಣಿಕೆಯಂತೆ ಒಟ್ಟು 24,747 ಪ್ರಕರಣಗಳು ಬಂದಿದ್ದು, 1,809 ಮಂದಿ ಮೃತಪಟ್ಟಿದ್ದಾರೆ. 2335 ಮಂದಿ ಮಾತ್ರ ಇಲ್ಲಿ ತನಕ ಸಂಪೂರ್ಣ ಗುಣಮುಖರಾಗಿದ್ದಾರೆ. ಹೀಗಾಗಿ, ಕೋವಿಡ್ 19ಗಾಗಿ ಲಸಿಕೆ, ಚುಚ್ಚುಮದ್ದು, antidote ತುರ್ತಾಗಿ ಕಂಡು ಹಿಡಿಯುವುದು ಅನಿವಾರ್ಯವಾಗಿದೆ.

 ಮಹದೇಶ ಪ್ರಸಾದ್ ಅರಕಲಗೂಡಿನವರು

ಮಹದೇಶ ಪ್ರಸಾದ್ ಅರಕಲಗೂಡಿನವರು

ಹಾಸನ ಜಿಲ್ಲೆಯ ಅರಕಲಗೂಡಿನವರಾದ ಮಹದೇಶ ಪ್ರಸಾದ್ ಅವರು ಕೊರೊನಾ ವೈರಸ್ ಗೆ ಔಷಧಿ ಕಂಡುಹಿಡಿಯವ 10 ತಂಡಗಳ ಪೈಕಿ ಬೆಲ್ಜಿಯಂ ವಿವಿಯ ಸಂಶೋಧನಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅರಕಲಗೂಡು ಪಟ್ಟಣದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪಿಯು, ಹಾಸನದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿಎಸ್ಸಿಯಲ್ಲಿ ಪದವಿ, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿಗಳಿಸಿದ ಬಳಿಕ ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಪೋಸ್ಟ್ ಡಾಕ್ಟರಲ್ ರೀಸರ್ಚರ್ ಎನಿಸಿಕೊಂಡರು.

Infographics:ಕೊರೊನಾ ಎಂದರೆ ಭಯನಾ? ಈ ಸುದ್ದಿ ಓದಿInfographics:ಕೊರೊನಾ ಎಂದರೆ ಭಯನಾ? ಈ ಸುದ್ದಿ ಓದಿ

 ಬೆಲ್ಜಿಯಂನಲ್ಲಿ ಕಾರ್ಯನಿರ್ವಹಣೆ

ಬೆಲ್ಜಿಯಂನಲ್ಲಿ ಕಾರ್ಯನಿರ್ವಹಣೆ

ಪೋಸ್ಟ್ ಡಾಕ್ಟರಲ್ ರೀಸರ್ಚರ್ ಆಗಿರುವ ಮಹದೇಶ ಪ್ರಸಾದ್ ಅವರು ಬೆಲ್ಜಿಯಂಗೆ ತೆರಳಿ Linkoping ವಿಶ್ವವಿದ್ಯಾಲಯದಲ್ಲಿ ಸದ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಲ್ಜಿಯಂನ Leuven ನಗರದಲ್ಲಿ ನೆಲೆಸಿದ್ದಾರೆ. ಯೂರೋಪ್ ರಾಷ್ಟ್ರಗಳು ಕೊರೊನಾವೈರಸ್ ಗಾಗಿ ಔಷಧ ಕಂಡು ಹಿಡಿಯಲು 10 ಸಂಶೋಧನಾ ತಂಡ ರಚಿಸಿದಾಗ, ಲಿಂಕೋಪಿಂಗ್ ವಿವಿಯನ್ನು ಸಂಪರ್ಕಿಸಲಾಗಿದೆ. ವಿವಿಯ ಕುಲಪತಿಗಳು ಮಹದೇಶ ಪ್ರಸಾದ್ ಹೆಸರನ್ನು ಶಿಫಾರಸ್ಸು ಮಾಡಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಔಷಧ ಕಂಡು ಹಿಡಿಯುವ ಸಂಶೋಧನೆಯಲ್ಲಿ ಮಹದೇಶ ಪ್ರಸಾದ್ ಅವರ ತಂಡ ತೊಡಗಿದೆ.

ಕೊರೊನಾವೈರಸ್ ಭೀತಿ ಇರುವವರು ಯಾವ ಆಹಾರ ಸೇವಿಸಬೇಕು?ಕೊರೊನಾವೈರಸ್ ಭೀತಿ ಇರುವವರು ಯಾವ ಆಹಾರ ಸೇವಿಸಬೇಕು?

 ಪ್ರಾಣಹಾನಿ ಉಂಟು ಮಾಡುವಂತಹ ವೈರಸ್

ಪ್ರಾಣಹಾನಿ ಉಂಟು ಮಾಡುವಂತಹ ವೈರಸ್

ಕೊರಾನಾ ಅಥವಾ ಕರೋನಾ ವೈರಸ್ ಒಂದು ಬಗೆಯ ಪ್ರಾಣಹಾನಿ ಉಂಟು ಮಾಡುವಂತಹ ವೈರಸ್ ಆಗಿದ್ದು, ಇದು ಮನುಷ್ಯನ ಸಹಿತ ಸಸ್ತನಿಗಳ ಉಸಿರಾಟದ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗುತ್ತಿದೆ. ಕೊರೊನಾ ವೈರಸ್ ಎನ್ನುವುದು ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ ಸೋಂಕಾಗಿದೆ. ಈಗ ಪ್ರಾಣಿಗಳಿಂದ ಮನುಷ್ಯನಿಗೂ ಈ ಸೋಂಕು ತಗುಲುತ್ತಿದೆ.

ವೈರಸ್ ನಿಂದಾಗಿ ಸಾಮಾನ್ಯ ಶೀತ, ನ್ಯುಮೋನಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ(ಎಸ್ ಎಆರ್ ಎಸ್) ಕಾಣಿಸಿಕೊಳ್ಳುವುದು ಮತ್ತು ಇದು ಹೊಟ್ಟೆಯ ಮೇಲೂ ಪರಿಣಾಮ ಬೀರುವುದು. ಮೊದಲು ಶೀತ ಕಾಣಿಸಿಕೊಳ್ಳುತ್ತದೆ ಕ್ರಮೇಣವಾಗಿ ತಲೆನೋವು ಕಾಣಿಸಿಕೊಂಡು ಇಡೀ ದೇಹವನ್ನು ಆವರಿಸುತ್ತದೆ.

 ವೈರಸ್ ತಾನಾಗೇ ಸಾಯುವುದಿಲ್ಲ

ವೈರಸ್ ತಾನಾಗೇ ಸಾಯುವುದಿಲ್ಲ

ಸಾಮಾನ್ಯ ಶೀತಕ್ಕೆ ಕಾರಣವಾಗುವ ವೈರಸ್ ರೋಗಿಯ ದೇಹ ಹೊಕ್ಕಿದ ಒಂದು ವಾರದಲ್ಲೇ ತಾನೆ ತಾನಾಗಿ ನಾಶವಾಗುತ್ತದೆ. ಅಥವಾ ತೆಗೆದುಕೊಳ್ಳುವ ಚಿಕಿತ್ಸೆ, ಆಹಾರ ಕ್ರಮದ ಮೇಲೆ ಶೀತ ಯಾವಾಗ ಕಡಿಮೆಯಾಗುತ್ತದೆ ಎಂಬುದು ನಿರ್ಧಾರವಾಗಲಿದೆ. ಆದರೆ, ಸಾರ್ಸ್ ಮಾದರಿ ಕೊರೊನಾವೈರಸ್ ನಿಂದ ಹರಡುವ ಕೊವಿಡ್ 19 ರೋಗದ ವೈರಸ್ ತಾನಾಗೇ ಸಾಯುವುದಿಲ್ಲ.

ವೈರಸ್ ನಿಂದಾಗಿ ಸಾಮಾನ್ಯ ಶೀತ, ನ್ಯುಮೋನಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ(ಎಸ್ ಎಆರ್ ಎಸ್) ಕಾಣಿಸಿಕೊಳ್ಳುವುದು ಮತ್ತು ಇದು ಹೊಟ್ಟೆಯ ಮೇಲೂ ಪರಿಣಾಮ ಬೀರುವುದು. ಮೊದಲು ಶೀತ ಕಾಣಿಸಿಕೊಳ್ಳುತ್ತದೆ ಕ್ರಮೇಣವಾಗಿ ತಲೆನೋವು ಕಾಣಿಸಿಕೊಂಡು ಇಡೀ ದೇಹವನ್ನು ಆವರಿಸುತ್ತದೆ.

ಕೋವಿಡ್19: ಏಪ್ರಿಲ್ 15ರ ತನಕ ಪ್ರವಾಸಿಗರಿಗೆ ವೀಸಾ ಸಿಗಲ್ಲಕೋವಿಡ್19: ಏಪ್ರಿಲ್ 15ರ ತನಕ ಪ್ರವಾಸಿಗರಿಗೆ ವೀಸಾ ಸಿಗಲ್ಲ

English summary
Coronavirus outbreak: Kannadiga Mahadesha Prasad is part of scientists who are in European Task force for Covid19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X