ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾರಕಕ್ಕೇರಿದ ಕೊರೊನಾ ಜಟಾಪಟಿ: ಅಮೇರಿಕಾ ಏಟಿಗೆ ಚೀನಾ ತಿರುಗೇಟು!

|
Google Oneindia Kannada News

ಬೀಜಿಂಗ್, ಏಪ್ರಿಲ್ 21: ಅತ್ತ ಕೊರೊನಾ ವೈರಸ್ ನಿಂದಾಗಿ ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚುತ್ತಿದ್ದರೆ, ಇತ್ತ ಕೊರೊನಾ ವೈರಸ್ 'ಮೂಲ'ದ ಬಗ್ಗೆ ಅಮೇರಿಕಾ ಮತ್ತು ಚೀನಾದ ನಡುವೆ ಜಟಾಪಟಿ ಮುಂದುವರೆದಿದೆ.

Recommended Video

ದಯವಿಟ್ಟು ಬೆಂಗಳೂರಲ್ಲಿರೋ ಹಸುಗಳಿಗೆ ಮೇವು ಕೊಟ್ಟು ಕಸಾಯಿ ಖಾನೆಗೆ ಹೋಗೋದನ್ನು ತಪ್ಪಿಸಿ | Ragini | Cow

ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಲ್ಯಾಬ್ ನಿಂದ ನೋವೆಲ್ ಕೊರೊನಾ ವೈರಸ್ ಸೋರಿಕೆ ಆಗಿದೆ ಎಂಬ ವರದಿಗಳು ಪ್ರಕಟವಾದ್ಮೇಲೆ, ಕೊರೊನಾ ವೈರಸ್ ಜನ್ಮ ರಹಸ್ಯದ ಬಗ್ಗೆ ತನಿಖೆ ನಡೆಸಲು ಅಮೇರಿಕಾ ಮುಂದಾಗಿದೆ.

ಕೊರೊನಾ ಜನ್ಮ ರಹಸ್ಯದ ವ್ಯೂಹ ಬೇಧಿಸಲು ಹೊರಟ ಅಮೇರಿಕಾ.!ಕೊರೊನಾ ಜನ್ಮ ರಹಸ್ಯದ ವ್ಯೂಹ ಬೇಧಿಸಲು ಹೊರಟ ಅಮೇರಿಕಾ.!

''ಕೊರೊನಾ ವೈರಸ್ ನಿಂದಾಗಿ ವಿಶ್ವದ ಹಲವು ರಾಷ್ಟ್ರಗಳು ಒದ್ದಾಡುತ್ತಿವೆ. ಹೀಗಾಗಿ, ಅದರ ಮೂಲದ ಬಗ್ಗೆ ನಾವು ಕಂಡು ಹಿಡಿಯಬೇಕು. ವುಹಾನ್ ನಲ್ಲಿ ಏನಾಗುತ್ತಿದೆ ಎಂಬುದು ನಮಗೆ ಗೊತ್ತಾಗಬೇಕು. ಆದ್ರೆ, ಅವರು ನಮಗೆ ಆಹ್ವಾನ ನೀಡಿಲ್ಲ'' ಎಂದು ಯು.ಎಸ್.ಎ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು.

ಆದ್ರೀಗ, ವುಹಾನ್ ಲ್ಯಾಬ್ ಒಳಗೆ ತನಿಖೆ ಮಾಡಲು ಅಮೇರಿಕಾದ ತಂಡಕ್ಕೆ ಅವಕಾಶ ನೀಡಲು ಚೀನಾ ತಿರಸ್ಕರಿಸಿದೆ. ''ಕೊರೊನಾ ವೈರಸ್ ನಿಂದ ನಾವು ಸಂತ್ರಸ್ತರೇ ಹೊರತು ಅಪರಾಧಿಗಳಲ್ಲ'' ಎಂದು ಚೀನಾ ಸರ್ಕಾರ ಹೇಳಿದೆ.

ಕೊರೊನಾ ವೈರಸ್ ನಿಂದ ಚೀನಾದಲ್ಲಿ ಸತ್ತವರೆಷ್ಟು? 'ಸತ್ಯ' ಬಾಯ್ಬಿಟ್ಟ ಟ್ರಂಪ್! ಕೊರೊನಾ ವೈರಸ್ ನಿಂದ ಚೀನಾದಲ್ಲಿ ಸತ್ತವರೆಷ್ಟು? 'ಸತ್ಯ' ಬಾಯ್ಬಿಟ್ಟ ಟ್ರಂಪ್!

ನಾವು ಅಪರಾಧಿ ಅಲ್ಲ.!

ನಾವು ಅಪರಾಧಿ ಅಲ್ಲ.!

''ಮಾನವ ಸಂಕುಲಕ್ಕೆ ಕೊರೊನಾ ವೈರಸ್ ಶತ್ರುವಾಗಿದೆ. ಕೊರೊನಾ ವೈರಸ್ ನಿಂದ ನಾವು ಕೂಡ ಸಂತ್ರಸ್ತರೇ ಹೊರತು ಅಪರಾಧಿಗಳಲ್ಲ'' ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ತಿರುಗೇಟು ಕೊಟ್ಟಿದ್ದಾರೆ.

ನಾವು ಸೃಷ್ಟಿಕರ್ತರಲ್ಲ.!

ನಾವು ಸೃಷ್ಟಿಕರ್ತರಲ್ಲ.!

''ಕೊರೊನಾ ವೈರಸ್ ಹರಡಲು ಶುರುವಾದಾಗಿನಿಂದಲೂ, ಚೀನಾ ಪಾರದರ್ಶಕವಾಗಿ, ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ಕೋವಿಡ್-19 ಹರಡದಂತೆ ತಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ನಾವು ಕೂಡ ವೈರಸ್ ದಾಳಿಗೆ ತುತ್ತಾಗಿದ್ದೇವೆ. ನಾವು ವೈರಸ್ ನ ಸೃಷ್ಟಿಕರ್ತರಲ್ಲ'' ಎಂದು ಗೆಂಗ್ ಶುವಾಂಗ್ ಗುಡುಗಿದ್ದಾರೆ.

ಅಮೇರಿಕಾಗೆ ಪ್ರಶ್ನಿಸಿದ್ದೀರಾ.?

ಅಮೇರಿಕಾಗೆ ಪ್ರಶ್ನಿಸಿದ್ದೀರಾ.?

''H1N1 ಇನ್ಫ್ಯುಯೆನ್ಝಾ, HIV/AIDS ಯು.ಎಸ್.ಎ ನಲ್ಲಿ ಕಂಡುಬಂತು. 2008 ರಲ್ಲಿ ಅಮೇರಿಕಾದಲ್ಲಿ ಉಂಟಾದ ಆರ್ಥಿಕ ಮುಗ್ಗಟ್ಟಿನಿಂದಾಗಿ ಇಡೀ ವಿಶ್ವ ನಲುಗಿತು. ಆಗ ಯಾರಾದರೂ ಅಮೇರಿಕಾ ಬಗ್ಗೆ ಬೆಟ್ಟು ಮಾಡಿ ತೋರಿಸಿದ್ರಾ?'' ಎಂದು ಗೆಂಗ್ ಶುವಾಂಗ್ ಪ್ರಶ್ನಿಸಿದ್ದಾರೆ. ಜೊತೆಗೆ ''ವುಹಾನ್ ಲ್ಯಾಬ್ ನಿಂದ ಕೊರೊನಾ ವೈರಸ್ ಲೀಕ್ ಆಗಿಲ್ಲ. ಇದೆಲ್ಲ ಊಹಾಪೋಹ ಅಷ್ಟೇ. ಚೀನಾದಲ್ಲಿ ಕೊರೊನಾ ವೈರಸ್ ಜನ್ಮದ ಕುರಿತು ಅಂತಾರಾಷ್ಟ್ರೀಯ ಮಟ್ಟದ ತನಿಖೆಯನ್ನು ನಾವು ತಿರಸ್ಕರಿಸುತ್ತೇವೆ'' ಎಂದಿದ್ದಾರೆ.

ವಿಶ್ವದ ಅಂಕಿ-ಅಂಶ

ವಿಶ್ವದ ಅಂಕಿ-ಅಂಶ

ಕಳೆದ ವರ್ಷದ ಡಿಸೆಂಬರ್ ನಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ ನಿಂದಾಗಿ ಇಲ್ಲಿಯವರೆಗೂ ವಿಶ್ವದಾದ್ಯಂತ 171,334 ಮಂದಿ ಸಾವನ್ನಪ್ಪಿದ್ದಾರೆ. ಜಗತ್ತಿನಾದ್ಯಂತ 24,98,998 ಮಂದಿಗೆ ಈವರೆಗೂ ಕೊರೊನಾ ವೈರಸ್ ಸೋಂಕು ತಗುಲಿದೆ. ಕೊರೊನಾ ವೈರಸ್ ವಿರುದ್ಧ ಹೋರಾಡಿ ಇಲ್ಲಿಯವರೆಗೂ 657,895 ಜನ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

English summary
Coronavirus origin: China rejects Donald Trump's demand to allow US Team to Wuhan lab.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X