ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಳಿಯಿಂದ ಕೊರೊನಾ ಸೋಂಕು: ನೀವು ಮಾಡಬೇಕಾಗಿದ್ದು ಇಷ್ಟೇ

|
Google Oneindia Kannada News

ನವದೆಹಲಿ, ಜುಲೈ 7: ಕೊರೊನಾ ಸೋಂಕು ಗಾಳಿಯಿಂದ ಹರಡುವುದು ಸತ್ಯ ಆದರೆ ಕೆಲವೇ ಕೆಲವು ಮೀಟರ್‌ಗಳ ಅಂತರದಲ್ಲಿದ್ದರೆ ಮಾತ್ರ ಸೋಂಕು ಹರಡುತ್ತದೆ, ವ್ಯಕ್ತಿಯಿಂದ ವ್ಯಕ್ತಿ ಅಂತರ ಕಾಯ್ದುಕೊಂಡರೆ ಸಾಕು ಸೋಂಕು ಹರಡವುದಿಲ್ಲ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಕಳೆದ ಒಂದು ದಿನಗಳ ಹಿಂದಷ್ಟೇ ವಿವಿಧ ದೇಶಗಳ 239 ವಿಜ್ಞಾನಿಗಳು ಕೊರೊನಾ ವೈರಸ್ ಗಾಳಿಯಿಂದಲೂ ಹರಡಬಹುದು ಎಂದು ಹೇಳಿಕೆ ನೀಡಿದ್ದರು. ಆದರೆ ಈ ಕುರಿತು ಸ್ಪಷ್ಟನೆ ನೀಡಿದ್ದು, ಕೆಲವೇ ಕೆಲವು ಮೀಟರ್ ಅಂತರದೊಳಗೆ ಮಾತ್ರ ಈ ವೈರಸ್ ಗಾಳಿಯಲ್ಲಿ ಚಲಿಸಲು ಸಾಧ್ಯ ಬಳಿಕ ಆ ಕಣಗಳು ಸತ್ತು ಹೋಗುತ್ತವೆ ಎಂದು ಹೇಳಿದ್ದಾರೆ.

ಗಾಳಿಯಿಂದಲೂ ಕೊರೊನಾ ಸೋಂಕು ಹರಡುತ್ತೆ: 239 ವಿಜ್ಞಾನಿಗಳಿಂದ ಮಾಹಿತಿಗಾಳಿಯಿಂದಲೂ ಕೊರೊನಾ ಸೋಂಕು ಹರಡುತ್ತೆ: 239 ವಿಜ್ಞಾನಿಗಳಿಂದ ಮಾಹಿತಿ

ರೋಗಿ ಸೀನಿದಾಗ ಆ ವೈರಸ್ ಗಾಳಿಯಲ್ಲಿ ಸೇರಿಕೊಳ್ಳುತ್ತದೆ, ಕೆಲವೇ ಮೀಟರ್ ಅಂತರದಲ್ಲಿ ಯಾರಾದರೂ ನಿಂತಿದ್ದರೆ ಅಥವಾ ಚಲಿಸುತ್ತಿದ್ದರೆ ಅವರಿಗೆ ಹರಡುವ ಸಾಧ್ಯತೆ ಇರುತ್ತದೆ ಹೀಗಾಗಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು, ಸ್ಯಾನಿಟೈಸರ್‌ನಿಂದ ಕೈ ತೊಳೆಯುತ್ತಿರಬೇಕು.

ವೈರಸ್ ಅಥವಾ ಬ್ಯಾಕ್ಟೀರಿಯಾ ಗಾಳಿಯಲ್ಲಿ ಸೇರಿಕೊಳ್ಳುತ್ತವೆ

ವೈರಸ್ ಅಥವಾ ಬ್ಯಾಕ್ಟೀರಿಯಾ ಗಾಳಿಯಲ್ಲಿ ಸೇರಿಕೊಳ್ಳುತ್ತವೆ

ವೈರಸ್ ಅಥವಾ ಬ್ಯಾಕ್ಟೀರಿಯಾಗಳು ಗಾಳಿಯಲ್ಲಿ ಸೇರಿಕೊಳ್ಳುತ್ತವೆ.ಚಿಕನ್ ಪಾಕ್ಸ್‌, ಇಫ್ಲುಯೆನ್ಜಾ ಗಾಳಿಯಿಂದಲೇ ಹರಡುತ್ತವೆ. ಗಾಳಿಯಲ್ಲಿನ ಕಣ್ಣಿಗೆ ಕಾಣದ ಸೂಕ್ಷ್ಮ ಕಣಗಳು ಈ ವೈರಸ್‌ನ್ನು ಹರಡುತ್ತವೆ.

ಶಿಫಾರಸು ಪರಿಷ್ಕರಿಸಲು ವಿಶ್ವ ಆರೋಗ್ಯ ಸಂಸ್ಥೆಗೆ ಒತ್ತಾಯ

ಶಿಫಾರಸು ಪರಿಷ್ಕರಿಸಲು ವಿಶ್ವ ಆರೋಗ್ಯ ಸಂಸ್ಥೆಗೆ ಒತ್ತಾಯ

ಗಾಳಿಯಿಂದ ಕೊರೊನಾ ಸೋಂಕು ಹರಡಬಲ್ಲದು ಎಂಬುದಕ್ಕೆ ಸಾಕ್ಷಿ ಇದೆ ಎಂದು ನೂರಾರು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದು, ವಿಶ್ವ ಆರೋಗ್ಯ ಸಂಸ್ಥೆಗೆ ಶಿಫಾರಸನ್ನು ಪರಿಷ್ಕರಿಸಲು ಒತ್ತಾಯಿಸಿದ್ದಾರೆ.

ವೈರಸ್ ಗಾಳಿ ಮೂಲಕವೂ ಹರಡುತ್ತೆ

ವೈರಸ್ ಗಾಳಿ ಮೂಲಕವೂ ಹರಡುತ್ತೆ

ವ್ಯಕ್ತಿಯೊಬ್ಬರು ಸೀನಿದ ನಂತರ ಗಾಳಿಯ ಮೂಲಕ ವೈರಸ್ ಕಣಗಳು ಬೇರೆಡೆಗೆ ಹರಡುತ್ತವೆ. ಗಾಳಿಯಲ್ಲಿರುವ ಕಣಗಳು ಉಸಿರಾಟದ ಮೂಲಕ ಮತ್ತೊಬ್ಬ ವ್ಯಕ್ತಿಯ ದೇಹವನ್ನು ಸೇರುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ವಿಶೇಷವಾಗಿ ಕಳೆದ ಎರಡು ತಿಂಗಳುಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ವಾಯು ಮುಖಾಂತರ ಪ್ರಸರಣವಾಗುವ ಬಗ್ಗೆ ಸಾಧ್ಯವಾದಷ್ಟು ಪರಿಗಣಿಸಿದ್ದೇವೆ. ಆದರೆ, ಈವರೆಗೆ ನಮಗೆ ದೃಢವಾದ ಅಥವಾ ಸ್ಪಷ್ಟವಾದ ಪುರಾವೆಗಳು ಲಭಿಸಿಲ್ಲ ಎಂದು ಡಬ್ಲ್ಯುಎಚ್‌ಒ ಸೋಂಕಿನ ತಡೆಗಟ್ಟುವಿಕೆ ಮತ್ತು ನಿಯಂತ್ರಣದ ತಾಂತ್ರಿಕ ಪ್ರಮುಖ ಡಾ. ಬೆನೆಡೆಟ್ಟಾ ಅಲೆಗ್ರಾಂಜಿ ಅಭಿಪ್ರಾಯಪಟ್ಟಿದ್ದಾರೆ.
ವಿಜ್ಞಾನಿಗಳು ಹೇಳುವುದೇನು?

ವಿಜ್ಞಾನಿಗಳು ಹೇಳುವುದೇನು?

ಕಚೇರಿಗಳಲ್ಲಿ ಸೋಂಕು ಹರಡುವ ಸಾಧ್ಯತ ಹಚ್ಚಿರುತ್ತದೆ. ಮಾಸ್ಕ್‌ ಧರಿಸಲೇಬೇಕು.ಆರೋಗ್ಯ ಕಾರ್ಯಕರ್ತರು ಎನ್ 95 ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು.ಮೊದಲು ಆರೋಗ್ಯ ಇಲಾಖೆಯು ಮಾಸ್ಕ್ ಕೇವಲ ರೋಗದ ಲಕ್ಷಣವಿರುವವರು ಧರಿಸಿದರೆ ಸಾಕು ಎಂದು ಹೇಳಿತ್ತು, ಬಳಿಕ ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು, ಕೈಗವಸುಗಳನ್ನು ಧರಿಸಿದರೂ ಉತ್ತಮ ಎಂದು ಹೇಳಿತ್ತು.

English summary
Coronavirus is not an airborne disease, going by textbook definition, but the virus can travel in air for a few feet in the form of aerosol, Shekhar Mande, the Director General of Central Science Industrial Research told.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X