ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಸ್ ರೂಪಾಂತರ: ಲಸಿಕೆಗಳ ಪರಿವರ್ತನೆಗೆ ನಿಮಿಷಗಳು ಸಾಕು

|
Google Oneindia Kannada News

ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕಂಡುಬಂದಿರುವ ಕೊರೊನಾ ವೈರಸ್ ರೂಪಾಂತರವು ಎಚ್ಚರಿಕೆಯ ಗಂಟೆಯಾಗಿರಬಹುದು, ಆದರೆ ಹೊಸದಾಗಿ ಅನುಮೋದನೆಗೊಂಡ ಲಸಿಕೆಗಳ ಪ್ರಬಲ ಸಾಮರ್ಥ್ಯಕ್ಕೆ ನಾಶಹೊಂದುತ್ತವೆ ಎಂದು ಸಾಂಕ್ರಾಮಿಕ-ಕಾಯಿಲೆ ತಜ್ಞರು ಆಶಾವಾದ ವ್ಯಕ್ತಪಡಿಸಿದ್ದಾರೆ.

ವೈರಸ್ ಮುಂದೆ ಮತ್ತಷ್ಟು ರೂಪಾಂತರ ಹೊಂದಿದರೂ ಲಸಿಕೆಗಳು ಅದಕ್ಕೆ ಅನುಗುಣವಾಗಿ ಹೊಸ ತಳಿಗಳ ವಿರುದ್ಧವೂ ಪರಿಣಾಮಕಾರಿಯಾಗಿಯೇ ಉಳಿಯುವಂತೆ ಪರಿವರ್ತನೆಯಾಗಬಲ್ಲವು. ರೂಪಾಂತರಕ್ಕೆ ಸೂಕ್ತವಾದ ಲಸಿಕೆಯನ್ನು ಕೆಲವೇ ನಿಮಿಷಗಳಲ್ಲಿ ಬದಲಿಸಬಹುದು ಎಂದು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪೆರೆಲ್ಮನ್ ಸ್ಕೂಲ್ ಆಫ್ ಮೆಡಿಸಿನ್‌ನ ಔಷಧ ವಿಭಾಗದ ಪ್ರೊಫೆಸರ್ ಡ್ರ್ಯೂ ವೀಸ್ಮನ್ ಹೇಳಿದ್ದಾರೆ.

ಹೊಸ ಸ್ವರೂಪದ ಕೋವಿಡ್‌ ಸೋಂಕಿಗೂ ಈ ಲಸಿಕೆಯೇ ಸಾಕು?ಹೊಸ ಸ್ವರೂಪದ ಕೋವಿಡ್‌ ಸೋಂಕಿಗೂ ಈ ಲಸಿಕೆಯೇ ಸಾಕು?

ತಮ್ಮ ದೇಶಗಳಲ್ಲಿ ಕೊರೊನಾ ವೈರಸ್‌ನ ಹೊಸ ರೂಪಾಂತರವು ಎಚ್ಚರಿಕೆಯ ಪ್ರಮಾಣದಲ್ಲಿ ಹರಡುತ್ತಿದೆ ಎಂದು ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಈ ರೂಪಾಂತರಿಗಳು ಈಗಾಗಲೇ ಅಮೆರಿಕದಲ್ಲಿ ಹರಡುತ್ತಿರಬಹುದು ಎಂದು ಕೆಲವು ವಿಜ್ಞಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಇದುವರೆಗೂ ಅದು ಪತ್ತೆಯಾಗಿಲ್ಲ. ಕೊರೊನಾ ವೈರಸ್‌ನ ರೂಪಾಂತರವು ವಂಶವಾಹಿ ಪರಿಶೀಲನೆಯಿಂದ ಮಾತ್ರವೇ ಪತ್ತೆಯಾಗುತ್ತದೆ. ಬಿ.1.1.7 ಎಂದು ಕರೆಯಲಾಗಿರುವ ಹೊಸ ತಳಿಯು ಶೇ 56ರಷ್ಟು ಹೆಚ್ಚು ಸಾಂಕ್ರಾಮಿಕ ಗುಣ ಹೊಂದಿದೆ.

Coronavirus Mutation: Vaccines Can Be Tweaked In Minutes Against New Variants

ಫೈಜರ್ ಮತ್ತು ಬಯೋಎನ್‌ಟೆಕ್ ಸಹಯೋಗದ ಲಸಿಕೆ ಹಾಗೂ ಮಾಡೆರ್ನಾ ಲಸಿಕೆಗಳು ಈಗ ಬಳಕೆಯ ಅನುಮೋದನೆಗಳನ್ನು ಪಡೆದುಕೊಂಡಿವೆ. ಈ ಲಸಿಕೆಗಳನ್ನು ಮರು ಮಾಪನಾಂಕ ಮಾಡಲು ಕೆಲವು ಸಮಯ ಬೇಕಾಗಲಿದೆ. ಇದಕ್ಕೆ ಒಂದೆರಡು ತಿಂಗಳು ತಗುಲಬಹುದು. ಏಕೆಂದರೆ ಉತ್ಪಾದನೆ ಮತ್ತು ನಿಯಂತ್ರಕ ನಿಯಮಗಳ ಪ್ರಕ್ರಿಯೆಯ ಅಗತ್ಯವಿದೆ. ಆದರೆ ಲಸಿಕೆಯ ಮರು ಸಂಯೋಜನೆ ಬಹಳ ಸುಲಭ ಎಂದು ವೀಸ್ಮನ್ ಹೇಳಿದ್ದಾರೆ.

ರೂಪಾಂತರದ ವೈರಸ್‌ಗೆ ತಯಾರಿಸಲಾಗುವ ಲಸಿಕೆಯ ಸುರಕ್ಷತೆ ಮತ್ತು ದಕ್ಷತೆಯನ್ನು ಪರಿಶೀಲಿಸಲು ಆಹಾರ ಮತ್ತು ಔಷಧ ಆಡಳಿತವು ಮತ್ತಷ್ಟು ವಿಸ್ತೃತ ಪ್ರಯೋಗಗಳನ್ನು ಬಯಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

'ಕೊರೊನಾ' ವೈರಸ್ ಇನ್ನೂ 10 ವರ್ಷ ಭೂಮಿ ಬಿಟ್ಟು ತೊಲಗುವುದಿಲ್ಲ!'ಕೊರೊನಾ' ವೈರಸ್ ಇನ್ನೂ 10 ವರ್ಷ ಭೂಮಿ ಬಿಟ್ಟು ತೊಲಗುವುದಿಲ್ಲ!

ಈ ರೂಪಾಂತರಗಳ ಕುರಿತಾದ ಅಧ್ಯಯನ ಇನ್ನೂ ಆರಂಭಿಕ ಹಂತದಲ್ಲಿವೆ. ಯಾವುದೇ ಸೋಂಕು, ಕಾಯಿಲೆಯ ಬಗ್ಗೆ ಅಧಿಕೃತವಾಗಿ ತೀರ್ಮಾನಕ್ಕೆ ಬರಲು ಅಷ್ಟೇ ಗಟ್ಟಿಯಾದ ಪುರಾವೆಗಳು ಬೇಕಾಗುತ್ತವೆ. ಇದಕ್ಕೆ ಆಳವಾದ ಅಧ್ಯಯನ, ಬಹು ಪರಾಮರ್ಶೆಗಳು, ಅಸಂಖ್ಯ ಪ್ರಯೋಗಾಲಯ ಪ್ರಯೋಗಗಳು ನಡೆಯಬೇಕು. ಅದರ ಬಳಿಕವೇ ರೂಪಾಂತರವು ನಿಜಕ್ಕೂ ಹೇಗೆ ವರ್ತಿಸುತ್ತವೆ ಎಂಬುದನ್ನು ಕಂಡುಹಿಡಿಯಲು ಸಾಧ್ಯ ಎಂದು ತಜ್ಞರು ತಿಳಿಸಿದ್ದಾರೆ.

English summary
Experts says tweaking of the vaccines could be done in minutes to fight against new variants of coronavirus,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X