ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್ ವಿಚಾರದಲ್ಲಿ ಎಡವಟ್ಟು: ಸ್ವೀಡನ್ ಜನರ ಪ್ರಾಣಕ್ಕೆ ಕುತ್ತು!

|
Google Oneindia Kannada News

ಏಪ್ರಿಲ್ 27: ಕೋವಿಡ್-19 ತಡೆಗಟ್ಟಲು ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಮೊರೆ ಹೋಗಿವೆ. ಕೆಲವು ದೇಶಗಳಲ್ಲಿ ಲಾಕ್ ಡೌನ್ ಕಠಿಣವಾಗಿದ್ದು, ಯಾವುದೇ ಚಟುವಟಿಕೆಗಳಿಗೂ ಅವಕಾಶ ನೀಡುತ್ತಿಲ್ಲ. ಕಟ್ಟುನಿಟ್ಟಿನ ಲಾಕ್ ಡೌನ್ ನಿಯಮಗಳಿಂದಾಗಿ ಕೆಲವು ದೇಶಗಳಲ್ಲಿ ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಬಂದಿರುವುದು ಸುಳ್ಳಲ್ಲ.

ಆದರೆ, ಸ್ವೀಡನ್ ನಲ್ಲಿ 'ಲಾಕ್ ಡೌನ್' ವಿಚಾರವಾಗಿ ಮಾಡಿದ ಒಂದು ಎಡವಟ್ಟು ಇದೀಗ ಅಲ್ಲಿನ ಜನರ ಪ್ರಾಣಕ್ಕೆ ಕುತ್ತು ತಂದಿದೆ. ಸ್ವೀಡನ್ ನಲ್ಲಿ ಲಾಕ್ ಡೌನ್ ನಿಯಮಗಳು ಶಿಸ್ತು ಬದ್ಧವಾಗಿ ಇರಲಿಲ್ಲ. ಅಲ್ಲಿನ ಜನರು ಸ್ವಯಂ ಪ್ರೇರಿತರಾಗಿ ಸಾಮಾಜಿಕ ಅಂತರವನ್ನು ಪಾಲಿಸಬೇಕಿತ್ತು. ಇದೇ ವಿಧಾನ ಇದೀಗ ಸ್ವೀಡನ್ ನಲ್ಲಿ ಶಾಪವಾಗಿ ಪರಿಣಮಿಸಿದೆ.

ಕೊರೊನಾ ಕೊಲ್ಲಲು ಐಡಿಯಾ ಕೊಟ್ಟು ಯದ್ವಾತದ್ವಾ ಟ್ರೋಲ್ ಆದ ಟ್ರಂಪ್!ಕೊರೊನಾ ಕೊಲ್ಲಲು ಐಡಿಯಾ ಕೊಟ್ಟು ಯದ್ವಾತದ್ವಾ ಟ್ರೋಲ್ ಆದ ಟ್ರಂಪ್!

ಲಾಕ್ ಡೌನ್ ನಿಯಮಗಳಲ್ಲಿ ಉಡಾಫೆ ತೋರಿದ ಕಾರಣಕ್ಕೋ ಏನೋ.. ಅಕ್ಕ-ಪಕ್ಕದ ದೇಶಗಳಿಗೆ ಹೋಲಿಸಿದರೆ ಸ್ವೀಡನ್ ನಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಮತ್ತು ಸಾವಿನ ಪ್ರಮಾಣ ಜಾಸ್ತಿ ಇದೆ.

ಸ್ವೀಡನ್ ನಲ್ಲಿನ ಪ್ರಕರಣಗಳ ಸಂಖ್ಯೆ

ಸ್ವೀಡನ್ ನಲ್ಲಿನ ಪ್ರಕರಣಗಳ ಸಂಖ್ಯೆ

ಸ್ವೀಡನ್ ನಲ್ಲಿ ಇಲ್ಲಿಯವರೆಗೂ 18,640 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. 2,194 ಮಂದಿ ಈವರೆಗೂ ಕೋವಿಡ್-19ಗೆ ಬಲಿಯಾಗಿದ್ದಾರೆ. ಅಲ್ಲಿ ಸದ್ಯ 399 ಜನರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.

ಸಾಮಾಜಿಕ ಅಂತರ ಮಾತ್ರ ಜಾರಿಯಲ್ಲಿತ್ತು.!

ಸಾಮಾಜಿಕ ಅಂತರ ಮಾತ್ರ ಜಾರಿಯಲ್ಲಿತ್ತು.!

ಶಾಲೆ-ಕಾಲೇಜು, ವ್ಯಾಪಾರ-ವಹಿವಾಟು, ಹೋಟೆಲ್-ರೆಸ್ಟೋರೆಂಟ್, ಸಾರ್ವಜನಿಕ ಕಾರ್ಯಕ್ರಮಗಳು ಸೇರಿದಂತೆ ಎಲ್ಲದಕ್ಕೂ ನಿರ್ಬಂಧ ಹೇರಿ, ಎಲ್ಲರನ್ನೂ ಮನೆಯಲ್ಲೇ ಇರುವಂತೆ ಅಕ್ಕ-ಪಕ್ಕದ ರಾಷ್ಟ್ರಗಳು ಲಾಕ್ ಡೌನ್ ನಿಯಮಗಳು ಕಟ್ಟುನಿಟ್ಟಾಗಿ ಹೇರಿದ್ದವು. ಆದ್ರೆ, ಸ್ವೀಡನ್ ನಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ಸಾಮಾಜಿಕ ಅಂತರದ ಮಾರ್ಗಸೂಚಿ ಮಾತ್ರ ಸ್ವೀಡನ್ ನಲ್ಲಿ ಜಾರಿಯಲ್ಲಿತ್ತು.

ವೈಯುಕ್ತಿಕ ಸ್ವಾತಂತ್ರ್ಯಕ್ಕೆ ಮನ್ನಣೆ

ವೈಯುಕ್ತಿಕ ಸ್ವಾತಂತ್ರ್ಯಕ್ಕೆ ಮನ್ನಣೆ

ಕೋವಿಡ್-19 ನಂತಹ ಹೆಲ್ತ್ ಎಮರ್ಜೆನ್ಸಿ ಸಮಯದಲ್ಲಿ ವೈಯುಕ್ತಿಕ ಸ್ವಾತಂತ್ರ್ಯ ಮತ್ತು ಸ್ವಯಂ ಸಂಯಮಕ್ಕೆ ಸ್ವೀಡನ್ ಹೆಚ್ಚು ಮಹತ್ವ ಕೊಟ್ಟಿದ್ದೇ ತಪ್ಪಾಗಿ ಪರಿಣಮಿಸಿದೆ. ''ಕೋವಿಡ್-19 ನಿಯಂತ್ರಣಕ್ಕಾಗಿ ನಮ್ಮ ಇಡೀ ವ್ಯವಸ್ಥೆ ಸ್ವಯಂ ಪ್ರೇರಿತ ಕ್ರಿಯೆಯನ್ನು ಆಧರಿಸಿದೆ. ರೋಗ ನಿರೋಧಕ ವ್ಯವಸ್ಥೆಯು ಸ್ವಯಂ ಪ್ರೇರಿತವಾಗಿದೆ'' ಎಂದು ಕಳೆದ ಮಾರ್ಚ್ ನಲ್ಲಿ ಅಲ್ಲಿನ ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ ಆಂಗಸ್ ಟೆಗ್ನೆಲ್ ಹೇಳಿದ್ದರು.

ಸಂದೇಶಗಳನ್ನು ಮಾತ್ರ ನೀಡಲಾಗಿತ್ತು

ಸಂದೇಶಗಳನ್ನು ಮಾತ್ರ ನೀಡಲಾಗಿತ್ತು

ಸಾಮಾಜಿಕ ಅಂತರ, ಕೈ ತೊಳೆದುಕೊಳ್ಳುವುದು, 70 ವರ್ಷಕ್ಕಿಂತ ಮೇಲ್ಪಟ್ಟವರನ್ನು ಮನೆಯಲ್ಲೇ ಇರುವಂತೆ ನೋಡಿಕೊಳ್ಳುವ ಸಂದೇಶಗಳನ್ನು ಸ್ವೀಡನ್ ಜನರಿಗೆ ತಲುಪಿಸಲಾಗಿತ್ತು. ಅಷ್ಟು ಬಿಟ್ಟರೆ ಅಲ್ಲಿ ಪ್ರೈಮರಿ ಮತ್ತು ಸೆಕೆಂಡರಿ ಶಾಲೆಗಳಿಗೆ ಬಾಗಿಲು ಹಾಕಲಿಲ್ಲ. ಸಲೂನ್ ಮತ್ತು ಮಾರುಕಟ್ಟೆ ಪ್ರದೇಶಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಮೊದಮೊದಲು 500 ಜನ ಒಂದೆಡೆ ಸೇರುವ ಕಾರ್ಯಕ್ರಮಗಳಿಗೂ ಅನುಮತಿ ನೀಡಲಾಗಿತ್ತು. ಇಂತಹ ನಿರ್ಧಾರಗಳಿಂದ ಸ್ವೀಡನ್ ನಲ್ಲಿ ಏಪ್ರಿಲ್ ಬಳಿಕ ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಹಾಗೇ, ಐಸಿಯುನಲ್ಲಿ ದಾಖಲಾದವರ ಸಂಖ್ಯೆ ದುಪ್ಪಟ್ಟಾಗಿದೆ.

ಎಚ್ಚೆತ್ತುಕೊಳ್ಳುವಷ್ಟರಲ್ಲಿ ಪರಿಸ್ಥಿತಿ ಕೈಮೀರಿತ್ತು.!

ಎಚ್ಚೆತ್ತುಕೊಳ್ಳುವಷ್ಟರಲ್ಲಿ ಪರಿಸ್ಥಿತಿ ಕೈಮೀರಿತ್ತು.!

ಸೋಂಕಿತ ಪ್ರಕರಣಗಳ ಸಂಖ್ಯೆ ಜಾಸ್ತಿಯಾದಂತೆ ಹೊಸ ನಿಯಮಗಳನ್ನು ಸ್ವೀಡನ್ ಸರ್ಕಾರ ಘೋಷಿಸಿತು. 50ಕ್ಕಿಂತ ಹೆಚ್ಚು ಜನರು ಒಂದೆಡೆ ಸೇರದಂತೆ ಮತ್ತು ವಿಮಾನ ಹಾರಾಟಕ್ಕೆ ಬ್ರೇಕ್ ಹಾಕಿ ಸ್ವೀಡನ್ ಸರ್ಕಾರ ಆದೇಶ ಹೊರಡಿಸಿತು. ಆದರೆ, ಈ ಆದೇಶ ಬರುವಷ್ಟರಲ್ಲಿ ಅಲ್ಲಿನ ಪರಿಸ್ಥಿತಿ ಆದಾಗಲೇ ಕೈಮೀರಿತ್ತು.

ಆತಂಕಕಾರಿ ಅಂಶ

ಆತಂಕಕಾರಿ ಅಂಶ

10.2 ಮಿಲಿಯನ್ ಜನಸಂಖ್ಯೆ ಹೊಂದಿರುವ ಸ್ವೀಡನ್ ನಲ್ಲಿ ಕಳೆದ ಒಂದು ವಾರದಿಂದ ಕೋವಿಡ್-19 ಪ್ರಕರಣಗಳು ಗಣನೀಯವಾಗಿ ಏರಿಕೆ ಕಂಡಿದೆ. ನೆರೆಹೊರೆಯ ರಾಷ್ಟ್ರಗಳಾದ ನಾರ್ವೇ ಮತ್ತು ಫಿನ್ ಲ್ಯಾಂಡ್ ಗೆ ಹೋಲಿಸಿದರೆ ಸ್ವೀಡನ್ ನಲ್ಲಿ ಸೋಂಕಿತ ಪ್ರಕರಣಗಳು ಮತ್ತು ಸಾವಿನ ಪ್ರಮಾಣ 20 ಪಟ್ಟು ಹೆಚ್ಚಾಗಿದೆ. ಸ್ವೀಡನ್ ನಲ್ಲಿ ಪ್ರತಿ ಮಿಲಿಯನ್ ಗೆ 198 ಸಾವು ಸಂಭವಿಸಿದ್ದು, ಇದು ಜರ್ಮನಿ ಮತ್ತು ಯು.ಎಸ್.ಎ ಗಿಂತಲೂ ಜಾಸ್ತಿ ಎಂಬುದು ಆತಂಕಕಾರಿ ಅಂಶ.

English summary
Coronavirus Lockdown: Sweden strategy is beginning to backfire.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X