ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ದಿನದಲ್ಲಿ ಕೊರೊನಾಗೆ 250 ಮಂದಿ ಬಲಿ: ತತ್ತರಿಸಿದ ಇಟಲಿ!

|
Google Oneindia Kannada News

ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ಇಟಲಿಯಲ್ಲಿ ನಿನ್ನೆ ಒಂದೇ ದಿನ 250 ಮಂದಿ ಸಾವನ್ನಪ್ಪಿದ್ದಾರೆ. ನಿನ್ನೆ (ಶುಕ್ರವಾರ) ಒಂದೇ ದಿನ ಇಟಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 17% ರಷ್ಟು ಏರಿಕೆಯಾಗಿದೆ. 15,113 ಕ್ಕೆ ಇದ್ದ ಕೊರೊನಾ ಪೀಡಿತರ ಸಂಖ್ಯೆ ಇಂದು ಏಕ್ದಂ 17,660ಕ್ಕೆ ತಲುಪಿದೆ.

ಚೀನಾ ಬಿಟ್ಟರೆ ಕೊರೊನಾ ವೈರಸ್ ನಿಂದ ಹೆಚ್ಚು ತತ್ತರಿಸಿರುವ ದೇಶ ಇಟಲಿ. ಇಲ್ಲಿಯವರೆಗೆ ಇಟಲಿಯಲ್ಲಿ 1266 ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿ 250 ಮಂದಿಯನ್ನು ನಿನ್ನೆ ಡೆಡ್ಲಿ ಕೊರೊನಾ ಬಲಿ ಪಡೆದಿದೆ.

ಸೋಂಕು ಹರಡುವ ಕುರಿತು ಭಯಾನಕ ಸತ್ಯ ಹೊರಹಾಕಿದ ಕೊರೊನಾ ಪೀಡಿತ ಮಹಿಳೆ!ಸೋಂಕು ಹರಡುವ ಕುರಿತು ಭಯಾನಕ ಸತ್ಯ ಹೊರಹಾಕಿದ ಕೊರೊನಾ ಪೀಡಿತ ಮಹಿಳೆ!

ಕೊರೊನಾ ಸೋಂಕಿನಿಂದಾಗಿ ಇನ್ನೂ 1328 ಮಂದಿ ಇಟಲಿಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.

Coronavirus: Italy death toll jumps by 250 on friday

ವಿಶ್ವದ ಸಾಂಕ್ರಾಮಿಕ ಪಿಡುಗು ಕೊರೊನಾ ವೈರಸ್ ನ ಕೇಂದ್ರ ಸ್ಥಾನ ಇದೀಗ ಯೂರೋಪ್ ಎಂದು ಶುಕ್ರವಾರ ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ. ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡಿದ್ದ ಚೀನಾ ದೇಶಕ್ಕೆ ಹೋಲಿಸಿದರೆ, ಪ್ರತಿ ದಿನ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚು ದಾಖಲಾಗುತ್ತಿರುವುದು ಯೂರೋಪ್ ನಲ್ಲಿ.

ಸಮಾಧಾನ ತಂದ ಹೊಸ ಸಂಶೋಧನೆ: ಸಕಲ ಜ್ವರಗಳಿಗೂ ಒಂದೇ ಲಸಿಕೆ!ಸಮಾಧಾನ ತಂದ ಹೊಸ ಸಂಶೋಧನೆ: ಸಕಲ ಜ್ವರಗಳಿಗೂ ಒಂದೇ ಲಸಿಕೆ!

ಕೊರೊನಾ ಸೋಂಕಿನಿಂದ ಬೆದರಿರುವ ಇಟಲಿ ಸಂಪೂರ್ಣ ಸ್ತಬ್ಧವಾಗಿದ್ದು, ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಅಂಗಡಿಗಳು ಮತ್ತು ಫಾರ್ಮಸಿಗಳನ್ನು ಮಾತ್ರ ತೆರೆಯುವಂತೆ ಸರ್ಕಾರ ಆದೇಶಿಸಿದೆ.

English summary
Coronavirus in Italy: The number of deaths from Coronavirus in Italy has risen to 1266, An increase of 250 in a day, Officials say.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X