ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಳಿಯಿಂದಲೂ ಕೊರೊನಾ ಸೋಂಕು ಹರಡುತ್ತೆ: 239 ವಿಜ್ಞಾನಿಗಳಿಂದ ಮಾಹಿತಿ

|
Google Oneindia Kannada News

ನವದೆಹಲಿ, ಜುಲೈ 6: ಗಾಳಿಯಿಂದಲೂ ಕೊರೊನಾ ಸೋಂಕು ಹರಡುತ್ತೆ ಎಂಬ ಮಾಹಿತಿಯನ್ನು ವಿಜ್ಞಾನಿಗಳು ಹೊರಹಾಕಿದ್ದಾರೆ.

Recommended Video

Kushal Mendis arrested ಶ್ರೀಲಂಕಾ ಕ್ರಿಕೆಟಿಗರ್ ಕುಸಾಲ್ ಮೆಂಡಿಸ್ ಅರೆಸ್ಟ್ | Oneindia Kannada

ಇಷ್ಟು ದಿನ ವೈದ್ಯರು ಕೊರೊನಾ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಮಾತ್ರ ಹರಡುತ್ತದೆ. ಎಂದು ಹೇಳಿದ್ದರು. ಈಗ ಗಾಳಿಯ ಮುಖಾಂತರವೂ ಹರಡಲಿದೆ ಎಂಬ ಮಾಹಿತಿ ನಿಜಕ್ಕೂ ಎಲ್ಲರಲ್ಲಿ ಆತಂಕ ಮೂಡಿಸಿದೆ.

ಸಮುದಾಯ ಹಂತ ತಲುಪಿದ ಕೊರೊನಾ: ಆರೋಗ್ಯ ಸಚಿವ ಎಚ್ಚರಿಕೆಸಮುದಾಯ ಹಂತ ತಲುಪಿದ ಕೊರೊನಾ: ಆರೋಗ್ಯ ಸಚಿವ ಎಚ್ಚರಿಕೆ

32 ದೇಶಗಳ 239 ವಿಜ್ಞಾನಿಗಳು ವಿಶ್ವ ಆರೋಗ್ಯ ಸಂಸ್ಥೆಗೆ ಪತ್ರ ಬರೆದು ಕೊರೋನಾ ರೋಗದ ಸೋಂಕು ಗಾಳಿಯ ಮುಖಾಂತರವೂ ಹರಡಲಿದೆ. ಈ ಬಗ್ಗೆ ಗಂಭೀರವಾಗಿ ಗಮನಹರಿಸಿ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಸೈನ್ಸ್ ಜರ್ನಲ್ ಪತ್ರಿಕೆಯಲ್ಲಿ ವರದಿ

ಸೈನ್ಸ್ ಜರ್ನಲ್ ಪತ್ರಿಕೆಯಲ್ಲಿ ವರದಿ

ಸೈನ್ಸ್ ಜರ್ನಲ್‌ ಪತ್ರಿಕೆಯಲ್ಲಿ ಪ್ರಕಟಿಸಲು ಸಂಶೋಧನಾ ವರದಿ ಸಿದ್ದಪಡಿಸಿರುವ ವೈದ್ಯಕೀಯ ಕ್ಷೇತ್ರದ ತಜ್ಞರು ಸಂಶೋಧನೆಯ ಸಾರವನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಓಪನ್ ಲೆಟರ್ ನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.

ಶಿಫಾರಸು ಪರಿಷ್ಕರಿಸಲು ವಿಶ್ವ ಆರೋಗ್ಯ ಸಂಸ್ಥೆಗೆ ಒತ್ತಾಯ

ಶಿಫಾರಸು ಪರಿಷ್ಕರಿಸಲು ವಿಶ್ವ ಆರೋಗ್ಯ ಸಂಸ್ಥೆಗೆ ಒತ್ತಾಯ

ಗಾಳಿಯಿಂದ ಕೊರೊನಾ ಸೋಂಕು ಹರಡಬಲ್ಲದು ಎಂಬುದಕ್ಕೆ ಸಾಕ್ಷಿ ಇದೆ ಎಂದು ನೂರಾರು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದು, ವಿಶ್ವ ಆರೋಗ್ಯ ಸಂಸ್ಥೆಗೆ ಶಿಫಾರಸನ್ನು ಪರಿಷ್ಕರಿಸಲು ಒತ್ತಾಯಿಸಿದ್ದಾರೆ.

ವ್ಯಕ್ತಿಯಿಂದ ವ್ಯಕ್ತಿಗೆ ಸೋಂಕು ಹರಡುತ್ತೆ ಎಂದಿತ್ತು WHO

ವ್ಯಕ್ತಿಯಿಂದ ವ್ಯಕ್ತಿಗೆ ಸೋಂಕು ಹರಡುತ್ತೆ ಎಂದಿತ್ತು WHO

ಕೊರೊನಾ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಮಾತ್ರ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ವ್ಯಕ್ತಿ ಸೀನಿದಾಗ, ಮತ್ತೊಬ್ಬರ ಜೊತೆ ಮಾತನಾಡುತ್ತಾ ಆತನ ಎಂಜಿಲು ಮತ್ತೊಬ್ಬರನ್ನು ಸೋಕಿದಾಗ ಇದು ಹರಡುತ್ತದೆ ಎಂದು ಹೇಳಲಾಗಿತ್ತು. ಆದರೆ ವೈರಸ್ ಗಾಳಿಯಿಂದ ಹರಡುತ್ತದೆ ಎಂದರೆ ನಂಬಲು ಸಾರ್ಧಯವಿಲ್ಲ ಎಂದು ಹೆಲ್ತ್ ಏಜೆನ್ಸಿಗಳು ಹೇಳಿವೆ.

ವೈರಸ್ ಗಾಳಿ ಮೂಲಕವೂ ಹರಡುತ್ತೆ

ವೈರಸ್ ಗಾಳಿ ಮೂಲಕವೂ ಹರಡುತ್ತೆ

ವ್ಯಕ್ತಿಯೊಬ್ಬರು ಸೀನಿದ ನಂತರ ಗಾಳಿಯ ಮೂಲಕ ವೈರಸ್ ಕಣಗಳು ಬೇರೆಡೆಗೆ ಹರಡುತ್ತವೆ. ಗಾಳಿಯಲ್ಲಿರುವ ಕಣಗಳು ಉಸಿರಾಟದ ಮೂಲಕ ಮತ್ತೊಬ್ಬ ವ್ಯಕ್ತಿಯ ದೇಹವನ್ನು ಸೇರುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ವಿಶೇಷವಾಗಿ ಕಳೆದ ಎರಡು ತಿಂಗಳುಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ವಾಯು ಮುಖಾಂತರ ಪ್ರಸರಣವಾಗುವ ಬಗ್ಗೆ ಸಾಧ್ಯವಾದಷ್ಟು ಪರಿಗಣಿಸಿದ್ದೇವೆ. ಆದರೆ, ಈವರೆಗೆ ನಮಗೆ ದೃಢವಾದ ಅಥವಾ ಸ್ಪಷ್ಟವಾದ ಪುರಾವೆಗಳು ಲಭಿಸಿಲ್ಲ ಎಂದು ಡಬ್ಲ್ಯುಎಚ್‌ಒ ಸೋಂಕಿನ ತಡೆಗಟ್ಟುವಿಕೆ ಮತ್ತು ನಿಯಂತ್ರಣದ ತಾಂತ್ರಿಕ ಪ್ರಮುಖ ಡಾ. ಬೆನೆಡೆಟ್ಟಾ ಅಲೆಗ್ರಾಂಜಿ ಅಭಿಪ್ರಾಯಪಟ್ಟಿದ್ದಾರೆ.

English summary
The coronavirus is finding new victims worldwide, giving rise to frightening clusters of infection that increasingly confirm what many scientists have been saying for months: The virus lingers in the air indoors, infecting those nearby.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X