ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಬಗ್ಗೆ ಮಾತಾಡಿ ಅಂದ್ರೆ, ಮೊದ್ಲು ಸಾಲ ಕೊಡಿ ಅಂದ ಇಮ್ರಾನ್ ಖಾನ್

|
Google Oneindia Kannada News

ಇಸ್ಲಮಾಬಾದ್, ಮಾರ್ಚ್ 18: ಭಾರತವನ್ನು ವಿಶ್ವದ ಎದುರು ಮುಜುಗರಕ್ಕೀಡಲು ಮಾಡಲು ಹೋಗಿ ಬಹಳಷ್ಟು ಬಾರಿ ಬ್ಯಾಕ್ ಫೈರ್ ಎದುರಿಸಿದ್ದ ಪಾಕಿಸ್ತಾನ, ಮತ್ತೊಂದು ಬಾರಿ ಅಪಹಾಸ್ಯಕ್ಕೀಡಾಗಿದೆ.

ದೇಶವನ್ನು ಉದ್ದೇಶಿಸಿ ಮಾತನಾಡಿದ ನಂತರ, ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಇಮ್ರಾನ್ ಖಾನ್, ಕೊರೊನಾ ವೈರಸ್ ಹರಡದಂತೆ ತಡೆಯಲು ದೇಶದ ಪ್ರಮುಖ ನಗರಗಳನ್ನು ಬಂದ್ ಮಾಡುವ ಸ್ಥಿತಿಯಲ್ಲಿ ಪಾಕಿಸ್ತಾನ ಇಲ್ಲ" ಎಂದಿದ್ದಾರೆ.

ಕೊರೊನಾ ಎಫೆಕ್ಟ್ : ನಾಲ್ಕು ಕೆಮ್ಮಿದ್ದಕ್ಕೆ ಜನ ಹೀಗಾ ಮಾಡೋದು? ಶಿವಶಿವಾ.. ಕೊರೊನಾ ಎಫೆಕ್ಟ್ : ನಾಲ್ಕು ಕೆಮ್ಮಿದ್ದಕ್ಕೆ ಜನ ಹೀಗಾ ಮಾಡೋದು? ಶಿವಶಿವಾ..

ಕೊರೊನಾ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾರ್ಗಸೂಚಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಇಮ್ರಾನ್, "ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಇತರ ಪಾಶ್ಚಿಮಾತ್ಯ ದೇಶದಂತಲ್ಲ. ಶೇ. 25ಕ್ಕೂ ಹೆಚ್ಚು ಜನ ಬಡತನ ರೇಖೆಗಿಂತ ಕೆಳಗಡೆ ಇದ್ದಾರೆ" ಎಂದು ಇಮ್ರಾನ್ ಹೇಳಿದ್ದಾರೆ.

Instead Of Talking Coronavirus, Pak PM Imran Khan Requested To IMF To Release Loan

"ದೇಶ ಈಗಾಗಲೇ ಹಣದುಬ್ಬರವನ್ನು ಎದುರಿಸುತ್ತಿದೆ. ವಿಶ್ವ ಹಣಕಾಸು ಸಂಸ್ಥೆಯಿಂದ ನಮಗೆ ಆರ್ಥಿಕ ಸಹಾಯದ ತುರ್ತು ಅವಶ್ಯಕತೆಯಿದೆ. ಐಎಂಎಫ್ ಮೊದಲು ನಮಗೆ ಸಾಲ ಬಿಡುಗಡೆ ಮಾಡಲಿ" ಎಂದು ಇಮ್ರಾನ್, ಮನವಿ ಮಾಡಿದ್ದಾರೆ.

"ನಾವು ಕೊರೊನಾದಿಂದ ಜನರನ್ನು ರಕ್ಷಿಸಬಹುದು. ಆದರೆ, ಹಸಿವೆಯಿಂದ ಸಾವನ್ನಪ್ಪುತ್ತಿರುವವರನ್ನು ರಕ್ಷಿಸಲು ಸಾಧ್ಯವಾಗುತ್ತದೆಯೇ" ಎಂದು ಪ್ರಶ್ನಿಸಿರುವ ಇಮ್ರಾನ್, "ನಮ್ಮ ದೇಶದ ಪರಿಸ್ಥಿತಿಯನ್ನು ಐಎಂಎಫ್ ಅರ್ಥಮಾಡಿಕೊಳ್ಳಬೇಕು" ಎಂದು ಇಮ್ರಾನ್ ಅವಲತ್ತು ತೋಡಿಕೊಂಡಿದ್ದಾರೆ.

ಕೊರೊನಾ; ಕಡೆಗೂ ಮೋದಿ ಮಾತು ಕೇಳಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ಕೊರೊನಾ; ಕಡೆಗೂ ಮೋದಿ ಮಾತು ಕೇಳಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್

"ಭಾರತ ಸೇರಿದಂತೆ ನೆರೆಯ ರಾಷ್ಷ್ರಗಳಲ್ಲಿ ಕೊರೊನಾ ವೈರಸ್ ನ್ನು ಹತ್ತಿಕ್ಕಲು 'ಸಾರ್ಕ್' ರಾಷ್ಟ್ರಗಳು ಒಂದಾಗಬೇಕು" ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿದ್ದರು. ಅದರಂತೇ, ವಿಡಿಯೋ ಕಾನ್ಫರೆನ್ಸ್ ನಡೆಸಲಾಗಿತ್ತು.

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೊರತು ಪಡಿಸಿ, ಸಾರ್ಕ್ ದೇಶದ ಪ್ರಧಾನಿಗಳು ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದರು. ಈ ವೇಳೆ, ಪಾಕ್ ಪ್ರತಿನಿಧಿಸಿದ ಅಧಿಕಾರಿ, ಕೊರೊನಾ ಬಗ್ಗೆ ಮಾತನಾಡದೇ, ಕಾಶ್ಮೀರ ವಿಚಾರ ಎತ್ತಿ ತಲೆಹರಟೆ ಮಾಡಿದ್ದರು.

English summary
Instead Of Talking Coronavirus, Pak PM Imran Khan Requested To IMF To Release Loan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X