ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ರೂಪಾಂತರ: ಚೀನಾದಿಂದ ಬಂತು ಮತ್ತೊಂದು ಬೆಚ್ಚಿಬೀಳಿಸುವ ಸುದ್ದಿ!

|
Google Oneindia Kannada News

ಬೀಜಿಂಗ್, ಮೇ 22: ಜಗತ್ತಿನಾದ್ಯಂತ 52,07,911 ಮಂದಿಗೆ ಡೆಡ್ಲಿ ಕೊರೊನಾ ವೈರಸ್ ಸೋಂಕು ತಗುಲಿದೆ. ಇಲ್ಲಿಯವರೆಗೂ 3,34,848 ಜನ ಕೋವಿಡ್-19 ನಿಂದ ಪ್ರಾಣ ಬಿಟ್ಟಿದ್ದಾರೆ. ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರು ಹೆಚ್ಚಾಗುತ್ತಲೇ ಇದ್ದಾರೆ.

Recommended Video

ವರ್ಕ್ ಫ್ರಂ ಹೋಂ‌ನಿಂದ ಆಗ್ತಿರೋ ಸಮಸ್ಯೆಗಳು ಅಷ್ಟಿಷ್ಟಲ್ಲ... | Oneindia Kannada

ಮಾರಣಾಂತಿಕ ಕೊರೊನಾ ವೈರಸ್ ನಿಂದ ಅಮೇರಿಕಾ, ಇಟಲಿ, ಬ್ರೆಜಿಲ್, ಸ್ಪೇನ್, ಯು.ಕೆ. ಫ್ರಾನ್ಸ್ ಅಕ್ಷರಶಃ ನಲುಗಿವೆ. ಭಾರತದಲ್ಲೂ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಲಕ್ಷ ದಾಟಿದೆ.

ಕೊರೊನಾ ಜನ್ಮಭೂಮಿ ವುಹಾನ್ ನಿಂದ ಬಂತು ಮತ್ತೊಂದು ಶಾಕಿಂಗ್ ನ್ಯೂಸ್!ಕೊರೊನಾ ಜನ್ಮಭೂಮಿ ವುಹಾನ್ ನಿಂದ ಬಂತು ಮತ್ತೊಂದು ಶಾಕಿಂಗ್ ನ್ಯೂಸ್!

ಹೀಗಿರುವಾಗಲೇ, ಚೀನಾದಿಂದ ಮತ್ತೊಂದು ಬೆಚ್ಚಿಬೀಳಿಸುವ ಸುದ್ದಿ ಹೊರಬಿದ್ದಿದೆ. ಚೀನಾದಲ್ಲಿ ಕೊರೊನಾ ವೈರಸ್ ಎರಡನೇ ಅಲೆ ಎದ್ದಿದೆ. ಚೀನಾದ ಈಶಾನ್ಯ ಭಾಗದಲ್ಲಿ ಮತ್ತೆ ಕೊರೊನಾ ವೈರಸ್ ಹಾವಳಿ ಶುರುವಾಗಿದೆ. ರೂಪಾಂತರಗೊಂಡಿರುವ ಕೊರೊನಾ ವೈರಸ್ ಇಲ್ಲಿ ಹಬ್ಬುತ್ತಿದ್ದು, ರೋಗಿಗಳ ಇನ್ಕ್ಯೂಬೇಷನ್ ಪೀರಿಯಡ್ ಈ ಹಿಂದಿಗಿಂತ ಹೆಚ್ಚಾಗಿದೆ.

ಎರಡನೇ ಅಲೆ ಕಳವಳ

ಎರಡನೇ ಅಲೆ ಕಳವಳ

ಕಳೆದ ವರ್ಷಾಂತ್ಯದಲ್ಲಿ ವುಹಾನ್ ನಲ್ಲಿ ಕಂಡುಬಂದ ಕೋವಿಡ್-19 ಪಾಸಿಟಿವ್ ಪ್ರಕರಣಗಳಿಗೆ ಹೋಲಿಸಿದರೆ ಈಗ ಚೀನಾದ ಈಶಾನ್ಯ ಭಾಗದಲ್ಲಿ ಪತ್ತೆಯಾಗುತ್ತಿರುವ ಕೊರೊನಾ ವೈರಸ್ ಪ್ರಕರಣಗಳು ಕೊಂಚ ಭಿನ್ನವಾಗಿವೆ.

ಚೀನಾದ ಈಶಾನ್ಯ ಭಾಗದಲ್ಲಿರುವ ಜಿಲಿನ್ ಮತ್ತು ಹೀಲಾಂಗ್ ಜಿಯಾಂಗ್ ನಲ್ಲಿ ಕ್ಲಸ್ಟರ್ ಇನ್ಫೆಕ್ಷನ್ ಕಂಡುಬರುತ್ತಿದೆ. ಇದರಿಂದ ಚೀನಾದಲ್ಲಿ ಎರಡನೇ ಅಲೆಯ ಕಳವಳ ಆರಂಭವಾಗಿದೆ.

ಇನ್ಕ್ಯೂಬೇಷನ್ ಪೀರಿಯಡ್ ಜಾಸ್ತಿಯಾಗಿದೆ

ಇನ್ಕ್ಯೂಬೇಷನ್ ಪೀರಿಯಡ್ ಜಾಸ್ತಿಯಾಗಿದೆ

''ವುಹಾನ್ ನಲ್ಲಿ ಮೊದಲು ಕೊರೊನಾ ವೈರಸ್ ಔಟ್ ಬ್ರೇಕ್ ಆದಾಗ ರೋಗಿಗಳ ಇನ್ಕ್ಯೂಬೇಷನ್ ಪೀರಿಯಡ್ ಗೆ ಹೋಲಿಸಿದರೆ, ಈಗ ಜಿಲಿನ್ ಮತ್ತು ಹೀಲಾಂಗ್ ಜಿಯಾಂಗ್ ನಲ್ಲಿ ಪತ್ತೆಯಾಗಿರುವ ಕೋವಿಡ್-19 ರೋಗಿಗಳಲ್ಲಿ ಇನ್ಕ್ಯೂಬೇಷನ್ ಪೀರಿಯಡ್ ಜಾಸ್ತಿಯಿದೆ'' ಎಂದು ಕ್ರಿಟಿಕಲ್ ಕೇರ್ ಮೆಡಿಸಿನ್ ನ ಎಕ್ಸ್ ಪರ್ಟ್ ಕ್ಯೂ ಹೈಬೋ ಮಾಹಿತಿ ನೀಡಿದ್ದಾರೆ.

ಬಾವಲಿ, ಪ್ಯಾಂಗೋಲಿನ್ ಮಾಂಸ ಸೇವಿಸುವಂತಿಲ್ಲ: ಕಡೆಗೂ ಮಹತ್ವದ ಆದೇಶ ಹೊರಡಿಸಿದ ವುಹಾನ್ಬಾವಲಿ, ಪ್ಯಾಂಗೋಲಿನ್ ಮಾಂಸ ಸೇವಿಸುವಂತಿಲ್ಲ: ಕಡೆಗೂ ಮಹತ್ವದ ಆದೇಶ ಹೊರಡಿಸಿದ ವುಹಾನ್

ಗುಣಮುಖರಾಗಲು ಹೆಚ್ಚು ಸಮಯ

ಗುಣಮುಖರಾಗಲು ಹೆಚ್ಚು ಸಮಯ

ಸದ್ಯ ಈಶಾನ್ಯ ಚೀನಾದಲ್ಲಿನ ಸೋಂಕಿತರಿಗೆ ರೋಗದ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿ, ಕುಟುಂಬಗಳ ಜೊತೆಗೆ ಇರುತ್ತಾರೆ. ಇದರಿಂದ ಕ್ಲಸ್ಟರ್ ಇನ್ಫೆಕ್ಷನ್ಸ್ ಪತ್ತೆಯಾಗುತ್ತಿವೆ.

ಈಶಾನ್ಯ ಚೀನಾದಲ್ಲಿ ರೋಗಿಗಳ ದೇಹದಲ್ಲಿ ಹೆಚ್ಚು ದಿನಗಳ ಕಾಲ ವೈರಸ್ ಇರುವುದು ಗಮನಕ್ಕೆ ಬಂದಿದೆ. ಆದ್ದರಿಂದ, ಅಲ್ಲಿನ ರೋಗಿಗಳು ಸಂಪೂರ್ಣವಾಗಿ ಗುಣಮುಖರಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ.

ಈಶಾನ್ಯ ಚೀನಾದಲ್ಲಿ ಕಂಡುಬರುತ್ತಿರುವ ವೈರಸ್ ಬಹುಶಃ ವಿದೇಶದಿಂದ ಬಂದಿರಬಹುದು. ವೈರಸ್ ರೂಪಾಂತರ ಹೊಂದಿರುವ ಸಾಧ್ಯತೆಯೂ ಇದೆ ಎಂದಿದ್ದಾರೆ ಕ್ಯೂ ಹೈಬೋ.

ಚೀನಾದ ಅಂಕಿ-ಅಂಶ

ಚೀನಾದ ಅಂಕಿ-ಅಂಶ

ಚೀನಾದಲ್ಲಿನ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ : 82,971

ಚೀನಾದಲ್ಲಿ ಇಲ್ಲಿಯವರೆಗೂ ಕೊರೊನಾ ವೈರಸ್ ನಿಂದ ಮೃತಪಟ್ಟಿರುವವರ ಸಂಖ್ಯೆ : 4,634

ಚೀನಾದಲ್ಲಿ ಸದ್ಯ 82 ಸಕ್ರಿಯ ಕೊರೊನಾ ವೈರಸ್ ಸೋಂಕಿತರಿದ್ದಾರೆ.

ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣಗಳು 'ಸೊನ್ನೆ': ಹಿಂದಿದೆ ಕರಾಳ ಸತ್ಯ!ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣಗಳು 'ಸೊನ್ನೆ': ಹಿಂದಿದೆ ಕರಾಳ ಸತ್ಯ!

English summary
New Clusters of Coronavirus infections are found in North East China. Expert said the incubation period of the virus in patients in the North East China was longer than before.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X