ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಬಂದರೆ ಏನೇನಾಗುತ್ತದೆ?: ಅಧ್ಯಯನ ವರದಿ

|
Google Oneindia Kannada News

ಬೀಜಿಂಗ್, ಫೆಬ್ರವರಿ 11: ಚೀನಾದಲ್ಲಿ ಕೊರೊನಾ ವೈರಸ್‌ನಿಂದ ಮೃತಪಟ್ಟವರ ಸಂಖ್ಯೆ ಮಂಗಳವಾರ 1,016ಕ್ಕೆ ಏರಿದೆ. 2,478 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ ಒಟ್ಟಾರೆ ಸೋಂಕಿತರ ಸಂಖ್ಯೆ 42,638ಕ್ಕೆ ತಲುಪಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

ಈ ನಡುವೆ ಕೊರೊನಾ ವೈರಸ್ ಅತ್ಯಂತ ತೀವ್ರ ಪ್ರಮಾಣದಲ್ಲಿ ವ್ಯಾಪಿಸಿರುವ ಹುಬೆಯಿ ಪ್ರಾಂತ್ಯದ ಇಬ್ಬರು ಹಿರಿಯ ಅಧಿಕಾರಿಗಳನ್ನು ಅವರ ಹುದ್ದೆಯಿಂದ ವಜಾಗೊಳಿಸಲಾಗಿದೆ. ಹುಬೆಯಿ ಆರೋಗ್ಯ ಆಯೋಗದ ಕಾರ್ಯದರ್ಶಿ ಝಾಂಗ್ ಜಿನ್ ಮತ್ತು ಹುಬೆಯಿ ಪ್ರಾಂತೀಯ ಆರೋಗ್ಯ ಆಯೋಗದ ನಿರ್ದೇಶಕ ಲಿಂಗ್ ಯಿಂಗ್‌ಜಿ ಅವರನ್ನು ಹುದ್ದೆಯಿಂದ ಕಿತ್ತು ಹಾಕಲಾಗಿದೆ.

ಕೊರೊನಾ ಭೀತಿ: ರಾಮೇಶ್ವರಂನಿಂದ ಚೀನಾ ಪ್ರವಾಸಿ ವಾಪಸ್ಕೊರೊನಾ ಭೀತಿ: ರಾಮೇಶ್ವರಂನಿಂದ ಚೀನಾ ಪ್ರವಾಸಿ ವಾಪಸ್

ಒಂದು ವೇಳೆ ಈ ಮಾರಕ ವೈರಸ್‌ಅನ್ನು ಆದಷ್ಟು ಶೀಘ್ರದಲ್ಲಿಯೇ ಹತ್ತಿಕ್ಕಲು ಸಾಧ್ಯವಾಗದೇ ಹೋದರೆ ಜಗತ್ತಿನ ಮೂರನೇ ಎರಡರಷ್ಟು ಜನತೆಗೆ ಇದು ವ್ಯಾಪಿಸಬಹುದು ಎಂದು ಹಾಂಕಾಂಗ್ ಎಚ್ಚರಿಕೆ ನೀಡಿದೆ. ಚೀನಾಕ್ಕೆ ಭೇಟಿ ನೀಡದೆಯೇ ಇದ್ದವರಿಗೂ ಕೊರೊನಾ ವೈರಸ್ ಬಂದಿದೆ. ಚೀನಾದಲ್ಲಿ ನಮಗೆ ಕಾಣಿಸುತ್ತಿರುವುದು ಅಲ್ಪ ಪ್ರಮಾಣದ ಪರಿಸ್ಥಿತಿ ಮಾತ್ರ ಎಂದು ಅಧಿಕಾರಿಗಳು ಹೇಳಿದ್ದಾರೆ.

ವೈರಸ್ ಬಂದರೆ ಏನಾಗುತ್ತದೆ?

ವೈರಸ್ ಬಂದರೆ ಏನಾಗುತ್ತದೆ?

ನಾವಲ್ ಕೊರೊನಾ ವೈರಸ್‌ಗೆ ತುತ್ತಾದ ವುಹಾನ್‌ನಲ್ಲಿನ 138 ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಿ ಅಮೆರಿಕನ್ ವೈದ್ಯಕೀಯ ಸಂಸ್ಥೆಯ ನಿಯತಕಾಲಿಕೆ (ಜೆಎಎಂಎ) ಫೆ. 7ರಂದು ವರದಿ ಪ್ರಕಟಿಸಿದೆ. ಅದರ ಪ್ರಕಾರ ರೋಗಿಗಳಲ್ಲಿ ಜ್ವರ, ಆಯಾಸ ಮತ್ತು ಒಣಕೆಮ್ಮು ಅತಿ ಸಾಮಾನ್ಯವಾಗಿ ಕಾಣಿಸುವ ಲಕ್ಷಣಗಳು.

ಮೂರನೇ ಒಂದರಷ್ಟು ಭಾಗದ ರೋಗಿಗಳಲ್ಲಿ ಸ್ನಾಯು ನೋವು ಮತ್ತು ಉಸಿರಾಟದ ಸಮಸ್ಯೆ ಕಾಣಿಸಿದೆ. ಶೇ 10ರಷ್ಟು ರೋಗಿಗಳಲ್ಲಿ ವಾಂತಿ ಮತ್ತು ಅತಿಸಾರ ಸೇರಿದಂತೆ ವಿಲಕ್ಷಣ ಸಮಸ್ಯೆಗಳು ಕಂಡುಬಂದಿವೆ. ಅಧ್ಯಯನಕ್ಕೆ ಒಳಪಡಿಸಿದ ಹೆಚ್ಚಿನ ಪ್ರಕರಣಗಳು ತೀರಾ ಗಂಭೀರವಾದುದ್ದಲ್ಲ. ಈ ಎಲ್ಲ ರೋಗಿಗಳಿಗೂ ನ್ಯುಮೋನಿಯಾ ಸಾಮಾನ್ಯವಾಗಿ ಬಂದಿದೆ.

ವಯಸ್ಸಾದವರಿಗೆ ಸಮಸ್ಯೆ ಹೆಚ್ಚು

ವಯಸ್ಸಾದವರಿಗೆ ಸಮಸ್ಯೆ ಹೆಚ್ಚು

ಮೂರನೇ ಒಂದು ಭಾಗದಷ್ಟು ರೋಗಿಗಳು ತೀವ್ರ ಉಸಿರಾಟದ ಸಮಸ್ಯೆಗೆ ತುತ್ತಾಗಿದ್ದಾರೆ. ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುವುದು ಅನಿವಾರ್ಯವಾಗಿದೆ. ವಯಸ್ಸಾದವರು ಮತ್ತು ಮಧುಮೇಹ ಹಾಗೂ ರಕ್ತದೊತ್ತಡದಂತಹ ಗಂಭೀರ ಸಮಸ್ಯೆಗಳನ್ನು ಉಳ್ಳವರ ಪರಿಸ್ಥಿತಿ ಇನ್ನಷ್ಟು ಚಿಂತಾಜನಕವಾಗುತ್ತದೆ. ಈ ವೈರಸ್‌ಗೆ ತುತ್ತಾದವರಲ್ಲಿ 49-56 ವರ್ಷ ವಯಸ್ಸಿನವರೇ ಹೆಚ್ಚು. ಮಕ್ಕಳಲ್ಲಿ ಸೋಂಕು ತಗುಲಿರುವುದು ಬಹಳ ಕಡಿಮೆ.

ಆರಂಭದಲ್ಲಿ ಹಂತದಲ್ಲಿದೆ ಸೋಂಕು

ಆರಂಭದಲ್ಲಿ ಹಂತದಲ್ಲಿದೆ ಸೋಂಕು

ಸಂಸ್ಥೆಯು ಅಧ್ಯಯನಕ್ಕೆ ಒಳಪಡಿಸಿದ 138 ಜನರಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ. ಚೀನಾದ ಇತರೆ ಭಾಗಗಳಲ್ಲಿನ ಸೋಂಕಿತರಿಗೆ ಹೋಲಿಸಿದರೆ ಇಲ್ಲಿನ ಸಾವಿನ ಅಂದಾಜು ಪ್ರಮಾಣ ಹೆಚ್ಚಿದ್ದು, ಶೇ 4.3ರಷ್ಟಿದೆ. ಒಟ್ಟಾರೆ ಸೋಂಕು ತಗುಲಿದ ಪ್ರಕರಣವನ್ನು ಗಮನಿಸಿದಾಗ ಬಲಿಯಾದವರ ಸಂಖ್ಯೆ ಶೇ 2ರಷ್ಟಿದೆ. ಆದರೆ ವೈರಸ್ ಇನ್ನೂ ಆರಂಭದ ಹಂತದಲ್ಲಿ ವ್ಯಾಪಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸಾವಿನ ಪ್ರಮಾಣದ ಸರಾಸರಿ ಬದಲಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

ವೈರಸ್‌ಗೆ ಯುವಕರೂ ಬಲಿ

ವೈರಸ್‌ಗೆ ಯುವಕರೂ ಬಲಿ

ಯುವ ರೋಗಿಗಳೂ ಕೊರೊನಾಕ್ಕೆ ಬಲಿಯಾಗಿದ್ದಾರೆ. ಅಷ್ಟೇ ಅಲ್ಲ ಈ ಹಿಂದೆ ಯಾವುದೇ ಆರೋಗ್ಯ ಸಮಸ್ಯೆ ಎದುರಿಸದೆ ಇದ್ದ 30-50 ವರ್ಷದವರೂ ಜೀವ ಕಳೆದುಕೊಂಡಿದ್ದಾರೆ. ಇದಕ್ಕೆ ಪ್ರತಿರಕ್ಷಣಾ ಕೋಶಗಳು ಮತ್ತು ಪ್ರೋಟೀನ್‌ಗಳನ್ನು ಉತ್ಪಾದಿಸುವ ಅಂಗಗಳನ್ನು ಸೋಂಕು ನಾಶಪಡಿಸುತ್ತವೆ.

ಉಸಿರಾಟದ ತೊಂದರೆ

ಉಸಿರಾಟದ ತೊಂದರೆ

ಈ ಲಕ್ಷಣಗಳು ಕಂಡುಬಂದ ಐದು ದಿನಗಳ ಒಳಗೆ ಜನರು ಉಸಿರಾಟದ ಸಮಸ್ಯೆಗೆ ಒಳಗಾಗುತ್ತಾರೆ. ಎಂಟು ದಿನಗಳಲ್ಲಿ ಉಸಿರಾಟದ ತೊಂದರೆ ತೀವ್ರವಾಗುತ್ತದೆ. ಆದರೆ ಸಾವು ಯಾವ ಸಂದರ್ಭದಲ್ಲಿ ಆಗಬಹುದು ಎಂಬುದನ್ನು ಕಂಡುಕೊಳ್ಳಲು ಈ ಅಧ್ಯಯನಕ್ಕೆ ಸಾಧ್ಯವಾಗಿಲ್ಲ. ಜರ್ನಲ್ ಆಫ್ ಮೆಡಿಕಲ್ ವೈರಾಲಜಿ ಎಂಬ ಇನ್ನೊಂದು ನಿಯತಕಾಲಿಕೆಯು ಕಾಯಿಲೆ ಉಲ್ಬಣವಾದ 14 ದಿನಗಳಲ್ಲಿ ಸಾವು ಸಂಭವಿಸುತ್ತದೆ ಎಂದು ಹೇಳಿದೆ.

ಚೀನಾಕ್ಕೆ ಡಬ್ಲ್ಯೂಎಚ್‌ಓ ಭೇಟಿ

ಚೀನಾಕ್ಕೆ ಡಬ್ಲ್ಯೂಎಚ್‌ಓ ಭೇಟಿ

ಕೊರೊನಾ ವೈರಸ್, ಸಾರ್ಸ್ ವೈರಸ್‌ಗಿಂತಲೂ ಭೀಕರ ಸ್ವರೂಪ ತಾಳಿರುವುದರಿಂದ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್‌ಓ) ಪರಿಣತರ ತಂಡ ಚೀನಾಕ್ಕೆ ಭೇಟಿ ನೀಡಿದೆ. ಆರಂಭದಲ್ಲಿಯೇ ಎಚ್ಚೆತ್ತುಕೊಂಡು ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸದ ಡಬ್ಲ್ಯೂಎಚ್‌ಓ ವಿರುದ್ಧ ವ್ಯಾಪಕ ಟೀಕಾಪ್ರಹಾರ ಕೇಳಿಬಂದಿತ್ತು. ಕೊನೆಗೂ ತಂಡ ಅಲ್ಲಿಗೆ ಭೇಟಿ ನೀಡಿದ್ದು, ದೊಡ್ಡ ಮಟ್ಟದ ಅಂತಾರಾಷ್ಟ್ರೀಯ ವೈದ್ಯರ ತಂಡ ಅಲ್ಲಿಗೆ ತೆರಳಲಿದೆ ಎಂದು ತಿಳಿಸಿದೆ.

ಹಡಗಿನಲ್ಲಿ 135 ಮಂದಿಗೆ ವೈರಸ್

ಹಡಗಿನಲ್ಲಿ 135 ಮಂದಿಗೆ ವೈರಸ್

ಜಪಾನಿನ ಟೋಕಿಯೋದ ದಕ್ಷಿಣ ಬಂದರು ನಗರ ಯೊಕೊಹಮಾದಲ್ಲಿ ನಿಲ್ಲಿಸಲಾಗಿರುವ ಡೈಮಂಡ್ ಪ್ರಿನ್ಸೆಸ್ ಕ್ರೂಸ್ ಹಡಗಿನಲ್ಲಿ ಇರುವ ಪ್ರಯಾಣಿಕರು ಮತ್ತು ಸಿಬ್ಬಂದಿ ಪರಿಸ್ಥಿತಿ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದೆ. ಒಂದು ವಾರದಿಂದ ಹಡಗಿನಲ್ಲಿರುವ 3,700ಕ್ಕೂ ಅಧಿಕ ಜನರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದ್ದು, ಈಗಾಗಲೇ 135 ಮಂದಿಯಲ್ಲಿ ವೈರಸ್ ಇರುವುದು ಪತ್ತೆಯಾಗಿದೆ. ಈ ಹಡಗಿನಲ್ಲಿ ಭಾರತದ 160 ಸಿಬ್ಬಂದಿ ಮತ್ತು ಎಂಟು ಮಂದಿ ಪ್ರಯಾಣಿಕರೂ ಇದ್ದಾರೆ.

English summary
China has removed two officials after the death toll crossed 1,000 to coronavirus. What will happens if you infected by the virus?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X