ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡನೇ ಬಾರಿ ಕೊರೊನಾವೈರಸ್ ದೇಹ ಹೊಕ್ಕರೆ ಸಾವು ಪಕ್ಕಾ!?

|
Google Oneindia Kannada News

ಪ್ಯಾರಿಸ್, ಜುಲೈ.14: ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಪೈಕಿ ಭಾರತದಲ್ಲಿ ಶೇ.63ರಷ್ಟು ಸೋಂಕಿತರು ಸಾವಿನ ಮನೆಯಿಂದ ಬಚಾವ್ ಆಗಿದ್ದಾರೆ. ಕೊವಿಡ್-19 ಸೋಂಕಿನಿಂದ ಒಮ್ಮೆ ಗುಣಮುಖರಾದ ರೋಗಿಗಳಲ್ಲೇ ಮತ್ತೊಮ್ಮೆ ವೈರಸ್ ಹೊಕ್ಕರೆ ಸಾವು ನಿಶ್ಚಿತ ಎಂಬ ಅನುಮಾನ ಹುಟ್ಟಿಕೊಳ್ಳುತ್ತಿದೆ.

ಮನುಷ್ಯನ ದೇಹ ಸೇರಿದ ಕೊರೊನಾವೈರಸ್ ರೋಗನಿರೋಧಕ ಶಕ್ತಿಯ ಮೇಲೆ ದಾಳಿ ನಡೆಸುತ್ತದೆ ಎನ್ನುವುದು ಸಾಕಷ್ಟು ಸಂಶೋಧನೆಗಳಲ್ಲಿ ತಿಳಿದು ಬಂದಿದೆ. ಇದರ ನಡುವೆ ಸೋಂಕಿನಿಂದ ಗುಣಮುಖರಾದವರು ಆತಂಕಪಡುವಂತಾ ಆಘಾತಕಾರಿ ಅಂಶವೊಂದನ್ನು ಲಂಡನ್ ನ ಕಿಂಗ್ಸ್ ಕಾಲೇಜು ಸಂಶೋಧಕರು ನಡೆಸಿದ ಅಧ್ಯಯನ ವರದಿ ಹೊರ ಹಾಕಿದೆ.

ಕೊರೊನಾವೈರಸ್ ಸೋಂಕಿತರಲ್ಲಿ ಗೋಚರಿಸುವ ಲಕ್ಷಣಗಳು ಯಾವುವು?ಕೊರೊನಾವೈರಸ್ ಸೋಂಕಿತರಲ್ಲಿ ಗೋಚರಿಸುವ ಲಕ್ಷಣಗಳು ಯಾವುವು?

ಕೊರೊನಾವೈರಸ್ ಸೋಂಕಿನಿಂದ ಗುಣಮುಖರಾದ ವ್ಯಕ್ತಿಗಳಲ್ಲಿ ಮಾರಕ ವೈರಸ್ ಗಳ ವಿರುದ್ಧ ಹೋರಾಡುವ ಆಂಟಿಬಾಡಿ ಸೆಲ್ ಗಳ ಉತ್ಪಾದನೆ ಪ್ರಮಾಣದಲ್ಲಿ ಗಣನೀಯ ಕುಸಿತ ಕಂಡು ಬರುತ್ತದೆ ಎಂದು ಅಧ್ಯಯನ ವರದಿ ತಿಳಿಸಿದೆ.

ಮನುಷ್ಯನ ದೇಹದಲ್ಲಿ ಇರುವ ಆಂಟಿಬಾಡಿ ಎಂದರೇನು?

ಮನುಷ್ಯನ ದೇಹದಲ್ಲಿ ಇರುವ ಆಂಟಿಬಾಡಿ ಎಂದರೇನು?

ಮನುಷ್ಯನ ರಕ್ತ ಮತ್ತು ಪ್ಲಾಸ್ಮಾದಲ್ಲಿ ಬಿಳಿ ರಕ್ತಕಣಗಳು ಮತ್ತು ಕೆಂಪು ರಕ್ತಕಣಗಳ ಜೊತೆಗೆ ಆಂಟಿಬಾಡಿ ಸೆಲ್ ಕೂಡಾ ಇರುತ್ತದೆ. Y ಶೇಪ್ ನಲ್ಲಿ ಇರುವ ಈ ಆಂಟಿಬಾಡಿ ಮನುಷ್ಯರ ದೇಹವನ್ನು ಹೊಕ್ಕುವ ಅಪಾಯಕಾರಿ ರೋಗಾಣುಗಳ ವಿರುದ್ಧ ಹೋರಾಡುವ ಕಣಗಳನ್ನು ಬಿಡುಗಡೆ ಮಾಡುತ್ತದೆ. ಹೀಗೆ ಆಂಟಿಬಾಡಿ ಉತ್ಪಾದನೆ ಪ್ರಮಾಣವು ಕೊರೊನಾವೈರಸ್ ಸೋಂಕು ತಗುಲಿದ ಮತ್ತು ಸೋಂಕಿನಿಂದ ಗುಣಮುಖರಾದ ವ್ಯಕ್ತಿಗಳಲ್ಲಿ ಕಡಿಮೆಯಾಗಿರುವ ಬಗ್ಗೆ ಅಧ್ಯಯನದಿಂದ ತಿಳಿದು ಬಂದಿದೆ.

ರೋಗನಿರೋಧಕ ಶಕ್ತಿ ಉತ್ಪಾದನೆಯಲ್ಲೂ ಕುಸಿತ

ರೋಗನಿರೋಧಕ ಶಕ್ತಿ ಉತ್ಪಾದನೆಯಲ್ಲೂ ಕುಸಿತ

ಕೊರೊನಾವೈರಸ್ ಸೋಂಕಿನಿಂದ ಗುಣಮುಖರಾದ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿಯ ಪ್ರಮಾಣ ತಗ್ಗಿರುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಮತ್ತು ದೇಹದ ಪ್ಲಾಸ್ಮಾದಲ್ಲಿ ಇರುವ ಆಂಟಿಬಾಡಿ ಸೆಲ್ ಗಳ ಉತ್ಪಾದನೆ ಪ್ರಮಾಣ ಕಡಿಮೆಯಾಗುತ್ತದೆ. ಮೊದಲ ಹಂತದ ಅಧ್ಯಯನದಲ್ಲಿ ಶೇ.90ರಷ್ಟು ಕೊರೊನಾವೈರಸ್ ಗುಣಮುಖರಲ್ಲಿ ಈ ಆಂಟಿಬಾಡಿಗಳ ಪ್ರಮಾಣದಲ್ಲಿ ಹೇಗೆ ಬದಲಾವಣೆ ಆಗುತ್ತದೆ ಎನ್ನುವುದರ ಬಗ್ಗೆ ಸಂಶೋಧನೆ ನಡೆಸಲಾಗಿದೆ.

ಕೊರೊನೊವೈರಸ್ ಸೋಂಕಿತರ ಚಿಕಿತ್ಸೆಗೆ ಬೆಂಗಳೂರಿನಲ್ಲೇ 'ಲಸಿಕೆ' ಸಿದ್ಧ!ಕೊರೊನೊವೈರಸ್ ಸೋಂಕಿತರ ಚಿಕಿತ್ಸೆಗೆ ಬೆಂಗಳೂರಿನಲ್ಲೇ 'ಲಸಿಕೆ' ಸಿದ್ಧ!

ಸೋಂಕಿನಿಂದ ಗುಣಮುಖರಾದವರಲ್ಲಿ ಪ್ರಬಲ ಪ್ರತಿಕ್ರಿಯೆ

ಸೋಂಕಿನಿಂದ ಗುಣಮುಖರಾದವರಲ್ಲಿ ಪ್ರಬಲ ಪ್ರತಿಕ್ರಿಯೆ

ಕೊರೊನಾವೈರಸ್ ಸೌಮ್ಯ ಲಕ್ಷಣಗಳನ್ನು ಹೊಂದಿರುವವರ ರಕ್ತ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ವೈರಸ್ ವಿರುದ್ಧ ಪ್ರಬಲವಾಗಿ ಹೋರಾಡುವ ಆಂಟಿಬಾಡಿ ಪ್ರಮಾಣ ಕಂಡು ಬಂದಿದೆ. ಶೇ.60ರಷ್ಟು ಸೋಂಕಿತರಲ್ಲಿ ಮತ್ತು ಗುಣಮುಖರಾದ ವ್ಯಕ್ತಿಗಳಲ್ಲಿ ಕೆಲವು ವಾರಗಳವರೆಗೂ ಮಾರಕ ವೈರಸ್ ಗಳಿಗೆ ಪ್ರಬಲ ಪ್ರತಿಕ್ರಿಯೆ ನೀಡಿರುವುದು ಸಂಶೋಧನೆಯಲ್ಲಿ ತಿಳಿದು ಬಂದಿದೆ.

ಶೂನ್ಯ ಆಂಟಿಬಾಡಿ ಉತ್ಪಾದನೆ ಬಗ್ಗೆ ಉಲ್ಲೇಖ

ಶೂನ್ಯ ಆಂಟಿಬಾಡಿ ಉತ್ಪಾದನೆ ಬಗ್ಗೆ ಉಲ್ಲೇಖ

ಒಂದು ಬಾರಿ ಕೊರೊನಾವೈರಸ್ ಸೋಂಕಿಗೆ ಸಿಲುಕಿದರೆ ಮುಗಿಯಿತು ಕಥೆ. ಮೂರು ತಿಂಗಳ ನಂತರ ಗುಣಮುಖರಾದ ವ್ಯಕ್ತಿಗಳಲ್ಲಿ ಶೇ.16.7ರಷ್ಟು ಜನರಲ್ಲಿ ಮಾತ್ರ ಕೊವಿಡ್-19 ವಿರುದ್ಧ ಹೋರಾಡಬಲ್ಲ ಆಂಟಿಬಾಡಿ ಕಣಗಳನ್ನು ಉತ್ಪಾದಿಸುವ ಸಾಮರ್ಥ್ಯವಿರುತ್ತದೆ. ಬಹುತೇಕ ಜನರಲ್ಲಿ ಆಂಟಿಬಾಡಿ ಕಣಗಳನ್ನು ಉತ್ಪಾದಿಸುವ ಸಾಮರ್ಥ್ಯವು ಶೂನ್ಯ ಮಟ್ಟಕ್ಕೆ ತಲುಪಿರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಾಣ ಉಳಿಸಲು ಪರಿಣಾಮಕಾರಿ ಲಸಿಕೆಯು ಅಗತ್ಯ

ಪ್ರಾಣ ಉಳಿಸಲು ಪರಿಣಾಮಕಾರಿ ಲಸಿಕೆಯು ಅಗತ್ಯ

ಕೊರೊನಾವೈರಸ್ ಸೋಂಕಿತರಲ್ಲಿ ಸಾವಿನ ಪ್ರಮಾಣ ಸದ್ಯದ ಮಟ್ಟಿಗೆ ಕಡಿಮೆಯಿದೆ. ಆದರೆ ಪರಿಣಾಮಕಾರಿ ಲಸಿಕೆಯನ್ನು ಕಂಡು ಹಿಡಿಯುವ ನಿಟ್ಟಿನಲ್ಲಿ ಕೆಲಸಗಳು ನಡೆಯಬೇಕಿದೆ. ಸರ್ಕಾರಗಳು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಬೇಕಿದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಾವಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬರುವ ಅಪಾಯವಿದೆ. ಏಕೆಂದರೆ ಕೊರೊನಾವೈರಸ್ ಸೋಂಕಿತನು ಗುಣಮುಖ ಆದರೂ ಅದೊಂದು ಲಾಟರಿ ಟಿಕೆಟ್ ಹೊಡೆದಂತೆ ಅಷ್ಟೇ. ಬಹುದಿನಗಳ ಕಾಲ ಅದನ್ನು ಉಳಿಸಿಕೊಳ್ಳಲು ಆಗುವುದಿಲ್ಲ. ಬೆರಳೆಣಿಕೆಯಷ್ಟು ಜನರು ಮಾತ್ರ ಪುನರ್ಜನ್ಮ ಪಡೆದುಕೊಳ್ಳುವ ಅವಕಾಶವಿರುತ್ತದೆ ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.

English summary
Patients Who Recover From COVID-19 Infections May Lose Their Immunity To Reinfection Within Months, According To Research.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X