ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

CoronaVirus:ಚೀನಾದಲ್ಲಿ ಹುಟ್ಟಿದ ಸೋಂಕು ವಿಶ್ವಕ್ಕೆ ಹರಡಿದ್ದು ಹೇಗೆ?

|
Google Oneindia Kannada News

ನವದೆಹಲಿ, ಫೆಬ್ರವರಿ.10: ಕೊರೊನಾ ವೈರಸ್.. .ಚೀನಾದ ಹೃದಯ ಭಾಗ ವುಹಾನ್ ನಗರದಲ್ಲಿ ಮೊದಲಿಗೆ ಹುಟ್ಟಿಕೊಂಡ ಮಾರಕ ಸೋಂಕು ಇಂದು ಚೀನಾದ ಮಟ್ಟಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಜಾಗತಿಕ ಮಟ್ಟದಲ್ಲಿ ಭೀತಿ ಹುಟ್ಟು ಹಾಕುತ್ತಿರುವ ವೈರಸ್ ಹರಡುವುದಕ್ಕೆ ಕಾರಣ ಒಂದು ಎರಡಲ್ಲ.

ಥೈಲ್ಯಾಂಡ್, ಜಪಾನ್, ಹಾಂಕ್ ಕಾಂಗ್, ದಕ್ಷಿಣ ಕೊರಿಯಾ, ತೈವಾನ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಹಾಗೂ ಭಾರತ ಸೇರಿದಂತೆ 25ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವ ಬಗ್ಗೆ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಕೊರೊನಾ ವೈರಸ್: ಚೀನಾದಿಂದ 'ರೋಗ' ಆಮದು ಮಾಡಿಕೊಳ್ಳುತ್ತಿದೆಯಾ ಭಾರತ?ಕೊರೊನಾ ವೈರಸ್: ಚೀನಾದಿಂದ 'ರೋಗ' ಆಮದು ಮಾಡಿಕೊಳ್ಳುತ್ತಿದೆಯಾ ಭಾರತ?

ಸೋಮವಾರದ ಅಂಕಿ-ಅಂಶಗಳ ಪ್ರಕಾರ ಚೀನಾ ಒಂದರಲ್ಲೇ 910 ಜನರನ್ನು ಬಲಿ ತೆಗೆದುಕೊಂಡ ಕೊರೊನಾ ವೈರಸ್ ಪ್ರಪಂಚದ ಮೂಲೆ ಮೂಲೆಗೆ ಹರಡುವುದಕ್ಕೆ ಕಾರಣ ಏನು ಎಂಬುದರ ಬಗ್ಗೆ ಜರ್ಮನಿಯ ಹ್ಯೂಬೋಲ್ಟ್ ವಿಶ್ವವಿದ್ಯಾಲಯದ ರಾಬರ್ಟ್ ಕೋಚ್ ಇನ್ಸ್ ಟಿಟ್ಯೂಟ್ ಅಧ್ಯಯನದಲ್ಲಿ ತಿಳಿಸಿದೆ.

ಜರ್ಮನಿ ವಿವಿ ರಾಬರ್ಟ್ ಕೋಚ್ ಇನ್ಸ್ ಟಿಟ್ಯೂಟ್

ಜರ್ಮನಿ ವಿವಿ ರಾಬರ್ಟ್ ಕೋಚ್ ಇನ್ಸ್ ಟಿಟ್ಯೂಟ್

ಭಾರತವು ಸೇರಿದಂತೆ 25ಕ್ಕೂ ಅಧಿಕ ದೇಶಗಳಿಗೆ ಚೀನಾದಿಂದ ಕೊರೊನಾ ವೈರಸ್ ಎಂಬ ಸೋಂಕು ರಫ್ತು ಆಗುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇದನ್ನು ಸಾಬೀತುಪಡಿಸುವಂತಾ ಅಧ್ಯಯನವನ್ನು ಜರ್ಮನಿಯ ಹ್ಯೂಬೋಲ್ಟ್ ವಿಶ್ವವಿದ್ಯಾಲಯದ ರಾಬರ್ಟ್ ಕೋಚ್ ಇನ್ಸ್ ಟಿಟ್ಯೂಟ್ ನಡೆಸಿದೆ. ವಿವಿಧ ದೇಶಗಳಲ್ಲಿರುವ ಏರ್ ಪೋರ್ಟ್ ಗಳೇ ಸೋಂಕು ಹರಡುವಿಕೆಯ ಮುಖ್ಯ ಕಾರಣ ಎಂದು ಅಧ್ಯಯನದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸೋಮವಾರ 27 ವಿದೇಶಿಗರು ಚೀನಾದಲ್ಲಿ ಸಾವು

ಸೋಮವಾರ 27 ವಿದೇಶಿಗರು ಚೀನಾದಲ್ಲಿ ಸಾವು

ಸೋಮವಾರ ಒಂದೇ ದಿನದಲ್ಲಿ ಚೀನಾದಲ್ಲಿದ್ದ 27 ಮಂದಿ ವಿದೇಶಿಗರಿಗೆ ಮಾರಕ ಕೊರೊನಾ ವೈರಸ್ ತಗಲಿರುವ ಬಗ್ಗೆ ವರದಿಯಾಗಿದ್ದು, ಅಮೆರಿಕಾದ ಒಬ್ಬ ಮತ್ತು ಜಪಾನ್ ಮೂಲದ ಮತ್ತೊಬ್ಬ ಪ್ರಜೆಯು ಚೀನಾದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು, ಹಾಂಗ್ ಕಾಂಗ್ ನಲ್ಲಿ ಒಬ್ಬರು ಹಾಗೂ ಪಿಲಿಫೈನ್ಸ್ ನಲ್ಲಿ ಒಬ್ಬರು ಸೇರಿದಂತೆ ಇಬ್ಬರು ಮಾರಕ ರೋಗಕ್ಕೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

ಕೊರೊನಾ ವೈರಸ್: ಒಂದೇ ದಿನದಲ್ಲಿ ಸಾವಿನ ಮನೆ ಸೇರಿದ್ದು 100 ಮಂದಿಕೊರೊನಾ ವೈರಸ್: ಒಂದೇ ದಿನದಲ್ಲಿ ಸಾವಿನ ಮನೆ ಸೇರಿದ್ದು 100 ಮಂದಿ

ಸಾರ್ಸ್ ರೋಗವನ್ನೇ ಹಿಂದಿಕ್ಕಿದ ಕೊರೊನಾ ವೈರಸ್

ಸಾರ್ಸ್ ರೋಗವನ್ನೇ ಹಿಂದಿಕ್ಕಿದ ಕೊರೊನಾ ವೈರಸ್

2002-2003ರ ಸಾಲಿನಲ್ಲಿ ಚೀನಾ ಸಾರ್ಸ್ ರೋಗಕ್ಕೆ ತತ್ತರಿಸಿ ಹೋಗಿತ್ತು. ಅಂದು ಚೀನಾದಲ್ಲಿ ಮಾರಕ ರೋಗಕ್ಕೆ ನೂರಾರು ಮಂದಿ ಪ್ರಾಣ ಬಿಟ್ಟಿದ್ದರು. ಇಂದು ಕೊರೊನಾ ವೈರಸ್ ಅದರ ದಾಖಲೆಯನ್ನೂ ಹಿಂದಿಕ್ಕಿದೆ. ಚೀನಾದಲ್ಲಿ ಇದುವರೆಗೂ ಕೊರೊನಾ ವೈರಸ್ ಗೆ 910 ಮಂದಿ ಸಾವನ್ನಪ್ಪಿದ್ದು, 40,637 ಸೋಂಕಿತರು ಇದ್ದಾರೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಫೆಬ್ರವರಿ.01 ರಿಂದ ಫೆಬ್ರವರಿ.09ರವರೆಗೂ ಚೀನಾದಲ್ಲಿ ಕೊರೊನಾ ವೈರಸ್ ಪ್ರಮಾಣ ಯಾವ ಮಟ್ಟಕ್ಕೆ ಏರಿಕೆ ಕಂಡಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಚೀನಾದಲ್ಲಿ ಸೋಂಕಿತರ ಸಂಖ್ಯೆಯಲ್ಲೂ ಗಣನೀಯ ಏರಿಕೆ

ಚೀನಾದಲ್ಲಿ ಸೋಂಕಿತರ ಸಂಖ್ಯೆಯಲ್ಲೂ ಗಣನೀಯ ಏರಿಕೆ

ಚೀನಾದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ದಿನವೊಂದಕ್ಕೆ ಸಾವಿರ ಸಾವಿರ ಜನರಿಗೆ ಸೋಂಕು ತಗಲುತ್ತಿದ್ದು, ಕಳೆದ ಫೆಬ್ರವರಿ.01 ರಿಂದ ಫೆಬ್ರವರಿ.09ರವರೆಗೂ ದಿನಕ್ಕೆ ಅದೆಷ್ಟು ಜನರಿಗೆ ಸೋಂಕು ತಗಲಿರುವ ಬಗ್ಗೆ ಸ್ಪಷ್ಟವಾಗಿದೆ ಎಂಬುದನ್ನು ಈ ಪಟ್ಟಿಯಲ್ಲಿನ ಅಂಕಿ-ಅಂಶಗಳು ತಿಳಿಸುತ್ತವೆ.

ಭಾರತಕ್ಕೆ ಕೊರೊನಾ ವೈರಸ್ ಹೊತ್ತು ತಂದವರು 150 ಮಂದಿ!ಭಾರತಕ್ಕೆ ಕೊರೊನಾ ವೈರಸ್ ಹೊತ್ತು ತಂದವರು 150 ಮಂದಿ!

ವಿಶ್ವದೆಲ್ಲಡೆ ಹರಡುತ್ತಿರುವ ಅಂಟುರೋಗ ಕೊರೊನಾ

ವಿಶ್ವದೆಲ್ಲಡೆ ಹರಡುತ್ತಿರುವ ಅಂಟುರೋಗ ಕೊರೊನಾ

ಚೀನಾದಲ್ಲಿ ಮಾರಣಹೋಮ ನಡೆಸುತ್ತಿರುವ ಮಾರಕ ರೋಗ ಕೊರೊನಾ ವೈರಸ್ ಹೊರದೇಶಗಳನ್ನೂ ಬಿಟ್ಟಿಲ್ಲ. ನೆರೆಹೊರೆ ರಾಷ್ಟ್ರಗಳಿಗಂತೂ ಗಂಡಾಂತರ ತಪ್ಪಿದ್ದೇ ಅಲ್ಲ ಎಂದು ಜರ್ಮನಿಯ ಹ್ಯೂಬೋಲ್ಟ್ ವಿಶ್ವವಿದ್ಯಾಲಯದ ರಾಬರ್ಟ್ ಕೋಚ್ ಇನ್ಸ್ ಟಿಟ್ಯೂಟ್ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ. ನೇರವಾಗಿ ಇಲ್ಲವೇ ಪರೋಕ್ಷವಾಗಿ ಕೊರೊನಾ ವೈರಸ್ ಚೀನಾದಿಂದ ವಿಶ್ವದೆಲ್ಲಡೆ ರಫ್ತು ಆಗುತ್ತಿದೆ ಎಂದು ಅಧ್ಯಯನವು ತಿಳಿಸಿದೆ. ಏರ್ ಪೋರ್ಟ್ ಗಳ ಮೂಲಕ ಪ್ರಯಾಣಿಸುವ ಜನರಿಂದ ಜನರಿಗೆ ಸೋಂಕು ತಗಲುತ್ತಿದ್ದು, ಈ ಪಟ್ಟಿಯಲ್ಲಿ ಭಾರತಕ್ಕೆ 17ನೇ ಸ್ಥಾನದಲ್ಲಿದೆ.

ಏರ್ ಪೋರ್ಟ್ ಗಳೇ ಆಗುತ್ತಿವೆಯಾ ಗಂಡಾಂತರ ಕೇಂದ್ರ

ಏರ್ ಪೋರ್ಟ್ ಗಳೇ ಆಗುತ್ತಿವೆಯಾ ಗಂಡಾಂತರ ಕೇಂದ್ರ

ವಿಶ್ವದಲ್ಲೇ 4 ಸಾವಿರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿದ್ದು, ಸಾವಿರಾರು ವಿಮಾನಗಳು ದಿನನಿತ್ಯ ಸಂಚರಿಸುತ್ತವೆ. ಈ 4 ಸಾವಿರ ವಿಮಾನ ನಿಲ್ದಾಣಗಳು ಪರೋಕ್ಷವಾಗಿ 25 ಸಾವಿರ ವಿಮಾನ ನಿಲ್ದಾಣಗಳ ಮಾರ್ಗ ಬದಲಾವಣೆ ಕೇಂದ್ರಗಳಾಗಿವೆ. ಈ ಕೇಂದ್ರಗಳಲ್ಲೇ ಕೊರೊನಾ ವೈರಸ್ ಜಾಗತಿಕ ಮಟ್ಟದಲ್ಲಿ ಹರಡುತ್ತಿದೆ ಎಂದು ತಿಳಿದು ಬಂದಿದೆ. ಹೀಗೆ ಮಾರ್ಗ ಬದಲಾವಣೆ ಕೇಂದ್ರಗಳಂತೆ ಕೆಲಸ ಮಾಡುವ ಏರ್ ಪೋರ್ಟ್ ಗಳ ಅಂಕಿ-ಅಂಶವನ್ನು ಲೆಕ್ಕ ಹಾಕಿದಾಗ ಭಾರತವು ಈ ಪ್ರಮಾಣವು ಶೇ.0.219 ರಷ್ಟಿದೆ.

CoronaVirus: ಸೋಂಕಿತರು ಸರಿದಾಡಿದರೂ ಮೆಸೇಜ್, ತಂತ್ರಜ್ಞಾನದ ಎಫೆಕ್ಟ್!CoronaVirus: ಸೋಂಕಿತರು ಸರಿದಾಡಿದರೂ ಮೆಸೇಜ್, ತಂತ್ರಜ್ಞಾನದ ಎಫೆಕ್ಟ್!

ದೇಶದಲ್ಲಿರುವ ಈ ವಿಮಾನ ನಿಲ್ದಾಣಗಳಲ್ಲೇ ಅಪಾಯ!

ದೇಶದಲ್ಲಿರುವ ಈ ವಿಮಾನ ನಿಲ್ದಾಣಗಳಲ್ಲೇ ಅಪಾಯ!

ಅಂತಾರಾಷ್ಟ್ರೀಯ ಪ್ರಯಾಣಿಕರು ದೇಶದಿಂದ ದೇಶಕ್ಕೆ ತೆರಳುವ ಸಂದರ್ಭಗಳಲ್ಲಿ ಬೇರೆ ದೇಶದ ವಿಮಾನ ನಿಲ್ದಾಣಗಳಲ್ಲಿ ಇಳಿದು ಅಲ್ಲಿಂದ ಮಾರ್ಗ ಬದಲಾವಣೆ ಮಾಡುತ್ತಾರೆ. ಇಂಥ ಸಂದರ್ಭಗಳಲ್ಲೇ ಸೋಂಕಿತರು ಭಾರತದಲ್ಲಿ ಕೊರೊನಾ ವೈರಸ್ ಹರಡುವಂತೆ ಮಾಡುವ ಸಾಧ್ಯತೆಗಳಿವೆ. ಹೀಗೆ ಬಂದು ಹಾಗೆ ಹೋಗುವ ಪ್ರಯಾಣಿಕರ ಉಸಿರಾಟ, ಕೆಮ್ಮು, ಶೀತ, ಸ್ಪರ್ಶದಿಂದ ಸಹ ಪ್ರಯಾಣಿಕರಿಗೂ ಸೋಂಕು ಹರಡುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಿಮಾನ ನಿಲ್ದಾಣಗಳೇ ಕೊರೊನಾ ವೈರಸ್ ವಿನಿಮಯ ಕೇಂದ್ರ!

ವಿಮಾನ ನಿಲ್ದಾಣಗಳೇ ಕೊರೊನಾ ವೈರಸ್ ವಿನಿಮಯ ಕೇಂದ್ರ!

ವಿಮಾನ ನಿಲ್ದಾಣಗಳೇ ಕೊರೊನಾ ವೈರಸ್ ವಿನಿಮಯ ಕೇಂದ್ರಗಳಾಗುತ್ತಿವೆ ಎನ್ನುವುದನ್ನು ಇಲ್ಲಿ ಉದಾಹರಣೆ ಸಮೇತವಾಗು ವಿವರಿಸಲಾಗಿದೆ. ಈ ಮೇಲಿನ ನಕ್ಷೆಯನ್ನೊಮ್ಮೆ ಗಮನಿಸಿ ನೋಡಿ. ಇಲ್ಲಿ X ಎಂದರೆ ಚೀನಾ. ABC ಎಂಬುದು ಅಂತಾರಾಷ್ಟ್ರೀಯ ಪ್ರಯಾಣಿಕರ ಮಾರ್ಗ ಬದಲಾವಣೆಯ ವಿಮಾನ ನಿಲ್ದಾಣಗಳು. A ಎಂಬುದು ಒಂದು ಏರ್ ಪೋರ್ಟ್ ಆದರೆ, B ಇನ್ನೊಂದು ಏರ್ ಪೋರ್ಟ್ ಮತ್ತು C ಎಂಬುದು ಮೂರನೇ ವಿಮಾನ ನಿಲ್ದಾಣವಾಗಿದ್ದು, ಇಲ್ಲಿ ಪ್ರಯಾಣಿಕರು ತಮ್ಮ ಮಾರ್ಗ ಬದಲಾವಣೆ ಮಾಡಿಕೊಳ್ಳುತ್ತಾರೆ.

X ನಿಂದ ಹೊರಟ 100 ಕೊರೊನಾ ವೈರಸ್ ಸೋಂಕಿತ ಪ್ರಯಾಣಿಕರಲ್ಲಿ F ಎಂಬ ಪ್ರದೇಶಕ್ಕೆ 20 ಪ್ರಯಾಣಿಕರು G ಪ್ರದೇಶಕ್ಕೆ 20 ಹಾಗೂ G ಪ್ರದೇಶಕ್ಕೆ 20 ಪ್ರಯಾಣಿಕರು ತೆರಳಬೇಕಾಗಿರುತ್ತದೆ. ಈ 60 ಮಂದಿ ಪ್ರಯಾಣಿಕರು ತಮ್ಮ ಮೂಲ ಪ್ರದೇಶಕ್ಕೆ ತೆರಳುವ ಮೊದಲು 60 ಮಂದಿ ಪ್ರಯಾಣಿಕರು A ಎಂಬ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಮಾರ್ಗ ಬದಲಿಸಿಕೊಳ್ಳುತ್ತಾರೆ. A ಎಂಬ ವಿಮಾನ ನಿಲ್ದಾಣದಿಂದ 20 ಪ್ರಯಾಣಿಕರು ನೇರವಾಗಿ ತಮ್ಮ F ಪ್ರದೇಶವನ್ನು ತಲುಪುತ್ತಾರೆ. ಆದರೆ, ಉಳಿದ 40 ಮಂದಿ A ವಿಮಾನ ನಿಲ್ದಾಣದಿಂದ B ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ G ಪ್ರದೇಶಕ್ಕೆ 20 ಹಾಗೂ H ಪ್ರದೇಶಕ್ಕೆ 20 ಮಂದಿ ಪ್ರಯಾಣಿಕರು ತೆರಳುತ್ತಾರೆ.

ಇನ್ನೊಂದು ಭಾಗದಲ್ಲಿ ಚೀನಾದ A ಎಂಬ ವಿಮಾನ ನಿಲ್ದಾಣದಿಂದ 20 ಮಂದಿ ಕೊರೊನಾ ವೈರಸ್ ಸೋಂಕಿತ ಪ್ರಯಾಣಿಕರ ಪೈಕಿ 20 ಮಂದಿ D ಹಾಗೂ 20 ಮಂದಿ E ಎಂಬ ಪ್ರದೇಶಕ್ಕೆ ತೆರಳಬೇಕಾಗಿರುತ್ತದೆ. ಹೀಗೆ ಹೊರಡುವ ಮೊದಲು ಈ 40 ಮಂದಿ ಪ್ರಯಾಣಿಕರು C ಎಂಬ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಮಾರ್ಗವನ್ನು ಬದಲಾವಣೆ ಮಾಡುತ್ತಾರೆ. ಹೀಗೆ ಸೋಂಕಿತರು ಮಾರ್ಗ ಬದಲಾವಣೆ ಮಾಡುವ ಏರ್ ಪೋರ್ಟ್ ನಲ್ಲಿ ಕೊರೊನಾ ವೈರಸ್ ನ್ನು ಹರಡುವಂತೆ ಮಾಡುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದೇಶದಲ್ಲೂ ಮಾರ್ಗ ಬದಲಾವಣೆಯ ಏರ್ ಪೋರ್ಟ್ ಗಳಿವೆ

ದೇಶದಲ್ಲೂ ಮಾರ್ಗ ಬದಲಾವಣೆಯ ಏರ್ ಪೋರ್ಟ್ ಗಳಿವೆ

ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಕೂಡಾ ವಿದೇಶಿ ಪ್ರಯಾಣಿಕರ ಮಾರ್ಗ ಬದಲಾವಣೆ ಕೇಂದ್ರಗಳಲ್ಲಿ ಒಂದಾಗಿದೆ. ವಿಮಾನ ನಿಲ್ದಾಣದಲ್ಲಿ ಶೇ.0.066ರಷ್ಟು ಮಾರ್ಗ ಬದಲಿಸುವ ಪ್ರಯಾಣಿಕರು ಸಂಚರಿಸುತ್ತಾರೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಅಪಾಯಕಾರಿ ಏರ್ ಪೋರ್ಟ್ ಪಟ್ಟಿಯಲ್ಲಿದ್ದು, ಶೇ.0.034ರಷ್ಟು ಪ್ರಯಾಣಿಕರು ಇಲ್ಲಿ ಮಾರ್ಗ ಬದಲಾವಣೆ ಮಾಡುತ್ತಾರೆ. ಇನ್ನು, ಇದರ ಪ್ರಮಾಣವು ಕೋಲ್ಕತ್ತಾದ ಸುಭಾಶ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೇ.0.020ರಷ್ಟಿದೆ. ಈ ಪಟ್ಟಿಯಲ್ಲಿ ಬೆಂಗಳೂರು, ಚೆನ್ನೈ, ಹೈದ್ರಾಬಾದ್, ಕೊಚ್ಚಿ ವಿಮಾನ ನಿಲ್ದಾಣಗಳೂ ಕೂಡಾ ಇವೆ.

English summary
Coronavirus How To Spread Across 25 Counties Including India?. A Complete Report About Link Between International Airport And Infected Passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X