• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ + ಹೈ ಬಿಪಿ = ಸಾವು : ಇದು ಚೀನಿ ವೈದ್ಯರೇ ಹೇಳಿದ ಮಾತು!

|

ಚೀನಾ, ಮಾರ್ಚ್ 10: ಮಾರಣಾಂತಿಕ ಕೊರೊನಾ ವೈರಸ್ ನಿಂದ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ಚೀನಾದ ವುಹಾನ್ ನಲ್ಲಿ ಮೊದಲು ಕಾಣಿಸಿಕೊಂಡ ಡೆಡ್ಲಿ ಕೊರೊನಾ ವೈರಸ್ ವಿಶ್ವದ 120 ದೇಶಗಳಿಗೆ ಹಬ್ಬಿದೆ.

   Plea in Madras High Court against IPL matches in wake of COVID-19

   ಇಲ್ಲಿಯವರೆಗೂ ವಿಶ್ವದಾದ್ಯಂತ 119,389 ಕೊರೊನಾ ವೈರಸ್ ಪಾಸಿಟೀವ್ ಪ್ರಕರಣಗಳನ್ನು ದಾಖಲಾಗಿವೆ. ಆ ಪೈಕಿ 66,584 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ಕ್ಷಣದವರೆಗೂ ಒಟ್ಟು 4300 ಮಂದಿ ಸಾವನ್ನಪ್ಪಿದ್ದಾರೆ.

   ಬೆಂಗಳೂರಿನ ಟೆಕ್ಕಿ ಮಗಳಿಗೆ ಕೊರೊನಾ: ಶಾಲೆಯ 1700 ಸಹಪಾಠಿಗಳಿಗೆ ತಪಾಸಣೆ!

   ಚೀನಾ ಒಂದಲ್ಲೇ 3158 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಸತ್ತವರ ಪೈಕಿ ಬಹುತೇಕ ಮಂದಿಗೆ ಹೈಪರ್ ಟೆನ್ಷನ್ ಮತ್ತು ಹೈ ಬ್ಲಡ್ ಪ್ರೆಶರ್ (ತೀವ್ರ ರಕ್ತದೊತ್ತಡ) ಇತ್ತು ಎಂಬ ಮಾಹಿತಿಯನ್ನು ಚೀನಾದ ವೈದ್ಯರೇ ನೀಡಿದ್ದಾರೆ.

   ಹೈ ಬಿಪಿ ಇದ್ದರೆ ಬದುಕುವ ಚಾನ್ಸ್ ಕಮ್ಮಿ!

   ಹೈ ಬಿಪಿ ಇದ್ದರೆ ಬದುಕುವ ಚಾನ್ಸ್ ಕಮ್ಮಿ!

   ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದವರಿಗೆ ಹೈಪರ್ ಟೆನ್ಷನ್ ಅಥವಾ ಹೈ ಬಿಪಿ ಇದ್ದರೆ.. ಅಂಥವರು ಸಾವನ್ನಪ್ಪುವ ಸಾಧ್ಯತೆ ಹೆಚ್ಚು ಎಂದು ಚೀನಾದ ಆಸ್ಪತ್ರೆಯ ಐಸಿಯುನಲ್ಲಿ ಜನವರಿಯಿಂದ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಹೇಳಿದ್ದಾರೆ.

   ವೈದ್ಯರು ಗಮನಿಸಿರುವ ಪ್ರಕಾರ...

   ವೈದ್ಯರು ಗಮನಿಸಿರುವ ಪ್ರಕಾರ...

   ಹೈಬಿಪಿಗೂ ಕೊರೊನಾಗೂ ಇರುವ ಸಂಬಂಧದ ಬಗ್ಗೆ ಇಲ್ಲಿಯವರೆಗೂ ಸಂಶೋಧನೆ ನಡೆದಿಲ್ಲ. ಆದ್ರೆ, ವುಹಾನ್ ನಲ್ಲಿ ಕೊರೊನಾ ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಗಮನಿಸಿರುವ ಪ್ರಕಾರ, ಕೊರೊನಾ ಸೋಂಕಿತರಿಗೆ ಹೈಬಿಪಿ ಇದ್ದರೆ ಬದುಕುವ ಚಾನ್ಸಸ್ ಕಡಿಮೆ.

   ಅಚ್ಚರಿ ಸುದ್ದಿ: ಡೆಡ್ಲಿ ಕೊರೊನಾ ವಿರುದ್ಧ ಹೋರಾಡಿ ಸಾವನ್ನೇ ಗೆದ್ದ 100ರ ಅಜ್ಜ!

   ಹೈಪರ್ ಟೆನ್ಷನ್

   ಹೈಪರ್ ಟೆನ್ಷನ್

   ಡೆಡ್ಲಿ ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡಿದ್ದು ಚೀನಾದ ವುಹಾನ್ ನಲ್ಲಿ. ಇದೇ ವುಹಾನ್ ನಲ್ಲಿ ಜನವರಿ ತಿಂಗಳಲ್ಲಿ 170 ಮಂದಿ ಕೊರೊನಾ ವೈರಸ್ ನಿಂದ ಮೃತಪಟ್ಟಿದ್ದರು. ಸತ್ತವರ ಪೈಕಿ ಅರ್ಧಕ್ಕೂ ಹೆಚ್ಚು ಮಂದಿ ಹೈಪರ್ ಟೆನ್ಷನ್ ನಿಂದ ಬಳಲುತ್ತಿದ್ದರು ಎಂಬ ಮಾಹಿತಿಯನ್ನ ಚೀನಿ ವೈದ್ಯ ಡುಬಿನ್ ಬಹಿರಂಗ ಪಡಿಸಿದ್ದಾರೆ.

   ಚೀನಿ ವೈದ್ಯ ಏನಂತಾರೆ.?

   ಚೀನಿ ವೈದ್ಯ ಏನಂತಾರೆ.?

   ''ವಯಸ್ಸಾದವರು, ಅದರಲ್ಲೂ ತೀವ್ರ ರಕ್ತದೊತ್ತಡದಿಂದ ಬಳಲುತ್ತಿರುವವರ ಮೇಲೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಉಸಿರಾಟದ ತೊಂದರೆ ಇರುವವರನ್ನ ವೆಂಟಿಲೇಟರ್ ನಲ್ಲಿ ಇರಿಸಲಾಗಿದೆ. ಹಾಗ್ನೋಡಿದ್ರೆ, Invasive Ventilation ಗೆ ಬಹುಬೇಗ ಒಳಪಡಿಸಿದವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ'' ಎಂದಿದ್ದಾರೆ ಚೀನಿ ವೈದ್ಯ ಡುಬಿನ್.

   ಮ್ಯಾಜಿಕ್ ಬುಲೆಟ್ ಇಲ್ಲ

   ಮ್ಯಾಜಿಕ್ ಬುಲೆಟ್ ಇಲ್ಲ

   ''ವೈರಸ್ ಇನ್ಫೆಕ್ಷನ್ ಆದಾಗ, ವೈರಾಣುವನ್ನು ಕೊಲ್ಲಲು ಯಾವುದಾದರೂ ಔಷಧಿಯನ್ನು ನಿರೀಕ್ಷಿಸುತ್ತೇವೆ. ಆದ್ರೆ, ಅಂತಹ ಮ್ಯಾಜಿಕ್ ಬುಲೆಟ್ ಇಲ್ಲ'' ಅಂತ ಡುಬಿನ್ ಹೇಳಿದ್ದಾರೆ.

   ರೀ-ಇನ್ಫೆಕ್ಷನ್ ಆಗುತ್ತಿದೆ

   ರೀ-ಇನ್ಫೆಕ್ಷನ್ ಆಗುತ್ತಿದೆ

   ಇನ್ನೊಂದು ಆಘಾತಕಾರಿ ಸಂಗತಿ ಏನಂದರೆ, ಕೊರೊನಾ ವೈರಸ್ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿರುವವರ ಪೈಕಿ ಕೆಲವರಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡಿದೆ. ಕೊರೊನಾ ವೈರಸ್ ರೀ-ಇನ್ಫೆಕ್ಷನ್ ಕೂಡ ಚೀನಾದಲ್ಲಿ ಆತಂಕ ಸೃಷ್ಟಿಸಿದೆ.

   English summary
   Coronavirus: High Blood Pressure is major death risk says Chinese Doctor Du Bin.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X