ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿಲ್ಲರ್ ಕೊರೊನಾಗೆ ವಿಶ್ವದಾದ್ಯಂತ 24 ಸಾವಿರಕ್ಕೂ ಅಧಿಕ ಮಂದಿ ಸಾವು!

|
Google Oneindia Kannada News

ವಿಶ್ವದಾದ್ಯಂತ ಕೊರೊನಾ ವೈರಸ್ ನಿಂದ ಮೃತಪಟ್ಟವರ ಸಂಖ್ಯೆ ಇದೀಗ 24 ಸಾವಿರ ದಾಟಿದೆ. ಈವರೆಗೆ 24,090 ಮಂದಿ ಮಾರಣಾಂತಿಕ ಕೊರೊನಾ ವೈರಸ್ ಗೆ ಪ್ರಾಣ ಬಿಟ್ಟಿದ್ದಾರೆ.

ಪ್ರಪಂಚದಾದ್ಯಂತ 532,263 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಈ ಪೈಕಿ 124,349 ಜನ ಗುಣಮುಖರಾಗಿದ್ದಾರೆ. 19,635 ಮಂದಿಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.

ಕೊರೊನಾ ಕರಿನೆರಳು: ಸೋಂಕಿತರ ಸಂಖ್ಯೆಯಲ್ಲಿ ಚೀನಾ ಮೀರಿಸಿದ ಅಮೇರಿಕಾ!ಕೊರೊನಾ ಕರಿನೆರಳು: ಸೋಂಕಿತರ ಸಂಖ್ಯೆಯಲ್ಲಿ ಚೀನಾ ಮೀರಿಸಿದ ಅಮೇರಿಕಾ!

ಕೊರೊನಾ ವೈರಸ್ ತವರು ಚೀನಾಗಿಂತ ಇಟಲಿಯಲ್ಲಿ ಸಾವಿನ ಪ್ರಮಾಣ ಜಾಸ್ತಿಯಾಗಿದೆ. ಇನ್ನು ಚೀನಾಗಿಂತ ವಿಶ್ವದ ದೊಡ್ಡಣ್ಣ ಅಮೇರಿಕಾದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಳವಾಗಿದೆ. ಆ ಮೂಲಕ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಚೀನಾ ದೇಶವನ್ನು ಹಿಂದಕ್ಕೆ ತಳ್ಳಿ ಯು.ಎಸ್.ಎ ಮೊದಲ ಸ್ಥಾನಕ್ಕೇರಿದೆ.

ಕಳೆದ 24 ಗಂಟೆಗಳಲ್ಲಿ 2792 ಸಾವು

ಕಳೆದ 24 ಗಂಟೆಗಳಲ್ಲಿ 2792 ಸಾವು

ಡೆಡ್ಲಿ ಕೊರೊನಾ ವೈರಸ್ ನಿಂದಾಗಿ ಕಳೆದ 24 ಗಂಟೆಗಳಲ್ಲಿ 2792 ಮಂದಿ ಮೃತಪಟ್ಟಿದ್ದಾರೆ. ನಿನ್ನೆ ಒಂದೇ ದಿನ ಯು.ಎಸ್.ಎ ನಲ್ಲಿ 268, ಚೀನಾದಲ್ಲಿ 6, ಇಟಲಿಯಲ್ಲಿ 712, ಸ್ಪೇನ್ ನಲ್ಲಿ 718, ಜರ್ಮನಿಯಲ್ಲಿ 61, ಇರಾನ್ 157, ಫ್ರಾನ್ಸ್ ನಲ್ಲಿ 365, ಸ್ವಿಟ್ಜರ್ಲ್ಯಾಂಡ್ ನಲ್ಲಿ 39, ಯುಕೆನಲ್ಲಿ 115, ನೆದರ್ ಲ್ಯಾಂಡ್ ನಲ್ಲಿ 78 ಬೆಲ್ಜಿಯಂ ನಲ್ಲಿ 42, ಇಂಡೋನೇಷಿಯಾದಲ್ಲಿ 20, ಆಸ್ಟ್ರಿಯಾದಲ್ಲಿ 18, ಬ್ರೆಜಿಲ್ ನಲ್ಲಿ 18, ಪೋರ್ಚುಗಲ್ ನಲ್ಲಿ 17, ಟರ್ಕಿಯಲ್ಲಿ 16, ಸ್ವೀಡೆನ್ ನಲ್ಲಿ 15, ಐರ್ಲ್ಯಾಂಡ್ ನಲ್ಲಿ 10, ಭಾರತದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ.

5 ಲಕ್ಷ ದಾಟಿದ ಸೋಂಕಿತರ ಪ್ರಮಾಣ

5 ಲಕ್ಷ ದಾಟಿದ ಸೋಂಕಿತರ ಪ್ರಮಾಣ

ಚೀನಾದ ವುಹಾನ್ ನಗರದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ವೈರಸ್ ಸೋಂಕು ಇದೀಗ ವಿಶ್ವದಾದ್ಯಂತ ಹಬ್ಬಿದೆ. ಪರಿಣಾಮ ಈವರೆಗೆ ವಿಶ್ವದಾದ್ಯಂತ 532,263 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಮುಂಬರುವ ದಿನಗಳಲ್ಲಿ ಸೋಂಕಿತರ ಪ್ರಮಾಣ ಮತ್ತಷ್ಟು ಹೆಚ್ಚಳವಾಗಲಿದೆ.

21 ದಿನ ಲಾಕ್ ಡೌನ್ ಯಾಕೆ.? ಹಿಂದಿದೆ ವೈಜ್ಞಾನಿಕ ಕಾರಣ.!21 ದಿನ ಲಾಕ್ ಡೌನ್ ಯಾಕೆ.? ಹಿಂದಿದೆ ವೈಜ್ಞಾನಿಕ ಕಾರಣ.!

ಯೂರೋಪ್ ನಲ್ಲೇ ಹೆಚ್ಚು ಸಾವು

ಯೂರೋಪ್ ನಲ್ಲೇ ಹೆಚ್ಚು ಸಾವು

ಕೋವಿಡ್-19 ಕೇಂದ್ರ ಸ್ಥಾನ ಆಗಿರುವ ಯೂರೋಪ್ ನಲ್ಲಿ ಇಲ್ಲಿಯವರೆಗೂ 13,895 ಮಂದಿ ಡೆಡ್ಲಿ ಕೊರೊನಾ ವೈರಸ್ ನಿಂದ ಮೃತಪಟ್ಟಿದ್ದಾರೆ. ಇಟಲಿಯೊಂದಲ್ಲೇ 8215 ಜನ ಸಾವಿಗೀಡಾಗಿದ್ದಾರೆ. ಸ್ಪೇನ್ ನಲ್ಲಿ ಮರಣ ಮೃದಂಗ ಮುಂದುವರೆದಿದ್ದು, 4365 ಜನ ಪ್ರಾಣ ಬಿಟ್ಟಿದ್ದಾರೆ.

ಬಹುತೇಕ ದೇಶಗಳು ಸ್ತಬ್ಧ

ಬಹುತೇಕ ದೇಶಗಳು ಸ್ತಬ್ಧ

ಕೊರೊನಾ ವೈರಸ್ ಸೋಂಕಿನ ಭೀತಿಯಿಂದಾಗಿ ಇಟಲಿ, ಫ್ರಾನ್ಸ್, ಬೆಲ್ಜಿಯಂ, ಗ್ರೀಸ್, ಪೋರ್ಚುಗಲ್, ಸ್ಪೇನ್ ಸೇರಿದಂತೆ ಯೂರೋಪ್ ನ ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಆಗಿವೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಹಲವು ದೇಶಗಳು ಕೂಡ ಲಾಕ್ ಡೌನ್ ಮಂತ್ರ ಪಠಿಸುತ್ತಿದ್ದು, ಸಾರ್ವಜನಿಕ ಪ್ರದೇಶಗಳು ಭಣಭಣ ಎನ್ನುತ್ತಿವೆ.

ವಿಜ್ಞಾನಿಗಳಿಂದ ವಾರ್ನಿಂಗ್: ಮೇ ವೇಳೆಗೆ ಭಾರತದಲ್ಲಿ 13 ಲಕ್ಷ ಕೊರೊನಾ ಸೋಂಕಿತರು!ವಿಜ್ಞಾನಿಗಳಿಂದ ವಾರ್ನಿಂಗ್: ಮೇ ವೇಳೆಗೆ ಭಾರತದಲ್ಲಿ 13 ಲಕ್ಷ ಕೊರೊನಾ ಸೋಂಕಿತರು!

English summary
Coronavirus: Global Coronavirus Death Toll Surpasses 24,000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X