ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೂರ ಕೊರೊನಾ: 21 ಸಾವಿರ ಗಡಿ ದಾಟಿದ ಮರಣ ಪ್ರಮಾಣ

|
Google Oneindia Kannada News

ವಿಶ್ವದಾದ್ಯಂತ ಮಾರಣಾಂತಿಕ ಕೊರೊನಾ ವೈರಸ್ ಬಾಧಿಸುತ್ತಿದೆ. ದಿನದಿಂದ ದಿನಕ್ಕೆ ಕೊರೊನಾ ವೈರಸ್ ನಿಂದಾಗಿ ಸಾವಿನ ಪ್ರಮಾಣ ಏರುತ್ತಲೇ ಇದೆ. ಕೋವಿಡ್-19 ನಿಂದಾಗಿ ಕಳೆದ 24 ಗಂಟೆಗಳಲ್ಲಿ 2388 ಮಂದಿ ಮೃತಪಟ್ಟಿದ್ದಾರೆ. ಆ ಮೂಲಕ ಇಲ್ಲಿಯವರೆಗೂ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 21,295 ಆಗಿದೆ.

ಕೋವಿಡ್-19 ಕೇಂದ್ರ ಸ್ಥಾನ ಆಗಿರುವ ಯೂರೋಪ್ ನಲ್ಲಿ ಮರಣ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಇಟಲಿ, ಸ್ಪೇನ್, ಫ್ರಾನ್ಸ್ ನಲ್ಲಿ ಕೊರೊನಾ ವೈರಸ್ ಮರಣ ಮೃದಂಗ ಬಾರಿಸುತ್ತಲೇ ಇದೆ.

ಕೊರೊನಾ ರೌದ್ರನರ್ತನ: ಸಾವಿನ ಸಂಖ್ಯೆಯಲ್ಲಿ ಚೀನಾ ಮೀರಿಸಿದ ಇಟಲಿ!ಕೊರೊನಾ ರೌದ್ರನರ್ತನ: ಸಾವಿನ ಸಂಖ್ಯೆಯಲ್ಲಿ ಚೀನಾ ಮೀರಿಸಿದ ಇಟಲಿ!

ಕಳೆದ 24 ಗಂಟೆಗಳಲ್ಲಿ ಇಟಲಿಯಲ್ಲಿ 683, ಸ್ಪೇನ್ ನಲ್ಲಿ 656 ಫ್ರಾನ್ಸ್ ನಲ್ಲಿ 231 ಮಂದಿ ಕೊರೊನಾ ವೈರಸ್ ನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಯು.ಎಸ್.ಎ ನಲ್ಲೂ ಕೊರೊನಾ ಕಂಟಕದಿಂದ ಇಲ್ಲಿಯವರೆಗೂ 1032 ಮಂದಿ ಜೀವ ಬಿಟ್ಟಿದ್ದಾರೆ.

ಯಾವ ಯಾವ ದೇಶಗಳಲ್ಲಿ ಸಾವಿನ ಸಂಖ್ಯೆ ಹೆಚ್ಚು.?

ಯಾವ ಯಾವ ದೇಶಗಳಲ್ಲಿ ಸಾವಿನ ಸಂಖ್ಯೆ ಹೆಚ್ಚು.?

ಡೆಡ್ಲಿ ಕೊರೊನಾ ವೈರಸ್ ನಿಂದಾಗಿ ಚೀನಾದಲ್ಲಿ 3287 ಮಂದಿ ಮೃತಪಟ್ಟಿದ್ದರೆ, ಇಟಲಿಯಲ್ಲಿ 7503, ಸ್ಪೇನ್ ನಲ್ಲಿ 3647, ಇರಾನ್ ನಲ್ಲಿ 2077, ಫ್ರಾನ್ಸ್ ನಲ್ಲಿ 1331, ಯು.ಎಸ್.ಎ ನಲ್ಲಿ 1032 ಅಸುನೀಗಿದ್ದಾರೆ.

ಯಾವ ಯಾವ ದೇಶಗಳಲ್ಲಿ ಸೋಂಕು ಪೀಡಿತರ ಸಂಖ್ಯೆ ಹೆಚ್ಚು.?

ಯಾವ ಯಾವ ದೇಶಗಳಲ್ಲಿ ಸೋಂಕು ಪೀಡಿತರ ಸಂಖ್ಯೆ ಹೆಚ್ಚು.?

ಚೀನಾದಲ್ಲಿ 81,285, ಇಟಲಿಯಲ್ಲಿ 74,386, ಯು.ಎಸ್.ಎ ನಲ್ಲಿ 68,421, ಸ್ಪೇನ್ ನಲ್ಲಿ 49,515, ಜರ್ಮನಿಯಲ್ಲಿ 37,323, ಇರಾನ್ ನಲ್ಲಿ 27,017, ಫ್ರಾನ್ಸ್ ನಲ್ಲಿ 25,233, ಸ್ವಿಟ್ಜರ್ಲ್ಯಾಂಡ್ ನಲ್ಲಿ 10,897, ಯು.ಕೆ ನಲ್ಲಿ 9,529 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ.

ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣಗಳು 'ಸೊನ್ನೆ': ಹಿಂದಿದೆ ಕರಾಳ ಸತ್ಯ!ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣಗಳು 'ಸೊನ್ನೆ': ಹಿಂದಿದೆ ಕರಾಳ ಸತ್ಯ!

3 ಬಿಲಿಯನ್ ಗೂ ಅಧಿಕ ಮಂದಿ ಲಾಕ್ ಡೌನ್

3 ಬಿಲಿಯನ್ ಗೂ ಅಧಿಕ ಮಂದಿ ಲಾಕ್ ಡೌನ್

ಕೊರೊನಾ ವೈರಸ್ ಸೋಂಕು ಹರಡದಂತೆ ವಿವಿಧ ದೇಶಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಇಟಲಿ, ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಲಾಕ್ ಡೌನ್ ಮಂತ್ರ ಜಪಿಸುತ್ತಿವೆ. ಪರಿಣಾಮ, 3 ಬಿಲಿಯನ್ ಗೂ ಅಧಿಕ ಮಂದಿ ಮನೆಯಲ್ಲೇ ಉಳಿಯುವಂತಾಗಿದೆ.

ವಿಶ್ವದ ಅಂಕಿ-ಅಂಶ

ವಿಶ್ವದ ಅಂಕಿ-ಅಂಶ

ಇಲ್ಲಿಯವರೆಗಿನ ಒಟ್ಟು ಕೊರೊನಾ ಸೋಂಕು ಪೀಡಿತರು: 471,417

ಇಲ್ಲಿಯವರೆಗೂ ಕೊರೊನಾ ವೈರಸ್ ನಿಂದ ಸಾವನ್ನಪ್ಪಿದವರು: 21,295

ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾದವರು: 114,642

ಚಿಂತಾಜನಕ ಪರಿಸ್ಥಿತಿಯಲ್ಲಿ ಇರುವವರು: 14,792

ಅಲರ್ಟ್ ಪ್ಲೀಸ್: ಕೊರೊನಾ ವಿಚಾರದಲ್ಲಿ ಮತ್ತೊಂದು ಕರೆಗಂಟೆ ಮೊಳಗಿಸಿದ WHO!ಅಲರ್ಟ್ ಪ್ಲೀಸ್: ಕೊರೊನಾ ವಿಚಾರದಲ್ಲಿ ಮತ್ತೊಂದು ಕರೆಗಂಟೆ ಮೊಳಗಿಸಿದ WHO!

English summary
Coronavirus: Global Coronavirus Death Toll Surpasses 21,000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X