ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ನರಕದಿಂದ ಪಾರಾಗಲು, ನೆಮ್ಮದಿ ನೆಲೆಸಲು ಇನ್ನೂ 10 ವರ್ಷ ಬೇಕೆ?

|
Google Oneindia Kannada News

ಬ್ರಿಟನ್, ಏಪ್ರಿಲ್ 29: ಡೆಡ್ಲಿ ಕೊರೊನಾ ವೈರಸ್ ಸೋಂಕಿತರ ಪ್ರಮಾಣ ಈಗಾಗಲೇ 30 ಲಕ್ಷ ಗಡಿ ದಾಟಿದೆ. ಸಾವಿನ ಸಂಖ್ಯೆ ಕೂಡ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಿರುವಾಗಲೇ, ಇಡೀ ವಿಶ್ವಕ್ಕೆ ವ್ಯಾಪಿಸಿರುವ ಕೊರೊನಾಗೆ ಕೊನೆ ಎಂದು? ಎಂಬ ಪ್ರಶ್ನೆ ಎಲ್ಲರ ತಲೆಯಲ್ಲೂ ಕೊರೆಯುತ್ತಿದೆ.

Recommended Video

ಮಳೆಯಿಂದಾಗಿ ಬೆಂಗಳೂರಿನಲ್ಲಿ ಗೋಡೆ ಕುಸಿತ, ಆಸ್ತಿ ಪಾಸ್ತಿ ನಾಶ | Oneindia Kannada

ಕೊರೊನಾ ಅಟ್ಟಹಾಸ ನಿಯಂತ್ರಣಕ್ಕೆ ಬರುವುದು ಯಾವಾಗ.? ಈ ನರಕದಿಂದ ಪಾರಾಗಿ ಜಗತ್ತು ಮತ್ತೆ ಮೊದಲಿನಂತೆ ಆಗುವುದು ಯಾವಾಗ.? ವಿಶ್ವದಲ್ಲಿ ಮತ್ತೆ ನೆಮ್ಮದಿ ನೆಲೆಸಲು ಎಷ್ಟು ವರ್ಷ ಬೇಕು.? ಈ ಪ್ರಶ್ನೆಗಳಿಗೆ ನಿಖರವಾದ ಉತ್ತರ ಇಲ್ಲ. ಆದರೆ, ಕೋವಿಡ್-19ಗೆ ಪರಿಣಾಮಕಾರಿ ಲಸಿಕೆ ಸಿಗುವವರೆಗೂ ಯಾವುದೂ ಮತ್ತೆ ಮೊದಲಿನಂತಾಗಲು ಸಾಧ್ಯವೇ ಇಲ್ಲ ಎಂಬುದನ್ನು ತಳ್ಳಿಹಾಕುವಂತಿಲ್ಲ.

ವಿಜ್ಞಾನಿಯ ಶಾಕಿಂಗ್ ಹೇಳಿಕೆ: ಅಯ್ಯೋ ವಿಧಿಯೇ.. ಬದುಕು ಮೊದಲಿನಂತಾಗುವುದಿಲ್ಲವೇ? ವಿಜ್ಞಾನಿಯ ಶಾಕಿಂಗ್ ಹೇಳಿಕೆ: ಅಯ್ಯೋ ವಿಧಿಯೇ.. ಬದುಕು ಮೊದಲಿನಂತಾಗುವುದಿಲ್ಲವೇ?

ಈ ನಡುವೆ ''ಜಗತ್ತು ಮತ್ತೆ ಮೊದಲಿನಂತಾಗಲು ಕನಿಷ್ಟ ಅಂದರೂ 5 ರಿಂದ 10 ವರ್ಷ ಬೇಕಾಗಬಹುದು'' ಎಂದು ಇಂಟರ್ ನ್ಯಾಷನಲ್ ರೆಸ್ಕ್ಯೂ ಕಮಿಟಿಯ ಅಧ್ಯಕ್ಷ ಮತ್ತು ಸಿಇಒ ಡೇವಿಡ್ ಮಿಲಿಬ್ಯಾಂಡ್ ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಲಸಿಕೆಯನ್ನು ಬೇಗ ಕಂಡುಹಿಡಿಯುವಂತೆ ತಮ್ಮ ಸಂಸ್ಥೆ ಸಹಾಯ ಮಾಡಲಿದೆ ಎಂದೂ ತಿಳಿಸಿದ್ದಾರೆ.

ವಿಜ್ಞಾನಿಗಳ ಆಘಾತಕಾರಿ ಹೇಳಿಕೆ

ವಿಜ್ಞಾನಿಗಳ ಆಘಾತಕಾರಿ ಹೇಳಿಕೆ

ಕೊರೊನಾ ವೈರಸ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಪ್ರತಿ ವರ್ಷ ಅದು 'ಸೀಸನಲ್ ಫ್ಲೂ' ತರಹ ಮರಳಬಹುದು ಎಂದು ವಿಜ್ಞಾನಿಗಳು ಹೇಳಿದ ಬಳಿಕ, ''ಜಗತ್ತು ಮತ್ತೆ ಮೊದಲಿನಂತಾಗಲು 5-10 ವರ್ಷ ಬೇಕಾಗಬಹುದು'' ಎಂದು ಡೇವಿಡ್ ಮಿಲಿಬ್ಯಾಂಡ್ ಆತಂಕ ವ್ಯಕ್ತಪಡಿಸಿದ್ದಾರೆ.

1 ಬಿಲಿಯನ್ ಜನರಿಗೆ ಸೋಂಕು?

1 ಬಿಲಿಯನ್ ಜನರಿಗೆ ಸೋಂಕು?

ಡೇವಿಡ್ ಮಿಲಿಬ್ಯಾಂಡ್ ನೇತೃತ್ವದ ಇಂಟರ್ ನ್ಯಾಷನಲ್ ರೆಸ್ಕ್ಯೂ ಕಮಿಟಿ ಸದ್ಯ 34 ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಂಪೀರಿಯಲ್ ಕಾಲೇಜ್ ಆಫ್ ಲಂಡನ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಇಂಟರ್ ನ್ಯಾಷನಲ್ ರೆಸ್ಕ್ಯೂ ಕಮಿಟಿ ನಡೆಸಿರುವ ಸಂಶೋಧನೆಯೊಂದರ ಪ್ರಕಾರ, ವಿಶ್ವದಲ್ಲಿ 500 ಮಿಲಿಯನ್ ನಿಂದ 1 ಬಿಲಿಯನ್ ಜನರಿಗೆ ಕೊರೊನಾ ಸೋಂಕು ತಗುಲಲಿದ್ದು, 1.5 ಮಿಲಿಯನ್ ನಿಂದ 3 ಮಿಲಿಯನ್ ಜನರು ಸಾವನ್ನಪ್ಪುತ್ತಾರೆ ಎಂದು ಅಂದಾಜಿಸಲಾಗಿದೆ.

ಕೊರೊನಾ ತೊಲಗಿ ಮತ್ತೆ ಎಲ್ಲವೂ ಸಹಜ ಸ್ಥಿತಿಗೆ ಬರುವುದು ಯಾವಾಗ ಗೊತ್ತಾ.?ಕೊರೊನಾ ತೊಲಗಿ ಮತ್ತೆ ಎಲ್ಲವೂ ಸಹಜ ಸ್ಥಿತಿಗೆ ಬರುವುದು ಯಾವಾಗ ಗೊತ್ತಾ.?

ಲಸಿಕೆ ಬರಬೇಕು

ಲಸಿಕೆ ಬರಬೇಕು

''ಕೋವಿಡ್-19 ಗೆ ಪರಿಣಾಮಕಾರಿ ಲಸಿಕೆ ಸಿಗುವವರೆಗೂ, ಜಗತ್ತಿನಲ್ಲಿ ನೆಮ್ಮದಿ ನೆಲೆಸುವುದಿಲ್ಲ'' ಎಂದು ಕಳೆದ ವಾರವಷ್ಟೇ ಪ್ರೊಫೆಸರ್ ಕ್ರಿಸ್ ವಿಟ್ಟಿ ಹೇಳಿದ್ದರು.

ಲಕ್ಷಣ ಇಲ್ಲದ ಸೋಂಕು ಪೀಡಿತರಿಂದ ಆಪತ್ತು

ಲಕ್ಷಣ ಇಲ್ಲದ ಸೋಂಕು ಪೀಡಿತರಿಂದ ಆಪತ್ತು

''ಸಾರ್ಸ್' ನಂತೆ ಈ ನೋವೆಲ್ ಕೊರೊನಾ ವೈರಸ್ ಮಾಯವಾಗುವುದಿಲ್ಲ. ಯಾಕಂದ್ರೆ, ಕೋವಿಡ್-19 ರೋಗ ಹೊಂದಿದ್ದರೂ, ಎಷ್ಟೋ ಮಂದಿಯಲ್ಲಿ ರೋಗದ ಲಕ್ಷಣಗಳು ಕಾಣಿಸುತ್ತಿಲ್ಲ. ಅಂಥವರು ಸೈಲೆಂಟ್ ಆಗಿ ವೈರಸ್ ಅನ್ನು ಹರಡುತ್ತಲೇ ಇರುತ್ತಾರೆ'' ಎಂದು ಬೀಜಿಂಗ್ ನಲ್ಲಿ ಚೀನಾದ ವೈರಲ್ ಮತ್ತು ವೈದ್ಯಕೀಯ ಸಂಶೋಧಕರು ತಿಳಿಸಿದ್ದರು. ಮತ್ತೊಂದು ಬೆಚ್ಚಿ ಬೀಳುವ ಅಂಶ ಏನಂದರೆ, ಚೀನಾದಲ್ಲಿ ಈಗಲೂ ಡಜನ್ ಗಟ್ಟಲೆ ಲಕ್ಷಣಗಳು ಹೊಂದಿಲ್ಲದ ಸೋಂಕು ಪೀಡಿತರು ಪತ್ತೆಯಾಗುತ್ತಿದ್ದಾರೆ.

English summary
Coronavirus free world could be 10 years away says David Miliband.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X