ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಟ್ಟಿಗೆ ಊಟ ಮಾಡಿದ ಒಂದೇ ಕುಟುಂಬದ 9 ಮಂದಿಯಲ್ಲಿ ಕೊರೊನಾ ವೈರಸ್

|
Google Oneindia Kannada News

ಹಾಂಕಾಂಗ್, ಫೆಬ್ರವರಿ 10: ಒಟ್ಟಿಗೆ ಊಟ ಹಂಚಿಕೊಂಡು ಸೇವಿಸಿದ್ದ ಒಂದೇ ಕುಟುಂಬದ ಒಂಬತ್ತು ಮಂದಿಗೆ ಕೊರೊನಾ ವೈರಸ್ ತಗುಲಿರುವುದು ಆತಂಕ ಮೂಡಿಸಿದೆ.

ಹಾಕಾಂಗ್‌ನಲ್ಲಿ ಒಂದೇ ಕುಟುಂಬದ ಒಂಬತ್ತು ಮಂದಿಯಲ್ಲಿ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ಇವರೆಲ್ಲರೂ ಜನವರಿ 26ರಂದು ಹೊಸ ಚಾಂದ್ರಮಾನ ವರ್ಷದ ರಜೆಯ ಸಲುವಾಗಿ ಆಯೋಜಿಸಿದ್ದ ಹಾಟ್‌ಪಾಟ್‌ನಲ್ಲಿ 19 ಜನರೊಂದಿಗೆ ಊಟ ಹಂಚಿಕೊಂಡಿದ್ದರು. ಇವರಲ್ಲಿ ಇಬ್ಬರು ಸಂಬಂಧಿಕರು ಚೀನಾದಿಂದ ಬಂದಿದ್ದು, ಅವರು ತಿಂಗಳ ಕೊನೆಯಲ್ಲಿ ಚೀನಾಕ್ಕೆ ಮರಳಿದ್ದರು.

ಕೋಳಿಯಿಂದ ಕೊರೊನಾ ವೈರಸ್: ಸುಳ್ಳು ಸುದ್ದಿ ಹರಡುವವರ ವಿರುದ್ಧ ದೂರುಕೋಳಿಯಿಂದ ಕೊರೊನಾ ವೈರಸ್: ಸುಳ್ಳು ಸುದ್ದಿ ಹರಡುವವರ ವಿರುದ್ಧ ದೂರು

ಹಾಂಕಾಂಗ್‌ನಲ್ಲಿ ಆಸ್ಪತ್ರೆ ಸೌಲಭ್ಯಗಳು ಕಡಿಮೆ ಇರುವುದರಿಂದ ಕೊರೊನಾ ವೈರಸ್ ಸೋಂಕು ಪತ್ತೆ ಕಠಿಣವಾಗಿದೆ. ಶಂಕಿತ ಪ್ರಕರಣಗಳಲ್ಲಿನ ವ್ಯಕ್ತಿಗಳನ್ನು ಪ್ರತ್ಯೇಕಿಸುವುದು ಮತ್ತು ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟ ವ್ಯಕ್ತಿಗಳ ಜತೆಗೆ ಹತ್ತಿರದ ಸಂಪರ್ಕ ಹೊಂದಿದ್ದ ವ್ಯಕ್ತಿಗಳನ್ನು ಪತ್ತೆಹಚ್ಚುವುದು ಬಹಳ ಕಷ್ಟಕರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕುಟುಂಬಕ್ಕೇ ಹರಡಿತು ಕೊರೊನಾ

ಕುಟುಂಬಕ್ಕೇ ಹರಡಿತು ಕೊರೊನಾ

24 ವರ್ಷದ ವ್ಯಕ್ತಿ ಮತ್ತು ಅವರ 91 ವರ್ಷದ ಅಜ್ಜಿ ಇಬ್ಬರಲ್ಲಿ ವೈರಸ್ ಇರುವುದು ಮೊದಲು ದೃಢಪಟ್ಟಿತ್ತು. ಬಳಿಕ ಆತನ ತಂದೆ, ತಾಯಿ, ಇಬ್ಬರು ಚಿಕ್ಕಮ್ಮಂದಿರು ಮತ್ತು ಮೂವರು ಇತರೆ ಸಂಬಂಧಿಕರಲ್ಲಿಯೂ ವೈರಸ್ ಕಂಡುಬಂದಿದೆ. ಇವರೆಲ್ಲರೂ 22-68 ವರ್ಷದವರು ಎಂದು ಹಾಂಕಾಂಗ್‌ನ ಆರೋಗ್ಯ ರಕ್ಷಣಾ ಕೇಂದ್ರದ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಹಾಟ್‌ಪಾಟ್‌ ಊಟ

ಹಾಟ್‌ಪಾಟ್‌ ಊಟ

ಸ್ಟೀಮ್‌ಬೋಟ್ ಎಂದೂ ಕರೆಯಲಾಗುವ ಹಾಟ್‌ಪಾಟ್‌ನಲ್ಲಿ ಸಮುದಾಯದ ಜನರು ಒಂದುಗೂಡಿ ಬಗೆಬಗೆಯ ಪದಾರ್ಥಗಳನ್ನು ಸಿದ್ಧಪಡಿಸಿಕೊಂಡು ಒಟ್ಟಿಗೆ ಸೇವಿಸುತ್ತಾರೆ. ಈ ಸಂಪ್ರದಾಯ ಹಾಕಾಂಗ್‌ನಲ್ಲಿ ಹೆಚ್ಚು ಚಾಲ್ತಿಯಲ್ಲಿದೆ. ಹಾಕಾಂಗ್‌ನಲ್ಲಿ ಕೊರೊನಾ ವೈರಸ್‌ನಿಂದ ಒಬ್ಬರು ಮೃತಪಟ್ಟಿದ್ದಾರೆ.

ಕೊರೊನಾ ವೈರಸ್‌ ಹರಡಲು ಪ್ಯಾಂಗೋಲಿನ್ ಕಾರಣ?ಕೊರೊನಾ ವೈರಸ್‌ ಹರಡಲು ಪ್ಯಾಂಗೋಲಿನ್ ಕಾರಣ?

ಮನೆಯಲ್ಲಿಯೇ ಇದ್ದ ವ್ಯಕ್ತಿಯಲ್ಲಿಯೂ ಕೊರೊನಾ

ಮನೆಯಲ್ಲಿಯೇ ಇದ್ದ ವ್ಯಕ್ತಿಯಲ್ಲಿಯೂ ಕೊರೊನಾ

ಹಾಂಕಾಂಗ್‌ನಲ್ಲಿ ಇದುವರೆಗೂ 36 ಮಂದಿಯಲ್ಲಿ ಕೊರೊನಾ ವೈರಸ್ ಇರುವುದು ಖಾತರಿಯಾಗಿದೆ. ಭಾನುವಾರ ಹತ್ತು ಹೊಸ ಪ್ರಕರಣಗಳು ದೃಢಪಟ್ಟಿವೆ. ಜ. 9ರಿಂದ ಹಾಕಾಂಗ್‌ನಿಂದ ಎಲ್ಲಿಗೂ ಹೋಗದ, ಬಹುತೇಕ ಸಮಯವನ್ನು ಮನೆಯಲ್ಲಿಯೇ ಕಳೆದಿದ್ದ 70 ವರ್ಷದ ವೃದ್ಧರೊಬ್ಬರಲ್ಲಿ ಕೂಡ ಕೊರೊನಾ ಕಂಡುಬಂದಿದೆ. ವೈರಸ್ ವ್ಯಾಪಿಸದಂತೆ ತಡೆಯಲು ಹಾಂಕಾಂಗ್ ಅನ್ನು ಅದರ ಚೀನಾ ಮುಖ್ಯಭೂಮಿಯಿಂದ ಪ್ರತ್ಯೇಕಿಸಲು ಗಡಿಗಳಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಹಾಂಕಾಂಗ್‌ನಲ್ಲಿ ಪ್ರತಿಭಟನೆಗಳು ನಡೆದಿವೆ.

ಹಡಗಿನ ಸಿಬ್ಬಂದಿ ಬಿಡುಗಡೆ

ಹಡಗಿನ ಸಿಬ್ಬಂದಿ ಬಿಡುಗಡೆ

ಕೊರೊನಾ ಭೀತಿಯಿಂದ ಹಾಂಕಾಂಗ್‌ ಬಂದರಿನಲ್ಲಿ ನಾಲ್ಕು ದಿನಗಳವರೆಗೆ ನಿಲ್ಲಿಸಿದ್ದ ವರ್ಲ್ಡ್ ಡ್ರೀಮ್ ಕ್ರೂಸ್ ಹಡಗಿನ 1,800 ಸಿಬ್ಬಂದಿಯನ್ನು, ತೀವ್ರ ತಪಾಸಣೆಯ ಬಳಿಕ ಭಾನುವಾರ ಬಿಡುಗಡೆ ಮಾಡಲಾಗಿದೆ. ಈ ಹಡದಿನ ಹಿಂದಿನ ಟ್ರಿಪ್‌ನಲ್ಲಿ ಎಂಟು ಪ್ರಯಾಣಿಕರಲ್ಲಿ ಕೊರೊನಾ ವೈರಸ್ ಕಂಡುಬಂದಿತ್ತು. ಹೀಗಾಗಿ ಎರಡನೆಯ ಬಾರಿ ಪ್ರಯಾಣಿಕರನ್ನು ಹೊತ್ತು ತಂದ ಹಡಗಿನ ಎಲ್ಲ ಸಿಬ್ಬಂದಿಯನ್ನೂ ನಾಲ್ಕ ದಿನಗಳ ಕಾಲ ಸಂಪೂರ್ಣ ತಪಾಸಣೆಗೆ ಒಳಪಡಿಸಲಾಗಿದ್ದು, ಅವರಲ್ಲಿ ವೈರಸ್ ಕಾಣಿಸದ ಕಾರಣ ಬಿಡುಗಡೆ ಮಾಡಲಾಗಿದೆ.

Fact Check: 20,000 ಕೊರೊನಾ ವೈರಸ್ ರೋಗಿಗಳ ಹತ್ಯೆಗೆ ಚೀನಾ ನಿರ್ಧಾರ ಸತ್ಯವೇ?Fact Check: 20,000 ಕೊರೊನಾ ವೈರಸ್ ರೋಗಿಗಳ ಹತ್ಯೆಗೆ ಚೀನಾ ನಿರ್ಧಾರ ಸತ್ಯವೇ?

English summary
Nine members of a family in Hong Kong are found positive in Coronavirus, after sharing a hotpot meal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X