ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾ To ಭೂತಾನ್: ಇದು ಕೊರೊನಾ ವೈರಸ್ ಹೊತ್ತು ತಂದವರ ಕಥೆ

|
Google Oneindia Kannada News

ಭೂತಾನ್, ಮಾರ್ಚ್.06: ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ಭಾರತವಷ್ಟೇ ಅಲ್ಲ. ನೆರೆಯ ರಾಷ್ಟ್ರಗಳಿಗೂ ಲಗ್ಗೆ ಇಟ್ಟಿದೆ. ಭೂತಾನ್ ನಲ್ಲಿ ಶುಕ್ರವಾರ ಮೊದಲ ಕೊರೊನಾ ವೈರಸ್ ಸೋಂಕಿತ ಪ್ರಕರಣವು ಪತ್ತೆಯಾಗಿದೆ.

ಕಳೆದ ಮಾರ್ಚ್.02ರಂದು ಅಮೆರಿಕಾದಿಂದ ಭೂತಾನ್ ಗೆ ತೆರಳಿದ 76 ವರ್ಷದ ವೃದ್ಧನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಕೊರೊನಾ ವೈರಸ್ ತಗಲಿರುವುದು ಸ್ಪಷ್ಟವಾಗಿದೆ ಎಂದು ಭೂತಾನ್ ಪ್ರಧಾನಮಂತ್ರಿ ಲೊತಯ್ ಶೇರಿಂಗ್ ಸ್ಪಷ್ಟನೆ ನೀಡಿದ್ದಾರೆ.

ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕೊರೊನಾ ವೈರಸ್ ಬಗ್ಗೆ ವಿಜ್ಞಾನಿಗಳು ಹೇಳುವುದೇನು?ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕೊರೊನಾ ವೈರಸ್ ಬಗ್ಗೆ ವಿಜ್ಞಾನಿಗಳು ಹೇಳುವುದೇನು?

ಅಮೆರಿಕಾದಿಂದ 59 ವರ್ಷದ ತನ್ನ ಪತ್ನಿ ಜೊತೆಗೆ ವೃದ್ಧರೊಬ್ಬರು ಭೂತಾನ್ ಗೆ ತೆರಳಿದ್ದರು. ಇವರ ಜೊತೆಗೆ ಎಂಟು ಮಂದಿ ಸಹ ಪ್ರಯಾಣಿಕರಿದ್ದು, 59 ವರ್ಷದ ವೃದ್ಧೆ ಹಾಗೂ 8 ಮಂದಿ ಸಹಪ್ರಯಾಣಿಕರನ್ನು ಕೂಡಾ ಕೊರೊನಾ ವೈರಸ್ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ.

Coronavirus: First Infected Case Reported In Bhutan

ಮಾ.05ರಂದು ಸೋಂಕು ತಗಲಿರುವುದು ಸ್ಪಷ್ಟ:

ಭೂತಾನ್ ನಲ್ಲಿ ಮಾರ್ಚ್.05ರ ಅಮೆರಿಕಾದಿಂದ ಆಗಮಿಸಿದ 76 ವರ್ಷದ ವೃದ್ಧನಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ವೈದ್ಯಕೀಯ ತಪಾಸಣೆ ವೇಳೆ ಪತ್ತೆಯಾಗಿದೆ. ಈ ಬಗ್ಗೆ ಸ್ವತಃ ಭೂತಾನ್ ಪ್ರಧಾನಮಂತ್ರಿ ಲೊತಯ್ ಶೇರಿಂಗ್ ಟ್ವೀಟ್ ಮಾಡಿದ್ದಾರೆ.

Coronavirus: First Infected Case Reported In Bhutan

ಇನ್ನು, ಇದುವರೆಗೂ ಚೀನಾದಲ್ಲಿ ಕೊರೊನಾ ವೈರಸ್ ಗೆ 3,383 ಮಂದಿ ಬಲಿಯಾಗಿದ್ದರೆ, 98,370 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನು, ಕೊರೊನಾದಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಇಟಲಿ ಎರಡನೇ ಸ್ಥಾನದಲ್ಲಿದೆ. ಈವರೆಗೂ ಇಟಲಿಯಲ್ಲಿ 148 ಮಂದಿ ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

English summary
Coronavirus: First Infected Case Reported In Bhutan. Now More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X