ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕೊಲ್ಲಲು ಪಾಯ್ಸನ್ ಸೇವಿಸಿ ಪ್ರಾಣ ಬಿಟ್ಟ ನೂರಾರು ಮಂದಿ!

|
Google Oneindia Kannada News

ಟೆಹ್ರಾನ್, ಮಾರ್ಚ್ 28: ವಿಶ್ವದಾದ್ಯಂತ ತಲ್ಲಣ ಸೃಷ್ಟಿಸಿರುವ ಡೆಡ್ಲಿ ಕೊರೊನಾ ವೈರಸ್ ನಿಂದಾಗಿ ಆಗುತ್ತಿರುವ ಅನಾಹುತಗಳು ಒಂದೆರಡಲ್ಲ. ಕೋವಿಡ್-19 ಗೆ ತುತ್ತಾಗಿ ಸಾವಿರಾರು ಮಂದಿ ಸಾವಿಗೀಡಾಗುತ್ತಿದ್ದರೆ, ಇತ್ತ ಕೊರೊನಾ ವೈರಸ್ ನ ಹತ್ತಿಕ್ಕಲು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳಿಂದ ಅನೇಕರು ಜೀವ ಬಿಡುತ್ತಿದ್ದಾರೆ.

Recommended Video

Kannadiga Deeksha talks about Corona from Dubai | Dubai Deeksha | Oneindia kannada

ಸದ್ಯ ಇರಾನ್ ನಲ್ಲೂ ಇಂಥದ್ದೇ ಘಟನೆಯೊಂದು ನಡೆದಿದೆ. ಮೆಥನಾಲ್ (ಪಾಯ್ಸನ್) ಮಿಶ್ರಿತ ಆಲ್ಕೋಹಾಲ್ ಸೇವಿಸಿದರೆ ಕೊರೊನಾ ವೈರಸ್ ನ ಕೊಲ್ಲಬಹುದು ಎಂಬ ವದಂತಿಗೆ ಓಗೊಟ್ಟು ಇರಾನ್ ನಲ್ಲಿ ಮುನ್ನೂರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಜನ ಅನಾರೋಗ್ಯಕ್ಕೀಡಾಗಿದ್ದಾರೆ.

21 ದಿನ ಲಾಕ್ ಡೌನ್ ಯಾಕೆ.? ಹಿಂದಿದೆ ವೈಜ್ಞಾನಿಕ ಕಾರಣ.!21 ದಿನ ಲಾಕ್ ಡೌನ್ ಯಾಕೆ.? ಹಿಂದಿದೆ ವೈಜ್ಞಾನಿಕ ಕಾರಣ.!

ಕೊರೊನಾ ವೈರಸ್ ನಂತೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳು ಕೂಡ 'ಡೆಡ್ಲಿ' ಅನ್ನೋದಕ್ಕೆ ಇದಕ್ಕಿಂತ ಉತ್ತಮ ನಿದರ್ಶನಗಳು ಬೇಕಾ.?

ಸುಳ್ಳು ಸುದ್ದಿ ದಾಳಿ

ಸುಳ್ಳು ಸುದ್ದಿ ದಾಳಿ

''ವಿಸ್ಕಿ ಜೊತೆಗೆ ಹನಿ ಮಿಕ್ಸ್ ಮಾಡಿ ಬ್ರಿಟಿಷ್ ಸ್ಕೂಲ್ ಟೀಚರ್ ಕೋವಿಡ್-19 ನಿಂದ ಗುಣಮುಖರಾಗಿದ್ದಾರೆ. ಹೈ-ಪ್ರೂಫ್ ಆಲ್ಕೋಹಾಲ್ ಸೇವಿಸಿದರೆ ಕೊರೊನಾ ವೈರಸ್ ನ ಕೊಲ್ಲಬಹುದು'' ಎಂಬ ಸುಳ್ಳು ಸುದ್ದಿಗಳು ಇರಾನಿಯನ್ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಶೇರ್ ಆಗಿವೆ. ಇದನ್ನೇ ನಂಬಿಕೊಂಡು ಹಲವು ಮಂದಿ ಮೆಥನಾಲ್ ಮಿಶ್ರಿತ ಆಲ್ಕೋಹಾಲ್ ಸೇವಿಸಿದ್ದರು.

ಜೀರ್ಣಾಂಗ ವ್ಯವಸ್ಥೆ ಶುಚಿಯಾಗುತ್ತದೆ

ಜೀರ್ಣಾಂಗ ವ್ಯವಸ್ಥೆ ಶುಚಿಯಾಗುತ್ತದೆ

ಆಲ್ಕೋಹಾಲ್ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆ ಸಂಪೂರ್ಣವಾಗಿ ಶುಚಿಯಾಗುತ್ತದೆ ಎಂಬ ಭ್ರಮೆಯಿಂದ ಮೆಥನಾಲ್ ಮಿಶ್ರಿತ ಆಲ್ಕೋಹಾಲ್ ಸೇವಿಸಿ ಇರಾನ್ ನಲ್ಲಿ 300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸಾವಿರಕ್ಕೂ ಅಧಿಕ ಮಂದಿ ಅನಾರೋಗ್ಯಕ್ಕೆ ತುತ್ತಾಗಿ, ನರಳುತ್ತಿದ್ದಾರೆ.

ಕೊರೊನಾ ಕರಿನೆರಳು: ಸೋಂಕಿತರ ಸಂಖ್ಯೆಯಲ್ಲಿ ಚೀನಾ ಮೀರಿಸಿದ ಅಮೇರಿಕಾ!ಕೊರೊನಾ ಕರಿನೆರಳು: ಸೋಂಕಿತರ ಸಂಖ್ಯೆಯಲ್ಲಿ ಚೀನಾ ಮೀರಿಸಿದ ಅಮೇರಿಕಾ!

ಮದ್ಯಪಾನ ಸೇವನೆ ಕಾನೂನುಬಾಹಿರ

ಮದ್ಯಪಾನ ಸೇವನೆ ಕಾನೂನುಬಾಹಿರ

ಅಸಲಿಗೆ, ಇಸ್ಲಾಮಿಕ್ ರಾಷ್ಟ್ರ ಇರಾನ್ ನಲ್ಲಿ ಮದ್ಯಪಾನ ಸೇವನೆ ಕಾನೂನುಬಾಹಿರ. ಆದ್ರೆ, ಸರ್ಕಾರದ ಕಣ್ಣು ತಪ್ಪಿಸಿ ಕೆಲವರು ಆಲ್ಕೋಹಾಲ್ ತಯಾರಿಕೆಯಲ್ಲಿ ತೊಡಗಿದ್ದಾರೆ. ಕೆಲ ಕಳ್ಳಭಟ್ಟಿ ತಯಾರಕರು ಅಲ್ಕೋಹಾಲ್ ಗೆ ಮೆಥನಾಲ್ ಮಿಕ್ಸ್ ಮಾಡಿ ಮಾರಾಟ ಮಾಡುತ್ತಾರೆ. ಪಾನೀಯಗಳಲ್ಲಿ ಮೆಥನಾಲ್ ವಾಸನೆ ಅಥವಾ ರುಚಿ ಗೊತ್ತಾಗಲ್ಲ. ಪಾಯ್ಸನಸ್ ಮೆಥನಾಲ್ ಸೇವನೆಯಿಂದ ಅಂಗಾಗಗಳು ಮತ್ತು ಬ್ರೇನ್ ಡ್ಯಾಮೇಜ್ ಆಗುವುದರ ಜೊತೆಗೆ ಸಾವು ಸಂಭವಿಸುತ್ತದೆ.

ಫೇಕ್ ಸುದ್ದಿಯನ್ನು ನಂಬಿ..

ಫೇಕ್ ಸುದ್ದಿಯನ್ನು ನಂಬಿ..

ಅಷ್ಟಕ್ಕೂ, ಕೊರೊನಾ ವೈರಸ್ ಕಾಲಿಡುವ ಮುನ್ನವೇ ಇರಾನ್ ನಲ್ಲಿ ಮೆಥನಾಲ್ ಆಲ್ಕೋಹಾಲ್ ಸೇವನೆಯಿಂದ 76 ಮಂದಿ ಪ್ರಾಣ ಬಿಟ್ಟಿದ್ದರು. ಆದ್ರೀಗ, ಆಲ್ಕೋಹಾಲ್ ಸೇವನೆಯಿಂದ ಕೋವಿಡ್-19 ತಡೆಗಟ್ಟಬಹುದು ಎಂಬ ಫೇಕ್ ಸುದ್ದಿ ಹರಡಿದ ಮೇಲೆ ಮೆಥನಾಲ್ ಮಿಶ್ರಿತ ಆಲ್ಕೋಹಾಲ್ ಸೇವಿಸಿ 300ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ.

ಇರಾನ್ ನಲ್ಲಿ ಕೊರೊನಾ ಹಾವಳಿ

ಇರಾನ್ ನಲ್ಲಿ ಕೊರೊನಾ ಹಾವಳಿ

ದಿನದಿಂದ ದಿನಕ್ಕೆ ಇರಾನ್ ನಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿವೆ. ಇಲ್ಲಿಯವರೆಗೂ ಒಟ್ಟು 32,332 ಸೋಂಕಿತರು ಇರಾನ್ ನಲ್ಲಿ ಪತ್ತೆಯಾಗಿದ್ದಾರೆ. ಆ ಪೈಕಿ 2378 ಮಂದಿ ಸಾವಿಗೀಡಾಗಿದ್ದು, 11,133 ಮಂದಿ ಗುಣಮುಖರಾಗಿದ್ದಾರೆ. 2,893 ಮಂದಿಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.

ಔಷಧಿ ಕಂಡುಹಿಡಿದಿಲ್ಲ.!

ಔಷಧಿ ಕಂಡುಹಿಡಿದಿಲ್ಲ.!

ಕೊರೊನಾ ವೈರಸ್ ಸೋಂಕು ತಗುಲಿರುವ ಬಹುತೇಕರಿಗೆ ಜ್ವರ, ಕೆಮ್ಮು, ನೆಗಡಿ ಅಂತಹ mild ಅಥವಾ moderate ಲಕ್ಷಣಗಳು ಮಾತ್ರ ಕಾಣಿಸಿಕೊಳ್ಳುತ್ತವೆ. ಸೋಂಕು ತಗುಲಿದವರು ಎರಡ್ಮೂರು ವಾರಗಳು ಪ್ರತ್ಯೇಕವಾಗಿದ್ದರೆ, ಕೋವಿಡ್-19 ಹರಡುವಿಕೆ ತಡೆಗಟ್ಟಬಹುದು. ವಯಸ್ಸಾದವರಿಗೆ ಮತ್ತು ಆನಾರೋಗ್ಯದ ಹಿನ್ನಲೆ ಇರುವವರಿಗೆ ಕೋವಿಡ್-19 ಹೆಚ್ಚು ಅಪಾಯಕಾರಿ. ಕೋವಿಡ್-19ಗೆ ಇಲ್ಲಿಯವರೆಗೆ ಯಾವುದೇ ಔಷಧಿ ಕಂಡುಹಿಡಿದಿಲ್ಲ.

English summary
Coronavirus False Belief: Hundreds Killed in Iran by ingesting methanol.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X