ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10,000 ಹಜ್ ಯಾತ್ರಾರ್ಥಿಗಳ ಪ್ರವಾಸಕ್ಕೆ ಅಡ್ಡಿಯಾದ ಕೊರೊನಾ ವೈರಸ್

|
Google Oneindia Kannada News

ತಿರುವನಂತಪುರಂ, ಫೆಬ್ರವರಿ.29: ಜಾಗತಿಕ ಮಟ್ಟದಲ್ಲಿ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್ ಇದೀಗ ಕೇರಳದ 10 ಸಾವಿರ ಹಜ್ ಯಾತ್ರಾರ್ಥಿಗಳ ಪ್ರವಾಸಕ್ಕೂ ಅಡ್ಡಿಯಾಗಿದೆ. ಈ ವರ್ಷ ಹಜ್ ಯಾತ್ರೆಗೆ ತೆರಳಲು ಆಗುತ್ತೋ ಇಲ್ಲವೋ ಎಂಬ ಚಿಂತೆ ಯಾತ್ರಾರ್ಥಿಗಳನ್ನು ಕಾಡುತ್ತಿದೆ.
ಕೇರಳದಿಂದ ಈ ವರ್ಷ ಪವಿತ್ರ ಹಜ್ ಯಾತ್ರೆಗೆ ತೆರಳುವುದಕ್ಕಾಗಿ 10 ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳ ಪಟ್ಟಿಯನ್ನು ರಾಜ್ಯದ ಹಜ್ ಕಮಿಟಿಯು ಈಗಾಗಲೇ ಅಂತಿಮಗೊಳಿಸಿದೆ ಎಂದು ರಾಜ್ಯದ ಹಜ್ ಕಮಿಟಿ ಚೇರ್ ಮನ್ ಸಿ. ಮೊಹಮ್ಮದ್ ಸ್ಪಷ್ಟಪಡಿಸಿದ್ದಾರೆ.

ಮುಸ್ಲೀಮರ ಪವಿತ್ರ ಕ್ಷೇತ್ರ ಮೆಕ್ಕಾ-ಮದೀನಾ ಭೇಟಿಗೆ ತಾತ್ಕಾಲಿಕ ನಿಷೇಧ
ಇದರ ಮಧ್ಯೆ ಸೌದಿ ಅರೆಬಿಯಾ ಯಾವುದೇ ಕ್ಷಣದಲ್ಲೂ ಕೂಡಾ ಹಜ್ ಯಾತ್ರಾರ್ಥಿಗಳ ಪ್ರವೇಶಕ್ಕೆ ವಿಧಿಸಿರುವ ನಿರ್ಬಂಧವನ್ನು ತೆರವುಗೊಳಿಸಬಹುದು ಎಂದ ನಿರೀಕ್ಷೆಯಲ್ಲಿ ಯಾತ್ರಾರ್ಥಿಗಳು ಎದುರು ನೋಡುತ್ತಿದ್ದಾರೆ ಎಂದು ಕೇರಳ ರಾಜ್ಯ ಹಜ್ ಕಮಿಟಿ ಚೇರ್ ಮನ್ ಸಿ. ಮೊಹಮ್ಮದ್ ತಿಳಿಸಿದ್ದಾರೆ.

Coronavirus Effect: Kerala 10,000 Hajj Pilgrims Await For Saudi Arabia Lift Travel Restrictions

ಕೊರೊನಾ ಭೀತಿಯಿಂದ ಸೌದಿ ಅರೆಬಿಯಾ ಪ್ರವೇಶಕ್ಕೆ ನಿರ್ಬಂಧ:
ಮುಸ್ಲೀಮರ ಪವಿತ್ರ ಕ್ಷೇತ್ರ ಮೆಕ್ಕಾ-ಮದೀನಾ ಭೇಟಿಯನ್ನು ಸೌದಿ ಅರೆಬಿಯಾ ತಾತ್ಕಾಲಿಕವಾಗಿ ರದ್ದು ಪಡಿಸಿದೆ. ಕಳೆದ ಫೆಬ್ರವರಿ.27ರಂದು ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಪ್ರವಾಸಿಗರು ಮೆಕ್ಕಾ-ಮದೀನಾ ಭೇಟಿ ನೀಡದಂತೆ ಸೌದಿ ಅರೆಬಿಯಾ ಆದೇಶ ಹೊರಡಿಸಿದೆ. ವಿದೇಶಾಂಗ ಇಲಾಖೆ ಈ ಆದೇಶ ಹೊರಡಿಸಿದ್ದು, ಪ್ರವಾಸಿಗರು ಮೆಕ್ಕಾ-ಮದೀನಾ ಭೇಟಿಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಆದರೆ ಈ ಆದೇಶವು ಎಲ್ಲಿಯವರೆಗೂ ಜಾರಿಯಲ್ಲಿರುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿಲ್ಲ.
ಪ್ರವಾಸಿ ವೀಸಾ ಹಾಗೂ 'ಉಮ್ರಾಹ್ ವೀಸಾ'ವನ್ನು ಸೌದಿ ವಿದೇಶಾಂಗ ಇಲಾಖೆ ರದ್ದು ಮಾಡಿದೆ. ಸೌದಿ ರಾಷ್ಟ್ರಗಳಾದ ಬಹ್ರೇನ್, ಕುವೈತ್, ಓಮನ್, ಲೆಬನಾನ್, ಇರಾಖ್ ಮುಂತಾದುವುಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ಕಾಣಿಸಿಕೊಂಡ ಕಾರಣ ಸೌದಿ ಅರೆಬಿಯಾ ಈ ನಿರ್ಧಾರ ತಳೆದಿದೆ.

English summary
Coronavirus Effect: Kerala 10,000 Hajj Pilgrims Await For Saudi Arabia Lift Travel Restrictions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X