ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕಾಟ: ಏರ್ ಫ್ರಾನ್ಸ್‌ನ 7600 ಉದ್ಯೋಗಿಗಳು ವಜಾ

|
Google Oneindia Kannada News

ಪ್ಯಾರೀಸ್, ಜುಲೈ 2: ಜಾಗತಿಕ ಸಾಂಕ್ರಮಿಕ ರೋಗ ಕೊರೊನಾ ವೈರಸ್ ದಾಳಿಗೆ ಇಡೀ ಪ್ರಪಂಚ ನಲುಗಿದೆ. ಮಹಾಮಾರಿ ಕೊರೊನಾದಿಂದ ವಿಶ್ವದ ಪ್ರಮುಖ ದೇಶಗಳಲ್ಲಿ ಆರ್ಥಿಕತೆ ಕುಸಿತ ಕಂಡಿದ್ದು, ನಿರುದ್ಯೋಗ ಹೆಚ್ಚಾಗಿದೆ. ಇದರ ಪರಿಣಾಮ ಕೋಟ್ಯಾಂತರ ಜನರು ಕೆಲಸ ಕಳೆದುಕೊಂಡಿದ್ದಾರೆ.

Recommended Video

Facebook brings a new Update to reduce sharing of Fake news | Oneindia Kannada

ಕೊವಿಡ್ ಸೋಂಕಿನ ಪರಿಣಾಮ ಏರ್ ಫ್ರಾನ್ಸ್‌ನಲ್ಲಿ 7600 ಮಂದಿ ಕೆಲಸಗಾರರನ್ನು ತೆಗೆದು ಹಾಕಲಾಗುತ್ತಿದೆ ಎಂದು ಫ್ರಾನ್ಸ್ ಸರ್ಕಾರ ಖಚಿತಪಡಿಸಿದೆ.

ಇಂಡಿಗೋ ವಿಮಾನ ಪ್ರಯಾಣದಲ್ಲಿ ವೈದ್ಯರು, ನರ್ಸ್‌ಗಳಿಗೆ ಶೇ.25ರಷ್ಟು ರಿಯಾಯಿತಿಇಂಡಿಗೋ ವಿಮಾನ ಪ್ರಯಾಣದಲ್ಲಿ ವೈದ್ಯರು, ನರ್ಸ್‌ಗಳಿಗೆ ಶೇ.25ರಷ್ಟು ರಿಯಾಯಿತಿ

ಕೊರೊನಾ ವೈರಸ್‌ನಿಂದ ಅಂತಾರಾಷ್ಟ್ರೀಯ ಪ್ರಯಾಣದ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಹಾಗಾಗಿ, ಫ್ರಾನ್ಸ್ ಏರ್ ಸಂಸ್ಥೆ ಉದ್ಯೋಗ ಕಡಿತ ಮಾಡಲು ನಿರ್ಧರಿಸಿದೆ. 7600 ಜನರ ಪೈಕಿ 430 ಪೈಲಟ್‌ಗಳು, 1,560 ಫ್ಲೈಟ್ ಅಟೆಂಡೆಂಟ್‌ಗಳು, 4,500ಕ್ಕೂ ಹೆಚ್ಚು ಸಿಬ್ಬಂದಿ ಸೇರಿದಂತೆ 6,560 ಮಂದಿಯನ್ನು ವಜಾಗೊಳಿಸಲು ಮುಂದಾಗಿದೆ. ಇನ್ನು ಪ್ರಾದೇಶಿಕ ವಿಭಾಗದಲ್ಲಿ 1025 ಉದ್ಯೋಗವನ್ನು ಕಡಿತಗೊಳಿಸಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

Coronavirus Effect: Air France set to layoff 7600 employees

ಇನ್ನು 2022ರ ವೇಳೆಗೆ ಏರ್ ಫ್ರಾನ್ಸ್ ತನ್ನ ಉದ್ಯೋಗಿಗಳನ್ನು ಶೇಕಡಾ 40 ರಷ್ಟು ಕಡಿತಗೊಳಿಸುತ್ತದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಏಪ್ರಿಲ್‌ನಲ್ಲಿ, ಫ್ರೆಂಚ್ ಸರ್ಕಾರವು ಏರ್ ಫ್ರಾನ್ಸ್ ಅನ್ನು ರಕ್ಷಿಸಲು 7 ಬಿಲಿಯನ್ ಯುರೋ (917.91 ಬಿಲಿಯನ್) ನೆರವು ಪ್ಯಾಕೇಜ್ ಘೋಷಿಸಿತ್ತು. ಆದರೆ, ಲಾಕ್‌ಡೌನ್ ಕಾರಣದಿಂದ 'ಏರ್ ಫ್ರಾನ್ಸ್ ಪ್ರತಿ ತಿಂಗಳು ನೂರಾರು ಮಿಲಿಯನ್ ಯುರೋಗಳನ್ನು ಕಳೆದುಕೊಳ್ಳುತ್ತಿದೆ' ಸಚಿವರು ಮಾಹಿತಿ ನೀಡಿದ್ದಾರೆ.

ಈವರೆಗೂ ಫ್ರಾನ್ಸ್ ದೇಶದಲ್ಲಿ 1,65,719 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಅದರಲ್ಲಿ 29,861 ಜನರು ಪ್ರಾಣ ಕಳೆದುಕೊಂಡಿದ್ದರು. ಈ ಪೈಕಿ ಇನ್ನು 59,319 ಕೇಸ್‌ಗಳು ಸಕ್ರಿಯವಾಗಿದೆ.

English summary
Coronavirus Effect: French government has confirmed, Air France is set to cut nearly 7,600 posts due to the COVID-19 pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X