ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕಾಟಕ್ಕೆ ಬೆದರಿ 70,000 ಕೈದಿಗಳನ್ನು ಬಿಡುಗಡೆ ಮಾಡಿದ ಸರ್ಕಾರ

|
Google Oneindia Kannada News

ತೆಹ್ರಾನ್, ಮಾರ್ಚ್.09: ಜಾಗತಿಕ ಮಟ್ಟದಲ್ಲಿ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್ ನಿಂದ ಕೈದಿಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಬರೋಬ್ಬರಿ 70 ಸಾವಿರ ಕೈದಿಗಳನ್ನು ಕೊರೊನಾ ಭೀತಿಯಿಂದಾಗಿ ಇರಾನ್ ಸರ್ಕಾರವು ತಾತ್ಕಾಲಿಕವಾಗಿ ಬಿಡುಗಡೆ ಮಾಡಿದೆ.

ಮಾರಕ ಸೋಂಕು ಹರಡುವ ಹಿನ್ನೆಲೆಯಲ್ಲಿ ಜೈಲಿನಲ್ಲಿದ್ದ 70 ಸಾವಿರ ಕೈದಿಗಳನ್ನು ಬಿಡುಗಡೆಗೊಳಿಸಿರುವುದಾಗಿ ಇರಾನ್ ನ್ಯಾಯಾಂಗ ವ್ಯವಸ್ಥೆಯ ಮುಖ್ಯಸ್ಥರಾಗಿರುವ ಇಬ್ರಾಹಿಂ ರೈಸಿ ತಿಳಿಸಿರುವುದಾಗಿ ಮಿಜಾನ್ ಎಂಬ ಸುದ್ದಿ ವಾಹಿನಿಯು ವರದಿ ಮಾಡಿದೆ.

Breaking: ಕರ್ನಾಟಕದಲ್ಲಿ ಮೊದಲ ಕೊರೊನಾವೈರಸ್ ಕೇಸ್ ಪತ್ತೆ Breaking: ಕರ್ನಾಟಕದಲ್ಲಿ ಮೊದಲ ಕೊರೊನಾವೈರಸ್ ಕೇಸ್ ಪತ್ತೆ

ಇರಾನ್ ನಲ್ಲಿ ಭಾನುವಾರ 49 ಹೊಸ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೂ 237 ಮಂದಿ ಕೊರೊನಾ ವೈರಸ್ ನಿಂದಾಗಿ ಪ್ರಾಣ ಬಿಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯವು ಸ್ಪಷ್ಟಪಡಿಸಿದೆ.

Coronavirus Effect: 70,000 Prisoners Temporarily Released From Jail In Iran

ಇಟಲಿಯಲ್ಲಿ 1.60 ಕೋಟಿ ಮಂದಿಗೆ ದಿಗ್ಬಂಧನ

ಇಟಲಿಯಲ್ಲೂ ಕೂಡಾ ಮಾರಕ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು, ಸೋಂಕಿತ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ 1 ಕೋಟಿ 60 ಲಕ್ಷ ಜನರನ್ನು ದಿಗ್ಬಂಧನದಲ್ಲಿ ಇರಿಸಲಾಗಿದೆ. ದೇಶದಲ್ಲಿ ಭಾನುವಾರ ಒಂದೇ ದಿನ 133 ಮಂದಿ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. ಇದುವರೆಗೂ ಕೊರೊನಾಗೆ 366 ಮಂದಿ ಪ್ರಾಣ ಬಿಟ್ಟಿದ್ದಾರೆ. 7 ಸಾವಿರಕ್ಕೂ ಅಧಿಕ ಜನರಲ್ಲಿ ಸೋಂಕು ಪತ್ತೆಯಾಗಿರುವುದನ್ನು ಆರೋಗ್ಯ ಸಚಿವಾಲಯವು ದೃಢಪಡಿಸಿದೆ.

English summary
Coronavirus Effect: 70,000 Prisoners Temporarily Released From Jail In Iran. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X