ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಎಫೆಕ್ಟ್: ಇಟಲಿಯಲ್ಲಿ 36 ಗಂಟೆ ಮೃತದೇಹಕ್ಕೂ ದಿಗ್ಬಂಧನ!

|
Google Oneindia Kannada News

ರೋಮ್, ಮಾರ್ಚ್.15: ಕೊರೊನಾ ವೈರಸ್ ಕಾಟಕ್ಕೆ ಇಟಲಿ ಸ್ತಬ್ಧಗೊಂಡ ಇಟಲಿಯಲ್ಲಿ ಮನಕಲುಕುವಂತಾ ಘಟನೆಯೊಂದು ನಡೆದಿದೆ. ಮಾರಕ ಸೋಂಕು ತಗುಲಿದೆ ಎಂಬ ಅನುಮಾನದ ಮೇಲೆ ಮೃತಪಟ್ಟ ಮಹಿಳೆಯನ್ನು 36 ಗಂಟೆಗಳ ಕಾಲ ದಿಗ್ಬಂಧನದಲ್ಲಿ ಇರಿಸಲಾಗಿತ್ತು.

ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯಟರ್ಸ್ ಈ ಬಗ್ಗೆ ವರದಿಯನ್ನು ಪ್ರಕಟಿಸಿದೆ. ಇಟಲಿಯ ದಕ್ಷಿಣ ಭಾಗದಲ್ಲಿ ಇರುವ ನಾಪಲ್ಸ್ ನಗರದ ನಿವಾಸಿ 47 ವರ್ಷದ ತೆರಿಸಾ ಫ್ರಾನಜೆಸಾ ಎಂಬ ಮಹಿಳೆಯಲ್ಲಿ ಕೊರೊನಾ ವೈರಸ್ ಸೋಂಕಿತ ಲಕ್ಷಣಗಳು ಕಂಡು ಬಂದಿದ್ದವು.

ಕೊರೊನಾ ವಿರುದ್ಧ ಯುದ್ಧ; ಭಾರತಕ್ಕೆ ವರವಾಗುತ್ತಾ 102 ವರ್ಷಗಳ ಅನುಭವ?ಕೊರೊನಾ ವಿರುದ್ಧ ಯುದ್ಧ; ಭಾರತಕ್ಕೆ ವರವಾಗುತ್ತಾ 102 ವರ್ಷಗಳ ಅನುಭವ?

ಕೊರೊನಾ ಸೋಂಕು ತಗಲಿರುವ ಅನುಮಾನದ ಮೇಲೆ ವೈದ್ಯಕೀಯ ತಪಾಸಣೆ ನಡೆಸಿದ್ದು, ವರದಿ ಬರುವ ಮೊದಲೇ ಮಹಿಳೆಯ ಆರೋಗ್ಯ ತೀರಾ ಹದಗೆಟ್ಟಿತು. ಶನಿವಾರ ಚಿಕಿತ್ಸೆಗೆ ಸ್ಪಂದಿಸದೇ ಮಹಿಳೆಯು ಪ್ರಾಣ ಬಿಟ್ಟಳು.

CoronaVirus: Deadbody In 36 Hours Quarantined At Home Over coronavirus

ಮಹಿಳೆಯ ಮೃತದೇಹಕ್ಕೂ 36 ಗಂಟೆ ದಿಗ್ಬಂಧನ:

ಕೊರೊನಾ ವೈರಸ್ ಸೋಂಕು ತಗಲಿರುವ ಶಂಕೆ ಹಿನ್ನೆಲೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ಮಹಿಳೆಯ ಸಾವಿನ ನಂತರದಲ್ಲಿ ಮೃತದೇಹವನ್ನು ಮುಟ್ಟುವುದಕ್ಕೂ ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದಾರೆ. ಈ ಕುರಿತು ಮೃತ ಮಹಿಳೆಯ ಸಹೋದರ ವಿಡಿಯೋವೊಂದರಲ್ಲಿ ತಮ್ಮ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾರೆ.

ನನ್ನ ಸಹೋದರಿ ಶಂಕಿತ ಕೊರೊನಾ ವೈರಸ್ ನಿಂದ ಮೃತಪಟ್ಟಿದ್ದು, ನನಗೆ ಮುಂದೇನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ. ನನಗೆ ಸಹಾಯ ಮಾಡುವುದಕ್ಕೆ ಯಾರೊಬ್ಬರು ಮುಂದೆ ಬರುತ್ತಿಲ್ಲ. ಇಡೀ ಸಮಾಜವೇ ನಮ್ಮನ್ನು ದೂರ ಇಟ್ಟಿದೆ. ಮೃತದೇಹದ ಅಂತ್ಯಸಂಸ್ಕಾರಕ್ಕೂ ಯಾರೊಬ್ಬರು ಸಹಾಯ ಮಾಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ತಂದೆ ಸಾವು; ಫೇಸ್‌ಬುಕ್ ಮೂಲಕ ಅಂತಿಮ ದರ್ಶನ ಪಡೆದ ಕೊರೊನಾ ರೋಗಿ!ತಂದೆ ಸಾವು; ಫೇಸ್‌ಬುಕ್ ಮೂಲಕ ಅಂತಿಮ ದರ್ಶನ ಪಡೆದ ಕೊರೊನಾ ರೋಗಿ!

36 ಗಂಟೆಗಳ ಕಾಲ ಗೃಹ ದಿಗ್ಬಂಧನದಲ್ಲಿ ಇರಿಸಿದ್ದ ಮೃತದೇಹವನ್ನು ನಂತರದಲ್ಲಿ ಸುರಕ್ಷತಾ ಮಾಸ್ಕ್ ಧರಿಸಿ ಬಂದ ರಕ್ಷಣಾ ತಂಡ ಅಧಿಕಾರಿಗಳ ಸಹಾಯದಿಂದ ಸ್ಥಳೀಯ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.

English summary
HeartBreak Incident: Deadbody In 36 Hours Quarantined At Home Over coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X