ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಎಸಗಿದ ಒಂದು ಮಹಾ ಪ್ರಮಾದಕ್ಕೆ ಇಂದು ಜಗತ್ತಿಗೆ ಘೋರ ಶಿಕ್ಷೆ!

|
Google Oneindia Kannada News

ಆ ಒಂದು ತಪ್ಪನ್ನು ಚೀನಾ ಮಾಡದೇ ಇದ್ದಿದ್ದರೆ, ಇಂದು ಇಡೀ ವಿಶ್ವ 'ಕೊರೊನಾ ವೈರಸ್' ಎಂಬ ಕಂಟಕಕ್ಕೆ ಇಷ್ಟೊಂದು ಹೆದರುವ ಅವಶ್ಯಕತೆ ಇರುತ್ತಿರಲಿಲ್ಲ. ಜಗತ್ತಿನಾದ್ಯಂತ ಸಾವಿರಾರು ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾಗುತ್ತಿರಲಿಲ್ಲ. ಆರೋಗ್ಯ ಸಮಸ್ಯೆಯಿಂದಾಗಿ ಲಕ್ಷಾಂತರ ಜನ ನರಳುವ ಪರಿಸ್ಥಿತಿಯೂ ಉದ್ಭವವಾಗುತ್ತಿರಲಿಲ್ಲ.

ಅದು ಜನವರಿ 23.. ಆಗಿನ್ನೂ ಮಹಾಮಾರಿ ಕೊರೊನಾ ಚೀನಾವನ್ನು ಕಾಡಲಾರಂಭಿಸಿದ ಮೊದಲ ದಿನಗಳು. ಕೊರೊನಾ ವೈರಸ್ ಸೋಂಕಿನ ತೀವ್ರತೆ ಅರಿತಿದ್ದ ಚೀನಾ ಸರ್ಕಾರ ದೇಶವನ್ನು ಇದರಿಂದ ಕಾಪಾಡಲು ಮೊದಲ ಯೋಜನೆಯೊಂದನ್ನು ಸಿದ್ಧಪಡಿಸಿತ್ತು.

ರೋಗ ಹರಡದಂತೆ ತಡೆಗಟ್ಟಲು ವುಹಾನ್ ಸೇರಿದಂತೆ ಸಂಪೂರ್ಣ ಚೀನಾದ ಆಂತರಿಕ ಸಾರಿಗೆ ವ್ಯವಸ್ಥೆಯನ್ನು ಸರ್ಕಾರ ರದ್ದು ಮಾಡಿತು. ಆದ್ರೆ, ವಿದೇಶಿ ಸಂಚಾರಕ್ಕೆ ಯಾವುದೇ ನಿರ್ಬಂಧ ಹೇರದೆ ಸುಮ್ಮನಾಯಿತು. ಇದೇ ಚೀನಾ ಮಾಡಿದ ಮಹಾ ಪ್ರಮಾದ.!

ಕೊರೊನಾ ರೌದ್ರನರ್ತನ: ಸಾವಿನ ಸಂಖ್ಯೆಯಲ್ಲಿ ಚೀನಾ ಮೀರಿಸಿದ ಇಟಲಿ!ಕೊರೊನಾ ರೌದ್ರನರ್ತನ: ಸಾವಿನ ಸಂಖ್ಯೆಯಲ್ಲಿ ಚೀನಾ ಮೀರಿಸಿದ ಇಟಲಿ!

ಗೊತ್ತಿದ್ದೂ ಚೀನಾ ಎಸಗಿದ ಈ ತಪ್ಪಿನಿಂದಾಗಿ, ಕೊರೊನಾ ಮಾರಿ ವಿಮಾನ ಏರಿ ಜಗತ್ತಿನಾದ್ಯಂತ ಹರಡುವಂತಾಯಿತು.

ಚೀನಾ ಎಸಗಿದ ಮಹಾ ಪ್ರಮಾದ

ಚೀನಾ ಎಸಗಿದ ಮಹಾ ಪ್ರಮಾದ

ಜನವರಿ 23 ರಂದು ವುಹಾನ್ ನಗರವನ್ನು ಚೀನಾ ಸರ್ಕಾರ ಸಂಪೂರ್ಣವಾಗಿ ಬಂದ್ ಮಾಡಿತ್ತು. ವುಹಾನ್ ನಗರದಲ್ಲಿನ ಎಲ್ಲಾ ಸಾರಿಗೆ ವ್ಯವಸ್ಥೆಯನ್ನು ರದ್ದುಗೊಳಿಸಿತ್ತು. ಮಾರನೇ ದಿನ ಚೀನಾದೊಳಗೂ ಸಾರಿಗೆ ಸಂಪರ್ಕ ಸೇವೆಗಳು ಕಡಿತಗೊಂಡವು. ಆದ್ರೆ, ಜನವರಿ 27 ರವರೆಗೂ ವಿದೇಶಿ ಸಂಚಾರಕ್ಕೆ ಚೀನಾ ಸರ್ಕಾರ ಯಾವುದೇ ನಿರ್ಬಂಧ ವಿಧಿಸಲಿಲ್ಲ. ಅಷ್ಟೊತ್ತಿಗೆ ಸೋಂಕು ಪೀಡಿತರು ವಿಶ್ವದ ಹಲವೆಡೆಗೆ ಪ್ರಯಾಣ ಬೆಳೆಸಿದ್ದರು. ಇದರಿಂದಾಗಿ ಮೊದಲು ಚೀನಾಕ್ಕೆ ಮಾತ್ರ ಸೀಮಿತವಾಗಿದ್ದ ಕೊರೊನಾ ಜಗತ್ತಿನಾದ್ಯಂತ ಹರಡುವಂತಾಯಿತು.

ಪ್ರವಾಸಕ್ಕೆ ಮುಂದಾದ ಚೀನಿಯರು

ಪ್ರವಾಸಕ್ಕೆ ಮುಂದಾದ ಚೀನಿಯರು

ರೋಗದ ತೀವ್ರತೆ ಬಗ್ಗೆ ಅರಿವಿದ್ದರೂ, ನಾಗರಿಕ ಜಗತ್ತನ್ನು ಎಚ್ಚರಿಸುವ ಕೆಲಸಕ್ಕೆ ಚೀನಾ ಕೈಹಾಕಲಿಲ್ಲ. ಹೀಗಾಗಿ, ಸಾಲು ಸಾಲು ರಜೆಯ ಮಜದಲ್ಲಿದ್ದ ಚೀನಿ ಪ್ರವಾಸಿಗರು ವಿದೇಶಿಯಾನಕ್ಕೆ ಮುಂದಾದರು. ಅಷ್ಟರಲ್ಲಾಗಲೇ ಹಲವು ಪ್ರವಾಸಿಗರಲ್ಲಿ ಸೇರಿಕೊಂಡಿದ್ದ ಸೋಂಕು ಅವರು ಪ್ರಯಾಣ ಬೆಳೆಸಿದ್ದ ಕಡೆ ಹಬ್ಬಲಾರಂಭಿಸಿತ್ತು. ಚೀನಾದಿಂದ ಬಹುತೇಕ ಪ್ರಯಾಣಿಕರು ಜಪಾನ್, ದಕ್ಷಿಣ ಕೊರಿಯಾ, ಇಟಲಿ, ಸ್ಪೇನ್, ಫ್ರಾನ್ಸ್, ಯು.ಕೆ, ಆಸ್ಟ್ರೇಲಿಯಾ, ಉತ್ತರ ಅಮೇರಿಕಾ, ದಕ್ಷಿಣ ಅಮೇರಿಕಾಗೆ ಪಯಣಿಸಿದರು.

ನಿಲ್ಲದ ಜಗತ್ತಿನ ತಲ್ಲಣ: 10 ಸಾವಿರ ದಾಟಿದ ಕೊರೊನಾ ಸಾವಿನ ಪ್ರಮಾಣನಿಲ್ಲದ ಜಗತ್ತಿನ ತಲ್ಲಣ: 10 ಸಾವಿರ ದಾಟಿದ ಕೊರೊನಾ ಸಾವಿನ ಪ್ರಮಾಣ

5 ಮಿಲಿಯನ್ ಮಂದಿ

5 ಮಿಲಿಯನ್ ಮಂದಿ

ಜನವರಿ 23 ಕ್ಕೂ ಮುನ್ನ (ಅಂದ್ರೆ ವುಹಾನ್ ನಗರವನ್ನು ಬಂದ್ ಮಾಡುವ ಮುನ್ನ) ಕಡಿಮೆ ಎಂದರೂ 5 ಮಿಲಿಯನ್ ಮಂದಿ ವುಹಾನ್ ನಗರ ತೊರೆದಿದ್ದರು ಎಂದು ಅಂದಾಜಿಸಲಾಗಿದೆ.

ವೈದ್ಯರ ವಾರ್ನಿಂಗ್

ವೈದ್ಯರ ವಾರ್ನಿಂಗ್

2003 ರಲ್ಲಿ SARS ವಿರುದ್ಧ ಹೋರಾಡಿದ್ದ ಚೀನಾದ ವೈದ್ಯ ಡಾ.ಝಾಂಗ್ ನ್ಯಾನ್ ಶ್ಯಾನ್ ವಿಶ್ವದಾದ್ಯಂತ ಕೊರೊನಾ ವೈರಸ್ ಸೋಂಕು ಹರಡುವ ಬಗ್ಗೆ ಮೊದಲೇ ವಾರ್ನಿಂಗ್ ಕೊಟ್ಟಿದ್ದರೂ, ವಿದೇಶಿ ಸಂಚಾರಕ್ಕೆ ಚೀನಾ ಸರ್ಕಾರ ಬ್ರೇಕ್ ಹಾಕಲಿಲ್ಲ.

ಕೊರೊನಾ ಮರಣ ಮೃದಂಗ: ಕಳೆದ 24 ಗಂಟೆಗಳಲ್ಲಿ 1000 ಕ್ಕೂ ಅಧಿಕ ಸಾವು!ಕೊರೊನಾ ಮರಣ ಮೃದಂಗ: ಕಳೆದ 24 ಗಂಟೆಗಳಲ್ಲಿ 1000 ಕ್ಕೂ ಅಧಿಕ ಸಾವು!

ಮತ್ತೆ ಸೋಂಕಿನ ಭೀತಿ

ಮತ್ತೆ ಸೋಂಕಿನ ಭೀತಿ

ಇಷ್ಟು ದಿನ ವಿದೇಶಗಳಲ್ಲಿದ್ದ ಚೀನಿಯರು ಇದೀಗ ತಾಯ್ನಾಡಿಗೆ ವಾಪಸ್ ಆಗುತ್ತಿದ್ದಾರೆ. ಆ ಮೂಲಕ ಸೋಂಕಿನ ಎರಡನೇ ಅಲೆ ಎಲ್ಲಿ ಏಳುತ್ತೋ ಎಂಬ ಭಯ ಸದ್ಯ ಚೀನಾಗೆ ಕಾಡುತ್ತಿದೆ. ಹೀಗಾಗಿ, ವಿದೇಶಗಳಿಂದ ಬರುವವರಿಗೆ 14 ದಿನ ಕಡ್ಡಾಯವಾಗಿ ಪ್ರತ್ಯೇಕವಾಗಿರಲು ಚೀನಾ ಸರ್ಕಾರ ಸೂಚಿಸಿದೆ.

English summary
Coronavirus: China's inaction in January is a root of Pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X