ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ 100 ಕೋಟಿ ಜನರಿಗೆ ಕೊರೊನಾವೈರಸ್ ಲಸಿಕೆ ವಿತರಣೆ

|
Google Oneindia Kannada News

ನವದೆಹಲಿ, ಜೂನ್ 20: ಚೀನಾದಲ್ಲಿ 100 ಕೋಟಿ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗಿದೆ ಎಂದು ದೇಶದ ಆರೋಗ್ಯ ಪ್ರಾಧಿಕಾರವು ಭಾನುವಾರ ತಿಳಿಸಿದೆ. ಇದು ಇಡೀ ದೇಶಾದ್ಯಂತ ಈವರೆಗೂ ನೀಡಿರುವ ಲಸಿಕೆಯ ಮೂರನೇ ಒಂದರಷ್ಟು ಭಾಗವಾಗಿದೆ.

ದೇಶದ ಸುಮಾರು 140 ಕೋಟಿ ಜನರಿಗೆ ಯಾವ ಶೇಕಡಾವಾರು ಲಸಿಕೆಯನ್ನು ನೀಡಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಾಗಿದ್ದರೂ ಜೂನ್ ಅಂತ್ಯದ ವೇಳೆಗೆ ಶೇ.40% ಜನಸಂಖ್ಯೆಗೆ ಸಂಪೂರ್ಣವಾಗಿ ಲಸಿಕೆ ಹಾಕುವ ಗುರಿಯನ್ನು ಅಧಿಕಾರಿಗಳು ಹೊಂದಿದ್ದಾರೆ.

ಶುಕ್ರವಾರ ಜಾಗತಿಕವಾಗಿ 250 ಕೋಟಿ ಜನರಿಗೆ ಕೊರೊನಾವೈರಸ್ ಲಸಿಕೆ ನೀಡಿದ ದಾಖಲೆಯು ನಿರ್ಮಾಣವಾಗಿದ್ದು, ಇದರ ಬೆನ್ನಲ್ಲೇ ಚೀನಾವು 100 ಕೋಟಿ ಡೋಸ್ ಲಸಿಕೆ ವಿತರಣೆಯ ಗಡಿ ದಾಟಿದೆ. ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭಿಸಿದ ನಂತರದಲ್ಲಿ ಚೀನಾ ಹೆಚ್ಚು ಆಕ್ರಮಣಕಾರಿ ತಂತ್ರಕ್ಕೆ ಮುಂದಾಗಿದೆ. ಉಚಿತ ಲಸಿಕೆ ಅಥವಾ ವಿಶೇಷ ಸೌಕರ್ಯಗಳಂತಹ ವಿಭಿನ್ನ ಕ್ರಮಗಳ ಮೂಲಕ ಹೆಚ್ಚಿನ ಜನರು ಲಸಿಕೆ ತೆಗೆದುಕೊಳ್ಳಲು ಉತ್ತೇಜಿಸಲಾಗುತ್ತಿದೆ.

Crowds at a vegetable market in Ahmedabad as coronavirus restrictions are eased

ಬೀಜಿಂಗ್‌ನಲ್ಲಿ ಕೆಲವು ನಿವಾಸಿಗಳಿಗೆ ಶಾಪಿಂಗ್ ಕೂಪನ್‌ಗಳನ್ನು ನೀಡುತ್ತಿದ್ದರೆ, ಮಧ್ಯ ಅನ್ಹುಯಿ ಪ್ರಾಂತ್ಯದಲ್ಲಿ ಲಸಿಕೆ ನೀಡುವುದಕ್ಕೆ ಚಾಲನೆ ನೀಡುವ ಭಾಗವಾಗಿ ಅಧಿಕಾರಿಗಳು ಉಚಿತ ಮೊಟ್ಟೆಗಳನ್ನು ನೀಡಿದ್ದಾರೆ.

ಏಷಿಯಾ:

ಭಾರತದಲ್ಲಿ ಸುಮಾರು ಮೂರು ತಿಂಗಳಲ್ಲಿ ಮೊದಲ ಬಾರಿಗೆ ಕೊರೊನಾವೈರಸ್ ಪ್ರಕರಣಗಳಲ್ಲಿ ದೈನಂದಿನ ಇಳಿಕೆ ದಾಖಲಾಗಿದೆ. ಇದರ ಬೆನ್ನಲ್ಲೇ ರಾಜಧಾನಿ ನವದೆಹಲಿಯ ಶಾಪಿಂಗ್ ಮಾಲ್‌ಗಳು ಮತ್ತು ಮಾರುಕಟ್ಟೆಗಳಲ್ಲಿ ವಾರಾಂತ್ಯದಲ್ಲಿ ಹೆಚ್ಚಿನ ಜನಸಂದಣಿ ಕಂಡು ಬಂದಿದೆ.

ಕೊರೊನಾವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ನಗರದ ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆ ಎದುರಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ COVID-19 ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯವಾದ ಆಮ್ಲಜನಕ ಕೊರತೆಯನ್ನು ಎದುರಿಸಿದ ಪ್ರಮಾಣ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ವ್ಯತಿರಿಕ್ತವಾಗಿವೆ.

Medical workers hold a mass vaccination drive in Chinas Qingdao

ಕೊರೊನಾವೈರಸ್ ಎರಡನೇ ಅಲೆ ಆರಂಭಕ್ಕೂ ಮೊದಲು ಭಾರತದ ಹಲವು ರಾಜ್ಯಗಳು ಪ್ರಾದೇಶಿಕವಾಗಿ ಲಾಕ್‌ಡೌನ್‌ಗಳನ್ನು ಸಡಿಲಗೊಳಿಸಿದವು. ಭಾರತದ ನಿವಾಸಿಗಳು ತಮ್ಮ ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ವಿನಾಶಕಾರಿ ಮೂರನೇ ಅಲೆಯತ್ತ ತಳ್ಳುವ ಅಪಾಯವಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಮುಂದಿನ ತಿಂಗಳು ಟೋಕಿಯೊ ಒಲಿಂಪಿಕ್ಸ್‌ಗೆ ಆಗಮಿಸುವ ಕ್ರೀಡಾಪಟುಗಳಲ್ಲಿ ಮೊದಲ ಕೊರೊನಾವೈರಸ್ ಪ್ರಕರಣ ಪತ್ತೆಯಾಗಿದೆ. ಜಪಾನ್‌ನ ನರಿಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಉಗಾಂಡಾದ ಒಲಿಂಪಿಕ್ ತಂಡದ ಸದಸ್ಯರೊಬ್ಬರು ಸೋಂಕು ತಗುಲಿರುವುದು ದೃಢಪಟ್ಟಿದೆ.

ಕ್ರೀಡಾಂಗಣಗಳಿಗೆ ಪ್ರವೇಶಿಸದಂತೆ ವಿದೇಶಿ ಪ್ರೇಕ್ಷಕರಿಗೆ ನಿಷೇಧ ವಿಧಿಸಲಾಗಿದ್ದು, ದೇಶೀಯ ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆಯೇ ಎಂದು ಸಂಯೋಜಕರು ಇನ್ನಷ್ಟೇ ನಿರ್ಧರಿಸಬೇಕಿದೆ. ಜಿಜಿ ಸುದ್ದಿಯ ಸಮೀಕ್ಷೆಯ ಪ್ರಕಾರ, ಕ್ರೀಡಾಕೂಟ ನಡೆದರೆ, 64% ಪ್ರೇಕ್ಷಕರಿಗೆ ಅವಕಾಶ ನೀಡದಿರಲು ಸಾರ್ವಜನಿಕರು ಬಯಸುತ್ತಾರೆ.

ದಕ್ಷಿಣ ಕೊರಿಯಾದಲ್ಲಿ ಜುಲೈ 1 ರಿಂದ ಸಾಮಾಜಿಕ ಅಂತರದ ನಿಯಮಗಳನ್ನು ಸಡಿಲಗೊಳಿಸಲು ಸಜ್ಜಾಗಿದೆ. ರೆಸ್ಟೋರೆಂಟ್, ಕೆಫೆಗಳು ಮತ್ತು ಮಧ್ಯರಾತ್ರಿವರೆಗೂ ತೆರೆದಿರಲು ಅನುಮತಿ ನೀಡಲಾಗಿದೆ. 4 ರಿಂದ 6 ಜನರವರೆಗೂ ಒಟ್ಟಿಗೆ ಸೇರುವುದಕ್ಕೆ ಅನುಮತಿಸಲಾಗಿದೆ. ದೇಶದ ಜನಸಂಖ್ಯೆಯಲ್ಲಿ ಶೇ.29.2%ರಷ್ಟು ಲಸಿಕೆ ನೀಡಲಾಗಿದೆ. ಸೆಪ್ಟೆಂಬರ್ ವೇಳೆಗೆ ಶೇ.70% ಗುರಿಯನ್ನು ತಲುಪುವ ಹಾದಿಯಲ್ಲಿದೆ.

"ಹೊಸ ಸಾಮಾಜಿಕ ಅಂತರ ವ್ಯವಸ್ಥೆಯು ದೀರ್ಘಾವಧಿಯವರೆಗೂ COVID-19 ಸಾಂಕ್ರಾಮಿಕದ ಪಿಡುಗಿನ ಕ್ವಾರೆಂಟೈನ್ ನಿಯಮ ಮತ್ತು ದೈನಂದಿನ ಚೇತರಿಕೆ ನಡುವೆ ಸಮತೋಲನವನ್ನು ಕಂಡುಕೊಳ್ಳುವ ಪ್ರಯತ್ನವಾಗಿದೆ," ಎಂದು ಆರೋಗ್ಯ ಸಚಿವ ಕ್ವಾನ್ ಡಿಯೋಕ್-ಚಿಯೋಲ್ ಹೇಳಿದ್ದಾರೆ.

ಪೂರ್ವ ಮಧ್ಯ:

ಕೊರೊನಾವೈರಸ್ ಸೋಂಕು ಶಾಲೆಗಳಲ್ಲಿ ಹರಡಿದ ನಂತರ ಇಸ್ರೇಲ್ ಕೆಲವು ಪ್ರದೇಶಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸುವ ನಿಯಮವನ್ನು ಪುನಃ ಜಾರಿಗೊಳಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ. ಐದು ದಿನಗಳ ಹಿಂದೆಯಷ್ಟೇ ದೇಶದಲ್ಲಿ ಮಾಸ್ಕ್ ಕಡ್ಡಾಯಗೊಳಿಸುವ ನೀತಿಯನ್ನು ತೆಗೆದು ಹಾಕಲಾಗಿತ್ತು.

ಬಿನ್ಯಾಮಿನಾದ ಶಾಲೆಯಲ್ಲಿ 45 ವಿದ್ಯಾರ್ಥಿಗಳು ಕೊವಿಡ್-19 ಸೋಂಕು ತಗುಲಿದ್ದು, ಟೆಲ್ ಅವೀವ್ ಮತ್ತು ಜೆರುಸಲೆಂ ನಡುವಿನ ಮೋಡಿನ್‌ನಲ್ಲಿ ಸುಮಾರು 12 ಹೊಸ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆ

ಹೈಫಾದ ದಕ್ಷಿಣಕ್ಕೆ ಬಿನ್ಯಾಮಿನಾ ಪ್ರದೇಶದಲ್ಲಿ ಮತ್ತು ಮೋಡಿನ್-ಮಕ್ಕಾಬಿಮ್-ರೂಟ್ನಲ್ಲಿ ಒಳ-ಹೊರಗೆ ಮಾಸ್ಕ್ ಧರಿಸುವುದು ಅತ್ಯಗತ್ಯವಾಗಿದೆ.

ಅಮೆರಿಕಾ:

ಯುನೈಟೆಡ್ ಸ್ಟೇಟ್ಸ್ 2.5 ಮಿಲಿಯನ್ ಡೋಸ್ ಮಾಡರ್ನಾ ಕೊರೊನಾವೈರಸ್ ಲಸಿಕೆಯನ್ನು ತೈವಾನ್‌ಗೆ ಕಳುಹಿಸುತ್ತದೆ, ಇದು ಹಿಂದಿನ ಪ್ರತಿಜ್ಞೆಗಿಂತ ಮೂರು ಪಟ್ಟು ಹೆಚ್ಚಾಗಿದೆ. ಭಾನುವಾರದ ಕಳುಹಿಸಿದ ಈ ಸಾಗಾಣಿಕೆಯು ಸಾರ್ವಜನಿಕ ಆರೋಗ್ಯ ಮತ್ತು ಭೌಗೋಳಿಕ ರಾಜಕೀಯ ಸಂದೇಶವಾಗಿ ನೋಡಲಾಗುತ್ತಿದೆ.

"ಈ ಕೊಡುಗೆ ತೈವಾನ್‌ಗೆ ವಿಶ್ವಾಸಾರ್ಹ ಸ್ನೇಹಿತನಾಗಿ ಮತ್ತು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವದ ಕುಟುಂಬದ ಸದಸ್ಯನಾಗಿರುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ" ಎಂದು ತೈವಾನ್‌ನ ಅಮೇರಿಕನ್ ಇನ್‌ಸ್ಟಿಟ್ಯೂಟ್, ಯುಎಸ್ ರಾಯಭಾರ ಕಚೇರಿ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದೆ.

ಯುರೋಪ್

ಪ್ರಯಾಣ ನಿರ್ಬಂಧಗಳನ್ನು ಸರಾಗಗೊಳಿಸುವ ಸಲುವಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ಬ್ರಿಟನ್‌ನಲ್ಲಿ ವಿಮಾನಯಾನ ಸಂಸ್ಥೆಗಳು ಮತ್ತು ರಜಾ ಕಂಪನಿಗಳು ಮುಂದಿನ ವಾರ "ಕ್ರಿಯೆಯ ದಿನ" ವನ್ನು ಯೋಜಿಸುತ್ತಿವೆ.

ಬೇಸಿಗೆಯಲ್ಲಿ ಅನೇಕ ಪ್ರವಾಸೋದ್ಯಮ ತಾಣಗಳಿಂದ ಹಿಂದಿರುಗಿದವರಿಗೆ ಕಟ್ಟುನಿಟ್ಟಾದ ಕ್ವಾರೆಂಟೈನ್ ನಿಯಮಗಳನ್ನು ಜಾರಿಗೊಳಿಸುವ ಅವಶ್ಯಕತೆಯಿದೆ ಎಂದು ಪ್ರಯಾಣ ವಲಯವು ಕಳವಳ ವ್ಯಕ್ತಪಡಿಸಿದೆ. ಈ ಬಗ್ಗೆ ಬೆಂಬಲ ಸೂಚಿಸುವುದಕ್ಕಾಗಿ ಬುಧವಾರ ಮಧ್ಯ ಲಂಡನ್‌ನ ವೆಸ್ಟ್‌ಮಿನಿಸ್ಟರ್ ಮತ್ತು ಬ್ರಿಟನ್‌ನ ವಿಮಾನ ನಿಲ್ದಾಣಗಳಲ್ಲಿ ಪೈಲಟ್‌ಗಳು, ಕ್ಯಾಬಿನ್ ಸಿಬ್ಬಂದಿ ಮತ್ತು ಟ್ರಾವೆಲ್ ಏಜೆಂಟರು ಒಟ್ಟುಗೂಡಲಿದ್ದಾರೆ.

ಪೈಲಟ್‌ಗಳ ಟ್ರೇಡ್ ಯೂನಿಯನ್ ಬಾಲ್ಪಾ ಭಾನುವಾರ ಪ್ರಕಟಿಸಿದ ಮಾಹಿತಿಯ ಪ್ರಕಾರ, ಯುಕೆ ವಿಮಾನಯಾನ ಉದ್ಯಮವು ತನ್ನ ಯುರೋಪಿಯನ್ ಗೆಳೆಯರಿಗಿಂತ ಸಾಂಕ್ರಾಮಿಕ ರೋಗದಿಂದ ತೀವ್ರವಾಗಿ ತತ್ತರಿಸಿ ಹೋಗಿದೆ. ಸಾಂಕ್ರಾಮಿಕ ರೋಗಕ್ಕೆ ಮುಂಚಿತವಾಗಿ ಹೋಲಿಸಿದರೆ ಈ ತಿಂಗಳ ಆರಂಭದಲ್ಲಿ ಯುಕೆಗೆ ದೈನಂದಿನ ಆಗಮನ ಮತ್ತು ನಿರ್ಗಮನವು ಸರಾಸರಿ 73% ರಷ್ಟು ಕಡಿಮೆಯಾಗಿದೆ ಎಂದು ಅದು ತೋರಿಸಿದೆ. ಸ್ಪೇನ್, ಗ್ರೀಸ್ ಮತ್ತು ಫ್ರಾನ್ಸ್ 60% ಕ್ಕಿಂತ ಕಡಿಮೆಯಾಗಿದೆ.

ಸಾಂಕ್ರಾಮಿಕ ಪಿಡುಗಿಗೆ ಸಂಬಂಧಿಸಿದಂತೆ ರಾಬರ್ಟ್ ಕೋಚ್ ಇನ್ಸ್ಟಿಟ್ಯೂಟ್ (ಆರ್ಕೆಐ) ದ ಮಾಹಿತಿಯ ಪ್ರಕಾರ, ಜರ್ಮನಿಯು 842 ಹೊಸ ವೈರಸ್ ಪ್ರಕರಣಗಳನ್ನು ದಾಖಲಿಸಿದೆ, ದೇಶದ ಒಟ್ಟು ಕ್ಯಾಸೆಲೋಡ್ ಅನ್ನು 3,721,981 ಕ್ಕೆ ತೆಗೆದುಕೊಂಡಿದೆ. 16 ಸಾವುನೋವುಗಳೊಂದಿಗೆ, ಜರ್ಮನಿಯ ಸಾವಿನ ಸಂಖ್ಯೆ 90,385 ಕ್ಕೆ ಏರಿದೆ ಎಂದು ವರದಿಯಾಗಿದೆ.

English summary
Beijing aims to fully inoculate 40% of its 1.4 billion people by the end of June. Meanwhile, Indians are enjoying newfound freedoms as COVID curbs are eased, but experts are still worried. Follow DW for the latest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X