ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆನಡಾ ಪ್ರಧಾನಿ ಕೈಗೊಂಡ ಈ ನಿರ್ಧಾರಕ್ಕೆ ಚಪ್ಪಾಳೆ ಹೊಡೆಯಲೇಬೇಕು!

|
Google Oneindia Kannada News

ಒಟ್ಟಾವ, ಮೇ 9: ಮಾರಣಾಂತಿಕ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ವಿವಿಧ ದೇಶಗಳನ್ನು ವಿವಿಧ ಕಾರ್ಯಗಳನ್ನು ಕೈಗೊಂಡಿವೆ, ಕೈಗೊಳ್ಳುತ್ತಿವೆ. ಲಾಕ್ ಡೌನ್ ನಿಂದಾಗಿ ರಾಷ್ಟ್ರಗಳ ಆರ್ಥಿಕ ವ್ಯವಸ್ಥೆ ಮೇಲೆ ಪೆಟ್ಟು ಬಿದ್ದಿದ್ದು, ಅದನ್ನ ಸರಿದೂಗಿಸುವ ನಿಟ್ಟಿನಲ್ಲಿ ಹಲವು ದೇಶಗಳು ಪ್ರಯತ್ನಿಸುತ್ತಿವೆ.

Recommended Video

ಜಮೀರ್ ಅಹಮ್ಮದ್ ಅವರನ್ನು ಹಾಡಿ ಹೊಗಳಿದ ಸಿದ್ದರಾಮಯ್ಯ | Siddaramaiah | Oneindia Kannada

ಲಾಕ್ ಡೌನ್ ಘೋಷಣೆಯಾದಾಗ ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯವಾಗುವಂತೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋವ್ ಕೆಲವು ಕ್ರಮಗಳನ್ನು ಕೈಗೊಂಡು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದರು.

ಕೊರೊನಾ ಬಗ್ಗೆ ಕ್ರಮ: ಎಲ್ಲೆಲ್ಲೂ ವೈರಲ್ ಆದ ಕೆನಡಾ ಪ್ರಧಾನಿ ಭಾಷಣ!ಕೊರೊನಾ ಬಗ್ಗೆ ಕ್ರಮ: ಎಲ್ಲೆಲ್ಲೂ ವೈರಲ್ ಆದ ಕೆನಡಾ ಪ್ರಧಾನಿ ಭಾಷಣ!

ಇದೀಗ, ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಜನರ ಹಿತಕ್ಕಾಗಿ ದುಡಿಯುತ್ತಿರುವ ಫ್ರಂಟ್ ಲೈನ್ ವರ್ಕರ್ ಗಳಿಗೆ ಸಿಹಿ ಸುದ್ದಿಯನ್ನು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋವ್ ನೀಡಿದ್ದಾರೆ. ಆ ಮೂಲಕ ಜಸ್ಟಿನ್ ಟ್ರುಡೋವ್ ಮತ್ತೊಮ್ಮೆ ಎಲ್ಲರ ಮನ ಗೆದ್ದಿದ್ದಾರೆ.

ಫ್ರಂಟ್ ಲೈನ್ ವರ್ಕರ್ ಗಳ ವೇತನ ಹೆಚ್ಚಳ

ಫ್ರಂಟ್ ಲೈನ್ ವರ್ಕರ್ ಗಳ ವೇತನ ಹೆಚ್ಚಳ

''ಕಡಿಮೆ ಸಂಬಳವನ್ನು ತೆಗೆದುಕೊಂಡು, ತಮ್ಮ ಪ್ರಾಣ ಮತ್ತು ಆರೋಗ್ಯವನ್ನೇ ಪಣಕ್ಕಿಟ್ಟು ಪ್ರತಿ ನಿತ್ಯ ಕೆಲಸ ಮಾಡುತ್ತಿರುವ ಫ್ರಂಟ್ ಲೈನ್ ವರ್ಕರ್ ಹೆಚ್ಚಿನ ಸಂಬಳಕ್ಕೆ ಅರ್ಹರು'' ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋವ್ ಹೇಳಿದ್ದಾರೆ. ಹೀಗಾಗಿ, ಕೆನಡಾ ಮತ್ತು ಅದರ ಎಲ್ಲಾ ಪ್ರಾಂತ್ಯಗಳಲ್ಲಿನ ಕೆಲಸಗಾರರಿಗೆ ವೇತನವನ್ನು ಹೆಚ್ಚಳ ಮಾಡಲಾಗುತ್ತಿದೆ.

2 ಬಿಲಿಯನ್ ಡಾಲರ್ ಪ್ಯಾಕೇಜ್

2 ಬಿಲಿಯನ್ ಡಾಲರ್ ಪ್ಯಾಕೇಜ್

ಹಿರಿಯರ ಮನೆಗಳಲ್ಲಿ ಕೆಲಸ ಮಾಡುವವರು, ಕೋವಿಡ್-19 ನಿಂದ ಹೆಚ್ಚು ಸಾವು ಸಂಭವಿಸಿರುವ ಸ್ಥಳಗಳಲ್ಲಿ ಕೆಲಸ ಮಾಡುವವರು, ಪ್ರತಿ ದಿನ ಅಗತ್ಯ ಸೇವೆಯನ್ನು ಪೂರೈಸುತ್ತಿರುವ ಎಲ್ಲರಿಗೂ ಸಂಬಳ ಹೆಚ್ಚಿಸಲಾಗುತ್ತದೆ. ವೇತನ ಹೆಚ್ಚಳಕ್ಕಾಗಿ ಕೆನಡಾ ಸರ್ಕಾರ 2 ಬಿಲಿಯನ್ ಡಾಲರ್ ನೀಡಲಿದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೋವ್ ಘೋಷಿಸಿದ್ದಾರೆ. ಜಸ್ಟಿನ್ ಟ್ರುಡೋವ್ ಅವರ ಈ ನಡೆ ಪ್ರಶಂಸೆಗೆ ಭಾಜನವಾಗಿದೆ.

ಅಂದು ಮೆಚ್ಚುಗೆಗೆ ಪಾತ್ರವಾಗಿದ್ದ ಹೇಳಿಕೆ

ಅಂದು ಮೆಚ್ಚುಗೆಗೆ ಪಾತ್ರವಾಗಿದ್ದ ಹೇಳಿಕೆ

''ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾದರೆ ಅಥವಾ ಪ್ರತ್ಯೇಕವಾಗಿ ಇರಬೇಕು ಎಂಬ ಸನ್ನಿವೇಶ ಉದ್ಭವವಾದಾಗ ನಿಮ್ಮಲ್ಲಿ ರಜೆ ಇಲ್ಲದೇ ಇದ್ದರೆ ನಿಮಗೆ ಪ್ರತಿ ಎರಡು ವಾರಕ್ಕೊಮ್ಮೆ ನಾವು ಹಣ ಕೊಡುತ್ತೇವೆ. ನಿಮಗೆ ಮಕ್ಕಳಿದ್ದರೆ, ಕೆನಡಾ ಚೈಲ್ಡ್ ಬೆನಿಫಿಟ್ ನಿಂದ ಸಹಾಯ ಸಿಗುತ್ತದೆ. ಇಂತಹ ತುರ್ತು ಸಂದರ್ಭದಲ್ಲಿ ಎಲ್ಲಾ ಕೆನಡಿಯನ್ನರಿಗೆ ಸಹಾಯ ಮಾಡಲು 27 ಬಿಲಿಯನ್ ಡಾಲರ್ ಕಾರ್ಯಕ್ರಮವನ್ನು ಘೋಷಿಸಿದ್ದೇವೆ'' ಎಂದು ಮಾರ್ಚ್ ನಲ್ಲಿ ಜಸ್ಟಿವ್ ಟ್ರುಡೋವ್ ಮಾಡಿದ್ದ ಭಾಷಣ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಕೆನಡಾದ ಅಂಕಿ-ಅಂಶ

ಕೆನಡಾದ ಅಂಕಿ-ಅಂಶ

ಕೆನಡಾದಲ್ಲಿ ಇಲ್ಲಿಯವರೆಗೂ 66,434 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. 4,569 ಮಂದಿ ಕೋವಿಡ್-19ಗೆ ಬಲಿಯಾಗಿದ್ದಾರೆ. 30,406 ಮಂದಿ ಈಗಾಗಲೇ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. 502 ಜನರ ಆರೋಗ್ಯ ಸ್ಥಿತಿ ಕೆನಡಾದಲ್ಲಿ ಗಂಭೀರವಾಗಿದೆ.

English summary
Coronavirus: Canada PM raises wages for Covid 19 essential workers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X