ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

FACT CHECK: ಕೊರೊನಾ ವೈರಸ್ ಗಾಳಿಯಲ್ಲಿ 8 ಗಂಟೆ ಬದುಕಬಹುದೇ?

|
Google Oneindia Kannada News

''ಬ್ರೇಕಿಂಗ್ ನ್ಯೂಸ್: ಕೋವಿಡ್-19 ಗಾಳಿಯಲ್ಲಿ ಹರಡುತ್ತದೆ. ಗಾಳಿಯಲ್ಲಿ ಕೊರೊನಾ ವೈರಸ್ 8 ಗಂಟೆಗಳ ಕಾಲ ಬದುಕಬಲ್ಲದು. ಹೀಗಾಗಿ ಪ್ರತಿಯೊಬ್ಬರು ಮಾಸ್ಕ್ ಧರಿಸಿ'' - ಹೀಗೊಂದು ಸಂದೇಶ ನಿನ್ನೆ ವಾಟ್ಸ್ ಆಪ್, ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಹಾಗಾದ್ರೆ, ಮಾರಣಾಂತಿಕ ಕೊರೊನಾ ವೈರಸ್ ಗಾಳಿಯಲ್ಲಿ 8 ಗಂಟೆ ಬದುಕಬಹುದೇ.? ಅಧ್ಯಾಯನವೊಂದರ ಪ್ರಕಾರ 'ಇಲ್ಲ'!

ಅಲರ್ಟ್ ಪ್ಲೀಸ್: ಕೊರೊನಾ ವಿಚಾರದಲ್ಲಿ ಮತ್ತೊಂದು ಕರೆಗಂಟೆ ಮೊಳಗಿಸಿದ WHO!ಅಲರ್ಟ್ ಪ್ಲೀಸ್: ಕೊರೊನಾ ವಿಚಾರದಲ್ಲಿ ಮತ್ತೊಂದು ಕರೆಗಂಟೆ ಮೊಳಗಿಸಿದ WHO!

''ಕೊರೊನಾ ವೈರಸ್ ಸೀನಿದಾಗ ಅಥವಾ ಕೆಮ್ಮಿದಾಗ ಮೂರು ಗಂಟೆಗಳ ಕಾಲ ವೈರಸ್ ಗಾಳಿಯಲ್ಲಿ ಬದುಕಬಹುದು'' ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡಾ.ಮಾರಿಯಾ ವ್ಯಾನ್ ಕೆರ್ಖೋವ್ ಹೇಳಿದ್ದಾರೆ.

WHO ನೀಡಿದ್ದ ಸೂಚನೆ ಏನು.?

WHO ನೀಡಿದ್ದ ಸೂಚನೆ ಏನು.?

ಕೊರೊನಾ ವೈರಸ್ ಹೆಚ್ಚು ಗಂಟೆಗಳ ಕಾಲ ಗಾಳಿಯಲ್ಲಿ ಬದುಕಬಲ್ಲದು ಎಂದು ಹೊಸ ಅಧ್ಯಯನದಿಂದ ತಿಳಿದುಬಂದಿದ್ದು, ವೈದ್ಯಕೀಯ ವೃತ್ತಿಪರರು Airborne precautions ತೆಗೆದುಕೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿತ್ತು. ಇದೇ ವರದಿಯ ಜೊತೆಗೆ ''ಕೊರೊನಾ ವೈರಸ್ 8 ಗಂಟೆಗಳ ಕಾಲ ಗಾಳಿಯಲ್ಲಿ ಬದುಕುತ್ತವೆ'' ಎಂಬ ಸುಳ್ಳು ಸುದ್ದಿಯನ್ನ ಸೋಷಿಯಲ್ ಮೀಡಿಯಾದಲ್ಲಿ ನಿನ್ನೆ ಹಬ್ಬಿಸಲಾಗಿದೆ.

ವೈದ್ಯಕೀಯ ಸಿಬ್ಬಂದಿ ಕಾಳಜಿ ವಹಿಸಬೇಕು!

ವೈದ್ಯಕೀಯ ಸಿಬ್ಬಂದಿ ಕಾಳಜಿ ವಹಿಸಬೇಕು!

''ಸೋಂಕು ಪೀಡಿತ ರೋಗಿಗಳಿಗೆ Intubation (ಉಸಿರಾಟಕ್ಕೆ ಸಹಕಾರಿಯಾಗುವ ಹಾಗೆ ರೋಗಿಯ ಗಂಟಲೊಳಗೆ ಟ್ಯೂಬ್ ಹಾಕುವುದು) ನಂತಹ ಕಾರ್ಯವಿಧಾನ ಮಾಡುವಾಗ ವೈದ್ಯಕೀಯ ಸಿಬ್ಬಂದಿ ಹೆಚ್ಚು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು. ಯಾಕಂದ್ರೆ, ವೈರಸ್ ಉಸಿರಾಟದ ಹನಿಗಳ ಮೂಲಕ ಹರಡುತ್ತದೆ. ರೋಗಿ ಸೀನಿದಾಗ ಅಥವಾ ಕೆಮ್ಮಿದಾಗ ಮೂರು ಗಂಟೆಗಳ ಕಾಲ ವೈರಸ್ ಗಾಳಿಯಲ್ಲಿ ಇರುತ್ತವೆ. ಹೀಗಾಗಿ, ಸಾಮಾನ್ಯ ಜನರಿಗಿಂತ ವೈದ್ಯಕೀಯ ಸಿಬ್ಬಂದಿ ಹೆಚ್ಚು ಕಾಳಜಿ ವಹಿಸುವ ಅಗತ್ಯವಿದೆ'' ಎಂದು ಡಾ.ಮಾರಿಯಾ ವ್ಯಾನ್ ಕೆರ್ಖೋವ್ ಹೇಳಿದ್ದರು.

N95 ಮಾಸ್ಕ್ ಧರಿಸಿ..

N95 ಮಾಸ್ಕ್ ಧರಿಸಿ..

ರೋಗಿಗಳಿಗೆ ಚಿಕಿತ್ಸೆ ನೀಡುವಾಗ ವೈದ್ಯಕೀಯ ಸಿಬ್ಬಂದಿ N95 ಮಾಸ್ಕ್ ಗಳನ್ನು ಧರಿಸಲು CDC ಶಿಫಾರಸ್ಸು ಮಾಡಿತ್ತು. N95 ಮಾಸ್ಕ್ ಗಳು ಎಲ್ಲಾ ದ್ರವ ಮತ್ತು ವಾಯುಗಾಮಿ ಕಣಗಳನ್ನ 95% ರಷ್ಟು ಫಿಲ್ಟರ್ ಮಾಡುತ್ತವೆ.

ಸುಳ್ಳು ಸುದ್ದಿ ನಂಬಬೇಡಿ

ಸುಳ್ಳು ಸುದ್ದಿ ನಂಬಬೇಡಿ

ಹೊಸ ಅಧ್ಯಯನವೊಂದರ ಪ್ರಕಾರ, ಕೊರೊನಾ ವೈರಸ್ ಗಾಳಿಯಲ್ಲಿ 3 ಗಂಟೆ ಬದುಕಬಹುದು. ಹೀಗಾಗಿ, ವೈದ್ಯಕೀಯ ಸಿಬ್ಬಂದಿಗಳು ಹೆಚ್ಚು ಎಚ್ಚರಿಕೆ ವಹಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿರುವುದಷ್ಟೇ ಸತ್ಯ. ಸೋಷಿಯಲ್ ಮೀಡಿಯಾಗಳಲ್ಲಿ ಹಬ್ಬುತ್ತಿರುವ ತಪ್ಪು ಮಾಹಿತಿಗಳನ್ನು ನಂಬಬೇಡಿ.

English summary
Coronavirus can last up to 8 hours in air is misleading.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X