• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ವೈರಸ್ ಬಗ್ಗೆ ಈ 14 ಜನರಿಗೆ ಇನ್ನೂ ತಿಳಿಸಿಲ್ಲ

|

ಬರ್ಲಿನ್, ಮಾರ್ಚ್ 17: ಕೊರೊನಾ ವೈರಸ್ ಬಗ್ಗೆ ತಿಳಿಯದೆ ಇರುವ ವ್ಯಕ್ತಿಯೇ ಇಲ್ಲವೇನೋ.. ಇಡೀ ಪ್ರಪಂಚವನ್ನು ಕಂಗೆಡಿಸುವಂತೆ ಮಾಡಿರುವ ಕೊರೊನಾ ಬಗ್ಗೆ ಎಲ್ಲರಿಗೂ ಅರಿವಿಗೆ ಬಂದಿದೆ. ಆದರೆ, ಜರ್ಮನಿಯ ಈ 14 ಜನರಿಗೆ ಇನ್ನೂ ಕೊರೊನಾ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

ಜರ್ಮನಿಯಲ್ಲಿ 'ಬಿಗ್ ಬ್ರದರ್' ರಿಯಾಲಿಟಿ ಶೋ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ 14 ಸ್ಪರ್ಧಿಗಳು 'ಬಿಗ್ ಬ್ರದರ್' ಮನೆಯಲ್ಲಿ ಬಂದಿಯಾಗಿದ್ದಾರೆ. ಆಟದ ನಿಯಮದ ಪ್ರಕಾರ ಆ ಸ್ಪರ್ಧಿಗಳು ಹೊರ ಜಗತ್ತಿನ ಸಂಪರ್ಕದಲ್ಲಿ ಇರಬಾರದು. ಹೊರಗೆ ನಡೆಯುತ್ತಿರುವ ವಿಷಯವನ್ನು ಕೂಡ ಅವರಿಗೆ ತಿಳಿಸುವ ಆಗಿಲ್ಲ.

ದಂಪತಿಯ 'ಅಮರ' ಪ್ರೀತಿ ಕೊಂದ ಕೊರೊನಾ: ಶಾಪವಿಟ್ಟ ನೆಟ್ಟಿಗರು

ಹೀಗಾಗಿ, ಇದುವರೆಗೆ ಕೊರೊನಾ ವೈರಸ್ ಬಗ್ಗೆ ಸ್ಪರ್ಧಿಗಳಿಗೆ 'ಬಿಗ್ ಬ್ರದರ್' ಆಯೋಜಕರು ವಿಷಯ ತಿಳಿಸಿರಲಿಲ್ಲವಂತೆ. ಆದರೆ, ಇಂದಿನ (ಮಂಗಳವಾರ) ಸಂಚಿಕೆಯಲ್ಲಿ ಈ ವಿಷಯವನ್ನು ಅವರಿಗೆ ಹೇಳಲು ನಿರ್ಧಾರ ಮಾಡಲಾಗಿದೆ. ಕೊರೊನಾ ವೈರಸ್ ಬೀಕರತೆಯನ್ನು ನೋಡಿ ಈ ಸುದ್ದಿಯನ್ನು ತಿಳಿಸಿ, ಮುನ್ನೆಚ್ಚರಿಕೆ ವಹಿಸುವಂತೆ ಸ್ಪರ್ಧಿಗಳಿಗೆ ಹೇಳಲಾಗುವುದಂತೆ.

ಫೆಬ್ರವರಿ 10 ರಂದು 'ಬಿಗ್ ಬ್ರದರ್' ಕಾರ್ಯಕ್ರಮಕ್ಕೆ ಈ ಸ್ಪರ್ಧಿಗಳು ಹೋಗಿದ್ದರು. ಆ ದಿನದ ನಂತರ ಉಂಟಾಗಿರುವ ಕೊರೊನಾ ವೈರಸ್ ಬೀಕರತೆ ಅವರಿಗೆ ತಿಳಿದಿಲ್ಲ. ಹೀಗಾಗಿ, ಈ ಸುದ್ದಿ ಹೇಳುತ್ತಿದ್ದ ಹಾಗೆ, ಅವರ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ.

ಕೊರೊನಾದಿಂದ ನಡೆಯಿತು ಆನ್ ಲೈನ್ ವಿಡಿಯೋ ಕಾಲ್ ಮದುವೆ

ಜರ್ಮನಿಯಲ್ಲಿಯೂ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದೆ. ಈವರೆಗೆ 7000 ಕೇಸ್‌ಗಳು ಪತ್ತೆಯಾಗಿದೆ. 17 ಜನರು ಇದರಿಂದ ಮರಣ ಹೊಂದಿದ್ದಾರೆ.

English summary
Coronavirus : Germany Big Brother show contestants are still not aware of Covid 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X