ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್: ಸುಳ್ಳು ಸುದ್ದಿ ನಂಬುವ ಮುನ್ನ ಎಚ್ಚರ ಎಚ್ಚರ

|
Google Oneindia Kannada News

ಬುದಪೇಸ್ಟ್, ಫೆಬ್ರವರಿ.11: ಕೊರೊನಾ ವೈರಸ್.. ಜಗತ್ತಿನಾದ್ಯಂತ ಜನರಲ್ಲಿ ಭಯ ಹುಟ್ಟಿಸಿರುವ ಮಾರಕ ಸೋಂಕಿನ ಕುರಿತು ಸುದ್ದಿಗಳು ಎಲ್ಲೆಲ್ಲೂ ಹರಿದಾಡುತ್ತಿವೆ. ದಿನೇ ದಿನೆ ಚೀನಾದಲ್ಲಿ ಸಾವಿನ ಸಂಖ್ಯೆ ಏರಿಕೆ ಆಗುತ್ತಿದೆ.

ಹಂಗರಿ ದೇಶದಲ್ಲಿ ಇದನ್ನೇ ತನ್ನ ಲಾಭಕ್ಕೆ ಬಳಸಿಕೊಳ್ಳಲು ಮುಂದಾದ ಖಾಸಗಿ ಆನ್ ಲೈನ್ ಮಾಧ್ಯಮಕ್ಕೆ ಹಂಗರಿಯನ್ ಪೊಲೀಸರು ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ. ಆಕರ್ಷಕ ಹೆಡ್ ಲೈನ್ ಗಳನ್ನು ಹಾಕಿ ಸುಳ್ಳು ಸುದ್ದಿ ಬಿತ್ತರಿಸಿದ ಆನ್ ಲೈನ್ ಸಂಸ್ಥೆಯ ಮೇಲೆ ಪೊಲೀಸರು ದಾಳಿ ನಡೆಸಿ ಬೀಗ ಜಡಿದಿದ್ದಾರೆ.

CoronaVirus:ಚೀನಾದಲ್ಲಿ ಹುಟ್ಟಿದ ಸೋಂಕು ವಿಶ್ವಕ್ಕೆ ಹರಡಿದ್ದು ಹೇಗೆ? CoronaVirus:ಚೀನಾದಲ್ಲಿ ಹುಟ್ಟಿದ ಸೋಂಕು ವಿಶ್ವಕ್ಕೆ ಹರಡಿದ್ದು ಹೇಗೆ?

ಪ್ರಚಲಿತ ವಿದ್ಯಮಾನಗಳನ್ನೇ ತಿರುವು-ಮುರುವು ಮಾಡುವ ಮೂಲಕ ತಮ್ಮ ವೆಬ್ ಸೈಟ್ ನಲ್ಲಿ ಹೆಚ್ಚಿನ ಓದುಗರನ್ನು ಸೆಳೆದು, ಜಾಹೀರಾತುಗಳ ಮೂಲಕ ಆದಾಯ ಗಳಿಸಲು ಇಬ್ಬರು ಪ್ಲಾನ್ ಮಾಡಿದ್ದರು ಎಂದು ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಒಬ್ಬ ಯುವಕ ಹಾಗೂ ಮಹಿಳೆಯು ನ್ಯೂಸ್ ಪೋರ್ಟಲ್ ಗಳಲ್ಲಿ ಕೊರೊನಾ ವೈರಸ್ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

Coronavirus: A Fake News Network Busted By Hungrian Police

ವೆಬ್ ಸೈಟ್ ನಲ್ಲಿ ಬಿತ್ತರವಾಗಿದ್ದ ಸುಳ್ ಸುದ್ದಿ:

ಹಂಗರಿ ದೇಶದ ಬುದಪೆಸ್ಟ್ ಪ್ರದೇಶದಲ್ಲಿ 37 ವರ್ಷದ ಮಹಿಳೆಯು ಕೊರೊನಾ ವೈರಸ್ ನಿಂದ ಮೃತಪಟ್ಟಿದ್ದಾಳೆ ಎಂದು ಸುದ್ದಿ ಮಾಡಲಾಗಿತ್ತು. ಇದರ ಬಗ್ಗೆ ತನಿಖೆ ನಡೆಸಿದ ವೇಳೆ ಪೊಲೀಸರಿಗೆ ಇದೊಂದು ಸುಳ್ಳು ಸುದ್ದಿ ಎಂದು ತಿಳಿದು ಬಂದಿದೆ. ಈ ಖಾಸಗಿ ವೆಬ್ ಸೈಟ್ ನ್ನು ಒಬ್ಬ ಯುವಕ ಹಾಗೂ ಮಹಿಳೆ ನಡೆಸುತ್ತಿದ್ದು, ಫೇಸ್ ಬುಕ್ ಮೂಲಕ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ ಪತ್ತೆ ಹಚ್ಚಿದ ಪೊಲೀಸರು, ಕಂಪ್ಯೂಟರ್ ಸೇರಿದಂತೆ ಕಚೇರಿಯಲ್ಲಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಇನ್ನೊಂದೆಡೆಯಲ್ಲಿ ಚೀನಾದಲ್ಲಿ ಮಂಗಳವಾರದ ಮಟ್ಟಿಗೆ ಸಾವಿನ ಸಂಖ್ಯೆ ಬರೋಬ್ಬರಿ ಸಾವಿರದ ಗಡಿ ದಾಟಿದ್ದು 1,016 ಮಂದಿ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. ಇದರ ಜೊತೆಗೆ 42,638 ಜನರಲ್ಲಿ ಸೋಂಕು ಕಾಣಿಸಿಕೊಂಡಿರುವ ಬಗ್ಗೆ ತಿಳಿದು ಬಂದಿದೆ.

English summary
A News Network Published Fake News About Coronavirus. Hungrian Police Attacked And Busted The Network.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X