ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಕಾಡಲಿದೆ ಹೃದ್ರೋಗ

|
Google Oneindia Kannada News

ನವದೆಹಲಿ, ಜುಲೈ 31: ಕೊರೊನಾ ಸೋಂಕಿನಿಂದ ಮುಕ್ತವಾದ ಬಳಿಕವೂ ಕೂಡ ನಿಮ್ಮನ್ನು ಹಲವು ಸಮಸ್ಯೆಗಳು ಕಾಡಬಹುದು.

ಕೊರೊನಾ ಸೋಂಕು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳಿದ್ದರು. ಬಳಿಕ ಮೊದಲೇ ಹೃದಯ ಸಂಬಂಧಿ, ಮಧುಮೇಹ, ರಕ್ತದೊತ್ತಡ ಇನ್ನಿತರೆ ತೊಂದರೆ ಇದ್ದರೆ ಅಂತವರಿಗೆ ಹೃದಯಾಘಾತ ಆಗುವ ಸಾಧ್ಯತೆಯೂ ಇದೆ ಎನ್ನಲಾಗಿತ್ತು.

ಮಗನಿಗೆ ಕೊರೊನಾ; ಕೋಲಾರದಲ್ಲಿ ಹೃದಯಾಘಾತದಿಂದ ತಾಯಿ ಸಾವುಮಗನಿಗೆ ಕೊರೊನಾ; ಕೋಲಾರದಲ್ಲಿ ಹೃದಯಾಘಾತದಿಂದ ತಾಯಿ ಸಾವು

ಇದೀಗ ಅಧ್ಯಯನ ಒಂದರಿಂದ ಕೊರೊನಾದಿಂದ ಗುಣಮುಖರಾದ ಶೇ.80ರಷ್ಟು ಮಂದಿ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಲಿದ್ದಾರೆ ಎಂದು ತಿಳಿದುಬಂದಿದೆ.

ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ನೀಡಿದ ವರದಿ

ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ನೀಡಿದ ವರದಿ

ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್‌ನ ನಿಯತಕಾಲಿಕದಲ್ಲಿ ಜುಲೈ 27ರಂದು ಪ್ರಕಟವಾಗಿರುವ ಅಧ್ಯಯನ ವರದಿಯಲ್ಲಿ ಈ ಕುರಿತು ವಿವಿರ ನೀಡಲಾಗಿದೆ. ಜರ್ಮನಿಯಲ್ಲಿ ಕೊವಿಡ್‌ನಿಂದ ಚೇತರಿಸಿಕೊಂಡ 100 ಮಂದಿಯನ್ನು ಆಧರಿಸಿ ಈ ಅಧ್ಯಯನ ನಡೆಸಲಾಗಿತ್ತು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹಾಗೂ ಕೊವಿಡ್ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು ಕೂಡ ಇದನ್ನು ಒಪ್ಪಿಕೊಂಡಿದ್ದಾರೆ.

ಎಲ್ಲಾ ರೋಗಿಗಳು ಆರೋಗ್ಯವಾಗಿದ್ದಾರೆ

ಎಲ್ಲಾ ರೋಗಿಗಳು ಆರೋಗ್ಯವಾಗಿದ್ದಾರೆ

ಎಲ್ಲಾ 100 ರೋಗಿಗಳು ಆರೋಗ್ಯವಾಗಿದ್ದಾರೆ. ಇವರಲ್ಲಿ ಶೇ.53ರಷ್ಟು ಮಂದಿ ಪುರುಷರು, ಅವರೆಲ್ಲ 49 ವರ್ಷ ಆಸುಪಾಸಿನವರು , ಶೇ.67ರಷ್ಟು ಮಂದಿಗೆ ಈ ಹಿಂದೆ ಸೋಂಕಿನ ಯಾವುದೇ ಲಕ್ಷಣಗಳಿರಲಿಲ್ಲ. ಕೆಲವರು ಅಲ್ಪ ಪ್ರಮಾಣದ ಲಕ್ಷಣವನ್ನು ಹೊಂದಿದ್ದರು. ಕೆಲವರು ಮನೆಯಲ್ಲೇ ಇದ್ದರು. ಶೇ.33 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ತಜ್ಞರು ಎಂಆರ್‌ಐ ಸ್ಕ್ಯಾನ್, ರಕ್ತದ ಪರೀಕ್ಷೆಗಳು, ಹೃದಯದ ಅಂಗಾಂಶ ಪರೀಕ್ಷೆ ಮಾಡಿದ್ದರು. ಇವರಲ್ಲಿ ಶೇ.78ರಷ್ಟು ಮಂದಿಗೆ ಹೃದಯ ಸಂಬಂಧಿ ಸಮಸ್ಯೆ ಇರುವುದು ಕಂಡುಬಂದಿತ್ತು.

ಕೊರೊನಾ ಸೋಂಕು ನಿಮ್ಮ ಶ್ವಾಸಕೋಶಕ್ಕೆ ನಿಖರವಾಗಿ ಏನು ಮಾಡುತ್ತದೆ?ಕೊರೊನಾ ಸೋಂಕು ನಿಮ್ಮ ಶ್ವಾಸಕೋಶಕ್ಕೆ ನಿಖರವಾಗಿ ಏನು ಮಾಡುತ್ತದೆ?

ಪ್ರತಿರೋಧ ಶಕ್ತಿಯ ಕುರಿತು ಸಂದೇಹ

ಪ್ರತಿರೋಧ ಶಕ್ತಿಯ ಕುರಿತು ಸಂದೇಹ

ಈ ಕೊರೊನಾ ಸೋಂಕಿನ ವಿರುದ್ಧ ಪ್ರತಿರೋಧ ಶಕ್ತಿ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬ ಪರಿಕಲ್ಪನೆ ಬಗ್ಗೆಯೂ ಈ ಹೊಸ ಸಂಶೋಧನೆಯಿಂದಾಗಿ ಹಲವು ಸಂದೇಹಗಳು ಉಂಟಾಗಿವೆ.

ಭಾರತದಲ್ಲಿ 16 ಲಕ್ಷ ದಾಟಿತು ಕೊವಿಡ್-19 ಪ್ರಕರಣಗಳ ಸಂಖ್ಯೆ!ಭಾರತದಲ್ಲಿ 16 ಲಕ್ಷ ದಾಟಿತು ಕೊವಿಡ್-19 ಪ್ರಕರಣಗಳ ಸಂಖ್ಯೆ!

ಕೊರೊನಾ ಸೋಂಕಿನ ಅಲ್ಪ ಲಕ್ಷಣಗಳನ್ನು ಹೊಂದಿರುವವರು ಅಥವಾ ಲಕ್ಷಣಗಳೇ ಇಲ್ಲದವರಲ್ಲಿ ದೀರ್ಘಕಾಲದಲ್ಲಿ ಉಂಟಾಗುವ ಹೃದಯದ ಸ್ನಾಯುಗಳ ಉರಿಯೂತ ಅಥವಾ ಹೃದಯಾಘಾತದಂತಹ ಪರಿಣಾಮಗಳ ಬಗ್ಗೆಯೂ ಅಧ್ಯಯನ ನಡೆಯಬೇಕಿದೆ. ಕೊವಿಡ್ ಸೋಂಕಿಗೆ ಒಳಗಾಗುವ ಹೆಚ್ಚಿನವರು ಬೇರೆಯೇ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ತಜ್ಞರು ಹೇಳಿದ್ದಾರೆ.

ಕೊರೊನಾ ಸೋಂಕು ಹೃದಯವನ್ನು ಬಾಧಿಸುತ್ತದೆ

ಕೊರೊನಾ ಸೋಂಕು ಹೃದಯವನ್ನು ಬಾಧಿಸುತ್ತದೆ

ಕೊರೊನಾ ಸೋಂಕು ಹೃದಯವನ್ನು ಬಾಧಿಸುತ್ತದೆ. ಈ ವೈರಾಣು ಜೀವಕೋಶಗಳ ಅದರಲ್ಲೂ ಹೃದಯದ ಜೀವಕೋಶಗಳ ಎಸಿಇ-2 ರೆಸೆಪ್ಟರ್‌ಗಳಿಗೆ ಅಂಟಿಕೊಳ್ಳಬಲ್ಲವು. ವೈರಾಣು ಸೋಂಕುಗಳು ಹೃದಯದ ಸ್ನಾಯುಗಳ ಉರಿಯೂತ ಕಾಯಿಲೆಯನ್ನು ಉಂಟು ಮಾಡುತ್ತದೆ.

English summary
COVID-19 has upended lives in huge proportions. Globally, over 16.7 million infection cases have been recorded. It has been considered to be the most deadly for those belonging to a high-risk category or those with co-morbidities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X