ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಭೀತಿ: ಭಾರತದಲ್ಲಿ ಮಾಸ್ಕ್ ಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

|
Google Oneindia Kannada News

ಹೈದ್ರಾಬಾದ್, ಮಾರ್ಚ್.06: ಆಂಧ್ರಪ್ರದೇಶದಲ್ಲಿ ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಸರ್ಕಾರವು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದೆ. ರಾಜ್ಯದ ಏರ್ ಪೋರ್ಟ್ ಗಳಲ್ಲಿ ವಿದೇಶಿ ಪ್ರವಾಸಿಗರನ್ನು ಸ್ಕ್ರೀನಿಂಗ್ ಗೆ ಒಳಪಡಿಸಲಾಗುತ್ತಿದೆ.

ಆಂಧ್ರಪ್ರದೇಶದಲ್ಲಿ ಇದುವರೆಗೂ ಕೊರೊನಾ ವೈರಸ್ ಪೀಡಿತ ದೇಶಗಳಿಂದ ಆಗಮಿಸಿದ 361 ಪ್ರಯಾಣಿಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಸೋಂಕು ತಗಲಿರುವ ಶಂಕೆ ಮೇಲೆ ತೀವ್ರ ಕಣ್ಗಾವಲಿನಲ್ಲಿ ಇರಿಸಲಾಗಿದೆ.

ಅಮೆರಿಕಾ To ಭೂತಾನ್: ಇದು ಕೊರೊನಾ ವೈರಸ್ ಹೊತ್ತು ತಂದವರ ಕಥೆ ಅಮೆರಿಕಾ To ಭೂತಾನ್: ಇದು ಕೊರೊನಾ ವೈರಸ್ ಹೊತ್ತು ತಂದವರ ಕಥೆ

ಇನ್ನು, 361 ಪ್ರಯಾಣಿಕರ ಪೈಕಿ 13 ಜನರನ್ನು ಆಸ್ಪತ್ರೆಗೆ ದಾಖಲಿಸಿದ್ದು, 24 ಜನರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ. ಈ 24 ಜನರ ಪೈಕಿ 11 ಮಂದಿಗೆ ಕೊರೊನಾ ವೈರಸ್ ಇಲ್ಲವೆಂದು ವರದಿ ಬಂದಿದ್ದು, ಉಳಿದ 13 ಜನರ ರಕ್ತ ಪರೀಕ್ಷೆಯ ಫಲಿತಾಂಶವು ಇನ್ನಷ್ಟೇ ತಿಳಿದು ಬರಬೇಕಿದೆ.

ಸರ್ಜಿಕಲ್ ಮಾಸ್ಕ್ ಬೆಲೆಯಲ್ಲಿ 50ರಷ್ಟು ಏರಿಕೆ

ಸರ್ಜಿಕಲ್ ಮಾಸ್ಕ್ ಬೆಲೆಯಲ್ಲಿ 50ರಷ್ಟು ಏರಿಕೆ

ವಿಶ್ವದಾದ್ಯಂತ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಜನರು ಮಾಸ್ಕ್ ಗಳ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಈ ಹಿನ್ನೆಲೆ ಮಾಸ್ಕ್ ಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಸರ್ಜಿಕಲ್ ಮಾಸ್ಕ್ ಗಳು ಸಾಮಾನ್ಯವಾಗಿ 10-12 ರೂಪಾಯಿಗೆ ಮಾರಾಟವಾಗುತ್ತಿತ್ತು. ಆದರೆ, ಕೊರೊನಾ ವೈರಸ್ ನಿಂದಾಗಿ ಸರ್ಜಿಕಲ್ ಮಾಸ್ಕ್ ಗಳನ್ನು ಕನಿಷ್ಠ 50 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

ಒಂದು ಮಾಸ್ಕ್ 500 ರೂಪಾಯಿಗೆ ಮಾರಾಟ

ಒಂದು ಮಾಸ್ಕ್ 500 ರೂಪಾಯಿಗೆ ಮಾರಾಟ

ಕೊರೊನಾ ವೈರಸ್ ಭೀತಿಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಜನರು ಮಾಸ್ಕ್ ಗಳ ಮೊರೆ ಹೋಗುತ್ತಿದ್ದು, ಇದರಿಂದ ಎನ್-95 ಮಾಸ್ಕ್ ಗಳಿಗೆ ಅತಿಹೆಚ್ಚು ಬೇಡಿಕೆ ಬಂದಿದೆ. ಕೆಲವು ಅಂಗಡಿಗಳಲ್ಲಿ ಮಾಸ್ಕ್ ಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಸಾಮಾನ್ಯವಾಗಿ 200 ರಿಂದ 250 ರೂಪಾಯಿಗೆ ಮಾರಾಟವಾಗುತ್ತಿದ್ದ ಮಾಸ್ಕ್ ಗಳನ್ನು ಇದೀಗ 500 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

ಕೊರೊನಾ ಹಿನ್ನೆಲೆಯಲ್ಲಿ ಐಸೋಲೆಟೆಡ್ ವಾರ್ಡ್

ಕೊರೊನಾ ಹಿನ್ನೆಲೆಯಲ್ಲಿ ಐಸೋಲೆಟೆಡ್ ವಾರ್ಡ್

ದೇಶಾದ್ಯಂತ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಶ್ರೀನಗರದಲ್ಲಿ ಐಸೋಲೆಟಡ್ ವಾರ್ಡ್ ಗಳನ್ನು ತೆರೆದಿದ್ದು, ಶಂಕಿತ ಸೋಂಕಿತರಿಗೆ ಇಲ್ಲಿ ವೈದ್ಯಕೀಯ ತಪಾಸಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಭಾರತದಲ್ಲಿ 31 ಕೊರೊನಾ ವೈರಸ್ ಸೋಂಕಿತರು ಪತ್ತೆ

ಭಾರತದಲ್ಲಿ 31 ಕೊರೊನಾ ವೈರಸ್ ಸೋಂಕಿತರು ಪತ್ತೆ

ಭಾರತದಲ್ಲಿ ಇದುವರೆಗೂ 31 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆ. ಜೈಪುರ್ ಅತಿಹೆಚ್ಚು ಅಂದರೆ 17 ಪ್ರಕರಣಗಳು ಪತ್ತೆಯಾಗಿವೆ. ಉತ್ತರ ಪ್ರದೇಶದ ಆಗ್ರಾದಲ್ಲಿ 6 ಮಂದಿಗೆ ಸೋಂಕು ತಗಲಿರುವ ಬಗ್ಗೆ ತಿಳಿದು ಬಂದಿದೆ. ದೆಹಲಿ ಮತ್ತು ಎನ್ಆರ್ ಸಿ ಪ್ರದೇಶದಲ್ಲಿ 4 ಸೋಂಕಿತ ಪ್ರಕರಣಗಳ ಇರುವ ಬಗ್ಗೆ ವರದಿಯಾಗಿದೆ. ಕೇರಳದಲ್ಲಿ 3 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಈಗ ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಇನ್ನೊಂದೆಡೆ ತೆಲಂಗಾಣದಲ್ಲಿ ಇದುವರೆಗೂ ಒಂದು ಕೊರೊನಾ ವೈರಸ್ ಸೋಂಕಿತ ಪ್ರಕರಣವು ಪತ್ತೆಯಾಗಿದೆ.

English summary
Coronavirus: 361 Passengers Screening In Andra pradesh, 13 Peoples Report Awaited.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X